Site icon Vistara News

ಮೇ 4ರಿಂದ LIC IPO: ಷೇರು ಖರೀದಿ ಹೇಗೆ ಮಾಡಬೇಕು? ಇಲ್ಲಿದೆ ವಿವರ

ಸರಕಾರಿ ಸ್ವಾಮ್ಯದ ಜೀವ ವಿಮಾ ನಿಗಮದ ಆರಂಭಿಕ ಷೇರು ಸಾರ್ವಜನಿಕ ಹೂಡಿಕೆ(ಐಪಿಒ)ಯನ್ನು ಮೇ 4ರಂದು ತೆರೆಯಲಾಗುತ್ತಿದೆ. ಭಾರತದ ಅತಿ ದೊಡ್ಡ ಐಪಿಒ ಎಂದು ಬಣ್ಣಿಸಲಾಗಿರುವ ಈ ಆಫರ್‌ ಮೇ 9ರಂದು ಮುಕ್ತಾಯಗೊಳ್ಳಲಿದೆ. ಮೇ 2ರಿಂದ ದೊಡ್ಡ ಹೂಡಿಕೆದಾರರು (ಆಂಕರ್‌ ಇನ್‌ವೆಸ್ಟರ್ಸ್-‌ ₹ 10 ಕೋಟಿಗೂ ಹೆಚ್ಚು ಹೂಡಿಕೆ ಮಾಡುವವರು) ಷೇರುಗಳನ್ನು ಖರೀದಿಸಬಹುದು.
ಎಲ್‌ಐಸಿ ಷೇರುಗಳ ಆರಂಭಿಕ ಮೌಲ್ಯ ₹ 902- ₹ 949 ಇದೆ. ಕಂಪನಿಯು 22.13 ಕೋಟಿ ಷೇರುಗಳನ್ನು ಮಾರಾಟಕ್ಕೆ ಇಟ್ಟಿದ್ದು, ಒಟ್ಟಾರೆ ಐಪಿಒದ ಮೌಲ್ಯ ಸುಮಾರು ₹ 21,000 ಕೋಟಿ. ಇದು ಒಟ್ಟು ಕಂಪನಿಯ ಮೌಲ್ಯದ 3.5% ಎಂದು ಊಹಿಸಲಾಗಿದೆ.
ಈ ಲಿಸ್ಟಿಂಗ್‌ ಬಳಿಕ, ಎಲ್‌ಐಸಿ ದೇಶದ ಐದನೇ ಅತಿ ದೊಡ್ಡ ಸಂಸ್ಥೆ ಎಂದು ಎನಿಸಿಕೊಳ್ಳಲಿದೆ. ಎಲ್‌ಐಸಿಯ ಒಟ್ಟಾರೆ ಮೌಲ್ಯ ಸುಮಾರು ₹ 6 ಲಕ್ಷ ಕೋಟಿ.
ಈ ಮೊದಲು ಇದರ ಮೂರು ಪಟ್ಟು ಗಾತ್ರದ ಐಪಿಒ (ಸುಮಾರು ₹ 60,000 ಕೋಟಿ) ತೆರೆಯಲು ಸರಕಾರದ ಉದ್ದೇಶಿಸಿತ್ತು. ಮಾರುಕಟ್ಟೆಯ ಸ್ಥಿತಿಗತಿ ಅವಲಂಬಿಸಿ ಗಾತ್ರವನ್ನು ಕಡಿತಗೊಳಿಸಲಾಗಿದೆ.

ಪಾಲಿಸಿ ಹೊಂದಿರುವವರಿಗೆ ರಿಯಾಯಿತಿ

ನೀವು ಎಲ್‌ಐಸಿ ಪಾಲಿಸಿ ಹೊಂದಿದ್ದು, ಷೇರು ಖರೀದಿಸಲು ಬಯಸುವವರಾಗಿದ್ದರೆ, ನಿಮಗೆ ಪ್ರತಿ ಷೇರಿನ ಬೆಲೆಯಲ್ಲಿ ₹ 60 ರಿಯಾಯಿತಿ ಸಿಗಲಿದೆ. ಎಲ್‌ಐಸಿ ಸಿಬ್ಬಂದಿಗಳಿಗೆ, ಮೊದಲ ದೊಡ್ಡ ಹೂಡಿಕೆದಾರರಿಗೆ ₹ 45 ರಿಯಾಯಿತಿ ಸಿಗುತ್ತದೆ.
22.13 ಕೋಟಿ ಷೇರುಗಳಲ್ಲಿ ಪಾಲಿಸಿ ಹೊಂದಿದವರಿಗೆ ಶೇ.10ರಷ್ಟು ಮೀಸಲಾಗಿವೆ. ಸಿಬ್ಬಂದಿಗಾಗಿ ಮೀಸಲಿಟ್ಟಿರುವುದು ಈಕ್ವಿಟಿ ಬಂಡವಾಳದ ಶೇ.5. ಇದು ಕ್ರಮವಾಗಿ ₹ 2.21 ಕೋಟಿ ಹಾಗೂ ₹ 15.81 ಕೋಟಿ ಆಗುತ್ತದೆ.
ಇತರ ಹೂಡಿಕೆದಾರರಲ್ಲಿ ʼಅರ್ಹ ಸಾಂಸ್ಥಿಕ ಕೊಳ್ಳುಗʼ (ಕ್ಯುಐಬಿ)ರಿಗೆ 9.88 ಕೋಟಿ ಷೇರುಗಳು ಹಾಗೂ ಸಾಂಸ್ಥಿಕರಲ್ಲದ ಕೊಳ್ಳುಗರಿಗೆ 2.96 ಕೋಟಿ ಷೇರುಗಳು ಮೀಸಲಾಗಿವೆ.

ನೀವು ಕೊಳ್ಳಬೇಕಿದ್ದರೆ ಏನು ಮಾಡಬೇಕು?

ಇದನ್ನೂ ಓದಿ: ಏರ್‌ ಏಷ್ಯಾವನ್ನೂ ಖರೀದಿಸಲು ಮುಂದಾದ TATA: ಪೂರ್ಣ ಮಾಲೀಕತ್ವ ಕುರಿತು ಪ್ರಸ್ತಾಪ

Exit mobile version