Site icon Vistara News

International Women’s Day : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು

#image_title

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(International Women’s Day). ವಿಶ್ವದೆಲ್ಲೆಡೆ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು, ಮಹಿಳಾ ಸಾಧಕಿಯರಿಗೆ ಸನ್ಮಾನಿಸಿ, ಗೌರವ ಸಮರ್ಪಣೆ ಮಾಡಲಾಗುತ್ತಿದೆ. ಅಂದ ಹಾಗೆ ಈ ದಿನ ಏಕಿಷ್ಟು ವಿಶೇಷ ಎನ್ನುವುದಕ್ಕೆ ಅನೇಕ ಕಾರಣಗಳಿವೆ. ಈ ದಿನದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ವಿಚಾರಗಳು ಇಲ್ಲಿವೆ.

ಇದನ್ನೂ ಓದಿ: International Women’s Day 2023: ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8ರಂದು ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶ್ವಸಂಸ್ಥೆಯು 1975ರಲ್ಲಿ ಘೋಷಿಸಿತು. ಮಹಿಳೆಯರ ಸಾಧನೆ ಗುರುತಿಸಲು ಹಾಗೂ ಅವರ ಹಕ್ಕುಗಳನ್ನು ಒತ್ತಿ ಹೇಳಲು ಈ ದಿನದ ಆಚರಣೆ ಆರಂಭವಾಯಿತು.

ಅಂತಾರಾಷ್ಟ್ರೀಯ ದಿನಾಚರಣೆ ಮಾಡಬೇಕೆಂದರೆ ವಿಶ್ವಸಂಸ್ಥೆಯ ಸದಸ್ಯರು ಅದರ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯ ಮುಂದೆ ಇಡಬೇಕು. ದಿನಾಚರಣೆ ಮಾಡಬೇಕೇ ಅಥವಾ ಬೇಡವೇ ಎನ್ನುವುದನ್ನು ವಿಶ್ವಸಂಸ್ಥೆ ನಿರ್ಧರಿಸುತ್ತದೆ.

ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ʼಡಿಜಿಟಲ್: ಲಿಂಗ ಸಮಾನತೆಗೆ ತಂತ್ರಜ್ಞಾನ ಮತ್ತು ಆವಿಷ್ಕಾರʼ ಎನ್ನುವ ಥೀಮ್‌ ನೀಡಲಾಗಿದೆ.

1908ರಲ್ಲಿ ನ್ಯೂಯಾರ್ಕ್‌ನಲ್ಲಿ ಮಹಿಳೆಯರು ವೃತ್ತಿಯಲ್ಲಿ ಗಂಡು ಮತ್ತು ಹೆಣ್ಣಿಗೆ ಮಾಡಲಾಗುತ್ತಿದ್ದ ಭೇದವನ್ನು ಖಂಡಿಸಿ ಹೋರಾಟ ನಡೆಸಿದರು. ಆ ಹೋರಾಟದಲ್ಲಿ ಸುಮಾರು 15,000 ಹೆಣ್ಣು ಮಕ್ಕಳು ಗಾಯಾಳುಗಳಾಗಿದ್ದರು. ಅದರ ಸ್ಮರಣಾರ್ಥ ಮಹಿಳಾ ದಿನಾಚರಣೆ ಆರಂಭವಾಯಿತು.

ಮಹಿಳಾ ದಿನಾಚರಣೆಯಂದು ಜಾಗತಿಕ ರಜೆ ಘೋಷಣೆ ಮಾಡಬೇಕೆಂದು ಮೊದಲು ಧ್ವನಿ ಎತ್ತಿದವರು ಮಹಿಳಾ ಹಕ್ಕುಗಳ ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಕ್ಲಾರಾ ಜೆಟ್ಕಿನ್‌.

ಈ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಷ್ಯಾ, ಜೆರ್ಮನ್‌, ತಜಕಿಸ್ತಾನ, ತುರ್ಮೇಕಿಸ್ತಾನ, ಉಗಾಂಡಾ, ಉಕ್ರೇನ್‌, ಉಜ್ಬೇಕಿಸ್ತಾನ, ವಿಯೆಟ್ನಾಂ, ಜಾಂಬಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸರ್ಕಾರಿ ರಜೆ ನೀಡಲಾಗುತ್ತಿದೆ.

ನೇರಳೆ, ಹಸಿರು ಮತ್ತು ಬಿಳಿ ಬಣ್ಣವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಾಂಕೇತಿಕ ಬಣ್ಣಗಳಾಗಿವೆ. ನೇರಳೆ ಬಣ್ಣ ನ್ಯಾಯ ಮತ್ತು ಗೌರವವನ್ನು ಸೂಚಿಸಿದರೆ, ಹಸಿರು ಭರವನಸೆಯನ್ನು ಸೂಚಿಸುತ್ತದೆ. ಹಾಗೆಯೇ ಬಿಳಿ ಬಣ್ಣ ಶುದ್ಧತೆಯನ್ನು ಸೂಚಿಸುತ್ತದೆ.

Exit mobile version