ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ʼ777 ಚಾರ್ಲಿʼ ಚಿತ್ರದ ಟ್ರೈಲರ್ ಅನ್ನು ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲಾಗಿದೆ. ಏಕಕಾಲಕ್ಕೆ 12.12ಕ್ಕೆ ಬಿಡುಗಡೆಯಾದ ಟ್ರೈಲರ್, ‘ಚಾರ್ಲಿ ನೀನು ನನ್ನ ಎಷ್ಟು ಇಷ್ಟ ಪಡ್ತೀಯಾ..?ʼ ಎಂದು ನಾಯಕ ಪ್ರಶ್ನಿಸುವಾಗಲೇ ಚಾರ್ಲಿ ಹತ್ತಿರ ಬಂದು ನಾಯಕನನ್ನು ಅಪ್ಪಿಕೊಂಡು ಪ್ರೀತಿ ವ್ಯಕ್ತ ಪಡಿಸುವಾಗ ಆರಂಭವಾಗುತ್ತದೆ 777 ಚಾರ್ಲಿ ಟ್ರೈಲರ್. ಕೇವಲ ಶ್ವಾನ ಪ್ರಿಯರಿಗೆ ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಇಷ್ಟವಾಗುವ ಚಾರ್ಲಿ ಟ್ರೈಲರ್ ನೋಡಿದ ನಂತರ ಅದರಿಂದ ಹೊರಗಡೆ ಬರಲು ಸಮಯ ತೆಗೆದುಕೊಳ್ಳುತ್ತದೆ. ಮೂಕ ಭಾಷೆಯಲ್ಲಿ ಭಾವನೆಗಳನ್ನು ತೋರುವ 777 ಚಾರ್ಲಿ ಇದೀಗ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.
ತಮಿಳಿನಲ್ಲಿ ಧನುಷ್, ಸಾಯಿಪಲ್ಲವಿ, ನಿಬಿನ್ ಪೌಲ್ ಸೇರಿದಂತೆ ಹಲವರು ತಂತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಒಂದೇ ಬಾರಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ʼ777 ಚಾರ್ಲಿʼ ಟ್ರೈಲರ್ ರಿಲೀಸ್ ಆಗುತ್ತಿರುವುದು ವಿಶೇಷವಾಗಿದೆ.
ಮಲಯಾಳಂನಲ್ಲಿ ನಿಬಿನ್ ಪೌಲ್, ಆಸೀಫ್ ಆಲಿ, ತೋವಿನೋ ಥಾಮಸ್, ಅಂಟೋನಿ ವರಿಸ್, ಅರ್ಜುನ್ ಅಶೋಕನ್ ಬಿಡಿಗಡೆ ಮಾಡಿದರೆ, ತೆಲಗುವಿನಲ್ಲಿ ನಟಿ ಸಾಯಿ ಪಲ್ಲವಿ, ವಿಕ್ಟರಿ ವೆಂಕಟೇಶ್, ಮಂಚು ಲಕ್ಷ್ಮೀ, ರಾಣಾ ದಗ್ಗುಬಾಟಿ ಬಿಡುಗಡೆಗೊಳಿಸಿದ್ದಾರೆ. ಹಿಂದಿಯಲ್ಲೂ ದೊಡ್ಡ ಸೆಲೆಬ್ರೆಟಿಗಳ ಮೂಲಕ ಅನಾವರಣಗೊಳ್ಳಲಿದೆ.
ಇದನ್ನೂ ಓದಿ | 777 Charlie | ಸ್ಯಾಂಡಲ್‌ವುಡ್‌ನ ನೆಚ್ಚಿನ ‘ಸಿಂಬಾ’ ಇನ್ನಿಲ್ಲ..
ʼ777 ಚಾರ್ಲಿʼ ಕನ್ನಡದ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ರಿಲೀಸ್ ಮಾಡಲಾಗಿದ್ದು, ಪ್ರೇಕ್ಷಕರು ಈಗಾಗಲೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯನ್ನು ದಾಟಿ ಭೂಮಿಯನ್ನು ತಾಕಿದ ಕಿರುಬೆರಳು, ಧರ್ಮನನ್ನ ಸೇರಿ ಉಂಟು ಮಾಡುವ ತುಂಟಾಟಗಳನ್ನು ನೋಡಿದ್ದಾಯಿತು.. ಇನ್ನು ನಮ್ಮ ಪಯಣ ಎಲ್ಲಿಗೆಂದು ತಿಳಿಯುವ ಸಮಯ ಬಂದಾಗಿದೆ, ಯಾರೆಲ್ಲಾ ಪಯಣದಲ್ಲಿ ಇರುವರೆಂದು ಹೇಳುವ ಸಮಯ ಬಂದಿದೆ!
ಈ ಪಯಣ ದೊಡ್ಡದು, ನಿಮ್ಮ ಕಾಯುವಿಕೆಗೆ ನಾನು ಚುಕ್ಕಿ ಇಡುವ ಸಮಯ ಬಂದಿದೆ..ಎಂದು ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಚಿತ್ರತಂಡ ಟ್ರೈಲರ್ ರಿಲೀಸ್ ಮಾಡಿದೆ.
ಈಗ ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ʼ777 ಚಾರ್ಲಿʼ ಚಾರ್ಲಿ ಸಿನಿಮಾವನ್ನು ಹಿಂದಿಯಲ್ಲಿ ವಿತರಣೆ ಮಾಡುವವರು ದೇಶದಲ್ಲಿ ಅತಿ ದೊಡ್ಡ ವಿತರಣಾ ಜಾಲ ಹೊಂದಿರುವ ಯುಎಫ್‌ಒ(UFO) ಎಂದು ತಿಳಿದು ಬಂದಿತ್ತು.
ಶ್ವಾನ ಪ್ರೇಮಿಗಳು ಕಾತುರತೆಯಿಂದ ಕಾಯುತ್ತಿರುವ ಈ ಸಿನಿಮಾ ನಾಯಕನಾಗಿ ರಕ್ಷಿತ್ ಶೆಟ್ಟಿ ನಟಿಸಿದರೆ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ನಟಿಸಿದ್ದಾರೆ. ಕಿರಣ್ ರಾಜ್ ಈ ಚಿತ್ರದ ನಿರ್ದೇಶಕರಾಗಿದ್ದು, ರಕ್ಷಿತ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ, ಪ್ರಗತಿ ರಿಷಬ್ ಶೆಟ್ಟಿ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್ ಉಪಾಧ್ಯ ಸಂಭಾಷಣೆ ನೀಡಿದ್ದು, ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್, ಕಾರ್ತಿಕಾ ನೈನನ್ ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್ ಡಿಸೋಜಾ, ಸಾಯೇಶ್ ಪೈ ಪನಂಡಿಕರ್ ಸಾಹಿತ್ಯ ನೀಡಿದ್ದಾರೆ.
ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ₹21 ಕೋಟಿಗೆ ಕಲರ್ಸ್ ಕನ್ನಡಕ್ಕೆ ಸೇಲ್ ಆಗಿರೋದು ಇನ್ನೂ ವಿಶೇಷ. ಏನೇ ಆಗಲಿ ಇದೇ ಜೂನ್ 10 ರಂದು ʼ777 ಚಾರ್ಲಿʼ ರಿಲೀಸ್ ಆಗ್ತಾ ಇದ್ದು. ಒಂದೆ ದಿನದಲ್ಲಿ ಪಂಚಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ಅಭಿಮಾನಿಗಳಿಗೆ ಖುಷಿ ತರ್ತಾ ಇದ್ದು ಹೇಗೆ ರಂಜಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ |777 Charlie | ರಕ್ಷಿತ್ ಶೆಟ್ಟಿ ಸಿನಿಮಾ ವಿತರಣೆ ಮಾಡಲಿದೆ UFO: ಮೇ 16ಕ್ಕೆ ಟ್ರೈಲರ್ ಬಿಡುಗಡೆ