ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್‌ನ ಅವಲಂಬನೆ ಮತ್ತು ಅದರಲ್ಲಿರುವ ಆ್ಯಪ್‌ಗಳನ್ನು ಮತ್ತು ಮಾಹಿತಿಯನ್ನು ವಿವಿಧ ರೀತಿಯ ಫಿಷಿಂಗ್ (Fishing) ದಾಳಿಗಳಿಂದ ಸುರಕ್ಷಿತಗೊಳಿಸುವುದರ ಬಗ್ಗೆ
‘ಅಂಗೈಯಲ್ಲಿ ಅಂತರ್ಜಾಲ, ಅರಿವಿದೆಯೇ ಅಪಾಯ?’ದಲ್ಲಿ ಹೇಳಿದ್ದೆ. ಇಂಟರ್ನೆಟ್ ನಮಗೆ ಎಲ್ಲೆಡೆ ಲಭ್ಯವಾಗುತ್ತಿರುವಾಗ ನಮ್ಮ ದೈನಂದಿನ ಹಣಕಾಸಿನ ವ್ಯವಹಾರಗಳಿಗೆ ನಮ್ಮ ಮೊಬೈಲನ್ನೇ ಅವಲಂಬಿಸಿದ್ದೇವೆ. ಹಾಗಾಗಿ ನಿಮ್ಮ ಮೊಬೈಲಿನ ಸುರಕ್ಷತೆ ಹೆಚ್ಚಿಸಲು ವೈರಸ್ ಗುರುತಿಸುವ ಸಾಫ್ಟ್‌ವೇರ್(Anti-virus) ಬಳಸುವ ಬಗ್ಗೆ ತಿಳಿಸಿದ್ದೆ. ಮರೆತಿದ್ದರೆ ಮೇಲಿನ ಲಿಂಕ್ ಒತ್ತಿ ಪುನರಾವಲೋಕನ ಮಾಡಿ. ಕಳೆದ ವಾರ ನಿಮ್ಮ “ಸೋಶಿಯಲ್ ಮೀಡಿಯಾದಿಂದಲೇ ನಿಮ್ಮ ಸುರಕ್ಷತೆಗೆ ಅಪಾಯ!” ಲೇಖನದಲ್ಲಿ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಅಪ್‌ಲೋಡ್ ಆಗುತ್ತಿರುವ ನಿಮ್ಮ ಫೋಟೊಗಳು, ವೀಡಿಯೊಗಳು, ಸೆಲ್ಫಿಗಳು, ರೀಲ್ಸ್‌ಗಳನ್ನು ದುರ್ಮಾರ್ಗಿಗಳು ದುರುಪಯೋಗಿಸಿಕೊಂಡರೆ ಎನಾಗಬಹುದು ಎನ್ನುವುದರ ಬಗ್ಗೆ ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆ. ಜೊತೆಗೆ ಆಂಡ್ರಾಯಿಡ್ ಫೇಸ್ಬುಕ್ ಆ್ಯಪ್ ಬಳಸುತ್ತಿರುವವರು ತಮ್ಮ ಗೌಪ್ಯತೆಯನ್ನು ರಕ್ಷಿಸಿಕೊಳ್ಳುವುದರ ಬಗ್ಗೆ ತಿಳಿಸಿದ್ದೆ.
ಇವತ್ತು ನಿಮ್ಮ ಇನ್ಸಸ್ಟಾಗ್ರಾಂ ಪೋಸ್ಟ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಪೋಸ್ಟ್‌ಗಳನ್ನು ಯಾರು ನೋಡಬಹುದು, ನಿಮ್ಮ ಪೋಸ್ಟ್‌ಗಳಿಗೆ ಯಾರು ಕಾಮೆಂಟ್ ಮಾಡಬಹುದು ಮತ್ತು ನಿಮ್ಮನ್ನು ಯಾರು ಅನುಸರಿಸಬಹುದು ಎಂಬುದು ಇನ್‌ಸ್ಟಾಗ್ರಾಂ ಆ್ಯಪ್‌ನ ಸುರಕ್ಷತಾ ಸೆಟ್ಟಿಂಗಿನ ಮೇಲೆ ಅವಲಂಬಿತವಾಗಿದೆ. ನಿಮ್ಮಂದಿಗೆ ಇತರರು ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಸಹ ನೀವು ಸೆಟ್ಟಿಂಗಿನ ಮೂಲಕ ಮಿತಿಗೊಳಿಸಬಹುದು.
ಇನ್ಸಸ್ಟಾಗ್ರಾಂ ಸಹಾಯ ವಿಭಾಗದಲ್ಲಿ, ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ಮಾಹಿತಿ ವಿಭಾಗದಲ್ಲಿ ಈ ಕೆಳಗಿನ ವಿಷಯಗಳನ್ನು ವಿವರಿಸಲಾಗಿದೆ.
ಮೊದಲನೆಯದಾಗಿ ನಿಮ್ಮ ಖಾತೆಯನ್ನು ‘ಖಾಸಗಿ’ ಅಥವಾ ‘ಸಾರ್ವಜನಿಕ’ವನ್ನಾಗಿಸುವುದು.
ನೀವು ಇನ್ಸಸ್ಟಾಗ್ರಾಂನಲ್ಲಿ ಖಾತೆ ತೆರೆದಾಗ (ಸೈನ್ ಅಪ್ ಮಾಡಿದಾಗ) ನೀವು 16 ವರ್ಷದೊಳಗಿನವರಾಗಿದ್ದರೆ, ಸಾರ್ವಜನಿಕ ಅಥವಾ ಖಾಸಗಿ ಖಾತೆಯ ನಡುವೆ ಆಯ್ಕೆ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಆದರೆ ಡೀಫಾಲ್ಟ್ ಆಯ್ಕೆ ಖಾಸಗಿ ಎಂದೇ ಇರುತ್ತದೆ.
ನೀವು 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ Instagram ಖಾತೆಯು ಡಿಫಾಲ್ಟ್ ಆಗಿ ಸಾರ್ವಜನಿಕವಾಗಿರುತ್ತದೆ. ನಿಮ್ಮ ಖಾತೆಯನ್ನು ಯಾವುದೇ ಸಮಯದಲ್ಲಿ ಖಾಸಗಿಯಾಗಿ ಮಾಡಲು ನೀವು ಬಯಸಿದರೆ ಈ ಕೆಳಗಿನ ಕ್ರಮಗಳನ್ನು ನಿಮ್ಮ ಆ್ಯಪ್‌ನಲ್ಲಿ ಕೈಗೊಳ್ಳಿ. ಈ ಕ್ರಮಗಳು ಐಫೋನ್ ಮತ್ತು ಆಂಡ್ರಯಾಡ್‌ಗಳಲ್ಲಿನ ಇನ್‌ಸ್ಟಾಗ್ರಾಂ ಆ್ಯಪಿನಲ್ಲಿ ಬಹುತೇಕ ಒಂದೇ ರೀತಿಯಲ್ಲಿದೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಬೆಳಕಿನ ಹಬ್ಬದ ಕರಾಳ ಮುಖ
ನಿಮ್ಮ ಫೋನಿನಲ್ಲಿ ಇನ್‌ಸ್ಟಾಗ್ರಾಂ ಆ್ಯಪನ್ನು ತೆರೆಯಿರಿ. ಇದರ ಮೇಲೆ ಕ್ಲಿಕ್ ಮಾಡಿ ಅದಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮಾಡಿ. ಅದರಲ್ಲಿ ನಿಮ್ಮ ಖಾತೆಯನ್ನು ಯಾರು ನೋಡಬಹುದು ಎನ್ನುವುದರ ಕೆಳಗೆ ಇರುವ ಅಕೌಂಟ್ ಗೌಪ್ಯತೆಯ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿ ನಿಮ್ಮ ಖಾತೆಯನ್ನು ಪ್ರೈವೇಟ್ ಮಾಡಿ. ನಂತರ ಪ್ರೈವೇಟಿಗೆ ಬದಲಾಗುವುದನ್ನು ಖಚಿತ ಪಡಿಸಿ.
ಹೀಗೆ ಸರವಾಗಿ ನಿಮ್ಮ ಗೌಪ್ಯತೆಯನ್ನು ಲಾಕ್ ಮಾಡಿಕೊಳ್ಳಬಹುದು. ನಿಮ್ಮ ಖಾತೆಯನ್ನು ನೀವು ಸಾರ್ವಜನಿಕವಾಗಿ ಇರಿಸಿಕೊಂಡು ಅದರ ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.
ಯಾರಾದರೂ ಮುಜುಗರವನ್ನುಂಟುಮಾಡುವಂತಹ ಫೋಟೊ ಅಥವಾ ವೀಡಿಯೊ ಶೇರ್ ಮಾಡಿದ್ದರೆ ಅವರನ್ನು ಅನ್‌ಫಾಲ್ ಮಾಡಬಹುದು. ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದರೆ ಅಥವಾ ಹೆದರಿಸುತ್ತಿದ್ದರೆ ನಿಮ್ಮ ಶಿಕ್ಷಕರ ಅಥವಾ ತಂದೆತಾಯಿಯ ಸಹಾಯ ಪಡೆಯಬಹದು. ಸೈಬರ್ ಕ್ರೈಮ್ ಇಂಟರ್‌ವೆಂಷನ್ ಆಫೀಸರ್‌ಗಳ ಸಹಾಯವನ್ನೂ ಪಡೆಯಬಹದು. ನಿಮ್ಮ ಫೋಟೊ ಮತ್ತು ರೀಲ್ಸ್‌ಗಳನ್ನು ಕ್ರಿಮಿನಲ್‌ಗಳು ದುರುಪಯೋಗಿಸದಂತೆ ಸುರಕ್ಷತೆಗೊಳಿಸಿಕೊಳ್ಳಿ. ಜಾಗರೂಕರಾಗಿ ನಿಮ್ಮ ಸೋಷಿಯಲ್ ಪ್ರೊಫೈಲನ್ನು ಕಾಯ್ದುಕೊಳ್ಳಿ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಇಂಟರ್ನೆಟ್ ಬ್ಯಾಂಕಿಂಗ್ ವಂಚನೆ ತಡೆಯಲು ಕೆಲವು ಟಿಪ್ಸ್