ಮುಂಬಯಿ: ಎಲ್‌ಐಸಿ ಷೇರುಗಳಲ್ಲಿ ಮಂಗಳವಾರ ಬೆಳಗ್ಗೆ ಕೆಲವೇ ಕ್ಷಣಗಳಲ್ಲಿ ಹೂಡಿಕೆದಾರರಿಗೆ 42,500 ಕೋಟಿ ರೂ. ನಷ್ಟ ಸಂಭವಿಸಿತು.
ಎಲ್‌ಐಸಿಯ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ರೂ.ಗಳಿಂದ 5.52 ಲಕ್ಷ ಕೋಟಿ ರೂ.ಗೆ ಕುಸಿಯಿತು.
ಐಪಿಒ ದರದ ಪ್ರಕಾರ ಎಲ್‌ಐಸಿಯ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂ.ಗಳಾಗಿದೆ. ಇದು ಹಿಂದುಸ್ತಾನ್ ಯುನಿಲಿವರ್ (5.33 ಲಕ್ಷ ಕೋಟಿ ರೂ.) ಮತ್ತು ಐಸಿಐಸಿಐ ಬ್ಯಾಂಕ್ (4.85ಲಕ್ಷ ಕೋಟಿ ರೂ.)ಗಿಂತ ಹೆಚ್ಚು. ಇನ್ಫೋಸಿಸ್‌ಗಿಂತ (6.36 ಲಕ್ಷ ಕೋಟಿ ರೂ.) ಕಡಿಮೆ. ಹೀಗಿದ್ದರೂ, ಕೆಲವು ನಿಮಿಷಗಳಲ್ಲಿ ಎಲ್ ಐಸಿಯ ಷೇರು ಮಾರುಕಟ್ಟೆ ಮೌಲ್ಯ 5.52 ಲಕ್ಷ ಕೋಟಿ ರೂ.ಗೆ ಇಳಿಯಿತು. ಹೀಗಿದ್ದರೂ, ಮಾರುಕಟ್ಟೆ ಮೌಲ್ಯದಲ್ಲಿ ಟಾಪ್ 5 ಭಾರತೀಯ ಕಂಪನಿಗಳಲ್ಲಿ ಎಲ್‌ಐಸಿ ಕೂಡ ಒಂದಾಗಿದೆ.
ಷೇರು ಮಾರುಕಟ್ಟೆ ಮೌಲ್ಯದಲ್ಲಿ ಟಾಪ್ 5
ರಿಲಯನ್ಸ್ ಇಂಡಸ್ಟ್ರೀಸ್ | 16.66 ಲಕ್ಷ ಕೋಟಿ ರೂ. |
ಟಿಸಿಎಸ್ | 12.34 ಲಕ್ಷ ಕೋಟಿ ರೂ. |
ಎಚ್‌ಡಿಎಫ್‌ಸಿ ಬ್ಯಾಂಕ್ | 7.21 ಲಕ್ಷ ಕೋಟಿ ರೂ. |
ಇನ್ಫೋಸಿಸ್ | 6.36 ಲಕ್ಷ ಕೋಟಿ ರೂ. |
ಎಲ್‌ಐಸಿ | 5.52 ಲಕ್ಷ ಕೋಟಿ ರೂ. |
ಇದನ್ನೂ ಓದಿ: ಎಲ್‌ಐಸಿ ಷೇರು 867 ರೂ.ಗೆ ವಹಿವಾಟು ಶುರು