ಬೆಂಗಳೂರು: ಸ್ಕೂಟರ್‌ಗಳು ಹಾಗೂ ಮೋಟಾರ್ ಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ (Hero MotoCorp) ಸ್ಥಾಪಕ, ಅಧ್ಯಕ್ಷ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಗ್ರಹಕಾರರ ಆವೃತ್ತಿಯ ಮೋಟಾರ್ ಸೈಕಲ್ ‘ದಿ ಸೆಂಟೆನಿಯಲ್’ ಅನ್ನು ಪರಿಚಯಿಸಿದೆ.
ಈ ಕುರಿತು ಹೀರೋ ಮೋಟೋಕಾರ್ಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಪವನ್ ಮುಂಜಾಲ್ ಮಾತನಾಡಿ, ತಮ್ಮ ತಂದೆ ಹಾಗೂ ಹೀರೋ ಮೋಟೋಕಾರ್ಪ್‌ನ ಸ್ಥಾಪಕ ಚೇರ್ಮನ್ ಆದ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ ಅವರ ಶತಮಾನೋತ್ಸವದ ಒಂದು ವರ್ಷದ ಪೂರ್ಣಗೊಳ್ಳುವಿಕೆಯನ್ನು ನಾವು ಆಚರಿಸುತ್ತಿರುವಂತಹ ಸಂದರ್ಭದಲ್ಲಿ ಎಂಜಿನಿಯರಿಂಗ್ ಅದ್ಭುತವಾದ “ದಿ ಸೆಂಟೆನಿಯಲ್” (The Centennial) ಅನ್ನು ಪರಿಚಯಿಸುತ್ತಿರುವುದಕ್ಕೆ ನನಗೆ ಅತೀವ ಉತ್ಸಾಹ ಮತ್ತು ಹೆಮ್ಮೆ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ
ಭಾರತದ ಹೀರೋ ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (CIT) ಮತ್ತು ಜರ್ಮನಿಯ ಹೀರೋ ಟೆಕ್ ಸೆಂಟರ್ (TCG) ನ ಜಾಗತಿಕ ನಿಪುಣರು ʼದಿ ಸೆಂಟೆನಿಯಲ್ʼ ಅನ್ನು ಪರಿಕಲ್ಪಿಸಿ, ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಇದರ ಆವಿಷ್ಕಾರ ಮತ್ತು ಅತ್ಯುತ್ಕೃಷ್ಟತೆಗೆ ಸಂಸ್ಥೆಯ ಬದ್ಧತೆಯನ್ನು ಪ್ರತಿಫಲಿಸುತ್ತದೆ, ಕೇವಲ 100 ಅತ್ಯಂತ ಸೂಕ್ಷ್ಮವಾಗಿ ರಚಿಸಲಾದ ಯೂನಿಟ್‌ಗಳೊಂದಿಗೆ, ಇದು ಪ್ರೀಮಿಯಮ್ ಕಾರ್ಯಕ್ಷಮತೆ ಹಾಗೂ ಕಲಾಕೃತಿಯ ಆಕರವಾಗಿದೆ.
ದಿ ಸೆಂಟೆನಿಯಲ್
ʼದಿ ಸೆಂಟೆನಿಯಲ್ʼ ವಿಶಿಷ್ಟವಾದ ಅಂಶಗಳು, ವರ್ಧಿತ ಚಾಲನಾ ಅನುಭವಕ್ಕಾಗಿ ಹಗುರತೂಕದ ಅಲ್ಯುಮಿನಿಯಮ್ ಸ್ವಿನ್‌ಗರ್ಮ್ ಮತ್ತು ತೆಳುವಾದ ಸೌಂದರ್ಯ ಹಾಗೂ ರಚನಾತ್ಮಕ ದೃಢತೆಗಾಗಿ ಹೊಸದಾಗಿ ವಿನ್ಯಾಸಗೊಂಡಿರುವ ಇಂಗಾಲ ಫೈಬರ್‌ನ ಬಾಡಿ ಪ್ಯಾನೆಲ್‌ಗಳನ್ನು ಒಳಗೊಂಡಿದೆ. ಹ್ಯಾಂಡಲ್‌ಬಾರ್‌ಗಳು, ಹ್ಯಾಂಡಲ್‌ಬಾರ್ ಮೌಂಟ್ಸ್, ಟ್ರಿಪಲ್ ಕ್ಲಾಂಪ್ಸ್, ಮತ್ತು ರೇರ್-ಸೆಟ್ ಫುಟ್ ಪೆಗ್ಸ್ ಒಳಗೊಂಡಂತೆ, ’ದಿ ಸೆಂಟೆನಿಯಲ್ʼ ನ ಗುಣವಿಶೇಷತೆಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿ, ಯಾಂತ್ರೀಕೃತಗೊಳಿಸಿ ಆನೋಡೈಜ್ಡ್ ಮಾಡಲಾಗಿದೆ.
ಮೆಚ್ಚಿಕೊಳ್ಳುವಂತಹ ಕಾರ್ಯಕ್ಷಮತೆ ಹಾಗೂ ಚುರುಕುತನ ಒದಗಿಸುವ ಈ ಬೈಕ್, 43-ಮಿ.ಮೀ ತಲೆಕೆಳಗಾದ ಫ್ರಂಟ್ ಸಸ್ಪೆನ್ಶನ್‌ನೊಂದಿಗೆ ಸಜ್ಜುಗೊಂಡಿದೆ.
ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!
ʼದಿ ಸೆಂಟೆನಿಯಲ್ʼ ಬೈಕ್ 158 ಕಿಲೋ ಕಡಿಮೆ ಕರ್ಬ್ ತೂಕದೊಂದಿಗೆ ’ದಿ ಸೆಂಟೆನಿಯಲ್’ಅತ್ಯಂತ ಹಗುರವಾಗಿದ್ದು, ಸುಧಾರಿತ ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಒದಗಿಸುತ್ತದೆ. ʼದಿ ಸೆಂಟೆನಿಯಲ್ʼ ನ ಡೆಲಿವರಿ, ಸೆಪ್ಟೆಂಬರ್ 2024ರಿಂದ ಆರಂಭವಾಗಲಿದೆ.