Site icon Vistara News

Actor Darshan:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗು ಎಂದಾಗ ದರ್ಶನ್‌ ಅಭಿಮಾನಿ ರಾಘವೇಂದ್ರ ನಿರಾಕರಿಸಿದ್ದೇಕೆ?

Why did Darshans fan Raghavendra refuse to surrender

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಬಳಿಕ ಸರೆಂಡರ್ ಆಗು ಎಂದಿದ್ದಕ್ಕೆ ದರ್ಶನ್ (Actor darshan) ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದ ರಾಘವೇಂದ್ರ ಅಲಿಯಾಸ್ ರಾಘು ನಿರಾಕರಿಸಿದ್ದ. ನಾನು ಯಾಕೆ ಜೈಲಿಗೆ ಹೋಗಲಿ? ನಾನು ಸರೆಂಡರ್ ಆಗಲ್ಲ ಎಂದು ಚಿತ್ರದುರ್ಗ ಕಡೆ ಹೊರಟಿದ್ದ. ಆದಾದ ಮೇಲೆ ವಿನಯ್, ಪ್ರದೂಶ್ ಮತ್ತು ದರ್ಶನ್ ಸೇರಿ ರಾಘವೇಂದ್ರನನ್ನು ಒಪ್ಪಿಸಿದ್ದರು. ರಾಘವೇಂದ್ರ ಸರೆಂಡರ್ ಆಗಿಲ್ಲ ಅಂದರೆ ಚಿತ್ರದುರ್ಗದ ಲಿಂಕ್ ಕೊಡಲು ಕಷ್ಟವಾಗುತ್ತೆ. ಹೀಗಾಗಿ ರಾಘವೇಂದ್ರ ಸರೆಂಡರ್ ಆಗಲೇ ಬೇಕು ಎಂದು ಡಿ ಗ್ಯಾಂಗ್‌ ಮಾಸ್ಟರ್‌ ಪ್ಲ್ಯಾನ್ ಮಾಡಿದ್ದರು.

ರಾಘವೇಂದ್ರ ಇಲ್ಲದೇ, ಕೇವಲ ಬೆಂಗಳೂರು ಹುಡುಗರು ಕಿ‌ಡ್ನ್ಯಾಪ್ ಮತ್ತು ಮರ್ಡರ್ ಕಥೆ ಹೇಳಿದರೆ ಸತ್ಯ ಕಥೆ ಅನ್ನಿಸುವುದಿಲ್ಲ. ಹೀಗಾಗಿ ರಾಘವೇಂದ್ರ ಬೇಕೆ ಬೇಕು ಎಂದು ಹಣದ ಆಮಿಷ ತೋರಿಸಿ ಮಾತುಕತೆ ನಡೆಸಿ ಒಪ್ಪಿಸಿದ್ದರು. ಆದಾದ ಬಳಿಕ ರಾಘವೇಂದ್ರ, ನಿಕಿಲ್, ಕೇಶವಮೂರ್ತಿ, ಕಾರ್ತಿಕ್ ಅಲಿಯಾಸ್ ಕಪ್ಪೆ ಪೊಲೀಸರ ಮುಂದೆ ಸರೆಂಡರ್‌ ಆಗಿದ್ದರು. ರೇಣುಕಾಸ್ವಾಮಿ ರಾಘವೇಂದ್ರಗೆ ಹಣ ಕೊಡಬೇಕಿತ್ತು. ಅದಕ್ಕೆ ಕರೆತಂದು ಹೊಡೆದು ಬಿಟ್ಟಿವಿ ಎಂದು ಪೊಲೀಸರ ಮುಂದೆ ಮೊದಲ ಸ್ಟೋರಿ ಹೇಳಿದ್ದರು.

ಇದ್ಯಾವುದನ್ನು ನಂಬಲು ತಯಾರು ಇಲ್ಲದ ಪೊಲೀಸರು ವಿಚಾರಣೆ ಮುಂದುವರಿಸಿದ್ದರು. ಬಳಿಕ ಪೊಲೀಸರ ಮುಂದೆ ದರ್ಶನ್ ಹೆಸರು ಬಾಯಿ ಬಿಟ್ಟಿದೇ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ. ಆದರೆ ರೇಣುಕಾಸ್ವಾಮಿ ಅಶ್ಲೀಲ ಮೆಜೇಸ್ ಮಾಡಿದ್ದು ದರ್ಶನ್‌ ಪತ್ನಿ ವಿಜಯಲಕ್ಷ್ಮಿಗೆ ಎಂದು ಹೇಳಿದ್ದ. ತಡರಾತ್ರಿ ಎರಡು ಗಂಟೆಗೆ ಕೇಶವಮೂರ್ತಿಯನ್ನು ಮತ್ತಷ್ಟು ವಿಚಾರಣೆಯನ್ನು ನಡೆಸಿದಾಗ, ದರ್ಶನ್ ಪತ್ನಿಗೆ ಅಲ್ಲಾ ಸಾರ್ ಅದು ಪವಿತ್ರ ಗೌಡ ಎಂದು ಪೊಲೀಸರ ಮುಂದೆ ಹೇಳಿದ್ದ.

ಇದನ್ನೂ ಓದಿ: Actor Darshan : ನಾವಿಬ್ಬರು ಮದುವೆ ಆಗಿಲ್ಲ.. ಜಸ್ಟ್‌ ಲಿವಿಂಗ್‌ ಟುಗೆದರ್‌ನಲ್ಲಿ ಇದ್ದೀವಿ- ವಿಚಾರಣೆಯಲ್ಲಿ ನಟ ದರ್ಶನ್‌ ಹೇಳಿಕೆ

10 ದಿನಗಳ ಬಳಿಕ ದರ್ಶನ್‌ ಹೇಳಿದ್ದು ಇದೊಂದೇ ಮಾತು

ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್‌ನಲ್ಲಿ ಬಂಧಿತನಾಗಿದ್ದ ನಟ ದರ್ಶನ್‌, ಹತ್ತು ದಿನಗಳ ವಿಚಾರಣೆ ನಂತರ ಹೇಳಿದ್ದು ಒಂದೇ ಮಾತೆಂದರೆ ನನ್ನಿಂದ ತಪ್ಪಾಗೋಗಿದೆ ಸಾರ್ ಎಂದಿದ್ದರಂತೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಂಧಿಸಿ ವಿಚಾರಣೆ ನಡೆಸಿದಾಗ ಸುಮಾರು 20 ಪುಟಗಳ ಹೇಳಿಕೆ ದಾಖಲಿಸಿದ್ದರು. ಚಾರ್ಜ್ ಶೀಟ್‌ನಲ್ಲಿ ದರ್ಶನ್ ಸ್ಟೇಟ್ಮೆಂಟ್‌ನ 20 ಪುಟಕ್ಕೂ ಅಧಿಕವಾಗಿದೆ.

ಕೊಲೆ ಕುರಿತು ಇಂಚಿಂಚೂ ಮಾಹಿತಿ ಪಡೆದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಏನೊ ಮಾಡಲು ಹೋಗಿ ಹೀಗೆ ಆಯ್ತು, ತಪ್ಪಾಗೋಗಿದೆ ಸಾರ್ ಎಂದು ನಟ ದರ್ಶನ್‌ ಹೇಳಿದ್ದರಂತೆ. ಆದರೆ ಹೇಳಿಕೆ ದಾಖಲು ಮಾಡುವಾಗ ಮಾತ್ರ ತನಗೂ ಕೊಲೆಗೂ ಸಂಬಂಧ ಇಲ್ಲ ಸಾರ್ ಎಂದು ಹೇಳಿಕೆ ನೀಡುತ್ತಿದ್ದರು. ಕೊನೆಗೆ ತಾನು ಮಾಡಿದ್ದು ತಪ್ಪು ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version