Site icon Vistara News

Renukaswamy case : ರೇಣುಕಾಸ್ವಾಮಿ ಪವಿತ್ರಾಗೌಡಗೆ ಮಾತ್ರವಲ್ಲ ಸ್ಯಾಂಡಲ್‌ವುಡ್‌ನ ಆ ಸ್ಟಾರ್‌ ನಟಿಯರಿಗೂ ಕಳಿಸಿದ್ದನಂತೆ ಬ್ಯಾಡ್‌ ಮಸೇಜ್‌

Renukaswamy had sent the message not only to Pavithra Gowda but also to those star actresses of Sandalwood

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (renukaswamy case) ಚಾರ್ಜ್‌ಶೀಟ್‌ ಕೋರ್ಟ್‌ಗೆ ಸಲ್ಲಿಕೆ ಆಗುತ್ತಿದ್ದಂತೆ ಒಂದೊಂದೆ ವಿಚಾರಗಳು ಹೊರಬರುತ್ತಿದೆ. ಸದ್ಯ ರೇಣುಕಾಸ್ವಾಮಿ ಕೊಲೆ (Murder case) ಚಾರ್ಜ್ ಶೀಟ್‌ನಲ್ಲಿ ಸ್ಯಾಂಡಲ್‌ವುಡ್‌ನ ಮತ್ತಿಬ್ಬರು ನಟಿಯರ ಹೆಸರುಗಳು ಉಲ್ಲೇಖವಾಗಿವೆ. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಹೆಸರು ಇದೆ. ಎ14 ಆರೋಪಿ ಪ್ರದೂಶ್ ಸ್ವ ಇಚ್ಛಾ ಹೇಳಿಕೆಯಲ್ಲಿ ಇಬ್ಬರ ನಟಿಯರ ಹೆಸರು ಉಲ್ಲೇಖ ಮಾಡಿದ್ದಾನೆ.

ರೇಣುಕಾಸ್ವಾಮಿ ಈ ಇಬ್ಬರು ನಟಿಯರಿಗೂ ಅಶ್ಲೀಲ ಸಂದೇಶ ಕಳಿಸಿದ್ದನಂತೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಬಳಿಕ ನಟ ದರ್ಶನ್‌ ಮೊಬೈಲ್ ತೆಗೆದುಕೊಂಡು ಪ್ರದೂಶ್‌ಗೆ ನೀಡಿದ್ದ. ಪ್ರದೂಶ್‌ ಮೊಬೈಲ್‌ ಪರಿಶೀಲನೆ ಮಾಡಿದಾಗ ರಾಗಿಣಿ ಹಾಗೂ ಶುಭಾ ಪೂಂಜಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ದರ್ಶನ್‌ಗೆ ತಿಳಿಸಿದ್ದಾಗಿ ಸ್ವ ಇಚ್ಛೆ ಹೇಳಿಕೆಯನ್ನು ಪ್ರದೂಶ್‌ ನೀಡಿದ್ದಾನೆ.

ಆದರೆ ಶುಭ ಪೂಂಜಾ ಹಾಗೂ ರಾಗೀಣಿ ದ್ವಿವೇದಿ ಅಶ್ಲೀಲ ಮಸೇಜ್‌ ಬಂದಿರುವುದನ್ನು ತಳ್ಳಿ ಹಾಕಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ಹೆಸರು ಉಲ್ಲೇಖವಾಗಿರುವ ಬಗ್ಗೆ ನಟಿ ಶುಭ ಪೂಂಜಾ ಪೋಸ್ಟ್ ಮಾಡಿದ್ದಾರೆ. ರೇಣುಕಾಸ್ವಾಮಿಯಿಂದ ನನ್ನ ಪ್ರೊಫೈಲ್‌ಗೆ ಯಾವುದೇ ಮೆಸೇಜ್ ಬಂದಿಲ್ಲ. ನನ್ನ ಹೆಸರಿನ ಬೇರೆ ಪ್ರೊಫೈಲ್‌ಗಳಿಗೆ ಬಂದಿರುವ ಬಗ್ಗೆಯೂ ಗೊತ್ತಿಲ್ಲ. ಆದರೆ ನನ್ನ ಪ್ರೊಫೈಲ್‌ಗೆ ಯಾವುದೇ ಮೆಸೇಜ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚಾರ್ಜ್ ಶೀಟ್‌ನಲ್ಲಿ ಹೆಸರು ಉಲ್ಲೇಖವಾಗಿರುವ ಬಗ್ಗೆ ನಟಿ ರಾಗಿಣಿ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಫೇಕ್ ಪ್ರೊಫೈಲ್‌ಗಳಿಂದ ನಿತ್ಯವೂ ಇಂತಹ ಮೆಸೇಜ್‌ಗಳು ಬರುತ್ತವೆ. ಅದರ ಬಗ್ಗೆ ನಾನು ತುಂಬಾ ತಲೆ ಕೆಡಿಸಿಕೊಳ್ಳಲ್ಲ. ಅಷ್ಟಕ್ಕೂ ಯಾವ ಪ್ರೊಫೈಲ್‌ನಿಂದ ಮೆಸೇಜ್ ಬಂದಿದೆ ಎಂಬುದರ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಯಾಕಂದರೆ ನನ್ನ ಸೋಶಿಯಲ್ ಮೀಡಿಯಾ ಪ್ರೊಫೈಲ್‌ನ ನಾನು ನೋಡಿಕೊಳ್ಳಲ್ಲ. ಸಿಂಗಾಪುರ್ ಮೂಲದ ಏಜೆ‌ಸ್ಸಿಗೆ ವಹಿಸಿದ್ದೇನೆ. ಏನೇ ಬಂದರು ಅದನ್ನು ಅವರು ಹ್ಯಾಂಡಲ್ ಮಾಡುತ್ತಾರೆ. ಹೀಗಾಗಿ ಯಾವ ಮೆಸೇಜ್ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ibbani thabbida ileyali :ಇಬ್ಬನಿ ತಬ್ಬಿದ ಇಳೆಯಲಿ; ಪ್ರೇಮಕಾವ್ಯವನ್ನು ತಬ್ಬಿದ ನಿರ್ದೇಶಕ-ತಬ್ಬಿಬ್ಬಾದ ಪ್ರೇಕ್ಷಕ

ಚಿಕ್ಕಣ್ಣ ಇದ್ದಾಗಲೇ ರೇಣುಕಾಸ್ವಾಮಿ ಬಗ್ಗೆ ಚರ್ಚೆ ಆಯ್ತಾ?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಚಾರ್ಜ್​ಶೀಟ್​ನಲ್ಲಿ ನಟ ಚಿಕ್ಕಣ್ಣನ ಹೇಳಿಕೆಯೂ ಉಲ್ಲೇಖವಾಗಿದೆ. ಅಂದು ಸ್ಟೋನಿಬ್ರೂಕ್​​ನಲ್ಲಿ ದರ್ಶನ್​ ಭೇಟಿ ಮಾಡಿದ್ದ ಚಿಕ್ಕಣ್ಣ ಪೊಲೀಸರಿಗೆ ಒಂದಷ್ಟು ವಿಷಯಗಳನ್ನು ಹೇಳಿದ್ದಾರೆ. ಜೂನ್ 8ರಂದು ಎ.ಪಿ ಅರ್ಜುನ್ ಕಛೇರಿಯಲ್ಲಿ ನನ್ನ ಮುಂದಿನ ಚಿತ್ರದ ಬಗ್ಗೆ ಚರ್ಚೆ‌ ಮಾಡುತ್ತಿದ್ದೆ. ಆಗ ನಟ ಯಶಸ್ ಕರೆ ಮಾಡಿ ದರ್ಶನ್ ಮಧ್ಯಾಹ್ನ ಸ್ಟೋನಿ ಬ್ರೂಕ್ ನಲ್ಲಿ ಊಟ ಅರೆಂಜ್ ಮಾಡಿದ್ದಾರೆ. ನಿನಗೆ ಕರೆ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆ, ಡೈರೆಕ್ಟಾಗಿ ಸ್ಟೋನಿ ಬ್ರೂಕ್ ಬರುವಂತೆ ಹೇಳಿದ್ದರು. ನಾನು ಬರಲು ಟ್ರೈ ಮಾಡುತ್ತೇನೆಂದು ಯಶಸ್‌ಗೆ ತಿಳಿಸಿದೆ.

ಆದರೆ 10 ನಿಮಿಷಗಳ ನಂತರ ದರ್ಶನ್ ನನಗೆ ಕರೆ ಮಾಡಿ ಬರುವಂತೆ ತಿಳಿಸಿದರುನಾನು ಮನೆಗೆ ಬಂದು ಬಟ್ಟೆ ಬದಲಾಯಿಸಿಕೊಂಡು 02-45ಕ್ಕೆ‌‌ ನನ್ನ ಖಾಸಗಿ ವಾಹನದಲ್ಲಿ ಡ್ರೈವರ್ ಸಿದ್ದು ಜತೆಯಲ್ಲಿ ಸ್ಟೋನಿ ಬ್ರೂಕ್‌ಗೆ ಹೋಗಿದ್ದೆ. ನಾನು ಸಿದ್ದುನನ್ನು ಕಾರಲ್ಲಿ ಬಿಟ್ಟು ಡಿ ಬಾಸ್ ಸಫಾರಿ ಎಂಬ ಲಾಂಜ್‌ಗೆ ತೆರಳಿದೆ. ಅಲ್ಲಿ ದರ್ಶನ್, ವಿನಯ್, ಪ್ರದೂಷ್, ಯಶಸ್, ನಾಗರಾಜು ಊಟ ಮಾಡುತ್ತಿದ್ದರು. ​​ನಾನು ಕುಳಿತುಕೊಂಡು ನನ್ನ ಮುಂದಿನ ಚಿತ್ರದ ಬಗ್ಗೆ ಮಾತನಾಡುತ್ತಾ, ಊಟ ಮಾಡಿದೆ.

ಆಗ ಪವನ್, ದರ್ಶನ್ ಬಳಿಗೆ ಬಂದು ಕಿವಿಯಲ್ಲಿ ಯಾವುದೋ ವಿಚಾರ ತಿಳಿಸಿದರು. ವಿಷಯ ತಿಳಿಸಿದ ನಂತರ ದರ್ಶನ್ ಮುಖಭಾವ ಬದಲಾವಣೆಯಾಗಿತ್ತು. ನಂತರ ದರ್ಶನ್ ಯಾರಿಗೋ ಕರೆ ಮಾಡಿ ಗಂಭೀರವಾಗಿ ಯಾವುದೋ ವಿಚಾರದ ಬಗ್ಗೆ ಚರ್ಚೆ ಮಾಡಿದರು. ನಂತರ ಚಿಕ್ಕಣ್ಣ ನೀನು ಹೊರಡು ನಮಗೆ ಬೇರೆ ಕೆಲಸ ಇದೆ ಎಂದು ದರ್ಶನ್ ತಿಳಿಸಿದರು. ಹೀಗಾಗಿ ಎಲ್ಲರೂ ಒಟ್ಟಿಗೆ ಕೆಳಗೆ ಬಂದಿದ್ದು‌. ನಾನು ಅಲ್ಲಿಂದ ಹೊರಟು ಹೋದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ದರ್ಶನ್, ಪ್ರದೂಷ್ ಹಾಗೂ ವಿನಯ್ ಹಾಗೂ ನಾಗರಾಜು ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನವಲ್ಲಿ ಅಲ್ಲಿಂದ ಹೋದರು.

ಜೂನ್ 10 ರಂದು ನನ್ನ ಸ್ನೇಹಿತ ನಾಗೇಂದ್ರ ನನಗೆ ಕರೆ ಮಾಡಿ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂದ್ದರು. ನಾನು ಕೊಲೆಯ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೆ. ದರ್ಶನ್ ಕಿವಿಯಲ್ಲಿ ಬಂದು ಏನೋ ಹೇಳಿದ್ದ ಪವನ್‌ನನ್ನು ಸಹ ಬಂಧಿಸಿರುವುದು ತಿಳಿದು ಬಂದಿತ್ತು. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟ ಹಾಗೂ ಹಾಸ್ಯ ನಟನಾಗಿದ್ದೇನೆ. ನನಗೆ ದರ್ಶನ್ ಬುಲ್ ಬುಲ್ ಚಿತ್ರದ ಸಮಯದಿಂದ ಪರಿಚಯವಾಗಿರುತ್ತದೆ. ನಾನು ಅವರೊಂದಿಗೆ ಸುಮಾರು 03 ಚಿತ್ರಗಳಲ್ಲಿ ಹಾಸ್ಯನಟನಾಗಿ ಕೆಲಸ ಮಾಡಿದ್ದೇನೆ. ರಾಬರ್ಟ್ ಸಿನಿಮಾದ ವೇಳೆ ಹೆಚ್ಚಾಗಿ ಅವರೊಂದಿಗೆ ಒಡನಾಟ ಹೊಂದಿದ್ದೆ. ದರ್ಶನ್- ಪವಿತ್ರಗೌಡ ಜತೆಗೆ ಲಿವಿಂಗ್ ರಿಲೇಷನ್‌ನಲ್ಲಿ ಇದ್ದ ಬಗ್ಗೆ ನನಗೆ ತಿಳಿದಿದೆ ಎಂದು ಹೇಳಿಕೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version