Site icon Vistara News

Weather Report : ರಾಜ್ಯದಲ್ಲಿಂದು ಅಲ್ಲಲ್ಲಿ ಮಳೆ ಸಿಂಚನ, ಉಳಿದೆಡೆ ಸೂರ್ಯನ ದರ್ಶನ

Men holding umbrella in rain Girl sitting sun shining so hot

ಬೆಂಗಳೂರು: ಆಗಸ್ಟ್‌ 22ರಂದು ಕರಾವಳಿ, ಮಲೆನಾಡು ಸೇರಿ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರವಾದ ಮಳೆಯಾಗುವ (Rain News) ಸಾಧ್ಯತೆಯಿದೆ. ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು, ಗುಡುಗು (Weather report) ಇರಲಿದೆ. ರಾಜ್ಯಾದ್ಯಂತ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.

ರಾಜ್ಯದಲ್ಲಿ ವರುಣ ಕೈಕೊಟ್ಟಿದ್ದು, ಸೂರ್ಯ ತನ್ನ ದರ್ಶನ ಕೊಟ್ಟಿದ್ದಾನೆ. ಮಳೆಯಿಂದಾಗಿ ಕೂಲ್‌ ಆಗಿದ್ದ ನಗರಗಳೆಲ್ಲವೂ ಈಗ ಹಾಟ್‌ ಆಗಿದೆ. ಮೋಡದಲ್ಲಿ ಮರೆಯಾಗಿದ್ದ ಸೂರ್ಯ ಈಗ ಪ್ರಕಾಶಿಸುತ್ತಿದ್ದು ಪ್ರಮುಖ ನಗರಗಳಲ್ಲಿ ಗರಿಷ್ಟ ಉಷ್ಣಾಂಶ ಹೆಚ್ಚಾಗಿದೆ.

ಎಲ್ಲಿಲ್ಲಿ ಮಳೆ ಸಾಧ್ಯತೆ?

ದಕ್ಷಿಣ ಒಳನಾಡಿನ ಜಿಲ್ಲೆಯಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬೆಂಗಳೂರು ನಗರ ಹಾಗೂ ದಾವಣಗೆರೆ, ಮೈಸೂರು, ಮಂಡ್ಯ, ಚಾಮರಾಜನಗರದಲ್ಲೂ ಅಲ್ಲಲ್ಲಿ ಅತಿ ಕಡಿಮೆ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಒಣ ಹವೆ ಇರಲಿದೆ.

ಉತ್ತರ ಒಳನಾಡಿನ ಜಿಲ್ಲೆಯಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೊಂಚ ಪ್ರಮಾಣದಲ್ಲಿ ಮಳೆಯಾಗಲಿದೆ. ಉಳಿದಂತೆ ಶುಷ್ಕ ಹವಾಮಾನ ಇರಲಿದೆ.

ಇತ್ತ ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಮುಂದಿನ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ ಆಗೊಮ್ಮೆ ಈಗೊಮ್ಮೆ ಮೋಡ ಕವಿದ ವಾತಾವರಣವಿರುತ್ತದೆ. ಆದರೆ ಸೂರ್ಯನೇ ಮೇಲುಗೈ ಸಾಧಿಸಲಿದ್ದಾನೆ. ಕೆಲವು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Power Cut : ಗಮನಿಸಿ, ಇಂದಿನಿಂದ 3 ದಿನ ಬೆಂಗಳೂರಿನ ಹಲವೆಡೆ ಕರೆಂಟ್‌ ಇರಲ್ಲ; ನಿಮ್ಮ ಏರಿಯಾ ಹೇಗಿದೆ ನೋಡಿ

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 31 ಡಿ.ಸೆ – 21 ಡಿ.ಸೆ
ಮಂಗಳೂರು: 31 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 31 ಡಿ.ಸೆ – 21 ಡಿ.ಸೆ
ಗದಗ: 32 ಡಿ.ಸೆ – 21 ಡಿ.ಸೆ
ಹೊನ್ನಾವರ: 31 ಡಿ.ಸೆ- 25 ಡಿ.ಸೆ
ಕಲಬುರಗಿ: 35 ಡಿ.ಸೆ – 23 ಡಿ.ಸೆ
ಬೆಳಗಾವಿ: 28 ಡಿ.ಸೆ – 20 ಡಿ.ಸೆ
ಕಾರವಾರ: 33 ಡಿ.ಸೆ – 25 ಡಿ.ಸೆ

ಕೆಆರ್‌ಎಸ್‌ ಜಲಾಶಯ (ಸಂಗ್ರಹ ಚಿತ್ರ)

ಆಗಸ್ಟ್‌ 22ರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಜಲಾಶಯಗರಿಷ್ಠ ಮಟ್ಟ (ಅಡಿಗಳಲ್ಲಿ)ಇಂದಿನ ಮಟ್ಟ (ಅಡಿಗಳಲ್ಲಿ)ಒಳ ಹರಿವು (ಕ್ಯೂಸೆಕ್)ಹೊರ ಹರಿವು (ಕ್ಯೂಸೆಕ್)
ಕೆಆರ್‌ಎಸ್ ಜಲಾಶಯ (KRS Dam)38.0427.62498315247
ಆಲಮಟ್ಟಿ ಜಲಾಶಯ
(Almatti Dam)
519.6 123.08901901
ಮಲಪ್ರಭಾ ಜಲಾಶಯ (Malaprabha Dam)633.823.01194194
ಘಟಪ್ರಭಾ ಜಲಾಶಯ
(Ghataprabha Dam)
662.91 43.2322063665
ತುಂಗಾಭದ್ರಾ ಜಲಾಶಯ (Tungabhadra Dam)497.7184.2787410643
ಭದ್ರಾ ಜಲಾಶಯ (Bhadra Dam)657.7348.7432243224
ನಾರಾಯಣಪುರ ಜಲಾಶಯ (Narayanpur Dam)492.25(ಮೀಟರ್) 491.84(ಮೀಟರ್) 50,00040,260
ಹಾರಂಗಿ
(Harangi Dam)
871.388.4024462100
ಲಿಂಗನಮಕ್ಕಿ (Linganamakki Dam) 554.4474.0656495487
ಹೇಮಾವತಿ
(Hemavathi Dam)
890.5828.6625966580
ಜಲಾಶಯಗಳ ನೀರಿನ ಮಟ್ಟ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version