Site icon Vistara News

IRCTC | ಪ್ರಯಾಣಿಕರ ಡೇಟಾ ಮಾರಾಟದಿಂದ 1,000 ಕೋಟಿ ರೂ. ಆದಾಯ ಗಳಿಸಲು ರೈಲ್ವೆ ಪ್ಲಾನ್!

IRCTC

ಮುಂಬಯಿ: ರೈಲ್ವೆ ಇಲಾಖೆಯ ಇಂಡಿಯನ್‌ ರೈಲ್ವೆ ಕೇಟರಿಂಗ್‌ & ಟೂರಿಸಂ ಕಾರ್ಪೊರೇಷನ್‌ (IRCTC) ಸಂಸ್ಥೆಯ ಷೇರು ದರ ಕಳೆದ ಎರಡು ದಿನಗಳಲ್ಲಿ ೧೨% ಏರಿಕೆಯಾಗಿದೆ. ಪ್ರತಿ ಷೇರಿನ ದರ ೬೭೧ ರೂ.ಗಳಿಂದ ೭೫೨ ರೂ.ಗೆ ಜಿಗಿದಿದೆ.

ಕಾರಣವೇನು?: ಐಆರ್‌ಸಿಟಿಸಿಯು ತನ್ನ ಪ್ರಯಾಣಿಕರ ಡೇಟಾಗಳನ್ನು ನಗದೀಕರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಷೇರು ದರ ಹೆಚ್ಚಳವಾಗಿದೆ. ಇದರಿಂದ ಸಂಸ್ಥೆಯ ಆದಾಯ ಮತ್ತು ಲಾಭ ಹೆಚ್ಚಳವಾಗಲಿದೆ. ಡಿಜಿಟಲ್‌ ನಗದಿಕರಣದ ಮೂಲಕ (Digital monetisation ) ಮೂಲಕ ೧,೦೦೦ ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಐಆರ್‌ಸಿಟಿಸಿ ಹೊಂದಿದೆ. ಈ ಸಂಬಂಧ ಕನ್ಸಲ್ಟೆಂಟ್‌ ನೆರವು ಪಡೆಯಲು ಐಆರ್‌ಸಿಟಿಸಿ ನಿರ್ಧರಿಸಿದೆ.

ರೈಲ್ವೆ ಟಿಕೆಟ್‌ ವಿತರಣೆಯಲ್ಲಿ ಏಕಸ್ವಾಮ್ಯವನ್ನು ಹೊಂದಿರುವ ಐಆರ್‌ಸಿಟಿಸಿ, ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ೨೪೫ ಕೋಟಿ ರೂ. ಲಾಭ ಗಳಿಸಿತ್ತು. ಐಆರ್‌ಸಿಟಿಸಿಯು ತನ್ನ ಪ್ರಯಾಣಿಕರ ಡೇಟಾಗಳನ್ನು ಬೇರೆ ಕಂಪನಿಗೆ ಮಾರಾಟ ಮಾಡಲು ರೈಲ್ವೆ ಇಲಾಖೆಯ ಅನುಮತಿ ಪಡೆದಿದೆ ಎಂಬ ವರದಿಗಳ ಬೆನ್ನಲ್ಲೇ ಐಆರ್‌ಸಿಟಿಸಿ ಷೇರುಗಳ ದರ ಏರುಗತಿಗೆ ತಿರುಗಿತ್ತು. ಐಆರ್‌ಸಿಟಿಸಿಯು ರೈಲ್ವೆ ಟಿಕೆಟ್‌ ಮಾರಾಟದ ಪರಿಣಾಮ ಪ್ರಯಾಣಿಕರ ಮಾಹಿತಿಗಳ ಬೃಹತ್‌ ಸಂಗ್ರಹವನ್ನು ಹೊಂದಿದೆ. ಇದನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ೧,೦೦೦ ಕೋಟಿ ರೂ. ಆದಾಯ ಗಳಿಸುವ ಯೋಜನೆಯನ್ನು ಐಆರ್‌ಸಿಟಿಸಿ ಹೊಂದಿದೆ.

ರೈಲ್ವೆಯು ಪ್ರಯಾಣಿಕರ ಸೇವೆ ಮತ್ತು ಸರಕು ಸಾಗಣೆ ಸೇವೆಗಳ ಮಾಹಿತಿಯನ್ನು ಮಾರಾಟ ಮಾಡುವ ಮೂಲಕ ಆಧಾಯ ಗಳಿಸಲು ನಿರ್ಧರಿಸಿದೆ.

Exit mobile version