Site icon Vistara News

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshans gang moves Google to destroy evidence after Renukaswamys murder

ಬೆಂಗಳೂರು: ರೇಣುಕಾ ಸ್ವಾಮಿ‌ ಹತ್ಯೆ (Renuka swamy Murder case) ಪ್ರಕರಣದ ಇಂಚಿಂಚು ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ರೇಣುಕಾ ಸ್ವಾಮಿ‌ ಹತ್ಯೆಯ ಮ್ಯಾಪಿಂಗ್ ಮಾಡಿ ಚಾರ್ಜ್ ಶೀಟ್ ಮಾಡಿದ್ದಾರೆ. ಇಷ್ಟಕ್ಕೂ ಹೇಗಿದೆ ಗೊತ್ತಾ ಪೊಲೀಸರಿಂದ ಮರ್ಡರ್ ಕಹಾನಿಯ ಮ್ಯಾಪಿಂಗ್?

ಪವಿತ್ರಗೌಡ ರೇಣುಕಾಸ್ವಾಮಿಯ ಮೆಸೇಜ್ ವಿಚಾರವನ್ನು ಮೊದಲಿಗೆ ಪವನ್‌ಗೆ ತಿಳಿಸುತ್ತಾಳೆ. ಬಳಿಕ ಪವನ್ ಫೇಕ್‌ ಐಡಿ ಮಾಡಿ ಗೌತಮ್ ಹೆಸರಲ್ಲಿ ರೇಣುಕಾಸ್ವಾಮಿ ಜತೆಗೆ ಚಾಟಿಂಗ್‌ ಮಾಡುತ್ತಾನೆ. ಚಾಟ್ ಮಾಡಿ ರೇಣುಕಾ ಸ್ವಾಮಿ ಲೊಕೇಶನ್ ಕಂಡು ಹಿಡಿತ್ತಾರೆ. ಅದಕ್ಕೂ ಮೊದಲು ರೇಣುಕಾಸ್ವಾಮಿ ಫೇಕ್ ವಿಳಾಸವನ್ನು ಕೊಟ್ಟಿದ್ದ.

ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್ ಮಾಡಿರುವುದನ್ನು ಪವನ್‌ ದರ್ಶನ್‌ಗೆ ತೋರಿಸುತ್ತಾನೆ. ನಂತರ ದರ್ಶನ್‌ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬರುವಂತೆ ತಿಳಿಸುತ್ತಾನೆ. ನಂತರ ರಾಘವೇಂದ್ರ ಮುಖಾಂತರ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿಸಿ, ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬರುತ್ತಾರೆ.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ಇತ್ತ ಶೂಟಿಂಗ್ ಮುಗಿಸಿ ಊಟಕ್ಕೆ ಹೋಗಿದ್ದ ದರ್ಶನ್‌ಗೆ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವ ವಿಚಾರವನ್ನು ಮುಟ್ಟಿಸುತ್ತಾರೆ. ಅಲ್ಲಿಂದ ದರ್ಶನ್, ನಾಗರಾಜು, ಪವಿತ್ರಾಳನ್ನು ಪಿಕ್ ಅಪ್‌ ಮಾಡಿಕೊಂಡು ಶೆಡ್‌ಗೆ ಬರುತ್ತಾರೆ. ದರ್ಶನ್‌ ಬರುವ ಮುನ್ನ ಪವನ್‌ ಮತ್ತು ಗ್ಯಾಂಗ್‌ ಮೊದಲೇ ರೇಣುಕಾಸ್ವಾಮಿಯನ್ನು ಥಳಿಸಿರುತ್ತಾರೆ.

ನಂತರ ಶೆಡ್ಡಿಗೆ ಬಂದಿದ್ದ ದರ್ಶನ್ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಬಳಿಕ ಲಾಠಿಯಿಂದ ಹೊಡೆದು ರೇಣುಕಾಸ್ವಾಮಿ ಗುಪ್ತಾಂಗಕ್ಕೆ ಬಲವಾಗಿ ಒದ್ದಿದ್ದ. ನಂತರ ಪವಿತ್ರಾಗೌಡ ನಿನ್ನಂತವರು ಇರಬಾರೆಂದು ಎಂದು ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ರೇಣುಕಾಸ್ವಾಮಿಗೆ ಥಳಿಸಿದ ನಂತರ ದರ್ಶನ್‌ ಅಲ್ಲಿಂದ ಮನೆಗೆ ವಾಪಸ್‌ ಹೋಗಿದ್ದ.

ನಂತರ ರೇಣುಕಾ ಸ್ವಾಮಿಯನ್ನು ಎಳೆದುಕೊಂಡು ಹೋಗಿ ವಾಚ್ ಮ್ಯಾನ್ ರೂಮಿಗೆ ಬಿಸಾಡುತ್ತಾರೆ. ಎಲ್ಲರ ಬಲವಾದ ಹೊಡೆತಕ್ಕೆ ರೇಣುಕಾಸ್ವಾಮಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ರೇಣುಕಾ ಸ್ವಾಮಿಯ ಪಲ್ಸ್ ಚೆಕ್‌ ಮಾಡಿದ ಪ್ರದೋಶ್, ದರ್ಶನ್‌ಗೆ ಫೋನ್‌ ಮಾಡಿ ಸತ್ತಿರುವ ವಿಷ್ಯವನ್ನು ಮುಟ್ಟಿಸುತ್ತಾನೆ. ಡೆಡ್‌ ಬಾಡಿಯನ್ನು ಡಿಸ್ಪಾಚ್‌ ಮಾಡುವ ಕೆಲಸದ ಜತೆಗೆ ಸೆರಂಡರ್‌ ಆಗುವವರನ್ನು ರೆಡಿ ಮಾಡುತ್ತಾರೆ. ಬಳಿಕ ರಾಘವೇಂದ್ರ, ಕಾರ್ತಿಕ್‌, ನಿಖಿಲ್ ನಾಯ್ಕ, ಕೇಶವ್ ಮೂರ್ತಿಯನ್ನು ಸರೆಂಡರ್‌ ಆಗಲು ಒಪ್ಪಿಸುತ್ತಾರೆ.

ಮಾರನೇ ದಿನ ನಟ ದರ್ಶನ್ ಮನೆಯಲ್ಲಿ ನಡೆದಿದ್ದ ಪೂಜೆಯಲ್ಲಿ ಭಾಗಿಯಾಗಿದ್ದು, ಮುಂದೆ ಏನು ಆಗುತ್ತೋ ಏನೋ ಎಂದು ಟೆನ್ಷನ್‌ನಲ್ಲೇ ಓಡಾಡಿದ್ದಾರೆ. ಪೂಜೆ ಮುಗಿಸಿ ರಾತ್ರೋ ರಾತ್ರಿ‌ ದರ್ಶನ್‌ ಮೈಸೂರಿಗೆ ತೆರಳಿದ್ದರು. ಇದಾದ ಬಳಿಕ ಹಣ ಪಡೆದು ಬಂದು ಕೆಲವರು ಸರೆಂಡರ್ ಆಗಿದ್ದರು. ಇತ್ತ ಮೋರಿಯಲ್ಲಿ ಸಿಕ್ಕಿದ್ದ ಮೃತದೇಹವನ್ನು ಕಂಡು ಅಸಹಜ ಸಾವು ಎಂದು ದೂರು ದಾಖಲಿಸಲು ಮುಂದಾಗಿದ್ದರು. ಗಾಯಗಳನ್ನು ನೋಡಿ ಡಿಸಿಪಿ ಕೊಲೆ ಕೇಸ್ ಎಂದು ದಾಖಲಿಸಿಕೊಳ್ಳಿ ಎಂದಿದ್ದರು. ಇತ್ತ ತಾವಾಗಿಯೇ ಸರೆಂಡರ್ ಆಗಿದ್ದು ಕಂಡು ಪೊಲೀಸರಿಗೆ ಅನುಮಾನ ಬಂದಿತ್ತು.

ಪೊಲೀಸರಿಗೆ ಮೊದಲಿಗೆ ಇದು ರೌಡಿಯೊಬ್ಬನ ಕೊಲೆ ಎಂಬ ಸಂಶಯ ಇತ್ತು. ಡಿಸಿಪಿ ಮತ್ತು ಎಸಿಪಿ ಹೋದಾಗ ರಾಘವೇಂದ್ರನ‌ ಬಗ್ಗೆ ಪೊಲೀಸರು ಹೇಳುತ್ತಾರೆ. ಈತ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಎನ್ನುವ ಮಾಹಿತಿ ಲಭ್ಯವಾಗುತ್ತದೆ. ಚಿತ್ರದುರ್ಗದಿಂದ ಇಲ್ಲಿ ಯಾಕೆ ಬಂದ ಎಂದು ಅನುಮಾನ ಮೂಡಿದೆ. ಆಗ ಪವಿತ್ರಾಗೌಡ ಬಗ್ಗೆ ಕೆಟ್ಟ ಮೆಸೇಜ್ ಮಾಡಿದ್ದ ಎಂದು ಹೇಳುತ್ತಾನೆ.

ಬೆಳಗಿನ ಜಾವ ಮೂರು ಗಂಟೆಗೆ ಎಸಿಪಿ ಚಂದನ್ ಡಿಸಿಪಿ ಗಿರೀಶ್‌ ಅವರಿಗೆ ಕರೆ ಮಾಡಿ ದರ್ಶನ್ ಭಾಗಿ ಬಗ್ಗೆ ಹೇಳುತ್ತಾರೆ. ಡಿಸಿಪಿ ಗಿರೀಶ್‌ 6 ಗಂಟೆಗೆ ನಗರ ಪೊಲೀಸ್ ಆಯುಕ್ತರಿಗೆ ಹೇಳಿದ್ದರು. ಅಷ್ಟರಾಗಲೇ ಕೇಶವ ಮೂರ್ತಿ ಪವಿತ್ರಾ ಗೌಡ ಹೆಸರು ಬಾಯಿಬಿಟ್ಟಿದ್ದ.

ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ ಹೋಗಿದ್ದ ಆರೋಪಿಗಳು

ತನಿಖೆ ವೇಳೆ ಹಂತಕರು ಸಾಕ್ಷಿ ನಾಶಕ್ಕೆ ಏನೇನು ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಡಿಜಿಟಲ್ ಸಾಕ್ಷಿಗಳನ್ನು ನಾಶ ಮಾಡಲು ಆರೋಪಿಗಳು ಗೂಗಲ್ ಮೊರೆ ಹೋಗಿದ್ದರು. ಒಂದು ವೇಳೆ ಅರೆಸ್ಟ್ ಆದರೆ ತಮ್ಮ ಬಗ್ಗೆ ಯಾವುದೇ ಸಾಕ್ಷಿ ಸಿಗಬಾರದು ಎಂದು ಮಾಸ್ಟರ್ ಪ್ಲಾನ್ ಮಾಡಿದ್ದರು. ಆರೋಪಿಗಳು ಓಡಾಡಿದ್ದ ಲೋಕೇಷನ್ ಸಿಗದಂತೆ ಡಾಟಾ ಡಿಲೀಟ್‌ಗೆ ಯತ್ನಿಸಿದ್ದರು. ಯಾವ ರೀತಿ ಡಿಲೀಟ್ ಮಾಡಬೇಕು ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಆರೋಪಿ ಟೆಕ್ಕಿ ಪ್ರದೂಶ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ವೇಳೆ ಕಳ್ಳಾಟ ಬಯಲಾಗಿದೆ. ಪ್ರದೂಶ್, ಇತರೆ ಆರೋಪಿಗಳ ಲೋಕೇಷನ್ ಜತೆ ಸರ್ಚ್ ಹಿಸ್ಟರಿ ಕೂಡ ಪತ್ತೆಯಾಗಿದೆ. ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಬಗ್ಗೆ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version