Site icon Vistara News

Renuka swamy murder : ಟೀ ಕುಡಿಯಲು ಹೋದವನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್‌

Renukaswamy murder

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka swamy murder) ಪ್ರಕರಣವನ್ನು ವಿಶೇಷ ಆಸಕ್ತಿ ವಹಿಸಿ ಕಾನೂನು ವ್ಯಾಪ್ತಿಯಲ್ಲಿ ಯಾವ್ಯಾವ ಕೆಲಸಗಳನ್ನು ಮಾಡಬಹುದು ಆ ರೀತಿ ಪೊಲೀಸರು ಕೆಲಸ ಮಾಡಿದ್ದಾರೆ‌. ಇನ್ವೆಷ್ಟಿಗೇಷನ್ ಅಂದರೆ ಇದು ಎಂಬ ರೀತಿಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಹಾಗೆ ಹಣದಾಸೆಗೆ ಬಿದ್ದವನು ದೊಡ್ಡ ಕೇಸ್‌ನಲ್ಲಿ ಹೇಗೆ ಫಿಟ್ ಆದ ಎಂಬ ಮಾಹಿತಿ ಇಲ್ಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ16 ಆರೋಪಿ ಕೇಶವ ಮೂರ್ತಿ ಕ್ರೈಂ ಸೀನ್‌ನಲ್ಲೇ ಇರಲಿಲ್ಲ. ಆದರೆ ಆತನ ಹಣದಾಸೆ, ಬಡತನವು ಬಹು ದೊಡ್ಡ ಪ್ರಕರಣದ ಆರೋಪಿಯನ್ನಾಗಿಸಿದೆ. ಉತ್ತರಹಳ್ಳಿಯಲ್ಲಿ ಟೀ ಕುಡಿಯುತ್ತಿದ್ದವನು ಕೊಲೆ ಕೇಸಲ್ಲಿ ಭಾಗಿಯಾಗಿದ್ದೇ ರೋಚಕ. ರೇಣುಕಾಸ್ವಾಮಿ ಕೊಲೆಯಾದ ಬಳಿಕ ಈತ ರಾಘವೇಂದ್ರನ ಕಣ್ಣಿಗೆ ಬಿದ್ದಿದ್ದ. ಆಗಲೇ ಕೇಶವಮೂರ್ತಿಯ ಬ್ಯಾಡ್ ಟೈಂ ಶುರುವಾಗಿತ್ತು. ಕ್ರೈಂನಲ್ಲಿ ಭಾಗಿಯಾಗಿಲ್ಲದಿದ್ರೂ ಸಾಕ್ಷಿ ನಾಶದ ಕೇಸ್‌ ಈತನ ಹೆಗಲೇರಿದೆ.

ಚಿತ್ರದುರ್ಗದ ಲಿಂಕ್ ಇರಲಿ ಎಂದು ರಾಘವೇಂದ್ರನನ್ನು ಸರಂಡರ್ ಆಗಲು ಡಿ ಗ್ಯಾಂಗ್ ನಿರ್ಧರಿಸಿತ್ತು. ಮೊದಲು ಆತ ಒಪ್ಪಿರಲಿಲ್ಲ. ಹೀಗಾಗಿ ಕಾರ್ತಿಕ್ ಹಾಗೂ ನಿಖಿಲ್ ನಾವು ಸರಂಡರ್ ಆಗುತ್ತೇವೆ ಎಂದು ಒಪ್ಪಿದ್ದರು. ಈ ವೇಳೆ ಮತ್ತೊಬ್ಬ ಯಾರಾದರೂ ಬೇಕಲ್ಲ ಎಂದು ಹುಡುಕುವಾಗಲೇ ಕಾರ್ತಿಕ್‌ಗೆ ಆತನ ಸ್ನೇಹಿತ ಕೇಶವಮೂರ್ತಿ ಸಿಕ್ಕಿದ್ದ. ಸ್ನೇಹಿತ ಎಂಬ ಕಾರಣಕ್ಕೆ ಕಾರ್ತಿಕ್‌ನನ್ನು ಮಾತನಾಡಿಸಿದ್ದ.

ಈ ವೇಳೆ ಕೇಶವ ಮೂರ್ತಿ ಬಳಿ ಒಂದು ಕೊಲೆಯಾಗಿದೆ. ಸರಂಡರ್ ಆದರೆ ಕೈ ತುಂಬಾ ಹಣ ಕೊಡುತ್ತಾರೆ ಎಂದಿದ್ದ. ಹಣದಾಸೆಗೆ ಬಿದ್ದವನು ಸರಂಡರ್ ಆಗಲು ಒಪ್ಪಿ ಶೆಡ್‌ಗೆ ಹೋಗಿದ್ದ. ನಂತರ ಐದು ಲಕ್ಷ ಅಡ್ವಾನ್ಸ್ ಕೂಡ ಪಡೆದಿದ್ದ. ಆಗಲೇ ಕೇಶವಮೂರ್ತಿಗೆ ದರ್ಶನ್ ಈ ಕೊಲೆಯಲ್ಲಿ ಭಾಗಿಯಾಗಿದ್ದಾನೆಂದು ಗೊತ್ತಾಗಿದ್ದು.

ಮಣ್ಣು ಪರೀಕ್ಷೆ ಮಾಡಿಸಿದ ಪೊಲೀಸರು

ಸದ್ಯ ಆ ಹಣದ ರಿಕವರಿ ಕೂಡ ಆಗಿದೆ. ಇನ್ನು ಇದೇ ತನಿಖೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಹಿಂದೆ ಕೃತ್ಯ ನಡೆದ ವೇಳೆ ಬಳಕೆಯಾದ ವಸ್ತುಗಳನ್ನು ಪೊಲೀಸರು ರಿಕವರಿ ಮಾಡಿದ್ದರು. ಇದೇ ಮೊದಲ ಬಾರಿಗೆ ಮತ್ತೊಂದು ಪ್ರಯೋಗಕ್ಕೆ ಮುಂದಾಗಿ ಯಶಸ್ವಿಯಾಗಿದೆ. ಕೃತ್ಯ ನಡೆದ ಸಂದರ್ಭದಲ್ಲಿ ದರ್ಶನ್ ಧರಿಸಿದ್ದ ಶೂನಲ್ಲಿದ್ದ ಮಣ್ಣಿನ ವಿವರ ಪಡೆದಿದ್ದರು. ಅದಕ್ಕೆ ಪೂರಕವಾಗಿ ಶೆಡ್‌ನಲ್ಲಿದ್ದ ಮಣ್ಣನ್ನೂ ಎಫ್‌ಎಸ್ಎಲ್ ಗೆ ಕಳಿಸಿದ್ದರು . ಸದ್ಯ ಎರಡು ಕೂಡ ಮ್ಯಾಚ್ ಆಗಿದ್ದು ಅದರ ಬಗ್ಗೆ ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version