Site icon Vistara News

LIC IPO: ಷೇರು ಲಭಿಸಿರುವುದನ್ನು ಖಾತರಿಪಡಿಸುವುದು ಹೇಗೆ?

ಹೊಸದಿಲ್ಲಿ (LIC IPO): ಎಲ್‌ ಐಸಿಯ ಐಪಿಒ ಮುಕ್ತಾಯವಾಗಿದ್ದು, ಮೇ 12ರಂದು (ಗುರುವಾರ) ಷೇರುಗಳು ಮಂಜೂರಾಗುತ್ತಿವೆ. ಬಂಡವಾಳ ಹಿಂತೆಗೆತ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.

ಎಲ್‌ಐಸಿಯು ಮೇ೪ರಿಂದ ೯ರ ತನಕ ನಡೆಸಿದ ಐಪಿಒದಲ್ಲಿ 20,557 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ. ಪ್ರತಿ ಷೇರಿನ ಬಿಡ್‌ ದರದ ಶ್ರೇಣಿ 902ರೂ.ಗಳಿಂದ 949 ರೂ. ತನಕ ಇತ್ತು. ಅರ್ಹ ಪಾಲಿಸಿದಾರರು ಒಂದು ಷೇರಿಗೆ 60 ರೂ. ರಿಯಾಯಿತಿ ಪಡೆದಿದ್ದಾರೆ. ರಿಟೇಲ್‌ ಹೂಡಿಕೆದಾರರು 45 ರೂ. ರಿಯಾಯಿತಿ ಗಳಿಸಿದ್ದಾರೆ.

ಐಪಿಒದಲ್ಲಿ ಒಟ್ಟಾರೆಯಾಗಿ 2.95 ಪಟ್ಟು ಬಿಡ್‌ ಸಲ್ಲಿಕೆಯಾಗಿದೆ. ಪಾಲಿಸಿದಾರರು 6.12 ಪಟ್ಟು ಮತ್ತು ಉದ್ಯೋಗಿಗಳು 4.4 ಪಟ್ಟು ಬಿಡ್‌ ಸಲ್ಲಿಸಿದ್ದಾರೆ.

ಐಪಿಒದಲ್ಲಿ ಬಿಡ್‌ ಸಲ್ಲಿಸಿದವರು ತಮಗೆ ಷೇರು ಮಂಜೂರಾಗಿದೆಯೇ ಇಲ್ಲವೇ ಎಂಬುದನ್ನು ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಖಾತರಿಪಡಿಸಿಕೊಳ್ಳಬಹುದು.

  1. ಬಿಎಸ್‌ಇಯ ಈ ವೆಬ್‌ಸೈಟ್‌ ತೆರೆಯಿರಿ-https:www.bseindia.com/investors/investors/appli_check.aspx
  2. Issue type ವಿಭಾಗದಲ್ಲಿ Equity ಅನ್ನು ಕ್ಲಿಕ್‌ ಮಾಡಿ.
  3. Issue name ವಿಭಾಗದಲ್ಲಿ ಎಲ್‌ಐಸಿಯನ್ನು ಸೆಲೆಕ್ಟ್‌ ಮಾಡಿ.
  4. ಅಪ್ಲಿಕೇಷನ್‌ ನಂಬರ್‌ ಬರೆಯಿರಿ.
  5. ಪ್ಯಾನ್‌ ಕಾರ್ಡ್‌ ಐಡಿ ಸೇರಿಸಿ.
  6. ” Iam not a Robot’ ಮೇಲೆ ಕ್ಲಿಕ್ ಮಾಡಿ ಸಬ್‌ಮಿಟ್‌ ಒತ್ತಿ. ಬಳಿಕ ಎಲ್‌ಐಸಿ ಷೇರು ಮಂಜೂರಾತಿಯ ಸ್ಥಿತಿಗತಿ ವಿವರ ಸಿಗುತ್ತದೆ.

ಷೇರು ಸಿಗದವರಿಗೆ ಕಟ್ಟಿದ ಹಣ ವಾಪಸ್‌

ಎಲ್‌ಐಸಿ ಐಪಿಒದಲ್ಲಿ ಷೇರುಗಳು ಮಂಜೂರಾಗದಿದ್ದವರಿಗೆ ಅವರು ಬಿಡ್‌ ಸಲುವಾಗಿ ಕಟ್ಟಿದ ಹಣ ಮೇ 13 ರಂದು ಸಿಗಲಿದೆ. ಬ್ಯಾಂಕ್‌ಗಳು ಅವರ ಖಾತೆಗೆ ಜಮೆ ಮಾಡಲಿದೆ. ಮೇ 17ರಂದು ಎಲ್‌ಐಸಿಯ ಷೇರುಗಳು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ನೋಂದಣಿಯಾಗಲಿದೆ.

Exit mobile version