Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಇಂದು ಬಾಂಗ್ಲಾದೇಶದ ಹಿಂದೂ ಉಳಿದರೆ, ನಾಳೆ ಹಿಂದೂ-ಭಾರತ ಉಳಿದೀತು!

ನನ್ನ ದೇಶ ನನ್ನ ದನಿ ಅಂಕಣ bangladesh hindus

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2024/08/WhatsApp-Audio-2024-08-15-at-8.50.45-PM.mp3

:: ಅಜ್ಜಂಪುರ ಮಂಜುನಾಥ

ನನ್ನ ದೇಶ ನನ್ನ ದನಿ ಅಂಕಣ: ಇದು 1948ರ ಮಾತು. ಶ್ರೀಪ್ರಕಾಶರು ಪಾಕಿಸ್ತಾನದಲ್ಲಿ (Pakistan) ಭಾರತದ (India) ಹೈಕಮಿಷನರ್ (ರಾಯಭಾರಿ) ಆಗಿದ್ದರು. ಪಾಕಿಸ್ತಾನವು ಅದಾಗಲೇ ಇಸ್ಲಾಮೀ ಪ್ರಭುತ್ವವೆಂದು (Islamic country) ಘೋಷಿಸಿಕೊಂಡಾಗಿತ್ತು. ಹಿಂದೂಗಳ ಮೇಲೆ, ಸಿಖ್ಖರ ಮೇಲೆ ದಾಳಿ, ಅತ್ಯಾಚಾರ, ಹತ್ಯಾಕಾಂಡ, ಅಂಗಡಿ ಮನೆಗಳಿಗೆ – ದೇವಾಲಯಗಳಿಗೆ – ಗುರುದ್ವಾರಗಳಿಗೆ ಬೆಂಕಿ ಹಚ್ಚುವುದು ಆ ಭೂಪ್ರದೇಶದಲ್ಲಿ ಬಹಳ ಕಾಲದಿಂದಲೂ ನಡೆದೇ ಇತ್ತು. ಆದರೆ, 1948ರ ವೇಳೆಗೆ ಒಂದಿಷ್ಟು ಕಡಿಮೆ ಆಗಿತ್ತು. ಪ್ರಾಯಶಃ ದಾಳಿಮಾಡಲು ಮುಸ್ಲಿಮೇತರರೇ ಸಿಕ್ಕುತ್ತಿರಲಿಲ್ಲವೆಂದು ಕಾಣುತ್ತದೆ. ಒಂದು ದಿನ ಹಿಂದೂ ದೇವಾಲಯವೊಂದರ (Hindu Temple) ಮೇಲೆ ದಾಳಿಯಾದ ಸುದ್ದಿ ಬಂದಿತು. ಅಲ್ಲಿದ್ದ ಕೆಲವು ವಸ್ತುಗಳು ಕಳವು ಆದ ಮತ್ತು ದೇವಾಲಯಕ್ಕೆ ಹಾನಿಯಾದ ಸುದ್ದಿ ಬಂದಿತು. ಶ್ರೀಪ್ರಕಾಶರು ಪೊಲೀಸರನ್ನು ಮತ್ತು ಉಳಿದ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಸಂಪರ್ಕಿಸಿದರು. ಅದ್ಭುತವಾದ ಉತ್ತರ ಬಂದಿತು: “ಇದು ಇಸ್ಲಾಮೀ ಪ್ರಭುತ್ವ. ಇಲ್ಲಿ ಕಳ್ಳತನ ಇತ್ಯಾದಿ ಜರುಗುವುದೇ ಇಲ್ಲ. ಏನೂ ಆಗಿಯೇ ಇಲ್ಲ”. ಶ್ರೀಪ್ರಕಾಶರು ವಿಚಾರಿಸಿದಾಗ, ಪೊಲೀಸರು ಯಾವುದೇ ದೂರು ಸಹ ಸ್ವೀಕರಿಸಿರಲಿಲ್ಲ. FIR ಸಹ ಹಾಕಿರಲಿಲ್ಲ ಎಂಬುದು ತಿಳಿದುಬಂದಿತು. ಶ್ರೀಪ್ರಕಾಶರಿಗೆ ದಿಗ್ಭ್ರಮೆಯಾಯಿತು. ಇಸ್ಲಾಮೀ ಪ್ರಭುತ್ವಗಳು ಹೇಗಿರುತ್ತವೆ, ಅಲ್ಲಿ ಮುಸ್ಲಿಮೇತರರ ಪಾಡೇನು ಎಂಬುದು ಅವರಿಗೇನೋ ತಿಳಿಯಿತು. ಆದರೆ, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿದ ಭಾರತದ ಇಲ್ಲಿನ ಸರ್ಕಾರಕ್ಕೆ, ಪಕ್ಷಕ್ಕೆ, ಅಧಿಕಾರಾರೂಢರಿಗೆ ಅರ್ಥವಾಗಲೇ ಇಲ್ಲ. ಅವರು ಕೇಳಿಸಿಕೊಳ್ಳುತ್ತಲೂ ಇರಲಿಲ್ಲ. 76 ವರ್ಷಗಳ ಅನಂತರವೂ ಇಂದಿಗೂ, ಪರಿಸ್ಥಿತಿಯಲ್ಲಿ ತುಂಬ ಬದಲಾವಣೆಯೇನೂ ಆಗಿಲ್ಲ.

ನಾನು ದಾವಣಗೆರೆಯಲ್ಲಿದ್ದೆ. ಕಾರ್ಗಿಲ್ (Kargil War) ಮೇಲೆ ಪಾಕ್ ದಾಳಿ ಮಾಡಿತ್ತು. ಯುದ್ಧದ ಸಂದರ್ಭದಲ್ಲಿ ಆಯೋಜಿತವಾದ ಕಾರ್ಯಕ್ರಮವೊಂದರಲ್ಲಿ ನಿವೃತ್ತ ಸೇನಾಧಿಕಾರಿಯೊಬ್ಬರು ಮಾತನಾಡುತ್ತಿದ್ದರು ಮತ್ತು ಬಹಳ ಮಹತ್ತ್ವದ ಮಾತನ್ನೂ ಹೇಳಿದರು. “ನೋಡಿ, ಇಲ್ಲಿ ನೀವು ಇದು ಪಾಕಿಸ್ತಾನದ 4ನೆಯ ಆಕ್ರಮಣ ಎಂದು ಹೇಳುತ್ತಿದ್ದೀರಿ. ನಾನೊಬ್ಬ ನಿವೃತ್ತ ಸೇನಾಧಿಕಾರಿ. ಗಡಿಯಲ್ಲಿ ಇದ್ದೆ ಮತ್ತು ಯುದ್ಧಗಳಲ್ಲಿ ಸ್ವತಃ ಭಾಗವಹಿಸಿದ್ದೇನೆ. ಪಾಕಿಸ್ತಾನದ ಆಕ್ರಮಣವು 1947ರಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಬೇರೆಬೇರೆ ರೂಪದಲ್ಲಿ, ದಾಳಿ ನಡೆಯುತ್ತಲೇ ಇದೆ. ಇಂದಿಗೂ ನಿಂತೇ ಇಲ್ಲ, ಒಮ್ಮೆಯೂ ನಿಂತಿಲ್ಲ”. ನಾವೆಲ್ಲ ಅವಾಕ್ಕಾದೆವು. ನಿಜ. ಪಾಕಿಸ್ತಾನವೇ ಅನೇಕ ಬಾರಿ ಘೋಷಿಸಿರುವಂತೆ ಅದು, ಎಂದೆಂದಿಗೂ ಮುಗಿಯದ ಇಸ್ಲಾಮೀ ಆಕ್ರಮಣ. ಆದರೆ, ನಮಗೆ, ಭಾರತೀಯರಿಗೆ ಅದು ಅರ್ಥವಾಗಿಯೇ ಇಲ್ಲ.

    1947ರ ದೇಶವಿಭಜನೆಗೆ (Partition) ಮೊದಲು ಮತ್ತು ಅನಂತರ, ಬಂಗಾಳದಲ್ಲಿ ಆದ – ಆಗುತ್ತಿರುವ ಅತ್ಯಾಚಾರ, ದಾಳಿ, ವಿಧ್ವಂಸಗಳಿಗೆ ಕೊನೆ ಮೊದಲಿಲ್ಲ. 1971ರ ಬಾಂಗ್ಲಾ ದೇಶದ ವಿಮೋಚನೆಗೆ ಮೊದಲು ಹಿಂದೂಗಳ ಮೇಲೆ, ಬೌದ್ಧರ ಮೇಲೆ ಆದ ನರಮೇಧ, ಅತ್ಯಾಚಾರಗಳು ಅನೂಹ್ಯ ಪ್ರಮಾಣದವು. ವಿಮೋಚನೆಯ ಅನಂತರ ಕೆಲಕಾಲ ಸ್ವಲ್ಪ ಕಡಿಮೆಯಾಗಿತ್ತು, ಎನ್ನಬಹುದು, ಅಷ್ಟೇ. ಜಿಯಾಉರ್ ರೆಹಮಾನ್, ಖಲೀದಾ ಜಿಯಾ ಅವರ ಅವಧಿಯಲ್ಲಿ ಈ ಹಿಂಸೆ ಕಿರುಕುಳಗಳು ಮತ್ತೆ ಮಿತಿ ಮೀರಿದವು. “ದುರದೃಷ್ಟವಶಾತ್” ನಮ್ಮ ಪತ್ರಕರ್ತರು, ಲೇಖಕರು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳಲ್ಲಾದ ಭೀಕರ ಹಿಂಸಾಚಾರಗಳನ್ನು ವರದಿ ಮಾಡಲೂ ಇಲ್ಲ, ಪುಸ್ತಕ ಬರೆಯಲೂ ಇಲ್ಲ. ಈ ಕಾರಣಕ್ಕೆ, ಅವಿಭಜಿತ ಬಂಗಾಳ ಎನ್ನಲಾಗುತ್ತಿದ್ದ ಆ ಪ್ರದೇಶದಲ್ಲಿ ಕಳೆದ ಎಂಟು ದಶಕಗಳಲ್ಲಿ ನಡೆದ ಮತೀಯ ವಿಧ್ವಂಸ ಮತ್ತು ನರಹತ್ಯಾಕಾಂಡಗಳ ಬಗೆಗೆ ಸಮರ್ಪಕವಾದ ಮತ್ತು ಸಮಗ್ರವಾದ ದಾಖಲೆಗಳೇ ಸಿಕ್ಕುವುದಿಲ್ಲ. ಸಹಸ್ರ ಸಹಸ್ರ ವರ್ಷಗಳ ಖ್ಯಾತಿಯ ಸಂಸ್ಕೃತಿ, ಸಂಗೀತ, ಸಾಹಿತ್ಯ, ನೃತ್ಯ, ವಿದ್ವತ್ತುಗಳ ಅತ್ಯದ್ಭುತವಾದ ಬಂಗಾಳವು ಈಗಲೂ ನಿರಂತರವಾಗಿ ನಾಶವಾಗುತ್ತಲೇ ಇದೆ. ಕ್ರಾಂತಿಕಾರಿಗಳ, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್ ಅವರ, ರಾಮಕೃಷ್ಣ ಪರಮಹಂಸ – ವಿವೇಕಾನಂದರ, ಬಂಕಿಮಚಂದ್ರರ, ಸತ್ಯಜಿತ್ ರಾಯ್ ಅವರ ಪ್ರತಿಭಾನ್ವಿತ ಬಂಗಾಳವು ಅನಿಯಂತ್ರಿತ ಮತಾಂತರದ ಪರಿಪ್ರೇಕ್ಷ್ಯದಲ್ಲಿ ಜಿಹಾದೀ ಪಶುಗಳ ಕೊಂಪೆಯಾಗಿಹೋಗಿದೆ.

    ಹಿಂದೂ-ಭಾರತ ಇನ್ನಾದರೂ ಕಣ್ಣುಬಿಡಬೇಕಾಗಿದೆ. ಬಂಗಾಳ, ಕೇರಳ, ಕಾಶ್ಮೀರಗಳನ್ನು ಉಳಿಸಿಕೊಳ್ಳಲೇಬೇಕಾಗಿದೆ.

    ಇತಿಹಾಸಕಾರ, ಅಪರೂಪದ ಚಿಂತಕ, ಸೀತಾರಾಮ ಗೋಯಲ್ ಅವರು ಮಹತ್ತ್ವದ ದಾಖಲೆಗಳ ಮತ್ತು ಮಾಹಿತಿಗಳ ತಮ್ಮ “Hindu Temples : What Happened To Them” (Volume 1 – A preliminary Survey) ಗ್ರಂಥದಲ್ಲಿ ಬಹಳ ಮುಖ್ಯವಾದ ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ. 1989ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು (ಆ ಸಂದರ್ಭದ ರಾಜಕೀಯ ಲಾಭ ಪಡೆಯಲು) ರಾಮಜನ್ಮಭೂಮಿ ಆವರಣದಲ್ಲಿ ಶಿಲಾನ್ಯಾಸಕ್ಕೆ ಅನುಮತಿ ನೀಡಿದರು. ಆಗಿನ್ನೂ ಬಾಬ್ರಿ ಮಸೀದಿಯ ವಿವಾದಿತ ಕಟ್ಟಡ ಇತ್ತು (ಅದರ ಧ್ವಂಸ ಆಗಿದ್ದು 6ನೆಯ ಡಿಸೆಂಬರ್ 1992ರಲ್ಲಿ). ಇಷ್ಟಕ್ಕೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂದೂ ಮಂದಿರಗಳ ಮೇಲೆ ದಾಳಿಗಳಾದವು, ಹಿಂದೂಗಳ ಮೇಲೆ ಅತ್ಯಾಚಾರ ನರಹತ್ಯೆಗಳು ಮುಗಿಬಿದ್ದವು. ಭಾರತದ ಹಿಂದೂಗಳ ಬೆಂಬಲದಿಂದ, ರಕ್ತ ಬೆವರುಗಳ ನೆರವಿನಿಂದ ಹುಟ್ಟಿಕೊಂಡ ಈ ಬಾಂಗ್ಲಾದೇಶದಲ್ಲಿ ಅಕ್ಷರಶಃ ನೂರಾರು ದೇವಾಲಯಗಳ ಧ್ವಂಸವಾಯಿತು, ಹಿಂದೂಗಳ ನರಮೇಧವಾಯಿತು, ಅಂಗಡಿ – ಮನೆಗಳನ್ನು ಸುಟ್ಟುಹಾಕಲಾಯಿತು. ಇನ್ನು ಮಹಿಳೆಯರ ಮೇಲೆ ಅನೂಹ್ಯ ಪ್ರಮಾಣದಲ್ಲಿ ಅತ್ಯಾಚಾರ ನಡೆಯಿತು. ಗೋಯಲ್ ಅವರು ಈ ಮಹತ್ತ್ವದ ಗ್ರಂಥದ 7ನೆಯ ಅಧ್ಯಾಯದಲ್ಲಿ ಈ ವಿಧ್ವಂಸದ ವಿವರಗಳನ್ನು ಪಟ್ಟಿ ಮಾಡಿದ್ದಾರೆ. ಪಾಪ, ಉಳಿದ ಅನೇಕ ಪತ್ರಕರ್ತರು, ಲೇಖಕರು ಪಟ್ಟಿ ಮಾಡುವುದಿರಲಿ, ಗ್ರಂಥರಚನೆಯಿರಲಿ, ಮಾತು ಸಹ ಆಡಲಿಲ್ಲ, ಖಂಡಿಸಲೂ ಇಲ್ಲ, ಪ್ರತಿಕ್ರಿಯಿಸಲೂ ಇಲ್ಲ.

    ಶಿಕಾಗೋ ಮೂಲದ ಡಾ|| ರಿಚರ್ಡ್ ಎಲ್. ಬೆನ್ ಕಿನ್ ದಾಖಲಿಸಿರುವ “A Quiet Case of Ethnic Cleansing” (ಮೊದಲ ಆವೃತ್ತಿ 2012) ಬಹಳ ಮಹತ್ತ್ವದ ಮತ್ತು ಅಪರೂಪದ ಗ್ರಂಥ. ಇಲ್ಲಿ ಬಂಗಾಳದ ಪ್ರದೇಶದ ಮತೀಯ ವಿಧ್ವಂಸ ಮತ್ತು ನರಹತ್ಯಾಕಾಂಡಗಳ ಬಗೆಗೆ ಅನೇಕ ಪ್ರಾತಿನಿಧಿಕ ದಾಖಲೆಗಳೇ ಇವೆ. ಈ ಗ್ರಂಥದ ಅನುಬಂಧ 1 ರಲ್ಲಿ ರಿಚರ್ಡ್ ಅವರು 2009 ಈ ಒಂದು ವರ್ಷದಲ್ಲಾದ ಹಲವು ಪ್ರಮುಖ ಭಯಾನಕ ಘಟನೆಗಳನ್ನು ಕೋಷ್ಟಕ (Table) ರೂಪದಲ್ಲಿ ನೀಡಿದ್ದಾರೆ. ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸುವುದು, ಒತ್ತೆಯಿಟ್ಟುಕೊಂಡು ಹಣ ಕೀಳುವುದು, ಅತ್ಯಾಚಾರ ಮಾಡುವುದು, ಬಲವಂತದ ಮತಾಂತರ ಮಾಡುವುದು, ಹತ್ಯೆ ಮಾಡುವುದು, ಅದೇರೀತಿ ಹಿಂದೂಗಳ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ, ಹಿಂದೂಗಳ ನರಹತ್ಯೆ, ಮತಾಂತರ ಇತ್ಯಾದಿಗಳ ವಿವರಗಳಿಲ್ಲಿವೆ. ಈ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಇಸ್ಲಾಮೀ ಪ್ರಭುತ್ವದ ಪೊಲೀಸರು ದೂರುಗಳನ್ನು ಕೈಗೆ ಸ್ವೀಕರಿಸಲೂ ಇಲ್ಲ, ಸ್ವೀಕರಿಸಿದರೂ FIR ಹಾಕಲಿಲ್ಲ, ಇನ್ನು ಕ್ರಮ ತೆಗೆದುಕೊಳ್ಳುವುದಂತೂ ಇಲ್ಲವೇ ಇಲ್ಲ. ಇಸ್ಲಾಮೀ ಪ್ರಭುತ್ವದ ದೇಶಗಳು ಇರುವುದೇ ಹಾಗೆ, ಅಲ್ಲಿ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯವೂ ಇಲ್ಲ, ಕನಿಷ್ಠ ಮರ್ಯಾದೆಯೂ ಇಲ್ಲ, ಅಸ್ತಿತ್ವವೂ ಇಲ್ಲ.

    ಪ್ರಸ್ತುತ ಬಾಂಗ್ಲಾದೇಶದಲ್ಲಿ ಬೀಭತ್ಸ ಹಿಂಸಾಪರ್ವ ವಿಜೃಂಭಿಸುತ್ತಿದೆ. ಬೆಂಕಿ ಹಚ್ಚುವುದು, ದೇವಾಲಯಗಳ ನಾಶ, ನರಹತ್ಯೆಗಳಿರಲಿ, ಅಲ್ಲಿನ ಜಿಹಾದಿಗಳು ತಾವು ಹಿಂದೂ ಹೆಣ್ಣುಮಕ್ಕಳ ಮೇಲೆ ಎಸಗುತ್ತಿರುವ ಭಯಾನಕ ಅತ್ಯಾಚಾರದ ವೀಡಿಯೋಗಳನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

    ಇದು ಬರಿಯ ಯುದ್ಧವಲ್ಲ, ಬರಿಯ ಆಕ್ರಮಣವಲ್ಲ, ಇದು ಅವೆಲ್ಲವುಗಳನ್ನು ಮೀರಿದ ಘನಘೋರವಾದ ಅಮಾನವೀಯ ಅತ್ಯಾಚಾರ, ಹಿಂಸಾಚಾರ. ಇಂತಹ ಈ ಜಿಹಾದೀ ದುಷ್ಟಜಂತುಗಳನ್ನು ಕ್ಷಣಮಾತ್ರವೂ ತಡ ಮಾಡದೇ ಕೊಂದುಹಾಕುವುದೇ ಸರಿಯಾದ ಕ್ರಮ. ಪ್ರಸಕ್ತ ಭಾರತದ ಆಶಾಕಿರಣ ಯೋಗಿ ಆದಿತ್ಯನಾಥರು. ಅವರು “ವಿಷಕ್ರಿಮಿಗಳಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕು, ಬೇರೆ ಯಾವುದೂ ಅವರಿಗೆ ಅರ್ಥ ಆಗುವುದಿಲ್ಲ” ಎನ್ನುತ್ತಿರುತ್ತಾರೆ. 20ನೆಯ ಶತಮಾನದ ಆರಂಭದಲ್ಲಿಯೇ ಪಾಕಿಸ್ತಾನದ ದುಷ್ಟ ಪರಿಕಲ್ಪನೆ ಹುಟ್ಟಿದ್ದೇ ಅಲಿಗಢ ವಿಶ್ವವಿದ್ಯಾಲಯದಲ್ಲಿ. ಮುಸ್ಲಿಂ ಬಾಹುಳ್ಯದ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಬಹಳ ಬಹಳ ಕಷ್ಟದ ಕೆಲಸ. ಎಲ್ಲ ರಾಜಕೀಯ ಪಕ್ಷಗಳೂ ಇಡೀ ದೇಶವನ್ನು, ಮುಖ್ಯವಾಗಿ ಉತ್ತರ ಪ್ರದೇಶವನ್ನು ಕಳೆದ ಏಳು ದಶಕಗಳಿಂದ ಕುಲಗೆಡಿಸುತ್ತಲೇ ಇವೆ. ಈ ಪರಿಪ್ರೇಕ್ಷ್ಯದಲ್ಲಿ ಅಭಿವೃದ್ಧಿಯ ಜೊತೆಯಲ್ಲಿ, ಅತ್ಯದ್ಭುತವಾದ ಕಾನೂನು ಮತ್ತು ಸುವ್ಯವಸ್ಥೆಗಳು ಸಾಧ್ಯವಾಗಿರುವುದು ಯೋಗಿಜೀ ಅವರ ಹೆಗ್ಗಳಿಕೆ. ಅವರಿಂದಾಗಿ ಬರೀ ಉತ್ತರ ಪ್ರದೇಶ ಮಾತ್ರವಲ್ಲ, ಪರೋಕ್ಷವಾಗಿ ಭಾರತವೂ ಉಳಿಯಲು ಸಾಧ್ಯವಾಗಿದೆ.

    ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಂತಹ ಇಸ್ಲಾಮೀ ಪ್ರಭುತ್ವಗಳಿಗೆ ಸಂದೇಶ ಕಳುಹಿಸುವುದು, ವಿನಂತಿ ಸಲ್ಲಿಸುವುದು, ಎಚ್ಚರಿಕೆ ನೀಡುವುದು, ಮಾತುಕತೆ – ಚರ್ಚೆ ಮಾಡುವುದು, ಯಾವುದೂ ಅರ್ಥವಾಗುವುದಿಲ್ಲ. ಅವೆಲ್ಲಾ ಸಂಪೂರ್ಣ ನಿಷ್ಪ್ರಯೋಜಕ. ಕೈಲಾಗದ ಹೇಡಿಗಳನ್ನು ನೋಡಿ ಜಿಹಾದಿಗಳು ಗಹಗಹಿಸಿ ನಗುವ ನೂರಾರು ವೀಡಿಯೋಗಳನ್ನು ನಾವೆಲ್ಲರೂ ನೋಡಿಯೇಇದ್ದೇವೆ.

    ಸೆಪ್ಟೆಂಬರ್ 2016ರಲ್ಲಿ ಭಾರತದ “ಸರ್ಜಿಕಲ್ ಸ್ಟ್ರೈಕ್” ಪಾಕಿಸ್ತಾನಕ್ಕೆ ಅರ್ಥವಾಯಿತು. ಬೇರೆ ಯಾವ ಭಾಷೆಯೂ ಇಂತಹವರಿಗೆ ಅರ್ಥ ಆಗುವುದಿಲ್ಲ, ಎನ್ನುವ ಮಾತೂ ರುಜುವಾತಾಯಿತು. ಈಗ ಬಾಂಗ್ಲಾದೇಶದ ಹಿಂದೂಗಳ ಮೇಲಾಗುತ್ತಿರುವ ಹೇಯ ಹಿಂಸೆ, ಅತ್ಯಾಚಾರಗಳಿಗೆ ಅಂತ್ಯ ಹಾಡಬೇಕಾದರೆ, ಪರಿಣಾಮಕಾರಿಯಾದ “ಸರ್ಜಿಕಲ್ ವಾರ್” ಆಗಬೇಕೆಂಬುದನ್ನು ಸೇನಾಧಿಕಾರಿಗಳಾಗಿದ್ದವರೇ ಹೇಳಿದ್ದಾರೆ. ಗೂಟದ ಕಾರುಗಳಲ್ಲಿ ಕುಳಿತವರು, ತಮಗೆ ಬೆಂಬಲ ನೀಡಿದ ಹಿಂದೂ-ಭಾರತವನ್ನು ಗೌರವಿಸಲಾದರೂ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿದೆ.

    ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜಿಹಾದಿ, ಮಿಷನರಿಗಳ ಸಾವಿರ ಹಿರೋಷಿಮಾಗಳು ಕಾಯುತ್ತಿವೆ

    Exit mobile version