Site icon Vistara News

Jeff Bezos | ಸದ್ಯಕ್ಕೆ ಹೊಸ ಕಾರ್, ಫ್ರಿಡ್ಜ್, ಟಿವಿ ಖರೀದಿಸಬೇಡಿ ಎಂದ ಅಮೆಜಾನ್ ಸಂಸ್ಥಾಪಕ ಬೆಜೋಸ್

jeff bezos and Economic Recession

ನವದೆಹಲಿ: ಜಾಗತಿಕ ಶ್ರೇಷ್ಠ ಉದ್ಯಮಿದಾರರು ಮುಂಬರುವ ಆರ್ಥಿಕ ಹಿಂಜರಿತದ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡುತ್ತಿದ್ದಾರೆ. ಈ ಸಾಲಿಗೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (Jeff Bezos) ಸೇರಿದ್ದು, ಅಮೆರಿಕನ್ನರು ತಮ್ಮ ಬೃಹತ್ ಮೊತ್ತದ ಖರೀದಿಗಳನ್ನು ಮುಂದಕ್ಕೆ ಹಾಕಬೇಕು ಎಂದು ಹೇಳಿದ್ದಾರೆ. ಅಮೆರಿಕದ ಖಾಸಗಿ ಸುದ್ದಿ ವಾಹನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಅವರು, ಆರ್ಥಿಕ ಹಿಂಜರಿತವನ್ನು ಎದುರಿಸುವುದಕ್ಕಾಗಿ ಅಮೆರಿಕನ್ನರು ಫ್ರಿಡ್ಜ್, ಹೊಸ ಕಾರು, ಟಿವಿ ಸೇರಿದಂತೆ ಇನ್ನಿತರ ಐಷಾರಾಮಿ ವಸ್ತುಗಳನ್ನು ಖರೀದಿಸದಂತೆ ಸಲಹೆ ನೀಡಿದ್ದಾರೆ.

ಅದೇ ರೀತಿ, ಸಣ್ಣ ಉದ್ಯಮಿದಾರರು ಸದ್ಯಕ್ಕೆ ತಮ್ಮ ವ್ಯಾಪಾರದ ಮೇಲೆ ಹೆಚ್ಚಿನ ಹೂಡಿಕೆಯನ್ನು ಮಾಡದೇ, ಕಷ್ಟ ಕಾಲಕ್ಕೆ ಹಣವನ್ನು ಕೂಡಿಟ್ಟುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ. ಉತ್ತಮ ಪರಿಸ್ಥಿತಿಗೆ ಆಶೀಸೋಣ. ಆದರೆ, ಕೆಟ್ಟ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರೋಣ ಎಂದು ಅವರು ತಿಳಿಸಿದ್ದಾರೆ.

ಜೆಫ್ ಬೆಜೋಸ್ ಅವರು ತಾವು ಗಳಿಸಿದ 124 ಮಿಲಿಯನ್ ಡಾಲರ್ ಸಂಪತ್ತಿನ ಪೈಕಿ ಹೆಚ್ಚಿನ ಭಾಗವನ್ನು ದಾನ ನೀಡುವುದಾಗಿ ಹೇಳಿಕೊಂಡಿದ್ದಾರೆ. ಈ ಪೈಕಿ ಹೆಚ್ಚಿನ ಮೊತ್ತವನ್ನು ತಾಪಮಾನ ಏರಿಕೆ ವಿರುದ್ಧ ಹೋರಾಟಕ್ಕಾಗಿ ಮತ್ತು ಇನ್ನಿತರ ಸಾಮಾಜಿಕ ಕಾರ್ಯಗಳಿಗಾಗಿ ಬಳಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ | Britain in Recession | ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿತ, ತೆರಿಗೆ ಹೆಚ್ಚಳ, ವೆಚ್ಚ ಕಡಿತ ಘೋಷಣೆ

Exit mobile version