Site icon Vistara News

KGF Chapter – 3 ಬರುತ್ತಾ?: ಹಿಂಟ್‌ ಕೊಟ್ಟ ರಾಕಿ ಭಾಯ್‌

ಬೆಂಗಳೂರು: ಕನ್ನಡದ ಸಿನಿಮಾ, ದಕ್ಷಿಣದ ಸಿನಿಮಾ ಎಂಬ ಅನೇಕ ಗಡಿಗಳನ್ನು ಮೀರಿ ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿ ₹1,000 ಕೋಟಿ ಕ್ಲಬ್‌ನತ್ತ ಸಾಗುತ್ತಿರುವ ಕೆಜಿಎಫ್‌-2 ಸಕ್ಸೆಸ್‌ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಬಾಹುಬಲಿ -1 ಸಿನಿಮಾದಲ್ಲಿ “ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?ʼ ಎಂಬ ಪ್ರಶ್ನೆಯನ್ನು ನಿರ್ದೇಶಶ ಎಸ್‌.ಎಸ್‌. ರಾಜಮೌಳಿ ಬಾಕಿ ಉಳಿಸಿದಂತೆಯೇ, ಕೆಜಿಎಫ್‌-3 ಚಿತ್ರ ಬರುತ್ತದೆಯೇ ಇಲ್ಲವೇ ಎಂಬ ಕುತೂಹಲವನ್ನು ಕೆಜಿಎಫ್‌-2ನಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌ ಉಳಿಸಿದ್ದಾರೆ.

ಪ್ರಧಾನಿ ಒಂದು ಹಳೆಯ ಪುಸ್ತಕವನ್ನು ನಡುಗುವ ಕೈಗಳಿಂದಲೇ ತೆಗೆಯುತ್ತಾಳೆ. ಅದರಲ್ಲಿ ಕೆಜಿಎಫ್‌ ಚಾಪ್ಟರ್‌ ಎನ್ನುವವರೆಗೆ ಸ್ಪಷ್ಟವಾಗಿ ಕಾಣುತ್ತದೆ. ಇನ್ನೇನು ಮುಂದುವರಿಯಬೇಕು ಎನ್ನುವಷ್ಟರಲ್ಲಿ ಕೆಜಿಎಫ್‌-2 ಮುಕ್ತಾಯವಾಗುತ್ತದೆ. ಹಾಗಾಗಿ ಕೆಜಿಎಫ್‌-3 ಸಿನಿಮಾ ಬರುತ್ತದೆಯೇ ಇಲ್ಲವೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹಾಗೆಯೇ ಉಳಿದಿದೆ.

ಇದನ್ನೂ ಓದಿ | ಕೆಜಿಎಫ್‌ ಸ್ಟಾರ್‌ ಯಶ್‌ ಲಕ್ಷುರಿ ಲೈಫ್‌ಸ್ಟೈಲ್‌ ಹೇಗಿದೆ ನಿಮಗೆ ಗೊತ್ತೆ?

ಎರಡು ಕೆಜಿಎಫ್‌ ನೋಡಿ ಥ್ರಿಲ್‌ ಆಗಿರುವ ಫ್ಯಾನ್‌ಗಳು ಮೂರನೇ ಸಿನಿಮಾ ಬರಲಿ ಎಂದು ಆಶಿಸುತ್ತಿದ್ದಾರೆ. ಈಗಾಗಲೆ ಟ್ವಿಟ್ಟರ್‌ನಲ್ಲಿ ಎರಡಕ್ಕಿಂತಲೂ ಹೆಚ್ಚು ಬಾರಿ ಕೆಜಿಎಫ್‌-3 ಟ್ರೆಂಡ್‌ ಆಗಿದೆ. ಕನ್ನಡದ ಸಿನಿಮಾ ಮತ್ತೊಮ್ಮೆ ಮುಗಿಲೆತ್ತರಕ್ಕೆ ಏರಬೇಕು ಎಂಬ ಬಯಕೆ ಎಲ್ಲರದ್ದು.

ಆದರೆ ಈ ಬಗ್ಗೆ ನಿರ್ದೇಶಕ ಪ್ರಶಾಂತ್‌ ನೀಲ್‌ ಎಲ್ಲಿಯೂ ಸ್ಪಷಟವಾಗಿ ಹೇಳಿಲ್ಲ. ಸದ್ಯಕ್ಕೆ ಪ್ರಭಾಸ್‌ ನಟನೆಯ ಸಲಾರ್‌ನಲ್ಲಿ ನೀಲ್‌ ನಿರತರಾಗಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಜೊತೆಗೆ ಪ್ರಭಾಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ಅಭಿನಯದ ಈ ದೊಡ್ಡ ಚಿತ್ರವು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಸಾಹಸವಾಗಿದೆ ಮತ್ತು ಇದು KGF ನಂತೆ ಕಾಣುತ್ತದೆ. ಹಾಗಾಗಿ ಸದ್ಯಕ್ಕೆ ಕೆಜಿಎಫ್‌-3 ನಿರ್ದೇಶನ ಕಷ್ಟ ಸಾಧ್ಯ ಎನ್ನುವಂತೆ ನೀಲ್‌ ಮಾತನಾಡಿದ್ದರು.

ಇದನ್ನೂ ಓದಿ | KGFನಿಂದ ಕನ್ನಡ ಚಿತ್ರರಂಗ ಕಲಿಯಬೇಕಾದ 7 ಪಾಠಗಳು

ಇದೀಗ ನ್ಯೂಸ್ ಪೋರ್ಟಲ್‌ ಒಂದಕ್ಕೆ ರಾಕಿ ಭಾಯ್‌ ಯಶ್‌ ನೀಡಿರುವ ಸಂದರ್ಶನದಲ್ಲಿ ಬೇರೆಯದೇ ಮಾತನಾಡಿದ್ದಾರೆ. ತಾನು ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್-3ರ ಅನೇಕ ದೃಷ್ಯಗಳ ಕುರಿತು ಯೋಚಿಸಿದ್ದೇವೆ. ಕೆಜಿಎಫ್‌-2ರಲ್ಲಿ ನಮಗೆ ಮಾಡಲು ಸಾಧ್ಯವಾಗದ ಬಹಳಷ್ಟು ಕೆಲಸಗಳಿವೆ. ಆದ್ದರಿಂದ ಕೆಜಿಎಫ್‌-3ರ ಕುರಿತು ಸಾಕಷ್ಟು ಸಾಧ್ಯತೆಗಳಿವೆ. ಆದರೆ ಇದು ಕೇವಲ ಒಂದು ಕಲ್ಪನೆ ಮತ್ತು ನಾವು ಇದೀಗ ಅದನ್ನು ಸದ್ಯಕ್ಕೆ ಅಲ್ಲಿಯೇ ಬಿಟ್ಟಿದ್ದೇವೆ ಎಂದಿದ್ದಾರೆ. ಯಶ್‌ ಆಡಿರುವ ಈ ಮಾತಿನ ಒಳಾರ್ಥ ಮುಂಬರುವ ದಿನಗಳಲ್ಲಷ್ಟೆ ತಿಳಿಯಬೇಕಿದೆ.

ಇದನ್ನೂ ಓದಿ | ಶಿರಸಿಯಲ್ಲಿ KGF 2 ಓಪನಿಂಗ್‌ ಸೀನ್!‌ 15ನೇ ಶತಮಾನದ ವೀರಗಲ್ಲು ಪತ್ತೆ

Exit mobile version