ಎಲ್‌ಐಸಿ ಷೇರುದಾರರಿಗೆ 42,500 ಕೋಟಿ ರೂ. ನಷ್ಟ - Vistara News

LIC ಐಪಿಓ

ಎಲ್‌ಐಸಿ ಷೇರುದಾರರಿಗೆ 42,500 ಕೋಟಿ ರೂ. ನಷ್ಟ

ಷೇರು ಪೇಟೆಯಲ್ಲಿ ಎಲ್‌ಐಸಿ ಷೇರು ಮಂಗಳವಾರ ನೋಂದಣಿಯಾಗಿದ್ದು, ಐಪಿಒ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ ಷೇರುದಾರರಿಗೆ ನಷ್ಟವಾಗಿದ್ದರೂ, 5 ನೇ ಮೌಲ್ಯಯುತ ಕಂಪನಿ ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಎಲ್‌ಐಸಿ ಷೇರುಗಳಲ್ಲಿ ಮಂಗಳವಾರ ಬೆಳಗ್ಗೆ ಕೆಲವೇ ಕ್ಷಣಗಳಲ್ಲಿ ಹೂಡಿಕೆದಾರರಿಗೆ 42,500 ಕೋಟಿ ರೂ. ನಷ್ಟ ಸಂಭವಿಸಿತು.

ಎಲ್‌ಐಸಿಯ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ರೂ.ಗಳಿಂದ 5.52 ಲಕ್ಷ ಕೋಟಿ ರೂ.ಗೆ ಕುಸಿಯಿತು.
ಐಪಿಒ ದರದ ಪ್ರಕಾರ ಎಲ್‌ಐಸಿಯ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂ.ಗಳಾಗಿದೆ. ಇದು ಹಿಂದುಸ್ತಾನ್‌ ಯುನಿಲಿವರ್‌ (5.33 ಲಕ್ಷ ಕೋಟಿ ರೂ.) ಮತ್ತು ಐಸಿಐಸಿಐ ಬ್ಯಾಂಕ್‌ (4.85ಲಕ್ಷ ಕೋಟಿ ರೂ.)ಗಿಂತ ಹೆಚ್ಚು. ಇನ್ಫೋಸಿಸ್‌ಗಿಂತ (6.36 ಲಕ್ಷ ಕೋಟಿ ರೂ.) ಕಡಿಮೆ. ಹೀಗಿದ್ದರೂ, ಕೆಲವು ನಿಮಿಷಗಳಲ್ಲಿ ಎಲ್‌ ಐಸಿಯ ಷೇರು ಮಾರುಕಟ್ಟೆ ಮೌಲ್ಯ 5.52 ಲಕ್ಷ ಕೋಟಿ ರೂ.ಗೆ ಇಳಿಯಿತು. ಹೀಗಿದ್ದರೂ, ಮಾರುಕಟ್ಟೆ ಮೌಲ್ಯದಲ್ಲಿ ಟಾಪ್‌ 5 ಭಾರತೀಯ ಕಂಪನಿಗಳಲ್ಲಿ ಎಲ್‌ಐಸಿ ಕೂಡ ಒಂದಾಗಿದೆ.

ಷೇರು ಮಾರುಕಟ್ಟೆ ಮೌಲ್ಯದಲ್ಲಿ ಟಾಪ್‌ 5

ರಿಲಯನ್ಸ್‌ ಇಂಡಸ್ಟ್ರೀಸ್‌16.66 ಲಕ್ಷ ಕೋಟಿ ರೂ.
ಟಿಸಿಎಸ್‌ 12.34 ಲಕ್ಷ ಕೋಟಿ ರೂ.
ಎಚ್‌ಡಿಎಫ್‌ಸಿ ಬ್ಯಾಂಕ್‌7.21 ಲಕ್ಷ ಕೋಟಿ ರೂ.
ಇನ್ಫೋಸಿಸ್‌ 6.36 ಲಕ್ಷ ಕೋಟಿ ರೂ.
ಎಲ್‌ಐಸಿ 5.52 ಲಕ್ಷ ಕೋಟಿ ರೂ.

ಇದನ್ನೂ ಓದಿ: ಎಲ್‌ಐಸಿ ಷೇರು 867 ರೂ.ಗೆ ವಹಿವಾಟು ಶುರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

LIC ಐಪಿಓ

ಹೂಡಿಕೆದಾರರಿಗೆ ಎಲ್‌ಐಸಿ ಷೇರು ಕಲಿಸಿ‌ದ ಹೊಸ ಪಾಠ!

ಬಹುನಿರೀಕ್ಷಿತ ಎಲ್‌ ಐಸಿ ಐಪಿಒ ಮುಗಿದು ಷೇರುಗಳು ಈಗ ಸೆಕೆಂಡರಿ ಮಾರುಕಟ್ಟೆಯಲ್ಲಿ ವ್ಯವಹಾರಕ್ಕೆ ಲಭ್ಯವಿದೆ. ಲಕ್ಷಾಂತರ ಹೊಸ ಹೂಡಿಕೆದಾರರಿಗೆ ಅನೂಹ್ಯ ಪಾಠಗಳನ್ನೂ ಕಲಿಸಿಕೊಟ್ಟಿದೆ! ಅದೇನು?

VISTARANEWS.COM


on

Koo

ಬೆಂಗಳೂರು: “ಹೂಡಿಕೆ ಸರಳ, ಆದರೆ ಸುಲಭವಲ್ಲʼ ಎನ್ನುತ್ತಾರೆ ಅಮೆರಿಕದ ವಿಶ್ವವಿಖ್ಯಾತ ಹೂಡಿಕೆದಾರ ವಾರೆನ್‌ ಬಫೆಟ್‌!
ಅತ್ಯಂತ ಸ್ಮಾರ್ಟ್‌ ನಿರ್ಧಾರಗಳ ಮೂಲಕ ಷೇರು ಪೇಟೆಯಲ್ಲಿ ಹೂಡಿಕೆ ಮಾಡುತ್ತಾ 104 ಶತಕೋಟಿ ಡಾಲರ್‌ (ಅಂದಾಜು 8 ಲಕ್ಷ ಕೋಟಿ ರೂ.) ಸಂಪತ್ತು ಗಳಿಸಿದವರು ಬಫೆಟ್.‌ ಅವರ ಮಾತಿನ ಮರ್ಮವನ್ನು ಎಲ್‌ಐಸಿ ಐಪಿಒ ಹಂಗಾಮದ ಹಿನ್ನೆಲೆಯಲ್ಲಿ ಸ್ಮರಿಸಿಕೊಳ್ಳಬಹುದು.

ಎಲ್‌ಐಸಿ ಐಪಿಒದಲ್ಲಿ ಲಕ್ಷಾಂತರ ಪಾಲಿಸಿದಾರರು ಹಾಗೂ ರಿಟೇಲ್‌ ಹೂಡಿಕೆದಾರರು ಭಾಗವಹಿಸಿದ್ದಾರೆ. ಒಟ್ಟಾರೆ ಮೂರು ಪಟ್ಟು ಹೆಚ್ಚಿನ ಬಿಡ್‌ ಸಲ್ಲಿಕೆಯೂ ಆಗಿತ್ತು. ಅದರಲ್ಲೂ ಪಾಲಿಸಿದಾರರು ಎಲ್ಲರಿಗಿಂತ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೆ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಐಪಿಒ ದರಕ್ಕಿಂತಲೂ (949ರೂ.) ಕಡಿಮೆ ದರದಲ್ಲಿ (872ರೂ.) ವಹಿವಾಟು ಆರಂಭವಾಗಿ, ದಿನದ ಕೊನೆಗೆ ೮೭೫ ರೂ.ಗೆ ವಹಿವಾಟು ಮುಕ್ತಾಯಗೊಳಿಸಿತು. ಅಂದರೆ ದಿನದ ಕೊನೆಗೂ ಐಪಿಒ ದರಕ್ಕಿಂತ 74 ರೂ. ಕಡಿಮೆಯೇ ಇತ್ತು. ಹೀಗಾಗಿ ಅನೇಕ ಮಂದಿಗೆ ಎಲ್‌ ಐಸಿ ಷೇರು ಸೆಕೆಂಡರಿ ಮಾರುಕಟ್ಟೆಗೆ ಪ್ರವೇಶಿಸಿದ ದಿನ ನಷ್ಟವಾಯಿತು. ಆದ್ದರಿಂದ ಮೊದಲ ದಿನವೇ ಲಾಭ ಮಾಡಿಕೊಳ್ಳಬೇಕು. ಎಲ್‌ ಐಸಿ ಷೇರು ದರ ಕೂಡಲೇ ಜಿಗಿದು ತಕ್ಷವೇ ಲಾಭ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದವರಿಗೆ ನಿರಾಸೆ ಉಂಟಾಯಿತು.

ಮತ್ತೊಂದು ಕಡೆ ಷೇರುಪೇಟೆಯ ತಜ್ಞರು, “ನಿರಾಸೆಪಡಬೇಕಿಲ್ಲ, ಎಲ್‌ ಐಸಿ ಸುಭದ್ರ ಅಡಿಪಾಯ ಇರುವ, 5ನೇ ಅತಿ ದೊಡ್ಡ ಷೇರು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿ. ಆದ್ದರಿಂದ ಒಳ್ಳೆಯ ದಿನಗಳು ಬರಲಿದೆ, ಷೇರು ದರ ಭವಿಷ್ಯದಲ್ಲಿ ವೃದ್ಧಿಸಿ ಲಾಭದಾಯಕವಾಗಲಿದೆ ʼʼ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.


ಹೀಗಿದ್ದರೂ, ಪಾಲಿಸಿದಾರರು ಮತ್ತು ರಿಟೇಲ್‌ ಹೂಡಿಕೆದಾರರಿಗೆ ಅನುಕ್ರಮವಾಗಿ 60 ರೂ. ಹಾಗೂ 45 ರೂ.ಗಳ ಡಿಸ್ಕೌಂಟ್‌ ಇತ್ತು. ಜತೆಗೆ ಮಧ್ಯಂತರ ಅವಧಿಯಲ್ಲಿ ಒಂದು ಹಂತದಲ್ಲಿ ಎಲ್‌ ಐಸಿ ಷೇರು 918ರೂ. ತನಕವೂ ದರ ಏರಿಸಿಕೊಂಡಿತ್ತು. ಇದರ ಪ್ರಯೋಜನ ಪಡೆದು ಷೇರನ್ನು ಮಾರಾಟ ಮಾಡಿ ಲಾಭ ಮಾಡಿಕೊಂಡವರೂ ಇದ್ದರು!
ಎಲ್‌ಐಸಿ ಐಪಿಒದಲ್ಲಿ ಸ್ಥಳೀಯರು ಉತ್ಸಾಹದಿಂದ ಭಾರಿ ಸ್ಪಂದಿಸಿದ್ದರೂ, ವಿದೇಶಿ ಹೂಡಿಕೆದಾರರು ಅಂಥ ಆಸಕ್ತಿಯನ್ನು ವ್ಯಕ್ತಪಡಿಸಿರಲಿಲ್ಲ. ಹೀಗಿದ್ದರೂ, ಮಾರುಕಟ್ಟೆಯ ಸದ್ಯದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಎಲ್‌ಐಸಿ ಐಪಿಒ ಇಡೀ ಮಾರುಕಟ್ಟೆಗೆ ಹೊಸ ಚೈತನ್ಯ ತುಂಬಿದೆ ಎಂದರೆ ಅತಿಶಯವಲ್ಲ.

10 ಲಕ್ಷಕ್ಕೂ ಹೆಚ್ಚು ಹೊಸ ಹೂಡಿಕೆದಾರರು
ಎಲ್‌ಐಸಿ ಐಪಿಒದಲ್ಲಿ ಎಲ್ಲ ಕೆಟಗರಿಯಿಂದ ಒಟ್ಟು 73 ಲಕ್ಷ ಹೂಡಿಕೆದಾರರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 10.85 ಲಕ್ಷ ಮಂದಿ ಹೊಸ ಹೂಡಿಕೆದಾರರು ಇದ್ದರು. ಈ ಪೈಕಿ 7 ಲಕ್ಷ ಮಂದಿಗೆ ಷೇರುಗಳು ಮಂಜೂರಾಗಿದೆ. ಆದ್ದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು, ಆದಾಯ ಗಳಿಸಬೇಕು, ಸಂಪತ್ತನ್ನು ವೃದ್ಧಿಸಬೇಕು ಎಂಬ ಪ್ರೇರಣೆಗೆ ಎಲ್‌ಐಸಿ ಐಪಿಒ ಪ್ರೇರಣೆ ನೀಡಿರುವುದು ಸ್ವಾಗತಾರ್ಹ. ಆದರೆ ಹೂಡಿಕೆಯ ಜತೆಗೆ ಅದಕ್ಕೆ ಸಂಬಂಧಿಸಿದ ತಿಳುವಳಿಕೆಯನ್ನು ಪಡೆದುಕೊಳ್ಳುವುದು ಮುಖ್ಯ ಎಂಬ ಪಾಠವನ್ನು ಎಲ್‌ಐಸಿ ಐಪಿಒ ಕಲಿಸಿಕೊಟ್ಟಿದೆ.

ಅನಿರೀಕ್ಷಿತ ಫಲಿತಾಂಶ ಸಹಜ
ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿಯೇ 20,500 ಕೋಟಿ ರೂ. ಮೆಗಾ ಗಾತ್ರದ ಐಪಿಒ ನಡೆದಿರಲಿಲ್ಲ. ಎಲ್‌ ಐಸಿಯಂತೂ ಮನೆಮಾತಾಗಿದೆ. ಆದ್ದರಿಂದ ಪಾಲಿಸಿದಾರರು, ರಿಟೇಲ್‌ ಹೂಡಿಕೆದಾರರು ಹಾಗೂ ಸ್ವತಃ ಎಲ್‌ ಐಸಿಯ ಉದ್ಯೋಗಿಗಳು ಅತ್ಯುತ್ಸಾಹದಿಂದ ಐಪಿಒದಲ್ಲಿ ಭಾಗವಹಿಸಿದ್ದರು. ಎಲ್ಲವೂ ಅಂದುಕೊಂಡಂತೆ ಇರುತ್ತಿದ್ದರೆ ಈಗ ಎಲ್‌ಐಸಿ ಷೇರು ದರ ಲಾಭದಲ್ಲಿ ಇರಬೇಕಿತ್ತು. ಆದರೆ ಷೇರು ಪೇಟೆಯಲ್ಲಿ ಅನಿರೀಕ್ಷಿತ ಫಲಿತಾಂಶಗಳನ್ನು ನಿರೀಕ್ಷಿಸಬಹುದು! ಅದಕ್ಕೆ ಸಜ್ಜಾಗಿರಬೇಕು. ಎಷ್ಟೇ ದೊಡ್ಡ ಮಾರುಕಟ್ಟೆ ಮೌಲ್ಯ, ಗ್ರಾಹಕರ ವಿಶ್ವಾಸ, ದೊಡ್ಡ ಜಾಲ ಎಲ್ಲವೂ ಇರಬಹುದು. ಆದರೆ ಷೇರುಪೇಟೆಯಲ್ಲಿ ಏರಿಳಿತ ಸಾಮಾನ್ಯ. ಆದರೆ ಒಳ್ಳೆಯ ಬುನಾದಿ, ವ್ಯವಹಾರ ನಡೆಸುವ ಕಂಪನಿಗಳ ಷೇರು ಖರೀದಿಯಿಂದ ಲಾಭದಾಯಕವಾಗುತ್ತದೆ ಎಂಬುದೂ ನಿಜ! ಆದ್ದರಿಂದ ನಿರಾಸೆ ಅನಗತ್ಯ.

ಹೂಡಿಕೆದಾರರಿಗೆ ಆತುರ ಸಲ್ಲದು
ವಾಸ್ತವವಾಗಿ ಕೆಲ ಷೇರು ದಲ್ಲಾಳಿಗಳು ತಮ್ಮ ಗ್ರಾಹಕರಿಗೆ ಎಲ್‌ಐಸಿ ಐಪಿಒ ಬದಲಿಗೆ ಬಿಎಸ್‌ಇ, ಎನ್‌ಎಸ್‌ಇನಲ್ಲಿ ನೋಂದಣಿಯಾದ ಬಳಿಕ ದರವನ್ನು ನೀಡಿ ಖರೀದಿಸುವಂತೆ ಸಲಹೆ ನೀಡಿದ್ದರು. ಆದರೆ ಲಕ್ಷಾಂತರ ಮಂದಿ ಐಪಿಒ ಮೇಲೆ ಭರವಸೆ ಇಟ್ಟಿದ್ದರು. ಜತೆಗೆ ಹೂಡಿಕೆ ಮಾಡುವುದು ಸರಳ. ಈಗಂತೂ ಸ್ಮಾರ್ಟ್‌ ಫೋನ್‌, ಇಂಟರ್‌ ನೆಟ್‌ ಇದ್ದರೆ ಬೆರಳ ತುದಿಯಲ್ಲೇ ಹೂಡಿಕೆ ಮಾಡಬಹುದು. ಖಾತೆಯಲ್ಲಿ ಹಣ ಇದ್ದರೆ ಸಾಕು. ಈಗಲೂ ನಿರಾಸೆ ಬೇಡ. ಎಲ್‌ಐಸಿ ಷೇರುಗಳು ಕಾಲಾಂತರದಲ್ಲಿ ಉತ್ತಮ ಪ್ರತಿಫಲ ನೀಡಬಹುದು. ಆಗ ಷೇರುಗಳನ್ನು ಮಾರಾಟ ಮಾಡಬಹುದು. ಆದರೆ ಮನುಷ್ಯರಿಗೆ ಆದಷ್ಟು ಬೇಗ ಲಾಭ ಮಾಡಬೇಕು, ಅನುಭವಿಸಬೇಕು ಎಂಬ ಆತುರ ಸಹಜ. ಅದು ಕೆಲವೊಮ್ಮೆ ಸವಾಲಾಗುತ್ತದೆ. ಷೇರು ವ್ಯವಹಾರದಲ್ಲಿ ತಾಳ್ಮೆ, ಚತುರ ನಡೆ, ದೀರ್ಘಕಾಲೀನ ಶಿಸ್ತು ಅವಶ್ಯಕ. ಈ ಮಹತ್ವದ ಪಾಠವನ್ನು ಎಲ್‌ಐಸಿ ಐಪಿಒ ಲಕ್ಷಾಂತರ ಹೊಸ ಹೂಡಿಕೆದಾರರಿಗೆ ಕಲಿಸಿಕೊಟ್ಟಿದೆ!

ಹೂಡಿಕೆ ಅಭ್ಯಾಸವಾದರೆ ಕಷ್ಟವೇನಲ್ಲ
ಷೇರು, ಮ್ಯೂಚುವಲ್‌ ಫಂಡ್‌, ಬಾಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದು ಆರಂಭಿಕ ಹಂತದಲ್ಲಿ ಆಸೆ-ನಿರಾಸೆ ತಂದರೂ, ನಿಯಮಿತವಾಗಿ ಹೂಡಿಕೆಯ ಶಿಸ್ತನ್ನು ರೂಢಿಸಿದರೆ ಬಳಿಕ ಕಷ್ಟವಾಗುವುದಿಲ್ಲ. ಸಹಜ ಸ್ವಭಾವವಾಗಿ ಒಲಿಯುತ್ತದೆ. ಜೀವನದ ಭಾಗವಾಗುತ್ತದೆ. ಆದರೆ ಗುರಿ ಸ್ಪಷ್ಟವಾಗಿರಬೇಕು. ಸ್ವಂತ ಮನೆ, ಆಸ್ತಿ ಖರೀದಿ, ಮಕ್ಕಳ ಉನ್ನತ ಶಿಕ್ಷಣ, ವಿವಾಹ, ವಿದೇಶ ಪ್ರವಾಸ, ಾರೋಗ್ಯ ವೆಚ್ಚ, ನಿವೃತ್ತಿಯ ನಂತರದ ಬದುಕಿನ ಆರ್ಥಿಕ ಭದ್ರತೆ ಇತ್ಯಾದಿ ಪ್ರಮುಖ ಗುರಿಗಳಿಗೆ ಹೂಡಿಕೆ ಅಗತ್ಯ. ಹೂಡಿಕೆ ಇಲ್ಲದೆ ಇವುಗಳನ್ನು ಸಮರ್ಪಕವಾಗಿ ನಿಭಾಯಿಸುವುದು ಕಷ್ಟ.

ಹೂಡಿಕೆ ಕುರಿತ ಮಾಹಿತಿ ಸುಲಭ ಲಭ್ಯ
ಷೇರು ಮಾರುಕಟ್ಟೆ, ಮ್ಯೂಚುವಲ್‌ ಫಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳುವುದು ಈಗ ಸುಲಭ. ಇಂಟರ್‌ನೆಟ್‌ನಲ್ಲಿ ಹುಡುಕಾಡಿದರೆ ಸಾವಿರಾರು ಬ್ಲಾಗ್‌ ಗಳು, ವೆಬ್‌ ಸೈಟ್‌ಗಳು, ಯೂಟ್ಯೂಬ್‌ ನಲ್ಲಿ ಅಸಂಖ್ಯಾತ ವಿಡಿಯೊಗಳು ಹೂಡಿಕೆ ಬಗ್ಗೆ ಮಾಹಿತಿ ನೀಡುತ್ತವೆ. ಪತ್ರಿಕೆ, ಟಿವಿ ವಾಹಿನಿಗಳೂ ವಿವರ ಒದಗಿಸುತ್ತವೆ. ಎಲ್‌ ಐಸಿ ಐಪಿಒ ಬಗ್ಗೆಯೂ ಈ ರೀತಿಯಲ್ಲಿ ಜನರಿಗೆ ಮಾಧ್ಯಮಗಳ ಮೂಲಕ ಮಾಹಿತಿಗಳು ಲಭಿಸಿತ್ತು. ಆದರೆ ಎಲ್ಲರಿಗೂ, ಅಥವಾ ಯಾರೊಬ್ಬರಿಗೂ ರಾತ್ರೋರಾತ್ರಿ ಆರ್ಥಿಕ ತಜ್ಞರಾಗಲು ಸಾಧ್ಯವಾಗುವುದಿಲ್ಲ. ವರ್ಷಗಟ್ಟಲೆ ಅಧ್ಯಯನ, ಅವಲೋಕನಗಳಿಂದ, ಚಿಂತನ-ಮಂಥನ ಹಾಗೂ ಪ್ರಾಯೋಗಿಕ ಹೂಡಿಕೆಯಿಂದ ಮಾತ್ರ ಅರಿವು ಸಾಧ್ಯ. ಇದು ಎಲ್‌ಐಸಿ ಐಪಿಒ ಕಲಿಸಿದ ಮತ್ತೊಂದು ಅಮೂಲ್ಯವಾದ ಪಾಠ.

ಇದನ್ನೂ ಓದಿ: ಎಲ್‌ಐಸಿ ಷೇರು 872 ರೂ.ಗೆ ವಹಿವಾಟು ಶುರು

Continue Reading

LIC ಐಪಿಓ

LIC ಷೇರುಗಳು ದೀರ್ಘಾವಧಿಯ ಹೂಡಿಕೆಗೆ ಒಳ್ಳೆಯದೇ?

ಎಲ್‌ಐಸಿಯ ಷೇರುಗಳು ದೀರ್ಘಕಾಲೀನ ಹೂಡಿಕೆಗೆ ಲಾಭದಾಯಕವೇ ಅಥವಾ ಮಾರಾಟ ಮಾಡಬಹುದೇ ಎಂಬ ಪ್ರಶ್ನೆಗೆ, ʼವಿಸ್ತಾರ ಡಿಜಿಟಲ್‌ ನ್ಯೂಸ್‌ ʼಗೆ ತಜ್ಞ ನರಸಿಂಹ ಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

VISTARANEWS.COM


on

Koo

ಮುಂಬಯಿ: ಹೀಗೊಂದು ಪ್ರಶ್ನೆ ಇದೀಗ ಕಾಡುತ್ತಿದೆ. ಐಪಿಒ ಬಳಿಕ ಎಲ್‌ಐಸಿ ಷೇರು ಮಾರುಕಟ್ಟೆಯಲ್ಲಿ ದುರ್ಬಲವಾಗಿ ಮಂಗಳವಾರ ನೋಂದಣಿಯಾಗಿದೆ. ಇದರ ಪರಿಣಾಮ ರಿಟೇಲ್‌ ಹೂಡಿಕೆದಾರರು, ಎಲ್‌ ಐಸಿಯ ಉದ್ಯೋಗಿಗಳು, ಪಾಲಿಸಿದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ನಿರೀಕ್ಷಿತ ಲಾಭವನ್ನು ನೀಡಿಲ್ಲ. ಐಪಿಒದಲ್ಲಿ ಷೇರು ಖರೀದಿಸಿವರೀಗ, ಸ್ವಲ್ಪ ತಡೆದು ಖರೀದಿಸಬಹುದಿತ್ತು ಎಂದುಕೊಂಡರೆ ಅಚ್ಚರಿ ಇಲ್ಲ. ಹಾಗಾದರೆ ದೀರ್ಘಾವಧಿಗೆ ಎಲ್‌ ಐಸಿ ಷೇರುಗಳು ಹೂಡಿಕೆದಾರರಿಗೆ ಲಾಭದಾಯಕವೇ?

ಬಿಎಸ್‌ಇನಲ್ಲಿ ಮಂಗಳವಾರ ಬೆಳಗ್ಗೆ 867ರೂ.ಗೆ ಎಲ್‌ಐಸಿ ಷೇರು ತನ್ನ ವಹಿವಾಟು ಆರಂಭಿಸಿತ್ತು. ಐಪಿಒದಲ್ಲಿ 949 ರೂ. ನಿಗದಿಯಾಗಿತ್ತು. ಹೀಗಾಗಿ 82 ರೂ. ಅಥವಾ ಶೇ.8.67ರ ನಷ್ಟದೊಂದಿಗೆ ವಹಿವಾಟು ಆರಂಭವಾಯಿತು. ಐಪಿಒದಲ್ಲಿ ಭಾಗವಹಿಸಿದ್ದ ಎಲ್ಲ ವರ್ಗದ ಹೂಡಿಕೆದಾರರಿಗೆ ನಷ್ಟವಾಯಿತು. ಆದರೆ ನಷ್ಟದ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ಮುಖ್ಯವಾಗಿ ಸಾಂಸ್ಥಿಕ ಹೂಡಿಕೆದಾರರಿಗೆ ಹೆಚ್ಚು ನಷ್ಟವಾಗಿದೆ. ಪಾಲಿಸಿದಾರರಿಗೆ ಪ್ರತಿ ಷೇರಿನಲ್ಲಿ 60 ರೂ. ಹಾಗೂ ರಿಟೇಲ್‌ ಷೇರುದಾರರಿಗೆ ಪ್ರತಿ ಷೇರಿಗೆ 45 ರೂ. ಡಿಸ್ಕೌಂಟ್‌ ನೀಡಿದ್ದರಿಂದ ಹಾಗೂ ಮಂಗಳವಾರ ಷೇರು ಮಾರುಕಟ್ಟೆ ಸೂಚ್ಯಂಕ ಚೇತರಿಸಿದ್ದರಿಂದ ನಷ್ಟದ ಪ್ರಮಾಣ ಕಡಿಮೆಯಾಯಿತು.

ಡಿವಿಡೆಂಡ್‌, ಮೌಲ್ಯ ಗಳಿಕೆ ನಿರೀಕ್ಷೆ
“ಕೋವಿಡ್‌-19 ಬಿಕ್ಕಟ್ಟು ಕಾಣಿಸಿದ ಆರಂಭದ ದಿನಗಳಲ್ಲಿ ವಿಮೆ ಕಂಪನಿಗಳ ಷೇರುಗಳು ಜಿಗಿದಿತ್ತು. ಏಕೆಂದರೆ ಆಗ ವಿಮೆ ಖರೀದಿಯ ಭರಾಟೆಯೂ ಇತ್ತು. ಆದರೆ ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ತಗ್ಗಿದೆ. ಜತೆಗೆ ವಿಮೆ ಕಂಪನಿಗಳ ಷೇರು ದರಗಳೂ ಇಳಿದಿವೆ ” ಎಂದು “ವಿಸ್ತಾರ ಡಿಜಿಟಲ್‌ ನ್ಯೂಸ್‌ʼಗೆ ಬೆಂಗಳೂರಿನ ಷೇರು ಮಾರುಕಟ್ಟೆ ತಜ್ಞ ನರಸಿಂಹ ಕುಮಾರ್‌ ಎಂ ತಿಳಿಸಿದ್ದಾರೆ.

ಸಾಮಾನ್ಯವಾಗಿ ಸಾರ್ವಜನಿಕ ವಲಯದ ಕಂಪನಿಗಳು, ಬ್ಯಾಂಕ್‌ ಗಳು ಷೇರುದಾರರಿಗೆ ಉತ್ತಮ ಮೊತ್ತದ ಡಿವಿಡೆಂಡ್‌ ನೀಡುತ್ತವೆ. ಈ ದೃಷ್ಟಿಯಿಂದ ಎಲ್‌ ಐಸಿ ಷೇರುಗಳು ಆಗಬಹುದು. ಆದರೆ ಅಲ್ಪಕಾಲೀನವಾಗಿ ಲಾಭ ಮಾಡಬೇಕು ಎಂದರೆ ಎಲ್‌ ಐಸಿ ಷೇರುಗಳು ಸೂಕ್ತವಲ್ಲ. ಹೀಗಿದ್ದರೂ, ಉತ್ತಮ ಬುನಾದಿ ಹೊಂದಿರುವ ಸಂಸ್ಥೆಯಾದ್ದರಿಂದ ಷೇರುಗಳಿಗೆ ಭವಿಷ್ಯದ ದಿನಗಳಲ್ಲಿ ಒಳ್ಳೆಯ ಮೌಲ್ಯ ಸಿಗಬಹುದು ಎನ್ನುತ್ತಾರೆ ಅವರು.

ಖಾಸಗಿ ವಲಯದ ವಿಮೆ ಕಂಪನಿಗಳ ಸ್ಪರ್ಧೆಯೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದರಿಂದ ಭವಿಷ್ಯದಲ್ಲಿ ಎಲ್‌ ಐಸಿ ಈ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎಂಬುದೂ ಷೇರುಗಳ ದರದ ಮೇಲೆ ಪ್ರಭಾವ ಬೀರಲಿದೆ.
ವಿಮೆ ಕಂಪನಿಗಳ ಷೇರುಗಳು ಆಟೊಮೊಬೈಲ್‌, ಎಫ್‌ಎಂಸಿಜಿ ಇತ್ಯಾದಿ ಕಂಪನಿಗಳ ಷೇರುಗಳಂತೆ ಅಲ್ಲ. ವಿಮೆ ಕಂಪನಿಯ ಪ್ರೀಮಿಯಂ ಸಂಗ್ರಹ ದೊಡ್ಡ ಮೊತ್ತದಲ್ಲಿ ಇರಬಹುದು. ಉದಾಹರಣೆಗೆ 2021-22 ರ ಮೊದಲ 6 ತಿಂಗಳುಗಳಲ್ಲಿ ಎಲ್‌ಐಸಿ 1,437 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಎಲ್‌ಐಸಿ ಟಾಪ್‌ 5 ಷೇರು ಮಾರುಕಟ್ಟೆ ಬಂಡವಾಳದ ಕಂಪನಿಗಳಲ್ಲಿ ಇದೆ. ಆದರೆ ಟಾಪ್‌ 5ನಲ್ಲಿ ಇರುವ ಇನ್ಫೋಸಿಸ್‌ 2021ರ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ 5,809 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಷೇರುಗಳ ದರ ಏರಿಕೆಯಲ್ಲಿ ಕಂಪನಿಯ ನಿವ್ವಳ ಲಾಭ ನಿರ್ಣಾಯಕವಾಗಿರುತ್ತದೆ ಎನ್ನುತ್ತಾರೆ ತಜ್ಞರು.

ಷೇರುದಾರರು ಏನು ಮಾಡಬಹುದು?

  • ಐಪಿಒ ದರವಾದ 949 ರೂ.ಕ್ಕಿಂತಲೂ ಇಳಿಕೆಯಾಗಿದೆ ಎಂದು ಆತಂಕಪಡಬೇಕಿಲ್ಲ.
  • ಎಲ್‌ಐಸಿ ಬೃಹತ್‌ ಮಾರುಕಟ್ಟೆ ಮೌಲ್ಯ ಇರುವ ಸಂಸ್ಥೆಯಾದ್ದರಿಂದ ಕುಸಿತದ ಪ್ರಮಾಣ ಸೀಮಿತವಾಗಿರುತ್ತದೆ.
  • ಪ್ರತಿ ವರ್ಷ ಡಿವಿಡೆಂಡ್‌ ಆದಾಯ ಲಭ್ಯ
  • ಮಾರುಕಟ್ಟೆಯ ಪರಿಸ್ಥಿತಿ ಗಮನಿಸಿಕೊಂಡು ಷೇರು ದರ ಚೇತರಿಸಿದಾಗ ಮಾರಾಟ ಮಾಡಬಹುದು.

ಇದನ್ನೂ ಓದಿ: ಎಲ್‌ಐಸಿ ಷೇರುದಾರರಿಗೆ 42,500 ಕೋಟಿ ರೂ. ನಷ್ಟ

Continue Reading

LIC ಐಪಿಓ

ಎಲ್‌ಐಸಿ ಷೇರು 872 ರೂ.ಗೆ ವಹಿವಾಟು ಶುರು

ಎಲ್‌ ಐಸಿ ಷೇರು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಮಂಗಳವಾರ ನೋಂದಣಿಯಾಗಿದ್ದು, 900 ರೂ. ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಸೆನ್ಸೆಕ್ಸ್‌ ಸೂಚ್ಯಂಕ ಚೇತರಿಕೆಯೊಂದಿಗೆ ಸ್ವಾಗತಿಸಿದೆ.

VISTARANEWS.COM


on

lic
Koo

ಮುಂಬಯಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಮಂಗಳವಾರ ನೋಂದಣಿಯಾಗಿ ವಹಿವಾಟು ಆರಂಭಿಸಿದ್ದು, ಐಪಿಒ ದರಕ್ಕಿಂತ 77 ರೂ. ಇಳಿಕೆಯ ಆರಂಭಿಕ ದರ ದಾಖಲಿಸಿದೆ.

ಎಲ್‌ಐಸಿಯ ಷೇರಿನ ಐಪಿಒ ದರ 949 ರೂ.ಗೆ ನಿಗದಿಯಾಗಿತ್ತು. ಷೇರು ಪೇಟೆಯಲ್ಲಿ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಬೆಳಗ್ಗೆ 600 ಅಂಕಗಳ ಜಿಗಿತದೊಂದಿಗೆ ಎಲ್‌ಐಸಿ ಷೇರಿನ ನೋಂದಣಿಯ ವೇಳೆ ಸಕಾರಾತ್ಮಕ ವಾತಾವರಣ ಸೃಷ್ಟಿಸಿತ್ತು.

872 ರೂ.ಗಳಿಗೆ ವಹಿವಾಟು ಶುರು
ಎಲ್‌ಐಸಿ ಷೇರು ಎನ್‌ಎಸ್‌ಇನಲ್ಲಿ ಬೆಳಗ್ಗೆ 872 ರೂ.ಗಳಿಗೆ ವಹಿವಾಟು ಆರಂಭಿಸಿತು. ಅಂದರೆ ಐಪಿಒ ದರಕ್ಕೆ ಹೋಲಿಸಿದರೆ ಶೇ.8.11 ರಷ್ಟು ದರ ಇಳಿಕೆ (77 ರೂ.) ದಾಖಲಿಸಿತು. ಬಳಿಕ 900ರೂ.ಗೆ ಚೇತರಿಸಿತು. ಎಲ್‌ಐಸಿ ಪಾಲಿಸಿದಾರರು ಮತ್ತು ರಿಟೇಲ್‌ ಹೂಡಿಕೆದಾರರು ಅನುಕ್ರಮವಾಗಿ 60 ರೂ. ಮತ್ತು 45 ರೂ. ಡಿಸ್ಕೌಂಟ್‌ ಪಡೆದಿರುವುದರಿಂದ ಅವರಿಗೆ ಈಗಿನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಉತ್ತಮ ಬೆಲೆಗೆ ಷೇರು ಲಭಿಸಿದೆ. ಆದರೆ ಸಾಂಸ್ಥಿಕ ಹೂಡಿಕೆದಾರರಿಗೆ ಡಿಸ್ಕೌಂಟ್‌ ಇಲ್ಲವಾದ್ದರಿಂದ ನಷ್ಟವಾಗುವ ಸಾಧ್ಯತೆ ಇದೆ.

ಇನ್ನೂ ಇದೆ: ಗ್ರೇ ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರು ದರ ಇಳಿಕೆ

Continue Reading

LIC ಐಪಿಓ

ಎಲ್‌ ಐಸಿ ಷೇರಿಗೆ ʼಶುಭ ಮಂಗಳʼವಾರದ ನಿರೀಕ್ಷೆ

ಎಲ್‌ಐಸಿಯ ಷೇರುಗಳು ಮಂಗಳವಾರ (ಮೇ 17) ಬಿಎಸ್‌ಇ ಮತ್ತು ಎನ್‌ಎಸ್‌ ಇನಲ್ಲಿ ನೋಂದಣಿಯಾಗಲಿದೆ. ಸೆಕೆಂಡರಿ ಮಾರುಕಟ್ಟೆಯಲ್ಲಿ ಷೇರುಗಳ ದರ ಹೇಗಿರಬಹುದು ಎಂಬ ಕುತೂಹಲ ಮಾರುಕಟ್ಟೆಯಲ್ಲಿ ಈಗ ಉಂಟಾಗಿದೆ

VISTARANEWS.COM


on

Koo

ಮುಂಬಯಿ: ಲಕ್ಷಾಂತರ ಭಾರತೀಯರು ದೇಶದ ಅತಿ ದೊಡ್ಡ ಐಪಿಒದಲ್ಲಿ ಎಲ್‌ಐಸಿಯ ಷೇರುಗಳಿಗೆ ಹೂಡಿಕೆ ಮಾಡಿದ್ದಾರೆ. ಅವರಿಗೆ ಮೇ 17ರ ಮಂಗಳವಾರ ಮಹತ್ವದ ದಿನ. ಎಲ್‌ಐಸಿಯ ಷೇರುಗಳು ಮೊದಲ ಬಾರಿಗೆ ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ನೋಂದಣಿಯಾಗಲಿದೆ. ಬಳಿಕ ಸೆಕೆಂಡರಿ ಮಾರುಕಟ್ಟೆಯಲ್ಲಿ ಷೇರುಗಳ ಕೊಡು-ಕೊಳ್ಳುವಿಕೆ ಆರಂಭವಾಗಲಿದೆ.

ಇದನ್ನೂ ಓದಿ: ಗ್ರೇ ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರು ದರ ಇಳಿಕೆ

ಒಂದು ವೇಳೆ ಎಲ್‌ಐಸಿಯ ಷೇರುಗಳ ದರ ಐಪಿಒ ದರಕ್ಕಿಂತ (949ರೂ.) ಕುಸಿತಕ್ಕೀಡಾದರೆ ರಿಟೇಲ್‌ ಹೂಡಿಕೆದಾರರಿಗೆ ನಿರಾಸೆಯಾಗಬಹುದು ಎಂಬ ಕಳವಳ ಕೂಡ ಇದೆ. ಆದರೆ ಕೆಳಕ್ಕಿಳಿಯುವ ಷೇರು ದರ ಮತ್ತೆ ಏರಿಕೆ ದಾಖಲಿಸಬಹುದು. ಷೇರುಗಳ ಬೆಲೆಗಳಲ್ಲಿ ಏರಿಳಿತ ಸಾಮಾನ್ಯ. ದೀರ್ಘಕಾಲೀನವಾಗಿ ಎಲ್‌ ಐಸಿಯ ಷೇರುಗಳು ಹೂಡಿಕೆದಾರರಿಗೆ ಲಾಭದಾಯಕವೇ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಹಾಗೂ ಲಕ್ಷಾಂತರ ಹೊಸ ಹೂಡಿಕೆದಾರರನ್ನು ಸೃಷ್ಟಿಸಿದ ಹೆಗ್ಗಳಿಕೆ ಎಲ್‌ಐಸಿ ಐಪಿಒಗೆ ಸಲ್ಲುತ್ತದೆ ಎನ್ನುತ್ತಾರೆ ತಜ್ಞರು.

ಗ್ರೇ ಮಾರುಕಟ್ಟೆ ನೀಡಿರುವ ಸಂದೇಶ ಏನು?
ಗ್ರೇ ಮಾರುಕಟ್ಟೆ ಅಥವಾ ಅನಧಿಕೃತ ಮಾರುಕಟ್ಟೆಯಲ್ಲಿ ಸೋಮವಾರ 936 ರೂ.ಗಳಿಗೆ ಎಲ್‌ ಐಸಿ ಷೇರಿನ ದರ ನಿಗದಿಯಾಗಿತ್ತು. ಆರಂಭಿಕ ಹಂತದ ದರ ಕುಸಿತದಿಂದ ಚೇತರಿಸಿದ್ದರೂ, ಈಗಲೂ ಋಣಾತ್ಮಕವಾಗಿದೆ. 13 ರೂ. ಕಡಿಮೆಯೇ ಇದೆ.
ಎಲ್‌ ಐಸಿ ಐಪಿಒದಲ್ಲಿ ಬಿಡ್‌ ದರದ ಶ್ರೇಣಿ 902-949 ರೂ.ಗಳಾಗಿತ್ತು. ಎಲ್‌ಐಸಿ ಐಪಿಒ ದರವನ್ನು 949 ರೂ.ಗೆ ನಿಗದಿಪಡಿಸಿತ್ತು. ಹೀಗಾಗಿ 949 ರೂ.ಗಿಂತ ಕಡಿಮೆ ದರ ಲಭಿಸಿದರೆ, ಐಪಿಒದಲ್ಲಿ ಖರೀದಿಸಿದವರಿಗೆ ನಷ್ಟವಾಗಲಿದೆ. ಹೀಗಾಗಿ ರಿಟೇಲ್‌ ಹೂಡಿಕೆದಾರರಿಗೆ ನಿರಾಸೆಯಾಗಬಹುದು. ಹೀಗಿದ್ದರೂ ಎಲ್‌ ಐಸಿಯ ವಹಿವಾಟು, ಗಾತ್ರಕ್ಕೆ ಹೋಲಿಸಿದರೆ 949 ರೂ. ಉತ್ತಮ ದರ ಎನ್ನುತ್ತಾರೆ ತಜ್ಞರು.

ಎಲ್‌ಐಸಿ ಷೇರಿಗೆ ಅಗ್ನಿ ಪರೀಕ್ಷೆ
ಐಪಿಒದಲ್ಲಿ ಸರಕಾರ ಬಿಡುಗಡೆಗೊಳಿಸಿದ ಎಲ್‌ ಐಸಿಯ 16.21 ಕೋಟಿ ರೂ. ಷೇರುಗಳಿಗೆ 47.83 ಕೋಟಿ ಬಿಡ್‌ ಸಲ್ಲಿಕೆಯಾಗಿತ್ತು. ಕಳೆದ 2010ರಿಂದೀಚೆಗೆ ಸಾರ್ವಜನಿಕ ವಲಯದ 21 ಕಂಪನಿಗಳು ಐಪಿಒ ನಡೆಸಿವೆ. ಇದರಲ್ಲಿ ಅರ್ಧದಷ್ಟು ಕಂಪನಿಗಳ ಷೇರು ದರ ಈಗಲೂ ಐಪಿಒ ದರಕ್ಕಿಂತ ಕಡಿಮೆ ದರವನ್ನು ಹೊಂದಿವೆ. ಮತ್ತೊಂದು ಕಡೆ ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಷೇರು ಮಾರುಕಟ್ಟೆಯಲ್ಲಿ ಐಪಿಒಗೆ ಪೂರಕ ವಾತಾವರಣ ಇಲ್ಲ ಎಂಬ ವಾದವೂ ಇತ್ತು.

ಇಂಥ ಅನಿಶ್ಚಿತತೆಯ ನಡುವೆಯೂ ಎಲ್‌ಐಸಿ ಐಪಿಒನಲ್ಲಿ ಒಟ್ಟಾರೆ ಮೂರು ಪಟ್ಟು ಬಿಡ್‌ ಸಲ್ಲಿಕೆಯಾಗಿ ಉತ್ತಮ ಸ್ಪಂದನೆ ಲಭಿಸಿತ್ತು. ಪಾಲಿಸಿದಾರರು 6 ಪಟ್ಟು ಬಿಡ್‌ ಸಲ್ಲಿಸಿದ್ದರೆ, ಉದ್ಯೋಗಿಗಳು 4 ಪಟ್ಟು ಬಿಡ್‌ ಸಲ್ಲಿಸಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಸಣ್ಣ ಹೂಡಿಕೆದಾರರಿಗೆ ಲಾಭ ಮುಖ್ಯ

ಮುಂಬಯಿನಲ್ಲಿ ಪ್ರಧಾನ ಕಚೇರಿ ಹೊಂದಿರುವ, 65 ವರ್ಷಗಳ ಇತಿಹಾಸವಿರುವ ಎಲ್‌ಐಸಿ ಭಾರತದಲ್ಲಿ ಮನೆಮಾತಾಗಿರುವ ಬ್ರ್ಯಾಂಡ್‌. 2 ಸಾವಿರಕ್ಕೂ ಹೆಚ್ಚು ಶಾಖೆಗಳು, 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. 28.6 ಕೋಟಿ ಪಾಲಿಸಿಗಳನ್ನು ಮಾರಾಟ ಮಾಡಿದೆ. 25 ಕೋಟಿ ಪಾಲಿಸಿದಾರರ ನೆಲೆಯನ್ನು ಒಳಗೊಂಡಿದೆ.
” ಎಲ್‌ಐಸಿಯ ಬೃಹತ್‌ ಗಾತ್ರ, ಬ್ರ್ಯಾಂಡ್‌ ಹೆಗ್ಗಳಿಕೆಯಿಂದ ಸಣ್ಣ ಹೂಡಿಕೆದಾರರಿಗೆ ಲಾಭವಾಗುವುದು ಮುಖ್ಯʼʼ ಎನ್ನುತ್ತಾರೆ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್‌ ಚಂದ್ರ ಗಾರ್ಗ್‌.

ಎಲ್‌ ಐಸಿ ಐಪಿಒ ಪ್ರಯೋಜನ ಹಲವು

  • ಎಲ್‌ಐಸಿ ಐಪಿಒದಿಂದ ಷೇರು ಪೇಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ರಿಟೇಲ್‌ ಹೂಡಿಕೆದಾರರಲ್ಲಿ ಪ್ರೇರಣೆ ಉಂಟಾಗಿದೆ.
  • ಲಕ್ಷಾಂತರ ಹೊಸ ಸಣ್ಣ ಹೂಡಿಕೆದಾರರು ಷೇರು ವ್ಯವಹಾರಕ್ಕಿಳಿದಿದ್ದಾರೆ.
  • ಕೇಂದ್ರ ಸರಕಾರದ ಬಂಡವಾಳ ಹಿಂತೆಗೆತ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಶುಭಾರಂಭವಾದಂತಾಗಿದೆ. ಎಲ್‌ಐಸಿಯ ಸುಧಾರಣೆಗೆ ಸಂಪನ್ಮೂಲ ಸಂಗ್ರಹ.
  • ಖಾಸಗೀಕರಣ ಯೋಜನೆಗಳಿಗೆ ಪುಷ್ಟಷೇರು ಪೇಟೆಗೆ ಹೊಸ ಹುರುಪು

Continue Reading
Advertisement
Bengaluru News air pressure pipe
ಬೆಂಗಳೂರು48 mins ago

Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202450 mins ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Actor Darshan at Matinee Movie Team
ಸ್ಯಾಂಡಲ್ ವುಡ್53 mins ago

Actor Darshan: ಸತೀಶ್ ನೀನಾಸಂ-ರಚಿತಾ `ಮ್ಯಾಟ್ನಿ’ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್!

Drone Prathap prayag
ಸ್ಯಾಂಡಲ್ ವುಡ್57 mins ago

Drone Prathap: ಬಿಗ್ ಬಾಸ್ ಸ್ಪರ್ಧಿ ಪ್ರತಾಪನ ʻಡ್ರೋನ್‌ʼ ಇನ್ಮುಂದೆ ಹಾರಲ್ಲ! ಕಳ್ಳಾಟ ಬಯಲು!

Bhagwant Mann
ದೇಶ59 mins ago

Bhagwant Mann: 50ನೇ ವಯಸ್ಸಲ್ಲಿ ತಂದೆಯಾದ ಪಂಜಾಬ್‌ ಸಿಎಂ ಭಗವಂತ್ ಮಾನ್;!

kuwj awards
ಕರ್ನಾಟಕ1 hour ago

KUWJ Awards: ಕಾರ್ಯನಿರತ ಪತ್ರಕರ್ತರ ಸಂಘದ 2024ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ: ಪುರಸ್ಕೃತರ ಪಟ್ಟಿ ಇಲ್ಲಿದೆ

kalaburagi News Drone flying at kalaburagi Central University
ಕಲಬುರಗಿ1 hour ago

Kalaburagi News : ರಾತ್ರಿ ಹೊತ್ತಲ್ಲಿ ಕಲಬುರಗಿ ಕೇಂದ್ರಿಯ ವಿವಿಯಲ್ಲಿ ಶಂಕಾಸ್ಪದ ಡ್ರೋನ್‌ ಹಾರಾಟ!

Lok Sabha Election 2024 Valmiki Samaj to support Pralhad Joshi says Prasannanandapuri Swamiji
Lok Sabha Election 20242 hours ago

Lok Sabha Election 2024: ಪ್ರಲ್ಹಾದ್‌ ಜೋಶಿಗೆ ವಾಲ್ಮೀಕಿ ಸಮಾಜದ ಬೆಂಬಲ: ಪ್ರಸನ್ನಾನಂದಪುರಿ ಸ್ವಾಮೀಜಿ

Holi Girls
ದೇಶ2 hours ago

ಹೋಳಿ ಹೆಸರಲ್ಲಿ ಸ್ಕೂಟಿ ಮೇಲೆಯೇ ಕಾಮದೋಕುಳಿ; ಯುವತಿಯರಿಗೆ 80 ಸಾವಿರ ರೂ. ದಂಡ!

Kangana Ranaut
ಬಾಲಿವುಡ್2 hours ago

Kangana Ranaut : ನಾನು, ಶಾರುಖ್‌ ಈ ಯುಗದ ಕೊನೆಯ ಸೂಪರ್‌ಸ್ಟಾರ್‌ಗಳು ಎಂದ ಕಂಗನಾ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202450 mins ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20242 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ10 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ1 day ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ2 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌