Site icon Vistara News

Jayanth Varma : ಭಾರತದ ಆರ್ಥಿಕತೆ ತೀರಾ ದುರ್ಬಲವಾಗುತ್ತಿದೆ: ಆರ್‌ಬಿಐ ಹಣಕಾಸು ಸಮಿತಿ ಸದಸ್ಯ ಜಯಂತ್‌ ವರ್ಮಾ

Jayant Varma

#image_title

ನವ ದೆಹಲಿ: ಭಾರತದ ಆರ್ಥಿಕತೆ ಪ್ರಬಲವಾಗಿ ಬೆಳವಣಿಗೆ ಹೊಂದುತ್ತಿದೆ ಹಾಗೂ ಪ್ರಸಕ್ತ ಜಾಗತಿಕ ಅಸ್ಥಿರತೆಯ ನಡುವೆ ಆಶಾಕಿರಣವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ ಸೇರಿದಂತೆ ಪ್ರಮುಖ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಇತ್ತ ಆರ್‌ಬಿಐ ಹಣಕಾಸು ಸಮಿತಿಯ (RBI Monetary policy committee) ಸದಸ್ಯ ಜಯಂತ್‌ ವರ್ಮಾ (Jayant R Varma) ಅವರು, ದೇಶದ ಆರ್ಥಿಕತೆ ತೀರಾ ದುರ್ಬಲವಾಗಿದೆ ಎಂದು ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ 2022-23ರಲ್ಲಿ ಹಣದುಬ್ಬರ ಉನ್ನತ ಮಟ್ಟದಲ್ಲಿ ಇರಲಿದೆ. ಆದರೆ 2023-24ರಲ್ಲಿ ಗಣನೀಯ ಇಳಿಕೆಯಾಗಲಿದೆ. ಹೀಗಿದ್ದರೂ, ಆರ್ಥಿಕ ಪರಿಸ್ಥಿತಿ ತೀರಾ ದುರ್ಬಲವಾಗಿದೆ. ಹಣಕಾಸು ನೀತಿ ಬಿಗಿಯಾಗಿರುವುದರಿಂದ ಬೇಡಿಕೆಯನ್ನು ಹತ್ತಿಕ್ಕಲಾಗಿದೆ ಎಂದು ವರ್ಮಾ ಹೇಳಿದ್ದಾರೆ.

ಸಾಲದ ಇಎಂಐ ಹೆಚ್ಚುತ್ತಿರುವುದರಿಂದ ಗೃಹ ವಲಯದ ಬಜೆಟ್‌ ಮೇಲೆ ಒತ್ತಡ ಉಂಟಾಗಿದೆ. ಖರ್ಚು ವೆಚ್ಚಗಳು ಕುಸಿಯಲಿದೆ. ಜಾಗತಿಕ ಬಿಕ್ಕಟ್ಟಿನ ಪರಿಣಾಮ ರಫ್ತು ಮುಗ್ಗರಿಸಿದೆ. ಬಡ್ಡಿ ದರ ಏರಿಕೆಯ ಪರಿಣಾಮ ಖಾಸಗಿ ಬಂಡವಾಳ ಹೂಡಿಕೆ ಕಠಿಣವಾಗಿದೆ. ಸರ್ಕಾರ ವಿತ್ತೀಯ ಸಂಯೋಜನೆಗೆ ಒತ್ತು ನೀಡಿರುವುದರಿಂದ ಆರ್ಥಿಕತೆಗೆ ಅದರ ಬೆಂಬಲ ಕಡಿಮೆಯಾಗಿದೆ ಎಂದರು.

Exit mobile version