ಬೆಂಗಳೂರು: ಡಿ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಮೇಲೆ ದರ್ಶನ್ (Actor darshan) ಕೆಂಡಾಮಂಡಲ ಆಗಲು ಕಾರಣವೇನು ಗೊತ್ತಾ? ಅಷ್ಟಕ್ಕೂ ರೇಣುಕಾಸ್ವಾಮಿ ಪವಿತ್ರಗೌಡಗೆ ಏನೇನ್ ಸಂದೇಶಗಳನ್ನು ಕಳುಹಿಸಿದ್ದ. ಆ ಚಾಟಿಂಗ್ ಡಿಟೈಲ್ಸ್ ಇಲ್ಲಿದೆ.
ದರ್ಶನ್ ಕೋಪಕ್ಕೆ ಕಾರಣವಾಗಿದ್ದು ಎರಡು ಅಶ್ಲೀಲ ವಿಡಿಯೊ, ಒಂದು ಫೋಟೊ. ರೇಣುಕಾಸ್ವಾಮಿ ಪವಿತ್ರಗೌಡ ಫೋಟೊ ಕಂಡು ನಾನು ನಿನ್ನನ್ನ ಅನುಭವಿಸಬೇಕೆಂದು ಮೆಸೇಜ್ ಮಾಡಿದ್ದ. ಮೆಸೇಜ್ ಹಿಂದೆಯೆ ಎರಡು ಅಶ್ಲೀಲ ವಿಡಿಯೊ ಕಳಿಸಿ, ಅಶ್ಲೀಲವಾದ ಸಂದೇಶಗಳ ರವಾನಿಸಿದ್ದ. ಇದಾದ ಬಳಿಕ ರೇಣುಕಾಸ್ವಾಮಿ ತನ್ನ ಮರ್ಮಾಂಗದ ಫೋಟೊವನ್ನು ಪವಿತ್ರಾಗೌಡಗೆ ಕಳಿಸಿದ್ದ.
ಇದೆಲ್ಲವನ್ನೂ ನೋಡಿದ ದರ್ಶನ್‌ಗೆ ತನ್ನೊಳಗೆ ಇದ್ದ ಮೃಗತ್ವ ಹೊರಬಂದಿತ್ತು. ಕೊಳಕು ಭಾಷೆಯಿಂದ ನಿಂದಿಸಿ ರೇಣುಕಾಸ್ವಾಮಿಗೆ ಹಲ್ಲೆ ಮಾಡಿ ಏನೋ ಸೂ.. ಮಗನೇ, ನನ್ನ ಹೆಂಡತಿಗೆ ಕೆಟ್ಟ ಮೆಸೇಜ್ ಮಾಡುತ್ತೀಯಾ? ಎಷ್ಟೋ ಧೈರ್ಯ ನಿಂಗೆ ಎಂದು ಕಾಲಿಂದ ಎದೆ ಭಾಗಕ್ಕೆ ಒದ್ದಿದ್ದ. ಬಳಿಕ ಏಯ್ ಪವನ್ ಇವನ ಪ್ಯಾಂಟ್ ಬಿಚ್ಚೋ ಎಂದ ದರ್ಶನ್, ಮರ್ಮಾಂಗಕ್ಕೆ ಒದ್ದಿದ್ದ. ಜಾರ್ಜ್‌ಶೀಟ್‌ನಲ್ಲಿ ದರ್ಶನ್ ಮಿತಿ ಮೀರಿದ ಕ್ರೌರ್ಯದ ಅನಾವರಣವಾಗಿದೆ.
ಪವಿತ್ರಾ ಮೊಬೈಲ್‌ನಲ್ಲಿ ಏನೆಲ್ಲ ಇತ್ತು?
ಐಫೋನ್ 15 ಪ್ರೋ ಮ್ಯಾಕ್ಸ್ ಬಳಸುತ್ತಿದ್ದ ಪವಿತ್ರಾ ಮನೋಜ್ ಹೆಸರಿನಲ್ಲಿ ಸಿಮ್ ಇತ್ತು. ದರ್ಶನ್ ಹೆಸರನ್ನು “D” ಎಂದು ಸೇವ್ ಮಾಡಿದ್ದರೆ, ಎ3 ಪವನ್ ಹೆಸರನ್ನು ಪವನ್ ನ್ಯೂ ಎಂದು ಸೇವ್ ಮಾಡಿದ್ದರು. ನಂದೀಶ್ ಹೆಸರನ್ನು ನಂದಿ ಪವನ್, ಧನರಾಜ್ ಹೆಸರನ್ನು ರಾಜು, ವಿನಯ್ ಹೆಸರನ್ನ ವಿನಯ್ ಹಾಗೂ ನಾಗರಾಜ್ ಹೆಸರನ್ನು ನಾಗು ಮೈಸೂರು, ಲಕ್ಷ್ಮಣ್ ಹೆಸರನ್ನು ಲಕ್ಷ್ಮಣ್ ಡಿ ಹಾಗೂ ಆಪ್ತ ಗೆಳತಿ ಸಮತಾಳನ್ನು ಸ್ಯಾಮ್ ಹೆಸರಲ್ಲಿ ಸೇವ್ ಮಾಡಿದ್ದಾರೆ. ಪವಿತ್ರಾ ಮೊಬೈಲ್‌ನಲ್ಲಿ ಪ್ರಕರಣ ಸಂಬಂಧ 65 ಫೋಟೊಗಳು ಪತ್ತೆಯಾಗಿವೆ. 17 ಸ್ಕೀನ್ ಶಾಟ್‌ಗಳು, ರೇಣುಕಾ ಕಳಿಸಿದ್ದ 20 ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್ ಇವೆ.
ನಟ ದರ್ಶನ್ ಬಳಸುತ್ತಿದ್ದ ಐಫೋನ್ 15 ಪ್ರೋನಲ್ಲಿ ಗೆಳತಿ ಹೆಸರನ್ನು 3 ಹೆಸರಲ್ಲಿ ಸೇವ್ ಮಾಡಿದ್ದರು. PAVI, PAVIIII, PVITRA GOWDA ಹೆಸರಲ್ಲಿ ಸೇವ್ ಮಾಡಿ ಪವಿತ್ರ ಜತೆ ಚಾಟಿಂಗ್ ನಡೆಸಿದ್ದಾರೆ. ಡಿಲೀಟ್ ಆಗಿದ್ದ ವಾಟ್ಟಾಪ್ ಕಾಲ್ ರಿಟ್ರೀವ್ ವೇಳೆ ಪತ್ತೆಯಾಗಿದೆ. ವಿನಯ್ ಜತೆ ಚಾಟಿಂಗ್, ಮ್ಯಾನೇಜರ್ ನಾಗರಾಜ್ ಜತೆ ವಾಟ್ಸಾಪ್ ಕಾಲ್ ಸಂಭಾಷಣೆ ಇದೆ. ಜೂನ್ 8ರಿಂದ 11ರವೆರಗೂ 32 ಬಾರಿ ವಾಟ್ಸಾಪ್ ಕಾಲ್ ಮಾಡಲಾಗಿದ್ದು, ಪ್ರದೋಶ್ ಜತೆ 10 ಬಾರಿ ವಾಟ್ಸಾಪ್ ಕಾಲ್‌ನಲ್ಲಿ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: Actor Darshan:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್ ಆಗು ಎಂದಾಗ ದರ್ಶನ್ ಅಭಿಮಾನಿ ರಾಘವೇಂದ್ರ ನಿರಾಕರಿಸಿದ್ದೇಕೆ?
ವಿನಯ್ ಮೊಬೈಲ್‌ನಲ್ಲಿ ಪವಿತ್ರಾಳ ಹೆಸರು ಡಿ ಬಾಸ್ ವೈಫ್ ಎಂದು ಸೇವ್
ಇನ್ನು ವಿನಯ್ ಮೊಬೈಲ್‌ನಲ್ಲಿ ಪವಿತ್ರಾ ಗೌಡ ಫೋನ್ ನಂಬರ್ ಅನ್ನು ಡಿ-ಬಾಸ್ ವೈಫ್ ಎಂದು ಸೇವ್ ಆಗಿದೆ. ಪ್ರದೂಷ್, ಪವನ್ ಜತೆ 42 ಬಾರಿ ವಾಟ್ಸಾಪ್ ಕಾಲ್ ಸಂಭಾಷಣೆ ನಡೆದಿದೆ. ಪ್ರಕರಣ ಸಂಬಂಧ 10 ಫೋಟೊಗಳು ರಿಟ್ರೀವ್‌ನಲ್ಲಿ ಪತ್ತೆಯಾಗಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಹಿಂಬಾಲಿಸಿ ತೆಗೆದ ಫೋಟೊ, ಪಟ್ಟಣಗೆರೆ ಶೆಡ್‌ಗೆ ಕರೆತಂದಾಗ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಫೋಟೊ ಸಿಕ್ಕಿದೆ. ಜತೆಗೆ ರೇಣುಕಾಸ್ವಾಮಿ ಶವವನ್ನು ಸುಮನಹಳ್ಳಿ ರಾಜಕಾಲುವೆ ಬಳಿ ಬಿಸಾಡಿರುವ ಫೋಟೊ ಲಭ್ಯವಾಗಿದೆ.
ದೀಪಕ್ ಮೊಬೈಲ್‌ನಲ್ಲಿ ಅಡಗಿದ್ದ ರಹಸ್ಯ
ದೀಪಕ್ ಮೊಬೈಲ್‌ನಲ್ಲಿ 30 ನಿಮಿಷದ ಆಡಿಯೊ ಸಂಭಾಷಣೆ ಪತ್ತೆಯಾಗಿದೆ. ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ನಡೆಸಿರುವ ಮಾತುಕತೆ ಇದಾಗಿದೆ. ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ 5 ಆಡಿಯೋ ಸಂಭಾಷಣೆ ಪತ್ತೆಯಾಗಿದೆ. ಜತೆಗೆ ಮತ್ತೊಬ್ಬ ಆರೋಪಿ ಅನುಕುಮಾರ್ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವಿಡಿಯೊ ಸಿಕ್ಕಿದೆ. ಆರೋಪಿ ಪ್ರದೂಷ್ ಜತೆ ನಡೆಸಿರುವ ಚಾಟಿಂಗ್ ಸಿಕ್ಕಿದೆ. ಅನುಕುಮಾರ್ ಹಾಗೂ ರಾಘವೇಂದ್ರ ಪತ್ನಿ ಸಹನಾ ಜತೆ ನಡೆಸಿರುವ ಸಂಭಾಷಣೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ