Site icon Vistara News

Global equities | ಜಾಗತಿಕ ಷೇರು ಮಾರುಕಟ್ಟೆಗೆ 2022ರಲ್ಲಿ ಉಂಟಾದ ನಷ್ಟ 1,15,79,47,00,00,00,000 ರೂ.

stock market

ನವ ದೆಹಲಿ: ಈ 2022ರ ವರ್ಷ ಜಾಗತಿಕ ಷೇರು ಮಾರುಕಟ್ಟೆ ಅತ್ಯಂತ ಪ್ರಕ್ಷುಬ್ಧವಾಗಿ ಪರಿಣಮಿಸಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ಬರೋಬ್ಬರಿ 14 ಲಕ್ಷ ಕೋಟಿ ಡಾಲರ್‌ (Global equities) ಕರಗಿ ಹೋಗಿದೆ.

ಈ ಮೊತ್ತವನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದಾಗ 1,15,79,47,00,00,00,000 (open-source calculator) ಆಗುತ್ತದೆ.

ಕೋವಿಡ್-‌19 ಬಿಕ್ಕಟ್ಟಿನ ಬಳಿಕ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಶುರುವಾಗಿತ್ತು. 2022ರ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಇದು ತಾರಕಕ್ಕೇರಿತ್ತು.

ಜಾಗತಿಕ ಆರ್ಥಿಕ ಬಿಕ್ಕಟ್ಟು ತೀವ್ರ ಸ್ವರೂಪದಲ್ಲಿದ್ದರೂ, ಭಾರತದ ಪರಿಸ್ಥಿತಿ ಉತ್ತಮವಾಗಿದೆ ಎಂದು ವಿಶ್ವ ಬ್ಯಾಂಕ್‌ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

Exit mobile version