Site icon Vistara News

Pavitra Gowda : ರೇಣುಕಾ ಸ್ವಾಮಿ ಕೊಲೆ ಕೇಸ್‌; ಪವಿತ್ರಾಗೌಡ ಸಲ್ಲಿಸಿದ ಜಾಮೀನು ಅರ್ಜಿ ವಜಾ

Renuka Swamy murder case Pavithra Gowdas bail plea rejected

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ಪವಿತ್ರಾಗೌಡ (Pavitra Gowda) ಪರ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಅರ್ಜಿ ವಜಾಗೊಳಿಸಿ ಸಿಸಿಎಚ್‌ (CCH)57ನೇ ನ್ಯಾಯಾಲಯದ ನ್ಯಾಯಾಧೀಶರಾದ ಜೈ ಶಂಕರ್‌ ಆದೇಶ ಹೊರಡಿಸಿದ್ದಾರೆ. ಎ1 ಆರೋಪಿ‌ ಪವಿತ್ರಾಗೌಡ ಪರ ಅನುಕುಮಾರ್ ಸಲ್ಲಿಸಿದ ಜಾಮೀನು ಅರ್ಜಿ ವಜಾಗೊಂಡಿದೆ.

ದರ್ಶನ್- ಪವಿತ್ರಾ ದೂರದೂರವಾದರೂ ಒಂದಾಯಿತು ಇವರಿಬ್ಬರ ಮನೆಯ ಶ್ವಾನಗಳು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara Jail) ಬಳ್ಳಾರಿ ಜೈಲಿಗೆ (Bellary Jail) ನಟ ದರ್ಶನ್ (Actor Darshan) ಸ್ಥಳಾಂತರಗೊಂಡಿದ್ದರೂ ಪವಿತ್ರಾ ಗೌಡ (Pavitra Gowda) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಹೀಗಾಗಿ ದರ್ಶನ್ ಮತ್ತು ಪವಿತ್ರಾ ದೂರದೂರವಾಗಿದ್ದಾರೆ. ಆದರೆ ಇವರಿಬ್ಬರ ಶ್ವಾನಗಳು ಮಾತ್ರ ಇದೀಗ ಒಂದಾಗಿವೆ.

ದರ್ಶನ್ ಮತ್ತು ಪವಿತ್ರ ಗೌಡ ಜೈಲು ಸೇರುತ್ತಿದ್ದ ಹಾಗೆ ಇವರ ಶ್ವಾನಗಳು ಒಂದಾಗಿದ್ದವು. ಪವಿತ್ರಗೌಡ ಮನೆಯಲ್ಲಿದ್ದ ಶ್ವಾನಗಳನ್ನು ದರ್ಶನ್ ಮನೆಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಈಗ ದರ್ಶನ್ ಮತ್ತು ಪವಿತ್ರಾ ಗೌಡ ಮನೆಯ ಶ್ವಾನಗಳು ಸ್ನೇಹಿತರಾಗಿದೆ.


ಪವಿತ್ರಾ ಗೌಡ ಮನೆಯಲ್ಲಿದ್ದ ವೈಟ್ ಫ್ರೆಂಚ್ ಬುಲ್ ಡಾಗ್ ಮತ್ತು ಬೆಲ್ಜಿಯಂ ಮಲಿನಾಯ್ಸ್ ತಳಿಯ ಶ್ವಾನಗಳು ಮನೆಯೊಡತಿ ಇಲ್ಲದೆ ಸೊರಗಿದ್ದವು. ಅವುಗಳನ್ನು ಪೀಪಲ್ಸ್ ಫಾರ್ ಅನಿಮಲ್ಸ್ ಟೀಂ ರಕ್ಷಣೆ ಮಾಡಿತ್ತು. ಬಳಿಕ ಅಧಿಕಾರಿಗಳು ಅವುಗಳನ್ನು ದರ್ಶನ್ ಮನೆಗೆ ಬಿಟ್ಟಿದ್ದಾರೆ.

ಶ್ವಾನ ಪ್ರೇಮಿಯಾಗಿದ್ದ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಮನೆಯಲ್ಲಿ ವಿವಿಧ ತಳಿಯ 3 ಶ್ವಾನಗಳಿದ್ದವು. ಅವುಗಳಲ್ಲಿ ಒಂದನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ. ಒಲಿದ ಎರಡು ಶ್ವಾನಗಳನ್ನು ಪವನ್ ನೋಡಿಕೊಳ್ಳುತ್ತಿದ್ದ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಮತ್ತು ಪವನ್ ಜೈಲು ಸೇರಿದ್ದಾರೆ. ಬಳಿಕ ಶ್ವಾನಗಳನ್ನು ನೋಡಿಕೊಳ್ಳುವವರಿಲ್ಲದೆ ಅವುಗಳು ಸೊರಗಿದ್ದವು.

Actor Darshan


ದರ್ಶನ್ ಮನೆಗೆ ಎಂಟ್ರಿ

ಪವಿತ್ರಾ ಮತ್ತು ಪವನ್ ಜೈಲು ಸೇರಿದ್ದರಿಂದ ಸರಿಯಾಗಿ ಆಹಾರ ಇಲ್ಲದೆ ಬಲಹೀನವಾಗಿದ್ದ ಶ್ವಾನಗಳ ದೃಶ್ಯ ಕಣ್ಣೀರು ತರಿಸುವಂತ್ತಿತ್ತು. ಇದನ್ನು ತಿಳಿದು ಅಲರ್ಟ್ ಆದ ಪೀಪಲ್ಸ್ ಫಾರ್ ಅನಿಮಲ್ಸ್ ಟೀಂ ಈ ವಿಚಾರವನ್ನು ಆರ್.ಆರ್. ನಗರದ ಪೊಲೀಸರ ಗಮನಕ್ಕೆ ತಂದಿದ್ದರು.

ಪೀಪಲ್ಸ್ ಫಾರ್ ಅನಿಮಲ್ಸ್ ನ‌ ಲೀನಾ ಮತ್ತು ಹರೀಶ್ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಿಬಿಎಂಪಿ ಪಶುಸಂಗೋಪನಾ‌ ಇಲಾಖೆಗೆ ಮಾಹಿತಿ ನೀಡಿರುವ ಪೊಲೀಸರು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಪವಿತ್ರಾ ಮನೆಯಲ್ಲಿದ್ದ ಎರಡು ಶ್ವಾನವನ್ನು ದರ್ಶನ್ ಮನೆಗೆ ಸ್ಥಳಾಂತರಿಸಿದ್ದಾರೆ. ದರ್ಶನ್ ಮನೆಯಲ್ಲಿ ಶ್ವಾನಗಳನ್ನು ನೋಡಿಕೊಳ್ಳಲು ಕೇರ್ ಟೇಕರ್ ಗಳು ಇರುವುದರಿಂದ ಈ ಶ್ವಾನಗಳನ್ನು ದರ್ಶನ್ ಮನೆಗೆ ಸ್ಥಳಾಂತರಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version