Hero MotoCorp: ಹೊಸ ಬೈಕ್‌ 'ದಿ ಸೆಂಟೆನಿಯಲ್' ಪರಿಚಯಿಸಿದ ಹೀರೋ ಮೋಟೋಕಾರ್ಪ್ - Vistara News

ವಾಣಿಜ್ಯ

Hero MotoCorp: ಹೊಸ ಬೈಕ್‌ ‘ದಿ ಸೆಂಟೆನಿಯಲ್’ ಪರಿಚಯಿಸಿದ ಹೀರೋ ಮೋಟೋಕಾರ್ಪ್

Hero MotoCorp: ಸ್ಕೂಟರ್‌ಗಳು ಹಾಗೂ ಮೋಟಾರ್‌ ಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ ಸ್ಥಾಪಕ, ಅಧ್ಯಕ್ಷ ದಿ. ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101 ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಗ್ರಹಕಾರರ ಆವೃತ್ತಿಯ ಮೋಟಾರ್‌ಸೈಕಲ್ ‘ದಿ ಸೆಂಟೆನಿಯಲ್’ ಅನ್ನು ಪರಿಚಯಿಸಿದೆ.

VISTARANEWS.COM


on

Hero MotoCorp has introduced the new motorcycle The Centennial
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಕೂಟರ್‌ಗಳು ಹಾಗೂ ಮೋಟಾರ್‌ ಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ (Hero MotoCorp) ಸ್ಥಾಪಕ, ಅಧ್ಯಕ್ಷ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಗ್ರಹಕಾರರ ಆವೃತ್ತಿಯ ಮೋಟಾರ್‌ ಸೈಕಲ್ ‘ದಿ ಸೆಂಟೆನಿಯಲ್’ ಅನ್ನು ಪರಿಚಯಿಸಿದೆ.

ಈ ಕುರಿತು ಹೀರೋ ಮೋಟೋಕಾರ್ಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಪವನ್ ಮುಂಜಾಲ್ ಮಾತನಾಡಿ, ತಮ್ಮ ತಂದೆ ಹಾಗೂ ಹೀರೋ ಮೋಟೋಕಾರ್ಪ್‌ನ ಸ್ಥಾಪಕ ಚೇರ್ಮನ್ ಆದ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ ಅವರ ಶತಮಾನೋತ್ಸವದ ಒಂದು ವರ್ಷದ ಪೂರ್ಣಗೊಳ್ಳುವಿಕೆಯನ್ನು ನಾವು ಆಚರಿಸುತ್ತಿರುವಂತಹ ಸಂದರ್ಭದಲ್ಲಿ ಎಂಜಿನಿಯರಿಂಗ್ ಅದ್ಭುತವಾದ “ದಿ ಸೆಂಟೆನಿಯಲ್” (The Centennial) ಅನ್ನು ಪರಿಚಯಿಸುತ್ತಿರುವುದಕ್ಕೆ ನನಗೆ ಅತೀವ ಉತ್ಸಾಹ ಮತ್ತು ಹೆಮ್ಮೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಭಾರತದ ಹೀರೋ ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (CIT) ಮತ್ತು ಜರ್ಮನಿಯ ಹೀರೋ ಟೆಕ್ ಸೆಂಟರ್ (TCG) ನ ಜಾಗತಿಕ ನಿಪುಣರು ʼದಿ ಸೆಂಟೆನಿಯಲ್ʼ ಅನ್ನು ಪರಿಕಲ್ಪಿಸಿ, ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಇದರ ಆವಿಷ್ಕಾರ ಮತ್ತು ಅತ್ಯುತ್ಕೃಷ್ಟತೆಗೆ ಸಂಸ್ಥೆಯ ಬದ್ಧತೆಯನ್ನು ಪ್ರತಿಫಲಿಸುತ್ತದೆ, ಕೇವಲ 100 ಅತ್ಯಂತ ಸೂಕ್ಷ್ಮವಾಗಿ ರಚಿಸಲಾದ ಯೂನಿಟ್‌ಗಳೊಂದಿಗೆ, ಇದು ಪ್ರೀಮಿಯಮ್ ಕಾರ್ಯಕ್ಷಮತೆ ಹಾಗೂ ಕಲಾಕೃತಿಯ ಆಕರವಾಗಿದೆ.

ದಿ ಸೆಂಟೆನಿಯಲ್

ʼದಿ ಸೆಂಟೆನಿಯಲ್‌ʼ ವಿಶಿಷ್ಟವಾದ ಅಂಶಗಳು, ವರ್ಧಿತ ಚಾಲನಾ ಅನುಭವಕ್ಕಾಗಿ ಹಗುರತೂಕದ ಅಲ್ಯುಮಿನಿಯಮ್ ಸ್ವಿನ್‌ಗರ್ಮ್ ಮತ್ತು ತೆಳುವಾದ ಸೌಂದರ್ಯ ಹಾಗೂ ರಚನಾತ್ಮಕ ದೃಢತೆಗಾಗಿ ಹೊಸದಾಗಿ ವಿನ್ಯಾಸಗೊಂಡಿರುವ ಇಂಗಾಲ ಫೈಬರ್‌ನ ಬಾಡಿ ಪ್ಯಾನೆಲ್‌ಗಳನ್ನು ಒಳಗೊಂಡಿದೆ. ಹ್ಯಾಂಡಲ್‌ಬಾರ್‌ಗಳು, ಹ್ಯಾಂಡಲ್‌ಬಾರ್ ಮೌಂಟ್ಸ್, ಟ್ರಿಪಲ್ ಕ್ಲಾಂಪ್ಸ್, ಮತ್ತು ರೇರ್-ಸೆಟ್ ಫುಟ್ ಪೆಗ್ಸ್ ಒಳಗೊಂಡಂತೆ, ’ದಿ ಸೆಂಟೆನಿಯಲ್ʼ ನ ಗುಣವಿಶೇಷತೆಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿ, ಯಾಂತ್ರೀಕೃತಗೊಳಿಸಿ ಆನೋಡೈಜ್ಡ್ ಮಾಡಲಾಗಿದೆ.

ಮೆಚ್ಚಿಕೊಳ್ಳುವಂತಹ ಕಾರ್ಯಕ್ಷಮತೆ ಹಾಗೂ ಚುರುಕುತನ ಒದಗಿಸುವ ಈ ಬೈಕ್, 43-ಮಿ.ಮೀ ತಲೆಕೆಳಗಾದ ಫ್ರಂಟ್ ಸಸ್ಪೆನ್ಶನ್‌ನೊಂದಿಗೆ ಸಜ್ಜುಗೊಂಡಿದೆ.

ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

ʼದಿ ಸೆಂಟೆನಿಯಲ್‌ʼ ಬೈಕ್‌ 158 ಕಿಲೋ ಕಡಿಮೆ ಕರ್ಬ್ ತೂಕದೊಂದಿಗೆ ’ದಿ ಸೆಂಟೆನಿಯಲ್’ಅತ್ಯಂತ ಹಗುರವಾಗಿದ್ದು, ಸುಧಾರಿತ ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಒದಗಿಸುತ್ತದೆ. ʼದಿ ಸೆಂಟೆನಿಯಲ್ʼ ನ ಡೆಲಿವರಿ, ಸೆಪ್ಟೆಂಬರ್ 2024ರಿಂದ ಆರಂಭವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಮಗುವಿನ ಬರ್ತ್‌ಡೇಗೆ ಒಂದೊಳ್ಳೆ ಉಡುಗೊರೆ ನೀಡಬೇಕೆ? ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: ನೀವೂ ಮಗುವಿನ ಹುಟ್ಟಿದ ಹಬ್ಬಕ್ಕೆ ಏನಾದರೂ ಗಿಫ್ಟ್‌ ಕೊಡಬೇಕು ಎನ್ನುವ ಯೋಚನೆಯಲ್ಲಿದ್ದೀರಾ? ಈ ಉಡುಗೊರೆ ಅವರ ಉಜ್ವಲ ಭವಿಷ್ಯಕ್ಕೂ ನೆರವಾಗಬೇಕು ಎಂದು ಯೋಚಿಸುತ್ತಿದ್ದೀರಾ? ಹೌದು ಎಂದಾದರೆ ನೀವು ಅಂಚೆ ಕಚೇರಿಯ ಬಾಲ್‌ ಜೀವನ್ ಬಿಮಾ ಯೋಜನೆಯಲ್ಲಿ ಮಗುವಿನ ಹೂಡಿಕೆ ಮಾಡಬಹುದು. ಏನಿದು ಯೋಜನೆ? ಯಾರೆಲ್ಲ ಅರ್ಹರು? ಮುಂತಾದ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪಾಲಕರ ಕನಸು. ಮಕ್ಕಳು ಸದಾ ಸಂತಸದಿಂದ ಇರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಏನೇ ತ್ಯಾಗ ಮಾಡಲೂ ಸಿದ್ಧರಿರುತ್ತಾರೆ. ತಮ್ಮಂತೆ ಮಕ್ಕಳು ಕಷ್ಟಪಡಬಾರದೆಂದು ಒದ್ದಾಡುತ್ತಾರೆ. ಇದೇ ಕಾರಣಕ್ಕೆ ಮಕ್ಕಳು ಕೇಳಿದ್ದನ್ನೆಲ್ಲ ತಂದು ಗುಡ್ಡೆ ಹಾಕುತ್ತಾರೆ. ಅದರಲ್ಲಿಯೂ ಮಕ್ಕಳ ಬರ್ತ್‌ಡೇ ಬಂತೆಂದರೆ ಸಾಕು ದುಬಾರಿ ಉಡುಗೊರೆ ನೀಡಲು ಮುಂದಾಗುತ್ತಾರೆ. ನೀವೂ ಮಗುವಿನ ಹುಟ್ಟಿದ ಹಬ್ಬಕ್ಕೆ ಏನಾದರೂ ಗಿಫ್ಟ್‌ ಕೊಡಬೇಕು ಎನ್ನುವ ಯೋಚನೆಯಲ್ಲಿದ್ದೀರಾ? ಈ ಉಡುಗೊರೆ ಅವರ ಉಜ್ವಲ ಭವಿಷ್ಯಕ್ಕೂ ನೆರವಾಗಬೇಕು ಎಂದು ಯೋಚಿಸುತ್ತಿದ್ದೀರಾ? ಹೌದು ಎಂದಾದರೆ ನೀವು ಅಂಚೆ ಕಚೇರಿಯ ಬಾಲ್‌ ಜೀವನ್ ಬಿಮಾ (Bal Jeevan Bima) ಯೋಜನೆಯಲ್ಲಿ ಮಗುವಿನ ಹೂಡಿಕೆ ಮಾಡಬಹುದು. ಏನಿದು ಯೋಜನೆ? ಯಾರೆಲ್ಲ ಅರ್ಹರು? ಮುಂತಾದ ಸಂಪೂರ್ಣ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಏನಿದು ಯೋಜನೆ?

ಭಾರತೀಯ ಅಂಚೆ ಕಚೇರಿ ಮಕ್ಕಳಿಗಾಗಿಯೇ ಆರಂಭಿಸಿದ ಯೋಜನೆ ಇದು. 5ರಿಂದ 20 ವರ್ಷದೊಳಗಿನ ಮಕ್ಕಳ ಪೋಷಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪ್ರತಿ ದಿನ ಮಕ್ಕಳ ಹೆಸರಿನಲ್ಲಿ 6 ರೂ. ಹೂಡಿಕೆ ಮಾಡಿದರೆ ಮೆಚ್ಯುರಿಟಿ ಆದಾಗ 1 ಲಕ್ಷ ರೂ. ಪಡೆಯಬಹುದು. ಆಕಸ್ಮಿಕವಾಗಿ ಮೃತಪಟ್ಟರೆ ಬಳಿಕ ಹಣ ಕಟ್ಟಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಪಾಲಕರಿಗೆ 1 ಲಕ್ಷ ರೂ. ಸಂದಾಯವಾಗುತ್ತದೆ.

ಯಾರೆಲ್ಲ ಅರ್ಹರು?

ಅರ್ಜಿ ಸಲ್ಲಿಸುವ ಪಾಲಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಮಗುವಿನ ವಯಸ್ಸು ಕನಿಷ್ಠ 5 ವರ್ಷ ಮತ್ತು ಗರಿಷ್ಠ ವಯಸ್ಸು 20 ವರ್ಷ. ಈ ಯೋಜನೆಯಡಿ ಒಂದು ಕುಟುಂಬದ 2 ಮಕ್ಕಳು ಮಾತ್ರ ಪ್ರಯೋಜನಗಳನ್ನು ಪಡೆಯಬಹುದು. ದೈನಂದಿನ ಹೂಡಿಕೆ ಆಯ್ಕೆ ಪಾಲಕರ ಹೊರೆಯನ್ನು ಕಡಿಮೆ ಮಾಡುತ್ತದೆ. ಈ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಇತರ ಹಣಕಾಸು ಸಹಾಯಕ್ಕೆ ಬಳಕೆ ಮಾಡಬಹುದು. ಈ ಯೋಜನೆ ಹಣವನ್ನು ಉಳಿತಾಯ ಮಾಡಲೂ ಸಹಕಾರಿ.

ಹೂಡಿಕೆ ಹೇಗೆ?

ಈ ಯೋಜನೆಯಲ್ಲಿ ಕನಿಷ್ಠ ವಿಮಾ ಮೊತ್ತವು 1,00,000 ರೂ. ಮತ್ತು ಗರಿಷ್ಠ ವಿಮಾ ಮೊತ್ತ 3,00,000 ರೂ. ಪ್ರತಿ ದಿನ, ಮಾಸಿಕ, ಪಾಕ್ಷಿಕ, ಅರ್ಧ ವಾರ್ಷಿಕ, ವಾರ್ಷಿಕ ಹೀಗೆ ನಿಮ್ಮ ಆಯ್ಕೆಯ ವಿಧಾನದಲ್ಲಿ ಹೂಡಿಕೆ ಮಾಡಬಹುದು. ಉದಾಹರಣೆ ನೋಡುವುದಾದರೆ, ನೀವು 5 ವರ್ಷಗಳಿಗೆ ಹೂಡಿಕೆ ಮಾಡುತ್ತಿದ್ದರೆ ಪ್ರತಿದಿನ 18 ರೂ. ಪಾವತಿಸಬೇಕು. ಅದೇ 20 ವರ್ಷಗಳವರೆಗೆ ಹೂಡಿಕೆ ಮಾಡುತ್ತಿದ್ದರೆ ದಿನಕ್ಕೆ 6 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಷರತ್ತುಗಳು

ಪಾಲಿಸಿದಾರ ಮಧ್ಯದಲ್ಲಿಯೇ ಮೃತಪಟ್ಟರೆ ಹಣವನ್ನು ಪಾವತಿಸಬೇಕಾಗಿಲ್ಲ. ಪಾಲಿಸಿ ಅವಧಿ ಮುಗಿದ ಮೇಲೆ ಸಂಪೂರ್ಣ ಹಣ ಸಿಗುತ್ತದೆ. ಮಧ್ಯದಲ್ಲಿಯೇ ಪಾಲಿಸಿ ವಿತ್ ಡ್ರಾ ಮಾಡಲು 5 ವರ್ಷ ಕಾಯಬೇಕು. 5 ವರ್ಷಕ್ಕಿಂತ ಮೊದಲು ಪಾಲಿಸಿ ಹಣ ಪಡೆಯಲು ಸಾಧ್ಯವಿಲ್ಲ. ಸದ್ಯ ಈ ಪಾಲಿಸಿಯಲ್ಲಿ ಸಾಲ ಪಡೆಯಲು ಅವಕಾಶವಿಲ್ಲ.

ಎಲ್ಲಿ ಲಭ್ಯ?

ಬಾಲ ಜೀವನ್ ಬಿಮಾ ಯೋಜನೆ ಪಡೆಯಲು ನಿಮ್ಮ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ. ಈ ಯೋಜನೆಯ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸಿ.

ಏನೆಲ್ಲ ದಾಖಲೆ ಅಗತ್ಯ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಗುವಿನ ಜನನ ದಾಖಲೆ, ಆಧಾರ್ ಕಾರ್ಡ್, ವಿಳಾಸದ ದಾಖಲೆ, ಪಾಲಕರ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಪಾಸ್‌ಪೋರ್ಟ್‌ ಗಾತ್ರದ ಫೋಟೋ ಅಗತ್ಯ.

ಇದನ್ನೂ ಓದಿ: Money Guide: ಕಡಿಮೆ ಸಂಬಳ ಇದ್ದರೂ ಚಿಂತೆ ಬೇಡ; ಉಳಿತಾಯಕ್ಕಾಗಿ ಈ ಟಿಪ್ಸ್‌ ಫಾಲೋ ಮಾಡಿ

Continue Reading

ಚಿನ್ನದ ದರ

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಷ್ಟಿದೆ ಇಂದಿನ ಬೆಲೆ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ ಶನಿವಾರ ಬಂಗಾರದ ದರ ತುಸು ಏರಿಕೆಯಾಗಿತ್ತು. ಭಾನುವಾರ ಬೆಲೆ ಹೆಚ್ಚಳವಾಗದೆ ಗ್ರಾಹಕರು ನಿರಾಳರಾಗಿದ್ದರು. ಸೋಮವಾರ ಯಥಾಸ್ಥಿತಿಯಲ್ಲಿತ್ತು. ಮಂಗಳವಾರ ಬೆಲೆ ಹೆಚ್ಚಾಗಿತ್ತು. ಇಂದು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,635 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,238 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ (ಜುಲೈ 3) ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ (Gold Rate Today). ಶನಿವಾರ ಬಂಗಾರದ ದರ ತುಸು ಏರಿಕೆಯಾಗಿತ್ತು. ಭಾನುವಾರ ಬೆಲೆ ಹೆಚ್ಚಳವಾಗದೆ ಗ್ರಾಹಕರು ನಿರಾಳರಾಗಿದ್ದರು. ಸೋಮವಾರ ಯಥಾಸ್ಥಿತಿಯಲ್ಲಿತ್ತು. ಮಂಗಳವಾರ ಬೆಲೆ ಹೆಚ್ಚಾಗಿತ್ತು. ಇಂದು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,635 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,238 ಇದೆ. 22 ಕ್ಯಾರೆಟ್‌ನ 8 ಗ್ರಾಂ ಚಿನ್ನದ ಬೆಲೆ ₹ 53,080. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,350 ಮತ್ತು ₹ 6,63,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 57,904 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 72,380 ಮತ್ತು ₹ 7,23,800 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,650 ₹ 7,253
ಮುಂಬೈ₹ 6,635₹ 7,238
ಬೆಂಗಳೂರು₹ 6,635₹ 7,238
ಚೆನ್ನೈ₹ 6,695 ₹ 7,304

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆ ಕೊಂಚ ಏರಿದೆ. ಬೆಳ್ಳಿ ಒಂದು ಗ್ರಾಂಗೆ ₹ 90.50 ಹಾಗೂ 8 ಗ್ರಾಂಗೆ ₹ 724 ಇದೆ. 10 ಗ್ರಾಂಗೆ ₹ 905 ಹಾಗೂ 1 ಕಿಲೋಗ್ರಾಂಗೆ ₹ 90,500 ಬೆಲೆ ಬಾಳುತ್ತದೆ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Stock Market: ಷೇರು ಪೇಟೆಯಲ್ಲಿ ಗೂಳಿ ನೆಗೆತ; 80,000 ಅಂಕಗಳ ಗಡಿ ತಲುಪಿದ ಸೆನ್ಸೆಕ್ಸ್‌

Continue Reading

ದೇಶ

Anant-Radhika Wedding: ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ಚಿನ್ನಾಭರಣ, 1 ಲಕ್ಷ ರೂ.

Anant-Radhika Wedding: ಜುಲೈ 12ರಂದು ಮುಂಬೈಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ನಡೆಯಲಿದೆ. ಅದಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ. ಮುಂಬೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಫಾಲ್ಘರ್‌ನಲ್ಲಿ ಈ ಸಾಮೂಹಿಕ ವಿವಾಹ ನೆರವೇರಿತು. ರಿಲಯನ್ಸ್‌ ಕಾರ್ಪೋರೇಟ್‌ ಪಾರ್ಕ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ 50 ಜೋಡಿ ಹಸಮಣೆಗೇರಿತು.

VISTARANEWS.COM


on

Anant-Radhika Wedding
Koo

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ದಂಪತಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಕ್ಕೆ ದಿನ ಗಣನೆ ಆರಂಭವಾಗಿದೆ. ಜುಲೈ 12ರಂದು ಮುಂಬೈಯಲ್ಲಿ ಈ ಅದ್ಧೂರಿ ಸಮಾರಂಭ ಆಯೋಜಿಸಲಾಗಿದೆ. ಅದಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ.

ಮುಂಬೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಫಾಲ್ಘರ್‌ನಲ್ಲಿ ಈ ಸಾಮೂಹಿಕ ವಿವಾಹ ನೆರವೇರಿತು. ರಿಲಯನ್ಸ್‌ ಕಾರ್ಪೋರೇಟ್‌ ಪಾರ್ಕ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ 50 ಜೋಡಿ ಹಸಮಣೆಗೇರಿತು.

ಈ ಸಾಮೂಹಿಕ ವಿವಾಹದಲ್ಲಿ ವಧು-ವರರ ಕುಟುಂಬದ ಸುಮಾರು 800 ಮಂದಿ ಪಾಲ್ಗೊಂಡಿದ್ದರು. ಸ್ವತಃ ಮುಕೇಶ್‌ ಅಂಬಾನಿ, ನೀತಾ ಅಂಬಾನಿ, ಆಕಾಶ್‌ ಅಂಬಾನಿ, ಶ್ಲೋಕ ಮೆಹ್ತಾ, ಇಶಾ ಅಂಬಾನಿ, ಆನಂದ್‌ ಪಿರಮಾಲ್‌ ಆಗಮಿಸಿ ನೂತನ ವಧು-ವರರನ್ನು ಹಾರೈಸಿದರು.

ಉಡುಗೊರೆ

ಪ್ರತಿ ಜೋಡಿಗೆ ಚಿನ್ನದ ಉಂಗುರ, ಮಂಗಳ ಸೂತ್ರ, ಮೂಗುತ್ತಿ ಉಡುಗೊರೆಯಾಗಿ ನೀಡಲಾಯಿತು. ಜತೆಗೆ ಬೆಳ್ಳಿಯ ಆಭರಗಳನ್ನೂ ನೀಡಲಾಗಿದೆ. ಜತೆಗೆ ಸ್ತ್ರೀಧನವಾಗಿ ಪ್ರತಿ ವಧುವಿಗೆ 1.01 ಲಕ್ಷ ರೂ. ಚೆಕ್‌ ಅನ್ನು ಅಂಬಾನಿ ಕುಟುಂಬಸ್ಥರು ವಿತರಿಸಿದ್ದಾರೆ. ಮಾತ್ರವಲ್ಲ ಪ್ರತಿ ಜೋಡಿಗೆ ಒಂದು ವರ್ಷಕ್ಕೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನೂ ವಿತರಿಸಲಾಗಿದೆ. ಇದು ಪಾತ್ರೆ ಪರಿಕರಗಳು, ಗ್ಯಾಸ್‌ ಸ್ಟವ್‌, ಮಿಕ್ಸಿ, ಫ್ಯಾನ್‌, ಹಾಸಿಗೆ ಮತ್ತು ತಲೆ ದಿಂಬುಗಳನ್ನು ಒಳಗೊಂಡಿದೆ. ಅದ್ಧೂರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ ವರ್ಲಿ ಬುಡಕಟ್ಟು ಜನಾಂಗದವರು ಪ್ರದರ್ಶಿಸಿದ ಸಾಂಪ್ರದಾಯಿಕ ತಾರ್ಪ ನೃತ್ಯವನ್ನು ಅತಿಥಿಗಳು ಮತ್ತು ಅಂಬಾನಿ ಕುಟುಂಬದ ಸದಸ್ಯರು ವೀಕ್ಷಿಸಿದರು.

ʼʼಜನ ಸೇವೆಯೇ ಜನಾರ್ದನ ಸೇವೆ ಎಂದು ಪರಿಗಣಿಸುವ ಅಂಬಾನಿ ಕುಟುಂಬ ಪ್ರತಿ ಶುಭ ಸಂದರ್ಭದಲ್ಲಿ ಸಮಾಜಕ್ಕೆ ನೆರವಾಗುವ ಉದ್ದೇಶದಿಂದ ಇಂತ ಜನ ಕಲ್ಯಾಣ ಕಾರ್ಯಕ್ರಮಗಳು ಆಯೋಜಿಸುತ್ತದೆʼʼ ಎಂದು ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Mohan Bhagwat: ಮುಕೇಶ್‌ ಅಂಬಾನಿ ನಿವಾಸಕ್ಕೆ ಆಗಮಿಸಿದ ಮೋಹನ್‌ ಭಾಗವತ್‌; ಕೈ ಮುಗಿದು ಸ್ವಾಗತಿಸಿದ ನೀತಾ ಅಂಬಾನಿ

ಜುಲೈ 12ರಂದು ಮದುವೆ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ಕೆಲವು ದಿನಗಳ ಹಿಂದೆ ಮೂರು ದಿನಗಳ ಅದ್ದೂರಿ ಮದುವೆ ಪೂರ್ವ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.

Continue Reading

ವಾಣಿಜ್ಯ

Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

Stock Market: ಭಾರತೀಯ ಷೇರು ಮಾರುಕಟ್ಟೆ ಬುಧವಾರ (ಜುಲೈ 3) ಹೊಸ ಇತಿಹಾಸ ಬರೆದಿದೆ. ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ಜತೆಗೆ ನಿಫ್ಟಿ ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ. ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್‌ 80,039 ಪಾಯಿಂಟ್‌ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್‌ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ.

VISTARANEWS.COM


on

Stock Market
Koo

ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market) ಬುಧವಾರ (ಜುಲೈ 3) ಹೊಸ ಇತಿಹಾಸ ಬರೆದಿದೆ. ಇಂದು ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ (Sensex) 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ಜತೆಗೆ ನಿಫ್ಟಿ (Nifty) ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ.

ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್‌ 80,039 ಪಾಯಿಂಟ್‌ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್‌ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್‌ನಲ್ಲಿ ಗರಿಷ್ಠ ಲಾಭ ಗಳಿಸಿದ್ದು, 1,791.90 ರೂ.ಗೆ ತಲುಪಿದೆ. ಸೆನ್ಸೆಕ್ಸ್‌ನಲ್ಲಿ ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್‌ ಮತ್ತು ಎಂ & ಎಂ ಲಾಭ ಗಳಿಸಿದರೆ, ಟೆಕ್ ಮಹೀಂದ್ರಾ, ಟಿಸಿಎಸ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್‌ಟೆಲ್‌ ನಷ್ಟ ಅನುಭವಿಸಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 52 ವಾರಗಳ ಗರಿಷ್ಠ ಬೆಲೆ

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಸುಮಾರು 52 ವಾರಗಳ ಬಳಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಇಂದು 60ಕ್ಕೂ ಹೆಚ್ಚು ರೂ. ಅಥವಾ ಶೇ. 3ಕ್ಕೂ ಅಧಿಕ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ʼʼಇಂದು ಮಾರುಕಟ್ಟೆ ಚಟುವಟಿಕೆಯ ಕೇಂದ್ರಬಿಂದು ಎಚ್‌ಡಿಎಫ್‌ಸಿ ಬ್ಯಾಂಕ್ ಆಗಿದ್ದು, ತನ್ನ ಮೇಲ್ಮುಖ ಚಲನೆಯನ್ನು ಮುಂದುವರಿಸಿದೆ. ಇದು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಮರ್ಥ್ಯ ಹೊಂದಿದೆʼʼ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸುದ್ದೇವೆ ಎಂದು ಹೇಳಿಕ ನೀಡಿದ ನಂತರ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳು ಬುಧವಾರ ಬೆಳಿಗ್ಗೆ ಧನಾತ್ಮಕ ಪ್ರದರ್ಶನ ತೋರಿದವು.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

ಮಂಗಳವಾರ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್‌ ದಾಖಲೆಯ 79,653.21 ಅಂಕ ತಲುಪಿತ್ತು. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್‌ ಗಡಿ ಮುಟ್ಟಿತ್ತು. ಮಂಗಳವಾರ ಬೆಳಿಗ್ಗೆ ಎನ್ಎಸ್ಇ ನಿಫ್ಟಿ ಶೇ. 0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್‌ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್‌ ಗಳಿಸಿತ್ತು. ಐಟಿ ಕಂಪನಿಗಳ ಲಾಭ ಮತ್ತು ಯುಎಸ್ ಫೆಡರಲ್ ಸೆಪ್ಟೆಂಬರ್‌ನಲ್ಲಿ ರಿಸರ್ವ್ ಬಡ್ಡಿದರ ಕಡಿತದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು ಈ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.

ಹಿಂದಿನ ಸೆಷನ್‌ನಲ್ಲಿ ಶೇ. 2ರಷ್ಟು ಏರಿಕೆ ಕಂಡಿದ್ದ ಐಟಿ ಷೇರುಗಳು ಮತ್ತೆ ಶೇ. 0.7ರಷ್ಟು ಹೆಚ್ಚಳ ದಾಖಲಿಸಿದ್ದವು. ಎಲ್ಲ 13 ಪ್ರಮುಖ ವಲಯಗಳು ಲಾಭವನ್ನು ಕಂಡವು. ಅದರಲ್ಲಿಯೂ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಕ್ರಮವಾಗಿ ಶೇ. 0.4 ಮತ್ತು ಶೇ. 0.2 ಹೆಚ್ಚಳ ಕಂಡವು.

Continue Reading
Advertisement
Amritpal Singh
ದೇಶ33 mins ago

Amritpal Singh: ಜೈಲಿನಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌ಗೆ ಪೆರೋಲ್‌

Bridge Collapse
ದೇಶ43 mins ago

Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

Stabbing Case
ಕರ್ನಾಟಕ47 mins ago

Stabbing Case: ಕಾಲೇಜಿನೊಳಗೆ ಬಿಡದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ನ ಇರಿದು ಕೊಂದ ವಿದ್ಯಾರ್ಥಿ!

ಕರ್ನಾಟಕ2 hours ago

Rain News: ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಅಬ್ಬರ; ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಜನ ಪರದಾಟ

Cabinet Committees
ದೇಶ2 hours ago

Cabinet Committees: ಸಂಪುಟ ಸಮಿತಿಗಳನ್ನು ರಚಿಸಿದ ಕೇಂದ್ರ; ಭದ್ರತಾ ಸಮಿತಿಗೆ ಮೋದಿಯೇ ಮುಖ್ಯಸ್ಥ!

Hemant Soren
ದೇಶ2 hours ago

Hemant Soren: ‌ಜಾಮೀನು ಸಿಕ್ಕ ಬೆನ್ನಲ್ಲೇ ಮತ್ತೆ ಜಾರ್ಖಂಡ್‌ ಸಿಎಂ ಆಗಲಿರುವ ಹೇಮಂತ್‌ ಸೊರೆನ್

MUDA site scandal
ಕರ್ನಾಟಕ3 hours ago

MUDA site scandal: ಮುಡಾ ಸೈಟ್ ಅಕ್ರಮ; ನಾನು ಯಾಕಪ್ಪ ರಾಜೀನಾಮೆ ಕೊಡಲಿ, ನನ್ನ ಪಾತ್ರ ಏನಿದೆ ಎಂದ ಸಿಎಂ!

Kannada New Movie Odo Odo Odo Kailash Kher
ಸಿನಿಮಾ3 hours ago

Kannada New Movie: ‘ಫಾರೆಸ್ಟ್’ ಸಿನಿಮಾದ ಮೊದಲ ಹಾಡು ರಿಲೀಸ್!

Team India
ಕ್ರೀಡೆ3 hours ago

T20 World Cup Winners: ಟಿ20 ವಿಶ್ವಕಪ್​ ಗೆದ್ದ ಭಾರತ ತಂಡಕ್ಕೆ ನಾಳೆ ಮುಂಬೈಯಲ್ಲಿ ಅದ್ಧೂರಿ ಸ್ವಾಗತ

Money Guide
ಮನಿ-ಗೈಡ್3 hours ago

Money Guide: ಮಗುವಿನ ಬರ್ತ್‌ಡೇಗೆ ಒಂದೊಳ್ಳೆ ಉಡುಗೊರೆ ನೀಡಬೇಕೆ? ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌