Site icon Vistara News

Infosys Q2 Results: 2ನೇ ತ್ರೈಮಾಸಿಕದಲ್ಲಿ 6,212 ಕೋಟಿ ರೂ. ಲಾಭ ಗಳಿಸಿದ ಇನ್ಫೋಸಿಸ್

7.3 percent decline in Infosys net profit, 1.3 percent increase in revenue

ನವದೆಹಲಿ: ಟಿಸಿಎಸ್ (TCS) ಬಳಿಕ ತಂತ್ರಜ್ಞಾನ ದೈತ್ಯ (IT Company) ಕಂಪನಿಯಾಗಿರುವ ಇನ್ಫೋಸಿಸ್ (Infosys) ಕೂಡ, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಆದಾಯ ಮಾಹಿತಿಯನ್ನು ಬಹಿರಂಗ ಮಾಡಿತ್ತು. 2023ರ ಸೆಪ್ಟೆಂಬರ್‌ಕ್ಕೆ ಮುಕ್ತಾಯವ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ನಿವ್ವಳ ಲಾಭದಲ್ಲಿ (Net Profit) ಶೇ. 3.2 ಏರಿಕೆಯಾಗಿದೆ. ಅಂದರೆ, 6,212 ಕೋಟಿ ರೂ. ಲಾಭವನ್ನು ದಾಖಲಿಸಿದೆ. ಇದೇ ವೇಳೆ, ಆದಾಯವು 38,994 ಕೋಟಿ ರೂ ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.6.7ರಷ್ಟು ಏರಿಕೆಯಾಗಿದೆ. ಇನ್ನು ಕಳೆದ ವರ್ಷ ಇದೇ ಅವಧಿಯಲ್ಲಿ ಇನ್ಫೋಸಿಸ್ 6,021 ಕೋಟಿ ರೂಪಾಯಿ ನಿವ್ವಳ ಲಾಭವನ್ನ ಗಳಿಸಿತ್ತು(Infosys Q2 Results).

ತ್ರೈಮಾಸಿಕ ಆಧಾರದ ಮೇಲೆ, ಬಿಎಸ್‌ಇ ಫೈಲಿಂಗ್ ಪ್ರಕಾರ, ಕಂಪನಿಯ ನಿವ್ವಳ ಲಾಭವು ಸೆಪ್ಟೆಂಬರ್ 2023 ತ್ರೈಮಾಸಿಕದಲ್ಲಿ 4.5 ಶೇಕಡಾ ಮತ್ತು ಅದರ ಆದಾಯವು 2.8 ಶೇಕಡಾ ಹೆಚ್ಚಾಗಿದೆ. ಇದೇ ವೇಳೆ, ಕಂಪನಿಯು ಪ್ರತಿ ಈಕ್ವಿಟಿ ಷೇರಿಗೆ 18 ರೂ. ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಇದು ಅಕ್ಟೋಬರ್ 25, 2023 ಅನ್ನು ಮಧ್ಯಂತರ ಲಾಭಾಂಶದ ದಾಖಲೆ ದಿನಾಂಕವಾಗಿ ಮತ್ತು ನವೆಂಬರ್ 6, 2023 ಅನ್ನು ಪಾವತಿ ದಿನಾಂಕವಾಗಿ ನಿಗದಿಪಡಿಸಿದೆ.

ಈ ಸುದ್ದಿಯನ್ನೂ ಓದಿ: Generative AI: ಜನರೇಟಿವ್ ಎಐಗಾಗಿ ಎನ್‌ವಿಡಿಯಾ-ಇನ್ಫೋಸಿಸ್ ಪಾಲುದಾರಿಕೆ, 50 ಸಾವಿರ ಸಿಬ್ಬಂದಿಗೆ ತರಬೇತಿ!

ತ್ರೈಮಾಸಿಕದಲ್ಲಿ ಅದರ ಕಾರ್ಯಾಚರಣೆಯ ಲಾಭಾಂಶವು ಅನುಕ್ರಮವಾಗಿ 40 ಬಿಪಿಎಸ್‌ನಿಂದ 21.2 ಶೇಕಡಾಕ್ಕೆ ಏರಿತು. ಈ ತ್ರೈಮಾಸಿಕದಲ್ಲಿ ಇನ್ಫೋಸಿಸ್ 7.7 ಶತಕೋಟಿ ಡಾಲರ್ ಡೀಲ್ ಪಡೆದುಕೊಂಡಿದ್ದು, ಒಟ್ಟು ನಿವ್ವಳ ಲಾಭದಲ್ಲಿ ಈ ಡೀಲ್ ಪ್ರಮಾಣವು ಶೇ.48ರಷ್ಟಿದೆ. ಇದೇ ವೇಳೆ, 3,36,294ರಷ್ಟಿದ್ದ ನೌಕರರ ಸಂಖ್ಯೆ ಈಗ 3,28,764ಕ್ಕೆ ಇಳಿಕೆಯಾಗಿದೆ.

ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ಅವರು, ನಾವು ಎರಡನೇ ತ್ರೈಮಾಸಿಕದಲ್ಲಿ 7.2 ಶತಕೋಟಿ ಡಾಲರ್ ಮೌಲ್ಯದ ಡೀಲ್ ಹೊಂದಿದ್ದೇವೆ. ಇದು ಅನಿಶ್ಚಿತ ಸ್ಥೂಲ-ಪರಿಸರದಲ್ಲಿ, ರೂಪಾಂತರದ ಪ್ರಯೋಜನಗಳನ್ನು ಮತ್ತು ಉತ್ಪಾದಕತೆ ಮತ್ತು ವೆಚ್ಚದ ಉಳಿತಾಯವನ್ನು ಪ್ರಮಾಣದಲ್ಲಿ ತಲುಪಿಸುವ ಮೂಲಕ ವಿಕಸನಗೊಳ್ಳುತ್ತಿರುವ ಕ್ಲೈಂಟ್ ಅಗತ್ಯಗಳಿಗೆ ಪ್ರಸ್ತುತವಾಗಲು ನಮ್ಮ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version