Site icon Vistara News

Janhvi Kapoor | ನೂಲಿನಂತೆ ಸೀರೆ! ಶ್ರೀದೇವಿ ಮಗಳು ಜಾಹ್ನವಿಯ ಬ್ಯೂಟಿ ಕಹಾನಿ

janhvi kapoor

ಬಾಲಿವುಡ್‌ನಲ್ಲಿ ಸ್ಟಾರ್‌ ಕಿಡ್‌ಗಳು ಹೊಸತೇನಲ್ಲ. ಬಹಳಷ್ಟು ಮಂದಿ ತಮ್ಮ ಅಪ್ಪ ಅಮ್ಮಂದಿರ ಹಾದಿಯನ್ನೇ ಹಿಡಿದು ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟವರು ಅನೇಕ. ಕೆಲವರಿಗೆ ಯಶಸ್ಸೂ ಸಿಕ್ಕಿದೆ. ಅಂತಹ ʻಸ್ಟಾರ್‌ ಕಿಡ್‌ʼಗಳ ಪೈಕಿ ಸದಾ ಟ್ರೆಂಡ್‌ನಲ್ಲಿರುವ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಲೇ ಇರುವ ಹೊಸಬರ ಪೈಕಿ ಜಾಹ್ನವಿ ಕಪೂರ್‌ ಕೂಡಾ ಒಬ್ಬರು. ಒಂದು ಕಾಲದಲ್ಲಿ ಮನೆಮಾತಾಗಿದ್ದ ನಟಿ ಶ್ರೀದೇವಿಯ ಮಗಳು ಜಾಹ್ನವಿ ಇಂದು ತನ್ನ ಹೊಳೆಯುವ ಗ್ಲಾಸ್‌ ಸ್ಕಿನ್‌, ಸದಾ ಗ್ಲಾಮರಸ್‌ ಲುಕ್‌ ಹಾಗೂ ಸಹಜವಾದ ಕೂದಲರಾಶಿಯಿಂದ ಈಗಿನ ಯುವಜನತೆಯ ಮನಸ್ಸಿಗೆ ಲಗ್ಗೆಯಿಟ್ಟಿದ್ದಾರೆ. ಯಾವಾಗಲೂ ಹೊಸ ಬಗೆಯ ಫ್ಯಾಷನ್‌ಗಳಿಂದಲೂ, ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಟಿವ್‌ ಆಗಿರುವ ಮೂಲಕ ಟ್ರೆಂಡ್‌ ಸೆಟ್ಟರ್‌ ಆಗಿಯೂ ಮಿಂಚುತ್ತಿರುವುದು ಸತ್ಯವೇ.

ಹುಟ್ಟು ಸೌಂದರ್ಯವನ್ನು ಜಾಹ್ನವಿ ಪಡೆದಿರುವುದು ನಿಜವೇ ಆದರೂ, ತನ್ನ ಸೌಂದರ್ಯದ ಕೆಲವು ಸೀಕ್ರೆಟ್‌ಗಳನ್ನು ಜಾಹ್ನವಿ ತಮ್ಮ ಬಾಲ್ಯದ ದಿನಗಳಿಂದಲೂ ನೆನಪಿಸಿಕೊಳ್ಳುತ್ತಾರೆ. ಅಮ್ಮ ಶ್ರೀದೇವಿ ಮಕ್ಕಳ ಚರ್ಮ ಹಾಗೂ ಕೂದಲ ಸೌಂದರ್ಯಕ್ಕಾಗಿ ಏನೆಲ್ಲ ಮಾಡುತ್ತಿದ್ದರು ಎಂಬುದನ್ನು ಆಕೆ ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಮನೆಯಲ್ಲಿಯೇ ಇರುವ ವಸ್ತುಗಳನ್ನು ಸೌಂದರ್ಯಕ್ಕೆ ಬಳಸುವ ಕಲೆ ತಿಳಿದಿದ್ದು ಅಮ್ಮನಿಂದಲೇ ಎಂದು ಆಕೆ ಹೇಳುತ್ತಾರೆ.

ನಾವು ಯಾವಾಗಲೂ ಬಾಯಿಗೆ ರುಚಿಯಿರುವ ಹೊಟ್ಟೆ ತುಂಬಬಹುದಾದ ಆಹಾರಗಳನ್ನೇ ತಿನ್ನುತ್ತೇವೆ. ಕೆಲವೊಮ್ಮೆ ಸೌಂದರ್ಯಕ್ಕೆ ಬೇಕಾದನ್ನೂ ಮಾಡುವುದನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಜಾಹ್ನವಿ. ಆಕೆ ಹೇಳುವಂತೆ, ಮನೆಯಲ್ಲಿ ಅಮ್ಮ ನಾವೆಲ್ಲ ಸಣ್ಣವರಿದ್ದಾಗ ಸಾಕಷ್ಟು ತಿನ್ನುವ ವಸ್ತುಗಳನ್ನು ಮುಖಕ್ಕೆ, ಕೂದಲಿಗೆ ಹಚ್ಚುತ್ತಿದ್ದರು. ನಮಗೂ ಹಚ್ಚುತ್ತಿದ್ದರು. ಕೂದಲಿಗೆ ಬೀಯರ್‌, ಮೊಟ್ಟೆ ಹಾಗೂ ಮೆಂತ್ಯ ಕಾಳುಗಳ ಪೇಸ್ಟ್‌ ಇವೆಲ್ಲ ಹಚ್ಚುತ್ತಿದ್ದರು ಎನ್ನುತ್ತಾರೆ. ಅಮ್ಮ ಬೆಳಗ್ಗೆ ತಿನ್ನಲು ಕೊಟ್ಟ ಹಣ್ಣು ಹಂಪಲುಗಳಲ್ಲಿ ಉಳಿದದ್ದನೆಲ್ಲ ಮುಖಕ್ಕೆ ಹಚ್ಚಲು ಬಳಸುತ್ತಿದ್ದರಂತೆ. ಬಾಳೆಹಣ್ಣು, ಮಾವಿನಹಣ್ಣು, ಸ್ಟ್ರಾಬೆರಿ ಹೀಗೆ ಎಲ್ಲವೂ ಮಕ್ಕಳ ಮುಖಕ್ಕೂ ಹಚ್ಚುತ್ತಿದ್ದರಂತೆ.

ಇದನ್ನೂ ಓದಿ | Jahnavi Kapoor | ನೀಲಿ ಬಣ್ಣದ ಉಡುಪಿನಲ್ಲಿ ಜಾನ್ವಿ ಕಪೂರ್ ಆಕರ್ಷಕ ಫೋಟೊಗಳು

ಶ್ರೀದೇವಿ ಅವರು, ತನ್ನ ಮಕ್ಕಳಿಬ್ಬರಿಗೂ ಪ್ರತಿ ಮೂರು ದಿನಕ್ಕೊಮ್ಮೆ ತಲೆಗೆ ಎಣ್ಣೆ ಮಸಾಜ್‌ ಮಾಡುತ್ತಿದ್ದರಂತೆ. ಹಾಗಾಗಿ ಜಾಹ್ನವಿಗೆ ಎಣ್ಣೆಯೂ ಬಹಳ ಮುಖ್ಯ. ಆಕೆ ಹೇಳುವಂತೆ, ಇದೇ ಅಭ್ಯಾಸ ಅಮ್ಮನಿಂದ ನನಗೂ ದಾಟಿಕೊಂಡು ಬಂದಿದೆ. ಕೂದಲಿನ ಆರೈಕೆಗೂ ಬಹಳ ಗಮನ ಕೊಡಬೇಕು. ಮೆಂತ್ಯದ ಪ್ಯಾಕ್‌ ಹಚ್ಚುವ ಮೂಲಕ ತಲೆಹೊಟ್ಟು, ಕೂದಲುದುರುವುದು ಮುಂತಾದ ಸಮಸ್ಯೆಗಳಿಂದ ಪರಿಹಾರ ಕಾಣಬಹುದು. ಬೀಯರ್‌ ಕೂದಲನ್ನು ನುಣುಪಾಯಿಯೂ ಹೊಳೆಯುವಂತೆಯೂ ಮಾಡುತ್ತದೆ. ಮೊಟ್ಟೆಯ ಬಳಕೆಯಿಂದಲೂ ಕೂದಲು ನುಣುಪಾಗಿ ಹೊಳೆಯುವುದಲ್ಲದೆ ಕೂದಲನ್ನು ಗಟ್ಟಿಮುಟ್ಟಾಗಿಸುತ್ತದೆ ಎನ್ನುತ್ತಾರೆ. ಅಷ್ಟೇ ಅಲ್ಲ, ಕೂದಲ ಆರೈಕೆಗೆ ಅಮ್ಮ ಮನೆಯಲ್ಲೇ ಎಣ್ಣೆಯನ್ನೂ ಮಾಡಿಡುತ್ತಿದ್ದಳು. ನೆಲ್ಲಿಕಾಯಿ, ಒಣ ಹೂವುಗಳನ್ನು ಹಾಕಿ ಮಾಡಿದ ಎಣ್ಣೆಯಿಂದಲೇ ತಮಗೆ ತಲೆಗೆ ಮಸಾಜ್‌ ಮಾಡುತ್ತಿದ್ದಳು ಎಂದು ನೆನಪಿಸಿಕೊಳ್ಳುತ್ತಾರೆ ಜಾಹ್ನವಿ.

ಹಾಗಾದರೆ ಜಾಹ್ನವಿಯ ಸೌಂದರ್ಯದ ಕುರಿಯಾದ ದಿನಚರಿ ಏನು ಎಂದು ಕೇಳಿದರೆ ಆಕೆ, ʻಅಂಥದ್ದೇವಿಲ್ಲ, ಬಹಳ ಸರಳವಾದ ದಿನಚರಿ ನನ್ನದು. ನಾನು ಹೆಚ್ಚು ಪ್ರಾಡಕ್ಟ್‌ಗಳನ್ನು ಬಳಸುವುದಿಲ್ಲ. ನನ್ನ ವೃತ್ತಿ ನಟನೆಯಾದ್ದರಿಂದ ಸದಾ ಚರ್ಮ ಕೂದಲುಗಳ ಮೇಲೆ ಸಾಕಷ್ಟು ಬಿಸಿಲು, ಹಾಗೂ ರಾಸಾಯನಿಕಗಳ ಪರಿಣಾಮ ಬೀಳುವುದರಿಂದ ಮನೆಯಲ್ಲಿದ್ದಷ್ಟೂ ಸಮಯ ನಾನು ಸರಳವಾಗಿ ಸಹಜವಾಗಿ ಇರಲು ಬಯಸುತ್ತೇನೆ. ಹೆಚ್ಚು ನೀರು ಕುಡಿಯುತ್ತೇನೆ. ಬೆಳಗ್ಗೆ ಎದ್ದ ಕೂಡಲೇ ಮುಖ ತೊಳೆದುಕೊಂಡು ಸೀರಂ ಹಚ್ಚಿ ಕೊಳ್ಳುತ್ತೇವೆ. ಶೂಟಿಂಗ್‌ನಲ್ಲಿದ್ದ ಸಂದರ್ಭ ಆಯಿಲ್‌ ಕಂಟ್ರೋಲ್‌ ಅಷ್ಟೇ ಮುಖ್ಯ ಟಾಸ್ಕ್‌. ಹೆಚ್ಚು ಕೆಲಸದ ನಿಮಿತ್ತ ಹೊರಗೇ ಇರಬೇಕಾಗುವುದರಿಂದ ಏನೂ ಮಾಡಿಕೊಳ್ಳಲು ಸಮಯ ಸಾಲುವುದಿಲ್ಲ. ಆದರೆ, ಮನೆಯಲ್ಲಿದ್ದಾಗ ಆದಷ್ಟೂ ಮನೆಮದ್ದುಗಳನ್ನೇ ಟ್ರೈ ಮಾಡುತ್ತೇನೆ. ಹೇರ್‌ ಪ್ಯಾಕ್‌ ಮಾಡಿಕೊಂಡು ತಲೆಗೆ ಹಚ್ಚಿ ಕೂರುತ್ತೇನೆ. ಅದು ನನಗಿಷ್ಟʼ ಎನ್ನುತ್ತಾರೆ ಜಾಹ್ನವಿ.

ಇದನ್ನೂ ಓದಿ | Wedding Season Trend: ಮದುಮಗಳ ಸೌಂದರ್ಯಕ್ಕೂ ಬಂತು ಬ್ರೈಡಲ್‌ ಪ್ಯಾಕೇಜ್‌

Exit mobile version