ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Actor Darshan) ಹಾಗೂ ಪವಿತ್ರಾಗೌಡ ಫೋನ್‌ಗಳು ಕೊನೆಗೂ ರಿಟ್ರೀವ್ ಆಗಿಲ್ಲ. ಕಳೆದ ಒಂದೂವರೆ ತಿಂಗಳಿಂದ ಹೈದರಾಬಾದ್ ಸಿಎಫ್ಎಸ್ಎಲ್‌ನಲ್ಲಿದ್ದ ಇಬ್ಬರು ಆರೋಪಿಗಳ ಐಫೋನ್‌ಗಳು ರಿಟ್ರೀವ್ ಆಗದೇ ರಿಟರ್ನ್ ಆಗಿವೆ. ಸದ್ಯ ಎರಡು ಐಫೋನ್‌ಗಳನ್ನು ಗುಜರಾತ್‌ಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಗುಜರಾತ್‌ನ ಎಫ್ಎಸ್ಎಲ್ ಯೂನಿವರ್ಸಿಟಿಯಲ್ಲಿ ಆತ್ಯಾಧುನಿಕ ತಂತ್ರಜ್ಞಾನ, ಎಕ್ಪ್ಮೆಂಟ್ ಇದೆ. ಎಫ್ಎಸ್ಎಲ್ ತಜ್ಞರ ತಂಡದಿಂದ ಎರಡು ಐಫೋನ್‌ಗಳ ರಹಸ್ಯ ಭೇದಿಸಲು ಚಿಂತನೆ ನಡೆದಿದೆ.
ನಟ ದರ್ಶನ್‌ಗೆ ಇಂದಾದರೂ ಸಿಗುತ್ತಾ ಮನೆ ಊಟ?
ಬೆಂಗಳೂರು/ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (renukaswamy murder case) ಜೈಲುಪಾಲಾಗಿರುವ ನಟ ದರ್ಶನ್ (Actor Darshan) ಮನೆ ಊಟದ ಅರ್ಜಿ ವಿಚಾರಣೆಯು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಗುರುವಾರ ನಡೆದಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ಬಳಿಕ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ನಿನ್ನೆ ಬುಧವಾರವಷ್ಟೇ ಪೊಲೀಸರು ಪ್ರಕರಣದ ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದರು. ಇಂದು ಮನೆ ಊಟದ ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿಯಿಂದ ವಾದ ಮಂಡಿಸಲಿದ್ದಾರೆ.
ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ಡಿ ಗ್ಯಾಂಗ್ ಮುಂದಿನ ನಡೆ ಏನು?
ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆಪ್ಟೆಂಬರ್ 9ರಂದು ದರ್ಶನ್ ನ್ಯಾಯಾಂಗ ಅವಧಿ ಮುಕ್ತಾಯ ಆಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೆ 09ರಂದು 24ನೇ ಎಸಿಎಂಎಂ ( ACMM) ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.
ಅದೇ ದಿನ ಚಾರ್ಜ್ ಶೀಟ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಸೆಷನ್ಸ್ ಕೋರ್ಟ್‌ಗೆ ವರ್ಗಾವಣೆ ಆಗಲಿದೆ. ಚಾರ್ಜ್ ಶೀಟ್ ವರ್ಗಾವಣೆ ಆದ 2 /3 ದಿನಗಳಲ್ಲಿ ಕೇಸ್‌ಗೆ ಸಂಬಂಧಿಸಿದಂತೆ ಸ್ಕ್ರೂಟಿನಿ ಆಗಲಿದೆ. ಕೇಸ್ ಸ್ಕ್ರೂಟಿನಿ ಆದ ನಂತರ ಕೋರ್ಟ್‌ನಿಂದ ಪ್ರಕರಣಕ್ಕೆ ಸಿಸಿ ನಂಬರ್ ನೀಡಲಾಗುತ್ತದೆ. ಕೇಸ್‌ನ ಸಿಸಿ ನಂಬರ್ ಪಡೆದ ನಂತರ ಆರೋಪಿಗಳ ಪರ ವಕೀಲರಿಗೆ ಚಾರ್ಜ್ ಶೀಟ್ ಪ್ರತಿಯನ್ನು ನೀಡಲಾಗುತ್ತದೆ. ಆರೋಪಿ ಪರ ವಕೀಲರು ಚಾರ್ಜ್ ಸೀಟ್ ಪ್ರತಿ ಕೈಗೆ ಸಿಕ್ಕ ನಂತರ, ಜಾಮೀನಿಗೆ ಅರ್ಜಿ ಸಲ್ಲಿಸಲಿಸಬಹುದು.
ಸೆಪ್ಟೆಂಬರ್ 9 ರ ನಂತರ ಜಾಮೀನಿಗೆ ಅರ್ಜಿ ಸಲ್ಲಿಸುವುದಕ್ಕೆ ದರ್ಶನ್, ಪವಿತ್ರ ಗೌಡ ಸೇರಿ ಉಳಿದ ಆರೋಪಿಗಳ ಪರ ವಕೀಲರಿಂದ ಸಿದ್ಧತೆ ನಡೆಯುತ್ತಿದೆ. ಚಾರ್ಜ್ ಶೀಟ್‌ಗೂ ಮುನ್ನ ಪವಿತ್ರ ಗೌಡ, ಅನು ಕುಮಾರ್ ಸೇರಿ ಹಲವರು ಸಲ್ಲಿಸಿದ್ದ ಜಾಮೀನು ಅರ್ಜಿಗಳು ವಜಾ ಆಗಿತ್ತು.
ಇದನ್ನೂ ಓದಿ: Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್ ಫೋನ್‌ನಲ್ಲಿ ಪತ್ತೆ!
ಡಿ ಗ್ಯಾಂಗ್‌ಗೆ ಸಿಗುತ್ತಾ ಜಾಮೀನು?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17 ಜನ ಆರೋಪಿಗಳು ಇದ್ದಾರೆ. ಆರೋಪಿಗಳ ಪರ ವಕೀಲರು ತಮ್ಮ ತಮ್ಮ ಕಕ್ಷಿದಾರ ದೋಷಾರೋಪಣ ಪಟ್ಟಿ ಪಡೆದುಕೊಳ್ಳುತ್ತಾರೆ. ಒಬ್ಬೊಬ್ಬ ಆರೋಪಿಯ ಮೇಲೆ ಇರುವ ಪ್ರತ್ಯೇಕ ಆರೋಪದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ದೋಷಾರೋಪಣ ಪಟ್ಟಿಯಿಂದ ಆರೋಪಿಯನ್ನು ಹೊರತರಲು ಚಿಂತನೆ ನಡೆಸಲಿದ್ದಾರೆ. ರಿಸರ್ಚ್ ಮಾಡಿಕೊಂಡು ಬೇರೆ ತೀರ್ಪುಗಳನ್ನು ಉಲ್ಲೇಖ ಮಾಡಿಕೊಳ್ಳುತ್ತಾರೆ. ಬಳಿಕ ಸಂಬಂಧಪಟ್ಟ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತಾರೆ.
ಮೊದಲು ವಕಾಲತ್ತು ಹಾಕಿದ ಅರ್ಜಿಯನ್ನು ಸಲ್ಲಿಕೆ ಮಾಡಲಾಗುತ್ತದೆ. ಕೋರ್ಟ್‌ನಲ್ಲಿ ಅರ್ಜಿ ದಾಖಲಾದ ಬಳಿಕ ಅರ್ಜಿ ವಿಚಾರಣೆ ಬರಲಿದೆ. ಈ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ಅರ್ಜಿ ವಿಚಾರಣೆ ಸಾಕ್ಷ್ಯಾಧಾರ ಪರಿಶೀಲನೆ ನಡೆಸಿ ಜಾಮೀನು ಕೊಡುವುದು ಬಿಡುವುದು ಕೋರ್ಟ್ ವಿವೇಚನೆಗೆ ಬಿಟ್ಟಿದ್ದಾಗಿದೆ. ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದರೆ ಹೈಕೋರ್ಟ್ ಮೊರೆ ಹೋಗಲಿದ್ದಾರೆ. ಅಲ್ಲೂ ಕೂಡ ಜಾಮೀನು ಅರ್ಜಿ ವಜಾ ಆದರೆ ಸುಪ್ರಿಂ ಕೋರ್ಟ್ ಮೊರೆ ಹೋಗಬೇಕು.
ಇಷ್ಟೆಲ್ಲ ಸರ್ಕಸ್ ನಡುವೆಯೂ ಜಾಮೀನು ಸಿಗದಿದ್ದರೆ ಆರೋಪಿತರು ಜೈಲಿನಲ್ಲಿ ಕಾಲ ಕಳೆಯಬೇಕು. ಇದರ ಜತೆಗೆ ತನಿಖಾಧಿಕಾರಿಗಳು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮನವಿ ಮಾಡಬಹುದು. ಮಾಡಿ ಅದನ್ನ ನ್ಯಾಯಾಲಯ ಪುರಸ್ಕರಿಸಿದರೆ ಪ್ರಕರಣದ ಟ್ರಯಲ್ ಆರಂಭವಾಗುತ್ತದೆ. ಟ್ರಯಲ್ ಮುಗಿದು ಆರೋಪಿಗಳ ತಪ್ಪು ಸಾಬೀತು ಆದರೆ ಸಜಾ ಆಗಬಹುದು. ಇಲ್ಲ ಪೊಲೀಸರು ಸರಿಯಾದ ಸಾಕ್ಷಿ ನೀಡಿ ಆರೋಪವನ್ನು ಸಾಬೀತು ಮಾಡದಿದ್ದರೆ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ