ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಮಹಿಳಾ ದಿನಾಚಾರಣೆ (Women’s Day Fashion) ಹಿನ್ನೆಲೆಯಲ್ಲಿ ಫೆಮಿನೈನ್ ಲುಕ್‌ಗೆ ಸಾಥ್ ನೀಡುವಂತಹ ಸೀರೆಗಳು ಹಾಗೂ ಔಟ್‌ಫಿಟ್ಸ್‌ಗೆ ಬೇಡಿಕೆ ಹೆಚ್ಚಿದೆ. ಮಹಿಳಾ ದಿನಾಚಾರಣೆ ಸಂಭ್ರಮಿಸುವವರಿಗೆಂದೇ ಸಾಕಷ್ಟು ಬೋಲ್ಡ್ ಔಟ್‌ಫಿಟ್‌ಗಳು, ಪ್ಯಾಂಟ್‌ಸೂಟ್ಸ್ ಹಾಗೂ ಸೀರೆ-ಬ್ಲೌಸ್‌ಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿವೆ.
ಮೊದಲೆಲ್ಲಾ ಹಣೆಗೆ ದೊಡ್ಡ ಬಿಂದಿ, ಕಾಟನ್ ಸೀರೆ ಉಟ್ಟರೇ ಸಾಕು ಫೆಮಿನೈನ್ ಲುಕ್ ನೀಡುತ್ತದೆ ಎಂಬಂತಿದ್ದ ಕಾನ್ಸೆಪ್ಟ್‌ಗೆ ಇದೀಗ ಫುಲ್‌ಸ್ಟಾಪ್ ಬಿದ್ದಿದೆ. ಬೋಲ್ಡ್ ಲುಕ್ ನೀಡುವ ಡ್ರೆಸ್‌ಕೋಡ್‌ಗಳು ಇದೀಗ ಟ್ರೆಂಡಿಯಾಗಿವೆ. ಆದರೆ, ಇವುಗಳಲ್ಲಿ ಸೀರೆಯ ಪಾತ್ರ ಮಾತ್ರ ಇಂದಿಗೂ ಸೈಡಿಗೆ ಸರಿದಿಲ್ಲ. ಆದರೆ, ನಾನಾ ಬಗೆಯ ಕಾಲರ್ ಬ್ಲೌಸ್‌ಗಳು ಲುಕ್ ಬದಲಿಸಿವೆ. ಧರಿಸುವ ರೀತಿ-ನೀತಿ ಹಾಗೂ ಡಿಸೈನ್ ಎಲ್ಲವೂ ಬದಲಾವಣೆಗೊಂಡಿದೆ. ಇನ್ನುಳಿದಂತೆ ಟಾಮ್ ಬಾಯ್ ಇಮೇಜ್‌ಗೆ ಸಾಥ್ ನೀಡುವ ಬಿಂದಾಸ್ ಔಟ್‌ಫಿಟ್‌ಗಳು, ಕುರ್ತಾ, ಕಮೀಝ್‌ಗಳು ನಯಾ ರೂಪದಲ್ಲಿ ಅನಾವರಣಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಬದಲಾದ ಲುಕ್‌ನಲ್ಲಿ ಇಂದಿನ ಸೀರೆ ಪ್ರಿಯ ಮಹಿಳೆಯರು
ಕೇವಲ ಕಾಟನ್, ಹ್ಯಾಂಡ್‌ಲೂಮ್ ಸೀರೆಗಳು ವುಮೆನ್ಸ್ ಡೇ ಡ್ರೆಸ್‌ಕೋಡ್ ಎನ್ನುವ ಕಾಲ ಹಿಂದೆ ಹೋಯಿತು. ಈಗೇನಿದ್ದರೂ ಇಡೀ ಸೀರೆಯ ಲುಕ್ ಬದಲಿಸುವ ಬ್ಲೌಸ್ ಹಗೂ ಡಿಫರೆಂಟ್ ಡ್ರೇಪಿಂಗ್ ಮಾಡಿ ಪ್ರತಿನಿಧಿಸುವ ಕಾಲ. ಥೀಮ್ ಬ್ಲೌಸ್‌ಗಳನ್ನು ಧರಿಸಿ ಇಮೇಜ್ ಬದಲಿಸುವ ಲುಕ್ ಈ ಜನರೇಷನ್ ಮಹಿಳೆಯರ ಫ್ಯಾಷನ್ ಲಿಸ್ಟ್‌ಗೆ ಸೇರಿದೆ. ಉದಾಹರಣೆಗೆ,., ಕಾಟನ್ ಸೀರೆಗೆ ಕ್ರಾಪ್ ಟಾಫ್, ಟೈಟ್ ಟಾಪ್ ಧರಿಸುವ ಕಾನ್ಸೆಪ್ಟ್ ಚಾಲ್ತಿಗೆ ಬಂದಿದೆ.
ಲುಕ್ ಬದಲಿಸಿದ ಟಾಮ್‌ಬಾಯ್ ಔಟ್‌ಫಿಟ್ಸ್
ರಫ್ ಹಾಗೂ ಟಫ್ ಲುಕ್ ನೀಡುವ ಟಾಮ್ ಬಾಯ್ ಇಮೇಜ್‌ಗೂ ಇದೀಗ ಗ್ಲಾಮರಸ್ ಟಚ್ ದೊರೆತಿದೆ. ನಾರ್ಮಲ್ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್‌ಗಳು ಇದೀಗ ಸೈಡಿಗೆ ಸರಿದಿವೆ. ಇವುಗಳ ಸ್ಥಾನಕ್ಕೆ ಪ್ಲೈಡ್, ಕೆಪ್ರೀಸ್, ಶಾರ್ಟ್ ಪ್ಯಾಂಟ್ ಸೇರಿದಂತೆ ಕಲರ್‌ಫುಲ್ ಸ್ಟೇಟ್‌ಮೆಂಟ್ ಪ್ಯಾಂಟ್‌ಗಳು ಬಂದಿವೆ. ಫಿಟ್ಟಿಂಗ್ ಟಾಪ್‌ಗಳ ಬದಲು ಸ್ಲಿಟ್ ಕ್ರಾಪ್ ಟಾಪ್‌ಗಳಂತೆ ಕಾಣುವ ಟೀ ಶರ್ಟ್‌ಗಳು ಆಗಮಿಸಿವೆ. ಫ್ಲೀಟ್ಸ್ ಹಾಗೂ ಫ್ಲಾಟೆರಿಂಗ್ ಸ್ಲೀವ್‌ಗಳು ಎಂಟ್ರಿ ನೀಡಿ, ಗ್ಲಾಮರ್ ಟಚ್ ನೀಡಿವೆ.
ಶರ್ಟ್ ಕಾಲರ್ ಕುರ್ತಾ
ಪ್ಯಾಂಟ್‌ಸೂಟ್ಸ್ ಹಾಗೂ ಶರ್ಟ್ ಕುರ್ತಾಗಳು ಕಾಲರ್ ಕುತಾ ಸ್ಟೈಲ್‌ನಲ್ಲಿ ಇದೀಗ ಟಾಪ್ ಲಿಸ್ಟ್‌ನಲ್ಲಿವೆ. ಇನ್ನು ಲಾಂಗ್ ಸ್ಲಿಟ್ ಕಮೀಝ್‌ಗೆ ಲೈಟ್‌ವೇಟ್ ಸ್ಟೋಲ್ ಧರಿಸುವ ಲುಕ್ ಕೂಡ ಪ್ರಚಲಿದಲ್ಲಿದೆ. ಇದಕ್ಕೆ ಪೂರಕ ಎಂಬಂತೆ, ವೈಬ್ರೆಂಟ್ ಶೆಡ್‌ನವು ಬಿಡುಗಡೆಗೊಂಡಿವೆ.
ವುಮೆನ್ಸ್ ಡೇ ಸ್ಪೆಷಲ್ ಲುಕ್‌ಗಾಗಿ ಹೀಗೆ ಮಾಡಿ ನೋಡಿ
- ಕಾಲರ್ ಬ್ಲೌಸ್ ಜೊತೆಗೆ ಸೀರೆ ಧರಿಸಿ.
- ಶರ್ಟ್ ನೆಕ್ನ ಇಂಡೋ-ವೆಸ್ಟರ್ನ್ ಟಾಪ್ಗಳನ್ನು ಪ್ಯಾಂಟ್ನೊಂದಿಗೆ ಧರಿಸಬಹುದು.
- ದೊಡ್ಡ ನೆಕ್ಪೀಸ್ ಹಾಗೂ ಕಂಗನ್ಗಳನ್ನು ಧರಿಸಬಹುದು.
- ಡಿಫರೆಂಟ್ ಲುಕ್ ಬೇಕಿದ್ದಲ್ಲಿ ಹೈ ಪೋನಿ ಇಲ್ಲವೇ ಬನ್ ಹೇರ್ಸ್ಟೈಲ್ ಟ್ರೈ ಮಾಡಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: International Women’s Day 2023 : ಮಹಿಳಾ ದಿನಾಚರಣೆ ಆರಂಭವಾಗಿದ್ದು ಹೇಗೆ? ಏನಿದರ ಮಹತ್ವ?