ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ (Information Technology) ಕ್ಷೇತ್ರದಲ್ಲಿ ಭಾರತದ ಐಟಿ ವೃತ್ತಿಪರರ (IT Jobs) ವೇತನ ಪ್ಯಾಕೇಜ್‌ಗಳು (IT Salary Package) ಸುಮಾರು ಶೇಕಡಾ 30-40 ರಷ್ಟು ಕಡಿಮೆಯಾಗಿದೆ. ಒಂದು ವರ್ಷದ ಹಿಂದೆ ವಾರ್ಷಿಕ ಸುಮಾರು 1 ಕೋಟಿ ರೂಪಾಯಿಯ ಪ್ಯಾಕೇಜ್ (Salary Package) ಪಡೆಯುತ್ತಿದ್ದವರು ಈಗ ಅದರ ಅರ್ಧದಷ್ಟು ಮಾತ್ರ ಪಡೆಯುತ್ತಿದ್ದಾರೆ (Salary Cut) ಎಂದು ಪ್ರಮುಖ ವಾಣಿಜ್ಯ ಮಾಧ್ಯಮವೊಂದು ತಿಳಿಸಿದೆ.
ಜಾಗತಿಕ ಆರ್ಥಿಕ ಪಲ್ಲಟಗಳು, ಐಟಿ ವಲಯದ ಮಂದಗತಿಯೇ ಈ ಕುಸಿತಕ್ಕೆ ಕಾರಣವಾಗಿದೆ ಎಂದು ಐಟಿ ಉದ್ಯಮದ ಪ್ರಮುಖ ಕಾರ್ಯನಿರ್ವಾಹಕರು ತಿಳಿಸಿದ್ದಾರೆ. 2021-22ರ ಕೋವಿಡ್ ಸಾಂಕ್ರಾಮಿಕದ ನಂತರ, ಸಾಮೂಹಿಕ ನೇಮಕಾತಿ ಕಡಿಮೆಯಾಗಿದೆ ಹಾಗೂ ಕಡಿಮೆ ವೇತನದ ಪ್ಯಾಕೇಜ್‌ಗಳು ಸಾಮಾನ್ಯವಾಗಿವೆ. ಮೊದಲ ಹೂಡಿಕೆಗಳನ್ನು ಮಾಡುತ್ತಿರುವ ಆರಂಭಿಕ ಹಂತದಲ್ಲಿರುವ ಸ್ಟಾರ್ಟ್‌ಅಪ್‌ಗಳು ಈಗಿನ ಹೆಚ್ಚಿನ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿವೆ. ಎಂದು ಐಟಿ ವಲಯದ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.
“ಇವರು ಬಹುತೇಕ CXOಗಳು ಮತ್ತು ಹಿರಿಯ ಟೆಕ್ ಪ್ರತಿಭೆಗಳಾಗಿದ್ದು, ಕಳೆದ ಕೆಲವು ತಿಂಗಳುಗಳಲ್ಲಿ ವಜಾಗೊಂಡವರು. ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳೊಂದಿಗೆ ಕೆಲಸ ಮಾಡಿದವರು” ಎಂದು ಎಬಿಸಿ ಕನ್ಸಲ್ಟೆಂಟ್ಸ್‌ನ ಹಿರಿಯ ಪಾಲುದಾರ, ಟ್ಯಾಲೆಂಟ್ ಅಡ್‌ವೈಸರ್ ರತ್ನಾ ಗುಪ್ತಾ ಹೇಳಿದ್ದಾರೆ.
ಉದ್ಯೋಗ ಕಡಿತ ಮಾಹಿತಿ ತಾಣ layoffs.fyiಯ ಇತ್ತೀಚಿನ ಮಾಹಿತಿಯ ಪ್ರಕಾರ, 2024ರಲ್ಲಿ ಇದುವರೆಗೆ 157 ಕಂಪನಿಗಳು 39,608 ಉದ್ಯೋಗಿಗಳನ್ನು ವಜಾಗೊಳಿಸಿವೆ.
ಐಟಿ ಕಂಪನಿಗಳೂ ಈಗ ಹೊಸ ಗುತ್ತಿಗೆಗಳನ್ನು ಪಡೆಯುತ್ತಿವೆ. $1.5 ಶತಕೋಟಿ (12483 ಕೋಟಿ ರೂ.) ಮೌಲ್ಯದ ಬಹು-ವರ್ಷದ ಒಪ್ಪಂದವನ್ನು ಕಳೆದುಕೊಂಡ ಎರಡು ತಿಂಗಳ ನಂತರ, IT ಪ್ರಮುಖ ಇನ್ಫೋಸಿಸ್ ಎರಡು ಮಹತ್ವದ ಒಪ್ಪಂದಗಳನ್ನು ಪಡೆದುಕೊಂಡಿದೆ. ತೀರಾ ಇತ್ತೀಚಿನ ಒಪ್ಪಂದವು ಸಿಂಗಾಪುರದ ಶಿಪ್ಪಿಂಗ್ ಕಂಪನಿ ಪೆಸಿಫಿಕ್ ಇಂಟರ್ನ್ಯಾಷನಲ್ ಲೈನ್ಸ್ (PIL) ನೊಂದಿಗೆ 2027ರವರೆಗೆ ನಡೆಯುವ $300 ಮಿಲಿಯನ್ (2490 ಕೋಟಿ) ಮೌಲ್ಯದ ಬಹು-ವರ್ಷದ ಒಪ್ಪಂದವಾಗಿದೆ.
ಐರಿಶ್ ಆಹಾರ ಚಿಲ್ಲರೆ ವ್ಯಾಪಾರಿ ಸಂಸ್ಥೆ ಮಸ್ಗ್ರೇವ್‌ನ ಐಟಿ ಕಾರ್ಯಾಚರಣೆಗಳನ್ನು ಸ್ವಯಂಚಾಲಿತಗೊಳಿಸಲು ಎಐ ಮತ್ತು ಕ್ಲೌಡ್ ಸಾಧ್ಯತೆಗಳನ್ನು ಬಳಸಿಕೊಂಡು ಇನ್ಫೋಸಿಸ್ ಮುಂದಾಗಿದೆ. ಈ ಕಾರ್ಯಕ್ಕೆ ಏಳು ವರ್ಷಗಳ ಒಪ್ಪಂದವನ್ನು ಜನವರಿ 31ರಂದು ಮಾಡಿಕೊಂಡಿದೆ.
ಇದನ್ನೂ ಓದಿ: Independence Day 2023: ಐಟಿ ವಲಯ; ಜಗತ್ತೇ ಭಾರತದ ಆಟದ ನಿಲಯ