Site icon Vistara News

Technology : ತಂತ್ರಜ್ಞಾನದ ಬಳಕೆಯಿಂದ ಭಾರತ 2047ಕ್ಕೆ ಅಭಿವೃದ್ಧಿ ಹೊಂದಿದ ದೇಶ: ಪ್ರಧಾನಿ ಮೋದಿ

modi

ಇಸ್ಲಾಮಾಬಾದ್‌ : ಭಾರತವು ತಂತ್ರಜ್ಞಾನದ (Technology) ನೆರವಿನಿಂದ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ. ಡಿಜಿಟಲ್‌ ಕ್ರಾಂತಿಯ ಪ್ರಯೋಜನ ಪ್ರತಿಯೊಬ್ಬ ನಾಗರಿಕರಿಗೂ ಸಿಗಬೇಕು ಎಂಬ ಆಶಯದೊಂದಿಗೆ ಆಧುನಿಕ ಡಿಜಿಟಲ್‌ ಮೂಲಸೌಕರ್ಯಗಳನ್ನೂ ಸೃಷ್ಟಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಬಜೆಟ್‌ 2023-24 ಕುರಿತ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಸರ್ಕಾರ ತಂತ್ರಜ್ಞಾನದ ಬಳಕೆಯ ಮೂಲಕ ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ಉತ್ತೇಜಿಸುತ್ತಿದೆ. ಇದುವರೆಗೆ 40,000 ಪ್ರಶ್ನೆಗಳನ್ನು ಬಗೆಹರಿಸಲಾಗಿದೆ ಎಂದರು.

5ಜಿ ಮತ್ತು ಕೃತಕಬುದ್ಧಿಮತ್ತೆ (Artificial Intelligence) ಎಲ್ಲ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತಿದೆ. ಔಷಧ, ಶಿಕ್ಷಣ, ಕೃಷಿ ಮತ್ತಿತರ ವಲಯಗಳಲ್ಲಿ ಬೆಳವಣಿಗೆಗೆ ಕಾರಣವಾಗಿದೆ ಎಂದರು. ಒಂದು ದೇಶ, ಒಂದು ರೇಶನ್‌, ಜನ್‌ ಧನ್‌ ಯೋಜನೆ, ಆಧಾರ್‌ ಕಾರ್ಡ್‌ ವಿತರಣೆಗೆ ತಂತ್ರಜ್ಞಾನ ಸಹಕರಿಸಿದೆ.

ತಂತ್ರಜ್ಞಾನದ ನೆರವಿನೊಂದಿಗೆ ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ. 21ನೇ ಶತಮಾನ ತಂತ್ರಜ್ಞಾನ ಆಧಾರಿತ ಪ್ರಗತಿಯ ಯುಗವಾಗಿದೆ ಎಂದು ವಿವರಿಸಿದರು.

Exit mobile version