ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung Galaxy) ತನ್ನ 6ನೇ ಜನರೇಷನ್‌ನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ ದಾಖಲೆ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಳೆಯ ಜನರೇಷನ್‌ನ ಫೋಲ್ಡೆಬಲ್ ಫೋನ್‌ಗಳಿಗೆ ಹೋಲಿಸಿದರೆ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್ 6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ 40% ಹೆಚ್ಚಳ ಉಂಟಾಗಿದ್ದು, ಈ ಪೋನ್‌ಗಳು ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ಝಡ್ ಸರಣಿಯ ಫೋನ್‌ಗಳು ಎಂಬ ಹೆಗ್ಗಳಿಕೆ ಗಳಿಸಿವೆ.
ಭಾರತದಲ್ಲಿ ಮತ್ತು ವಿಶ್ವಾದ್ಯಂತ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್6ನ ಪ್ರೀ ಬುಕಿಂಗ್ ಅನ್ನು ಜುಲೈ 10ರಂದು ಪ್ರಾರಂಭಿಸಲಾಗಿತ್ತು. ಈ ಹೊಸ ಸ್ಮಾರ್ಟ್‌ಫೋನ್‌ಗಳು ಮತ್ತು ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ವಾಚ್ ಅಲ್ಟ್ರಾ, ಗ್ಯಾಲಕ್ಸಿ ವಾಚ್7, ಗ್ಯಾಲಕ್ಸಿ ಬಡ್ಸ್3 ಪ್ರೊ ಮತ್ತು ಗ್ಯಾಲಕ್ಸಿ ಬಡ್ಸ್3 ಭಾರತದಲ್ಲಿ ಇದೇ ಜು.24ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.
ಈ ಕುರಿತು ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಮಾತನಾಡಿ, “ನಮ್ಮ ಹೊಸ ಫೋಲ್ಡೆಬಲ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6ಗೆ ಭಾರತದ ಗ್ರಾಹಕರಿಂದ ದೊರೆತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಾವು ಸಂತೋಷಗೊಂಡಿದ್ದೇವೆ. ಹೊಸ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ ಪ್ರೀ ಬುಕಿಂಗ್ ನಲ್ಲಿ 1.4x ಹೆಚ್ಚಳ ಉಂಟಾಗಿದ್ದು, ಇದು ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವವರಲ್ಲಿ ಭಾರತೀಯ ಗ್ರಾಹಕರು ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.
ಇದನ್ನೂ ಓದಿ: Pralhad joshi: ನವೀಕರಿಸಬಹುದಾದ ಇಂಧನ ಉತ್ಪಾದನೆ; ವಿಶ್ವದಲ್ಲೇ 4ನೇ ಸ್ಥಾನದಲ್ಲಿ ಭಾರತ
ಆರನೇ ಜನರೇಷನ್‌ನ ನಮ್ಮ ಹೊಸ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳು ಗ್ಯಾಲಕ್ಸಿ ಎಐನ ಹೊಸ ಅಧ್ಯಾಯವನ್ನು ಆರಂಭಿಸಿವೆ. ಈ ಗ್ಯಾಲಕ್ಸಿ ಎಐ ಸೌಲಭ್ಯವು ಬಳಕೆದಾರರ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಸಂವಹನ, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಿ, ಅನನ್ಯ ಮೊಬೈಲ್ ಅನುಭವಕ್ಕೆ ಪಾತ್ರರಾಗುವ ಸೌಕರ್ಯ ಒದಗಿಸುತ್ತದೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6ನ ಯಶಸ್ಸು ಭಾರತದಲ್ಲಿನ ಪ್ರೀಮಿಯಂ ವಿಭಾಗದ ನಾಯಕತ್ವವನ್ನು ಮುಂದುವರಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ತಿಳಿಸಿದರು.
ಭಾರತೀಯ ಗ್ರಾಹಕರಿಗೆ ತಲುಪಿಸಲು ಸ್ಯಾಮ್‌ಸಂಗ್‌ನ ನೋಯ್ಡಾ ಕಾರ್ಖಾನೆಯಲ್ಲಿ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್6 ಅನ್ನು ತಯಾರಿಸಲಾಗುತ್ತಿದೆ. ಹೊಸ ಫೋಲ್ಡೆಬಲ್‌ಗಳು ಇದುವರೆಗಿನ ಫೋಲ್ಡೆಬಲ್‌ಗಳಿಗಿಂತ ಹೆಚ್ಚು ತೆಳ್ಳಗಿರುವ ಮತ್ತು ಹಗುರವಾಗಿರುವ ಗ್ಯಾಲಕ್ಸಿ ಝಡ್ ಸರಣಿಯ ಸಾಧನಗಳಾಗಿವೆ. ಸಿಮ್ಮೆಟ್ರಿಕಲ್ ವಿನ್ಯಾಸ ಅಂದ್ರೆ ಎರಡೂ ಬದಿಯಲ್ಲಿ ಒಂದೇ ಥರ ಕಾಣುವ ವಿನ್ಯಾಸ ಮತ್ತು ನೇರವಾದ ಎಡ್ಜ್ ಅನ್ನು ಹೊಂದಿವೆ.
ಗ್ಯಾಲಕ್ಸಿ ಝಡ್ ಸರಣಿಯು ಅತ್ಯುತ್ತಮ ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದ್ದು, ಇದು ಇನ್ನೂ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯ ಫೋನ್‌ಗಳಾಗಿವೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಫ್ಲಿಪ್6 ಗಳು ಗ್ಯಾಲಕ್ಸಿಯ ಸ್ನ್ಯಾಪ್ ಡ್ರಾಗನ್® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್ ಹೊಂದಿದ್ದು, ಇದು ಅತ್ಯಾಧುನಿಕ ಸ್ನಾಪ್‌ಡ್ರಾಗನ್ ಮೊಬೈಲ್ ಪ್ರೊಸೆಸರ್ ಆಗಿದೆ. ಅತ್ಯುತ್ತಮ ದರ್ಜೆಯ ಸಿಪಿಯು, ಜಿಪಿಯು ಮತ್ತು ಎನ್‌ಪಿಯು ಹೊಂದಿದ್ದು, ಅತ್ಯಪೂರ್ವ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ವಿಶೇಷವಾಗಿ ಪ್ರೊಸೆಸರ್ ಅನ್ನು ಎಐಗೆ ಸೂಕ್ತವಾಗಿ ಹೊಂದುವಂತೆ ವಿನ್ಯಾಸ ಮಾಡಲಾಗಿದೆ ಮತ್ತು ಒಟ್ಟಾರೆಯಾಗಿ ಸುಧಾರಿತ ಕಾರ್ಯಕ್ಷಮತೆ ಜತೆಗೆ ಉತ್ತಮ ಗ್ರಾಫಿಕ್ಸ್ ಸೌಕರ್ಯವನ್ನೂ ನೀಡುತ್ತದೆ.
ಇದನ್ನೂ ಓದಿ: Kannada New Movie: ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್; ‘ಕುಬುಸ’ ಚಿತ್ರದ ಟ್ರೈಲರ್ ಬಿಡುಗಡೆ
ಗ್ಯಾಲಕ್ಸಿ ಝಡ್ ಫೋಲ್ಡ್6 ಎಐ- ಆಧರಿತ ಫೀಚರ್‌ಗಳು ಮತ್ತು ಟೂಲ್ ಗಳನ್ನು ಒದಗಿಸುತ್ತವೆ. ಆ ಫೀಚರ್‌ಗಳಲ್ಲಿ ನೋಟ್ ಅಸಿಸ್ಟ್, ಸ್ಕೆಚ್ ಟು ಇಮೇಜ್, ಇಂಟರ್‌ಪ್ರಿಟರ್, ಫೋಟೋ ಅಸಿಸ್ಟ್ ಮತ್ತು ಇನ್‌ಸ್ಟಾಂಟ್ ಸ್ಲೋ-ಮೋ ಒಳಗೊಂಡಿವೆ.
ಗ್ಯಾಲಕ್ಸಿ ಝಡ್ ಫೋಲ್ಡ್6 ಈಗ ದೀರ್ಘಾವಧಿಯ ಗೇಮಿಂಗ್ ಸೆಷನ್‌ನಲ್ಲಿ ತೊಡಗಿಕೊಳ್ಳಲು ಅನುಕೂಲತೆ ಒದಗಿಸುವ 1.6x ಲಾರ್ಜರ್ ವೇಪರ್ ಚೇಂಬರ್ ಅನ್ನು ಹೊಂದಿದೆ ಮತ್ತು ರೇ ಟ್ರೇಸಿಂಗ್ ವ್ಯವಸ್ಥೆಯು 7.6-ಇಂಚಿನ ಪರದೆಯ ಮೇಲೆ ಅತ್ಯುತ್ತಮ ಗುಣಮಟ್ಟದ ಗ್ರಾಫಿಕ್ಸ್ ಸೌಕರ್ಯ ಒದಗಿಸುತ್ತದೆ. ಇವೆಲ್ಲಾ ಸೌಕರ್ಯಗಳು ಹಾಗೂ 2,600 ಎನ್ಐಟಿ ವರೆಗಿನ ಬ್ರೈಟ್ ಆದ ಡಿಸ್ ಪ್ಲೇ ಸೇರಿಕೊಂಡು ಗೇಮಿಂಗ್ ಅನುಭವವನ್ನು ತೀವ್ರಗೊಳಿಸುತ್ತದೆ.
ಗ್ಯಾಲಕ್ಸಿ ಝಡ್ ಫ್ಲಿಪ್6 ಈಗ ಹೊಸತಾಗಿ ಕಸ್ಟಮೈಸೇಶನ್ ಸೌಲಭ್ಯ ನೀಡುತ್ತದೆ ಮತ್ತು ಸೃಜನಶೀಲ ಫೀಚರ್‌ಗಳ ಶ್ರೇಣಿಯನ್ನು ಒದಗಿಸುತ್ತದೆ. ಆದ್ದರಿಂದ ನೀವು ಪ್ರತಿ ಕ್ಷಣದಲ್ಲಿಯೂ ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. 3.4-ಇಂಚಿನ ಸೂಪರ್ ಅಮೋಲ್ಡ್ ಫ್ಲೆಕ್ಸ್ ವಿಂಡೋ ಮೂಲಕ ನೀವು ಫೋನ್ ಅನ್ನು ತೆರೆಯದೆಯೇ ಎಐ ಆಧರಿತ ಕಾರ್ಯ ನಿರ್ವಹಣೆಗಳನ್ನು ಮಾಡಬಹುದಾಗಿದೆ. ಯಾವುದಾದರೂ ಟೆಕ್ಸ್ಟ್ ಮೆಸೇಜ್‌ಗೆ ಸಾಧನೆ ಸೂಚಿಸಿದ ಮೆಸೇಜ್ ರಿಪ್ಲೈ ಮಾಡಬಹುದಾಗಿದೆ. ನಿಮ್ಮ ಇತ್ತೀಚಿನ ಮೆಸೇಜ್‌ಗಳನ್ನು ವಿಶ್ಲೇಷಿಸುವ ಮೂಲಕ ಈಗಾಗಲೇ ಸಿದ್ಧವಿರುವ ಸೂಕ್ತವಾದ ಮೆಸೇಜ್‌ಗಳನ್ನು ಕಳುಹಿಸಲು ಎಐ ಸೂಚಿಸುತ್ತದೆ.
ಫ್ಲೆಕ್ಸ್ ಕ್ಯಾಮ್ ಈಗ ಹೊಸ ಅಟೋ ಜೂಮ್ ಜತೆಗೆ ಬರುತ್ತದೆ. ಈ ಅಟೋ ಜೂಮ್ ನೀವು ತೆಗೆಯಲು ಉದ್ದೇಶಿಸಿರುವ ಶಾಟ್‌ಗೆ, ನೀವು ಯಾವುದೇ ಅಗತ್ಯ ಹೊಂದಾಣಿಕೆಗಳನ್ನು ಮಾಡುವ ಮೊದಲೇ ಫೋಟೋ ವಸ್ತುವನ್ನು ವಿಶ್ಲೇಷಿಸಿ ಝೂಮ್ ಇನ್ ಔಟ್ ಮಾಡುವ ಮೂಲಕ ಅತ್ಯುತ್ತಮವಾದ ಫ್ರೇಮ್ ಅನ್ನು ಸೆಟ್ ಮಾಡುತ್ತದೆ. ಹೊಸ 50 ಎಂಪಿ ವೈಡ್ ಮತ್ತು 12 ಎಂಪಿ ಅಲ್ಟ್ರಾ-ವೈಡ್ ಸೆನ್ಸರ್‌ಗಳು ಫೋಟೋಗಳಲ್ಲಿ ಸ್ಪಷ್ಟತೆ ಮತ್ತು ಸೂಕ್ಷ್ಮ ವಿವರಗಳು ಇರುವಂತೆ ನೋಡಿಕೊಳ್ಳುತ್ತದೆ. ಆ ಮೂಲಕ ವಿಶಿಷ್ಟ ಕ್ಯಾಮರಾ ಅನುಭವವನ್ನು ಒದಗಿಸುತ್ತವೆ. ಹೊಸ 50 ಎಂಪಿ ಸೆನ್ಸರ್ ಶಬ್ದ- ಮುಕ್ತ ಫೋಟೋ ತೆಗೆಯಲು 2x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ. 10x ಜೂಮ್ ಜತೆಗೆ ಸುಧಾರಿತ ಶೂಟಿಂಗ್ ಅನುಭವಕ್ಕಾಗಿ ಎಐ ಜೂಮ್ ಕೂಡ ಲಭ್ಯವಿದೆ. ಗ್ಯಾಲಕ್ಸಿ ಝಡ್ ಫ್ಲಿಪ್6 ಈಗ ಹೆಚ್ಚು ಬ್ಯಾಟರಿ ಬಾಳಿಕೆಯೊಂದಿಗೆ ಬರುತ್ತದೆ ಮತ್ತು ಮೊದಲ ಬಾರಿಗೆ ವೇಪರ್ ಚೇಂಬರ್ ಅನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಗ್ಯಾಲಕ್ಸಿ ಝಡ್ ಫೋಲ್ಡ್6 ಬೆಲೆ ರೂ. 164999 (12ಜಿಬಿ+256 ಜಿಬಿ)ರಿಂದ ಪ್ರಾರಂಭವಾಗುತ್ತದೆ. ಗ್ಯಾಲಕ್ಸಿ ಝಡ್ ಫ್ಲಿಪ್6 ಬೆಲೆ ರೂ. 109999 (12 ಜಿಬಿ+256 ಜಿಬಿ)ಗೆ ಲಭ್ಯವಿದೆ.
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಜತೆಗೆ ಸ್ಯಾಮ್‌ಸಂಗ್, ಎಐ-ಆಧರಿತ ಉತ್ಪನ್ನಗಳಾದ ಗ್ಯಾಲಕ್ಸಿ ವಾಚ್ ಅಲ್ಟ್ರಾ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ಬಡ್ಸ್3 ಸರಣಿಗಳನ್ನು ಪರಿಚಯಿಸಿದ್ದು, ಇವುಗಳಿಗೂ ಜುಲೈ 10 ರಂದು ಭಾರತದಲ್ಲಿ ಪ್ರೀ ಬುಕಿಂಗ್ ಆರಂಭ ಆಗಿದೆ.
ಇದನ್ನೂ ಓದಿ: Back Benchers Movie: ಬ್ಯಾಕ್ ಬೆಂಚರ್ಸ್ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕ ಖುಷಿ!
ಗ್ಯಾಲಕ್ಸಿ ವಾಚ್7 ಬೆಲೆ ರೂ. 29999ರಿಂದ ಪ್ರಾರಂಭವಾಗುತ್ತದೆ ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಬೆಲೆ ರೂ. 59999 ಆಗಿದೆ. ಸ್ಯಾಮ್‌ಸಂಗ್ ನ ಹೊಸ ಗ್ಯಾಲಕ್ಸಿ ಬಡ್ಸ್3 ಬೆಲೆ ರೂ. 14999 ಆಗಿದೆ. ಗ್ಯಾಲಕ್ಸಿ ಬಡ್ಸ್3 ಪ್ರೊ ಬೆಲೆ ರೂ. 19999 ಆಗಿದೆ ಎಂದು ತಿಳಿಸಿದೆ.