ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಸ್ಮಾಲ್ ಕ್ಯಾಪ್ ಪ್ಲಾನ್‌ಗಳೆಂದರೆ ಸ್ವಲ್ಪ ರಿಸ್ಕ್ ಜಾಸ್ತಿ ಎಂದೇ ಪರಿಗಣನೆಯಾಗಿವೆ. ಹೀಗಿದ್ದರೂ, ದೀರ್ಘಕಾಲೀನ ದೃಷ್ಟಿಯಿಂದ ಉತ್ತಮ ಆದಾಯ ನೀಡುತ್ತದೆ ಎಂದು ಭಾವಿಸಲಾಗಿದೆ. ಏಕೆಂದರೆ ಇದು ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಮ್ಯೂಚುವಲ್ ಫಂಡ್ ಪ್ಲಾನ್‌ಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತವೆ.
ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್-ರೆಗ್ಯುಲರ್ ಪ್ಲಾನ್-ಗ್ರೋತ್ (Quant Small Cap Fund- Regular Plan-Growth) ಅಂಥ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಪ್ಲಾನ್‌ಗಳಲ್ಲೊಂದಾಗಿದೆ. ಇದು ತನ್ನ ಹೂಡಿಕೆದಾರರಿಗೆ 1,3,5 ವರ್ಷಗಳಲ್ಲಿ ಉತ್ತಮ ಆದಾಯ ತಂದು ಕೊಟ್ಟಿದೆ.
ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್-ರೆಗ್ಯುಲರ್ ಪ್ಲಾನ್: (Quant small cap fund – Regular Plan) ಕ್ವಾಂಟ್ ಮ್ಯೂಚುವಲ್ ಫಂಡ್ ಬಿಡುಗಡೆಗೊಳಿಸಿರುವ ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್-ಗ್ರೋತ್, ಕಳೆದ 6 ತಿಂಗಳುಗಳಲ್ಲಿ 22.18% ಆದಾಯವನ್ನು ಹೂಡಿಕೆದಾರರಿಗೆ ಕೊಟ್ಟಿದೆ. ಈ ಸ್ಕೀಮ್ ನಿಫ್ಟಿ ಸ್ಮಾಲ್ ಕ್ಯಾಪ್ 250 ಟೋಟಲ್ ರಿಟರ್ನ್ ಇಂಡೆಕ್ಸ್ ಅನ್ನು ಆಧರಿಸಿದೆ. ಈ ಮ್ಯೂಚುವಲ್ ಫಂಡ್ ಒಂದು ವರ್ಷದಲ್ಲಿ 39.64%, ಮೂರು ವರ್ಷದಲ್ಲಿ 52.58%, 5 ವರ್ಷದಲ್ಲಿ 27.25%, ಏಳು ವರ್ಷಗಳಲ್ಲಿ 20.37% ಆದಾಯವನ್ನು ಹೂಡಿಕೆದಾರರಿಗೆ ಕೊಟ್ಟಿದೆ. ಈ ಫಂಡ್ 26 ವರ್ಷಗಳಿಂದ ಅಸ್ತಿತ್ವದಲ್ಲಿದೆ. 1996 ರ ಸೆಪ್ಟೆಂಬರ್ 23ರಂದು ಬಿಡುಗಡೆಯಾಯಿತು.
ಮ್ಯೂಚುವಲ್ ಫಂಡ್ ಕ್ಯಾಲ್ಕ್ಯುಲೇಟರ್: (Mutual fund calculator) : ಮ್ಯೂಚುವಲ್ ಫಂಡ್ ಸಿಪ್ ಕ್ಯಾಲ್ಕ್ಯುಲೇಟರ್ ಪ್ರಕಾರ ಕ್ವಾಂಟ್ ಸ್ಮಾಲ್-ಕ್ಯಾಪ್ ಫಂಡ್‌ನಲ್ಲಿ 10,000 ರೂ. ಸಿಪ್ ಮೂಲಕ 25 ವರ್ಷಗಳ ಹೂಡಿಕೆಯಿಂದ ಕೋಟ್ಯಂತರ ರೂಪಾಯಿ ಗಳಿಸಬಹುದು. ಇದು 25 ವರ್ಷಗಳಲ್ಲಿ ವಾರ್ಷಿಕ 14.72% ಆದಾಯ ನೀಡಿದೆ. ಸಿಪ್ ಮೂಲಕ ಪ್ರತಿ ತಿಂಗಳು 10,000 ರೂ. ಹೂಡಿಕೆ ಮಾಡಿದರೆ 25 ವರ್ಷಗಳಲ್ಲಿ 2.94 ಕೋಟಿ ರೂ. ಆದಾಯ ಗಳಿಸಬಹುದು.
ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಯಾವ ಕಂಪನಿಯ ಷೇರುಗಳಲ್ಲಿ ಹೆಚ್ಚು ಹೂಡಿದೆ? ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಟಿಸಿ, ಆರ್ ಬಿಎಲ್, ಅರವಿಂದ್ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿದೆ.
ಇದನ್ನೂ ಓದಿ: Mutual funds : ಏನಿದು ಮ್ಯೂಚುವಲ್ ಫಂಡ್? ಹೇಗೆ ಕಾರ್ಯನಿರ್ವಹಿಸುತ್ತದೆ?
3 ವರ್ಷಗಳಲ್ಲಿ ಹೆಚ್ಚು ಆದಾಯ ನೀಡಿದ ಸ್ಮಾಲ್ ಕ್ಯಾಪ್ ಫಂಡ್ಸ್: ಕ್ವಾಂಟ್ ಹೊರತುಪಡಿಸಿ ಇತರ ಸ್ಮಾಲ್-ಕ್ಯಾಪ್ ಸ್ಕೀಮ್‌ಗಳು ಹೂಡಿಕೆದಾರರಿಗೆ ಉತ್ತಮ ಆದಾಯ ಕೊಟ್ಟಿವೆ. ನಿಪ್ಪಾನ್ ಇಂಡಿಯಾ, ಎಚ್‌ಎಸ್‌ಬಿಸಿ ಸ್ಮಾಲ್ ಕ್ಯಾಪ್ ಫಂಡ್, ಎಚ್‌ಡಿಎಫ್‌ಸಿ ಸ್ಮಾಲ್ ಕ್ಯಾಪ್ ಫಂಡ್, ಕೆನರಾ ರೊಬಾಕೊ ಮತ್ತು ಇತರ. (ಮ್ಯೂಚುವಲ್ ಫಂಡ್‌ಗಳಲ್ಲಿ ಆದಾಯವು ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಮಾರುಕಟ್ಟೆಯ ಅಪಾಯಗಳು ಇಲ್ಲಿವೆ)