Mutual fund : ಮಾಸಿಕ 10,000 ರೂ. ಸಿಪ್‌ ಮೂಲಕ 3 ಕೋಟಿ ಗಳಿಸೋದು ಹೇಗೆ ? Vistara News

ಮನಿ-ಗೈಡ್

Mutual fund : ಮಾಸಿಕ 10,000 ರೂ. ಸಿಪ್‌ ಮೂಲಕ 3 ಕೋಟಿ ಗಳಿಸೋದು ಹೇಗೆ ?

Mutual fund ಮ್ಯೂಚುವಲ್‌ ಫಂಡ್‌ಗಳಲ್ಲಿ ದೀರ್ಘಕಾಲೀನ ಹೂಡಿಕೆಗೆ ಉತ್ತಮ ಆದಾಯವನ್ನು ಹೂಡಿಕೆದಾರರು ಗಳಿಸಬಹುದು. ಇದಕ್ಕೊಂದು ಉದಾಹರಣೆ ಇಲ್ಲಿದೆ.

VISTARANEWS.COM


on

mutual fund
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ಸ್ಮಾಲ್‌ ಕ್ಯಾಪ್‌ ಪ್ಲಾನ್‌ಗಳೆಂದರೆ ಸ್ವಲ್ಪ ರಿಸ್ಕ್‌ ಜಾಸ್ತಿ ಎಂದೇ ಪರಿಗಣನೆಯಾಗಿವೆ. ಹೀಗಿದ್ದರೂ, ದೀರ್ಘಕಾಲೀನ ದೃಷ್ಟಿಯಿಂದ ಉತ್ತಮ ಆದಾಯ ನೀಡುತ್ತದೆ ಎಂದು ಭಾವಿಸಲಾಗಿದೆ. ಏಕೆಂದರೆ ಇದು ಮಿಡ್-ಕ್ಯಾಪ್‌ ಮತ್ತು ಸ್ಮಾಲ್‌-ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಪ್ಲಾನ್‌ಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತವೆ.

ಕ್ವಾಂಟ್‌ ಸ್ಮಾಲ್‌ ಕ್ಯಾಪ್‌ ಫಂಡ್-ರೆಗ್ಯುಲರ್‌ ಪ್ಲಾನ್-ಗ್ರೋತ್‌ (Quant Small Cap Fund- Regular Plan-Growth) ಅಂಥ ಸ್ಮಾಲ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಪ್ಲಾನ್‌ಗಳಲ್ಲೊಂದಾಗಿದೆ. ಇದು ತನ್ನ ಹೂಡಿಕೆದಾರರಿಗೆ 1,3,5 ವರ್ಷಗಳಲ್ಲಿ ಉತ್ತಮ ಆದಾಯ ತಂದು ಕೊಟ್ಟಿದೆ.

ಕ್ವಾಂಟ್‌ ಸ್ಮಾಲ್‌ ಕ್ಯಾಪ್‌ ಫಂಡ್-ರೆಗ್ಯುಲರ್‌ ಪ್ಲಾನ್:‌ (Quant small cap fund – Regular Plan) ಕ್ವಾಂಟ್‌ ಮ್ಯೂಚುವಲ್‌ ಫಂಡ್‌ ಬಿಡುಗಡೆಗೊಳಿಸಿರುವ ಕ್ವಾಂಟ್ ಸ್ಮಾಲ್‌ ಕ್ಯಾಪ್‌ ಫಂಡ್-ಗ್ರೋತ್‌, ಕಳೆದ 6 ತಿಂಗಳುಗಳಲ್ಲಿ 22.18% ಆದಾಯವನ್ನು ಹೂಡಿಕೆದಾರರಿಗೆ ಕೊಟ್ಟಿದೆ. ಈ ಸ್ಕೀಮ್‌ ನಿಫ್ಟಿ ಸ್ಮಾಲ್‌ ಕ್ಯಾಪ್‌ 250 ಟೋಟಲ್‌ ರಿಟರ್ನ್‌ ಇಂಡೆಕ್ಸ್‌ ಅನ್ನು ಆಧರಿಸಿದೆ. ಈ ಮ್ಯೂಚುವಲ್‌ ಫಂಡ್‌ ಒಂದು ವರ್ಷದಲ್ಲಿ 39.64%, ಮೂರು ವರ್ಷದಲ್ಲಿ 52.58%, 5 ವರ್ಷದಲ್ಲಿ 27.25%, ಏಳು ವರ್ಷಗಳಲ್ಲಿ 20.37% ಆದಾಯವನ್ನು ಹೂಡಿಕೆದಾರರಿಗೆ ಕೊಟ್ಟಿದೆ. ಈ ಫಂಡ್‌ 26 ವರ್ಷಗಳಿಂದ ಅಸ್ತಿತ್ವದಲ್ಲಿದೆ. 1996 ರ ಸೆಪ್ಟೆಂಬರ್‌ 23ರಂದು ಬಿಡುಗಡೆಯಾಯಿತು.

ಮ್ಯೂಚುವಲ್‌ ಫಂಡ್‌ ಕ್ಯಾಲ್ಕ್ಯುಲೇಟರ್:(Mutual fund calculator) : ಮ್ಯೂಚುವಲ್‌ ಫಂಡ್‌ ಸಿಪ್‌ ಕ್ಯಾಲ್ಕ್ಯುಲೇಟರ್‌ ಪ್ರಕಾರ ಕ್ವಾಂಟ್‌ ಸ್ಮಾಲ್-ಕ್ಯಾಪ್‌ ಫಂಡ್‌ನಲ್ಲಿ 10,000 ರೂ. ಸಿಪ್‌ ಮೂಲಕ 25 ವರ್ಷಗಳ ಹೂಡಿಕೆಯಿಂದ ಕೋಟ್ಯಂತರ ರೂಪಾಯಿ ಗಳಿಸಬಹುದು. ಇದು 25 ವರ್ಷಗಳಲ್ಲಿ ವಾರ್ಷಿಕ 14.72% ಆದಾಯ ನೀಡಿದೆ. ಸಿಪ್‌ ಮೂಲಕ ಪ್ರತಿ ತಿಂಗಳು 10,000 ರೂ. ಹೂಡಿಕೆ ಮಾಡಿದರೆ 25 ವರ್ಷಗಳಲ್ಲಿ 2.94 ಕೋಟಿ ರೂ. ಆದಾಯ ಗಳಿಸಬಹುದು.

ಕ್ವಾಂಟ್‌ ಸ್ಮಾಲ್‌ ಕ್ಯಾಪ್‌ ಫಂಡ್‌ ಯಾವ ಕಂಪನಿಯ ಷೇರುಗಳಲ್ಲಿ ಹೆಚ್ಚು ಹೂಡಿದೆ? ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಟಿಸಿ, ಆರ್‌ ಬಿಎಲ್‌, ಅರವಿಂದ್‌ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿದೆ.

ಇದನ್ನೂ ಓದಿ: Mutual funds : ಏನಿದು ಮ್ಯೂಚುವಲ್‌ ಫಂಡ್?‌ ಹೇಗೆ ಕಾರ್ಯನಿರ್ವಹಿಸುತ್ತದೆ?

3 ವರ್ಷಗಳಲ್ಲಿ ಹೆಚ್ಚು ಆದಾಯ ನೀಡಿದ ಸ್ಮಾಲ್‌ ಕ್ಯಾಪ್‌ ಫಂಡ್ಸ್:‌ ಕ್ವಾಂಟ್‌ ಹೊರತುಪಡಿಸಿ ಇತರ ಸ್ಮಾಲ್-ಕ್ಯಾಪ್‌ ಸ್ಕೀಮ್‌ಗಳು ಹೂಡಿಕೆದಾರರಿಗೆ ಉತ್ತಮ ಆದಾಯ ಕೊಟ್ಟಿವೆ. ನಿಪ್ಪಾನ್‌ ಇಂಡಿಯಾ, ಎಚ್‌ಎಸ್‌ಬಿಸಿ ಸ್ಮಾಲ್‌ ಕ್ಯಾಪ್‌ ಫಂಡ್‌, ಎಚ್‌ಡಿಎಫ್‌ಸಿ ಸ್ಮಾಲ್‌ ಕ್ಯಾಪ್‌ ಫಂಡ್‌, ಕೆನರಾ ರೊಬಾಕೊ ಮತ್ತು ಇತರ. (ಮ್ಯೂಚುವಲ್‌ ಫಂಡ್‌ಗಳಲ್ಲಿ ಆದಾಯವು ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಮಾರುಕಟ್ಟೆಯ ಅಪಾಯಗಳು ಇಲ್ಲಿವೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮನಿ-ಗೈಡ್

Money Guide: ಡಿಮ್ಯಾಟ್ ಖಾತೆದಾರರ ಗಮನಕ್ಕೆ; ವರ್ಷಾಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಅಕೌಂಟ್‌ ಸ್ಥಗಿತ!

Money Guide: ವೈಯಕ್ತಿಕ ಡಿಮ್ಯಾಟ್ ಖಾತೆದಾರರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರು ಈ ವರ್ಷಾಂತ್ಯದ ಒಳಗೆ ಮಾಡಿ ಮುಗಿಸಲೇ ಬೇಕಾದ ಬಹು ಮುಖ್ಯ ಕೆಲಸವೊಂದಿದೆ. ಅದೇನು? ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

demat account
Koo

ಬೆಂಗಳೂರು: ವೈಯಕ್ತಿಕ ಡಿಮ್ಯಾಟ್ ಖಾತೆದಾರರು (Demat account holders) ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರ (Mutual fund investors) ಗಮನಕ್ಕೆ… ಡಿಸೆಂಬರ್ 31ರೊಳಗೆ ಘೋಷಣೆ ಫಾರ್ಮ್ ಸಲ್ಲಿಸುವ ಮೂಲಕ ನಾಮನಿರ್ದೇಶಿತ(Nominate a beneficiary-ನಾಮಿನಿ)ರ ಹೆಸರನ್ನು ಘೋಷಿಸಲು ಅಥವಾ ನಾಮನಿರ್ದೇಶನ ಆಯ್ಕೆಯನ್ನು ಕೈಬಿಡಲು ಸರ್ಕಾರ ತಿಳಿಸಿದೆ. ಒಂದು ವೇಳೆ ಸರ್ಕಾರ ವಿಧಿಸಿದ ಗಡುವಿನೊಳಗೆ ಈ ಪ್ರಕ್ರಿಯೆ ನಡೆಸದಿದ್ದರೆ ಏನಾಗುತ್ತದೆ ಎನ್ನುವುದರ ವಿವರ ಮನಿಗೈಡ್‌ (Money Guide)ನಲ್ಲಿದೆ.

ವರ್ಷಾಂತ್ಯದ ವೇಳೆಗೆ ಡಿಮ್ಯಾಟ್ ಖಾತೆದಾರರು ನಾಮನಿರ್ದೇಶನ ಆಯ್ಕೆ ಮಾಡಲು ಅಥವಾ ನಾಮನಿರ್ದೇಶನ ಆಯ್ಕೆಯನ್ನು ಕೈಬಿಡದಿದ್ದರೆ ಅಂತಹವರ ಡಿಮ್ಯಾಟ್ ಖಾತೆ ಮತ್ತು ಫೋಲಿಯೊ ಸ್ಥಗಿತಗೊಳಿಸಲಾಗುತ್ತದೆ. ಇದರಿಂದಾಗಿ ಅವರು ತಮ್ಮ ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಎಚ್ಚರಿಸಿದೆ. ಈ ಆದೇಶವು ಹೊಸ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೆ ಅನ್ವಯವಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಟ್ರೇಡಿಂಗ್‌ ಮತ್ತು ಡಿಮ್ಯಾಟ್‌ ಖಾತೆಗೆ ನಾಮಿನೇಶನ್‌ ಮಾಡುವಾಗ ಸಾಕ್ಷಿಯ ಅಗತ್ಯ ಇರುವುದಿಲ್ಲ. ಇ-ಸೈನ್‌ ಬಳಸಿ ನಾಮಿನೇಶನ್‌ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೇ ಮಾಡಬಹುದು. ಆಫ್‌ಲೈನ್‌ನಲ್ಲೂ ಮಾಡಬಹುದಾದ ಆಯ್ಕೆ ಇದೆ. ನಿಮ್ಮ ಡಿಮ್ಯಾಟ್‌ ಖಾತೆಯ ಪೂರೈಕೆದಾರ DP ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನಾಮಿನೇಶನ್‌ ಮಾಡಬಹುದು. NSDL DP ವೆಬ್‌ಸೈಟ್‌ ಮೂಲಕವೂ ಬದಲಿಸಬಹುದು. ನಿಮ್ಮ ಡಿಮ್ಯಾಟ್‌ ಖಾತೆಗೆ ಮೂರು ನಾಮಿನಿಗಳನ್ನು ಹೆಸರಿಸಬಹುದು. ನಿಮ್ಮ ತಂದೆ, ತಾಯಿ, ಸಂಗಾತಿ, ಮಕ್ಕಳು ಅಥವಾ ಬೇರೆ ಯಾರಾದರೂ ನಾಮಿನಿ ಆಗಬಹುದು. ಈ ಕ್ರಮವು ಹೂಡಿಕೆದಾರರಿಗೆ ತಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಈ ಹಿಂದೆ ಅಸ್ತಿತ್ವದಲ್ಲಿರುವ ಎಲ್ಲ ಅರ್ಹ ಟ್ರೇಡಿಂಗ್‌ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಆಯ್ಕೆಯನ್ನು ಒದಗಿಸುವಂತೆ ಜುಲೈ 2021ರಲ್ಲಿಯೇ ಸೆಬಿ ಹೇಳಿತ್ತು. ಮಾರ್ಚ್ 31, 2022ರ ಗಡುವು ನೀಡಿತ್ತು. ನಂತರ ಅದನ್ನು ಇನ್ನೂ ಒಂದು ವರ್ಷ ಅಂದರೆ ಮಾರ್ಚ್ 31, 2023ರವರೆಗೆ ನಂತರ ಮತ್ತೆ ಸೆಪ್ಟೆಂಬರ್ 30, 2023ರವರೆಗೆ ಬಳಿಕ ಡಿಸೆಂಬರ್‌ 31, 2023ರವರೆಗೆ ವಿಸ್ತರಿಸಿತ್ತು. ಇನ್ನು ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

ಯಾಕಾಗಿ ಈ ಕ್ರಮ?

ಮುಖ್ಯವಾಗಿ ಎರಡು ಕಾರಣಕ್ಕಾಗಿ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಮೊದಲನೆಯದ್ದು ಈ ಹಿಂದೆ ಹೇಳಿದಂತೆ ಹೂಡಿಕೆದಾರರ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು. ಇನ್ನು ಎರಡನೇ ಕಾರಣ ಎಂದರೆ, ಈ ಹಿಂದೆ ಅನೇಕ ಖಾತೆದಾರರು ತಮಗೆ ಏನಾದರೂ ಸಂಭವಿಸಿದರೆ ಆಸ್ತಿಗಳನ್ನು ಯಾರಿಗೆ ವರ್ಗಾಯಿಸಬೇಕು ಎಂಬುದನ್ನು ನಾಮನಿರ್ದೇಶನ ಮಾಡದೆ ಅನೇಕ ಹೂಡಿಕೆ ಖಾತೆಗಳನ್ನು ತೆರೆದಿದ್ದರು. ಇದರಿಂದಾಗಿ ನಿಜವಾದ ವಾರಸುದಾರರನ್ನು ಕಂಡುಕೊಳ್ಳಲು ಬಹಳ ಶ್ರಮ ಪಡಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. ಅಲ್ಲದೆ ಕೆಲವೊಮ್ಮೆ ಬೇರೆ ಯಾರಿಗೋ ಅನುಕೂಲ ಲಭಿಸಿ ನಿಜವಾದ ವಾರಸುದಾರರಿಗೆ ಅನ್ಯಾಯವಾದ ಘಟನೆಯೂ ನಡೆದಿತ್ತು. ಈ ಎಲ್ಲ ಕಾರಣಗಳಿಂದ ನಾಮಿನಿ ಹೆಸರನ್ನು ಸೂಚಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆರ್ಥಿಕ ತಜ್ಞರು ವಿವರಿಸುತ್ತಾರೆ.

ಇನ್ನಷ್ಟು ಮನಿಗೈಡ್‌ ಓದಲು ಇಲ್ಲಿ ಕ್ಲಿಕ್‌ ಮಾಡಿ

Continue Reading

ಮನಿ-ಗೈಡ್

Money Guide: ಆನ್‌ಲೈನ್‌ ಸಾಲದ ವಂಚನೆಯ ಕೂಪಕ್ಕೆ ಬೀಳದಿರಲು ಏನು ಮಾಡಬೇಕು?

Money Guide: ಆನ್‌ಲೈನ್‌ ಸಾಲದ ಹೆಸರಿನಲ್ಲಿ ವಂಚನೆಯ ಜಾಲ ಇದೀಗ ಸಕ್ರಿಯವಾಗಿದೆ. ಅದರಿಂದ ಹೇಗೆ ಪಾರಾಗಬಹುದು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

loan new
Koo

ಬೆಂಗಳೂರು: ಪ್ರಸ್ತುತ ನಮ್ಮ ಕನಸುಗಳನ್ನು ಈಡೇರಿಸಲು ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಮನೆ ನಿರ್ಮಾಣ, ವಾಹನ ಖರೀದಿ, ಕೃಷಿ ಚಟುವಟಿಕೆ ಹೀಗೆ ಮಧ್ಯಮ ವರ್ಗದ ಜನರು ವಿವಿಧ ಕಾರಣಗಳಿಗೆ ಸಾಲದತ್ತ ಮುಖ ಮಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ವಂಚಕರು ಆನ್‌ಲೈನ್‌ ಲೋನ್‌ ಹೆಸರಿನಲ್ಲಿ ದುಡ್ಡು ದೋಚುತ್ತಾರೆ. ಹಾಗಾದರೆ ಇಂತಹ ಮೋಸದ ಜಾಲದಿಂದ (Loan Scam) ಹೇಗೆ ಪಾರಾಗಬಹುದು ಎನ್ನುವುದರ ವಿವರ ಮನಿಗೈಡ್‌ (Money Guide)ನಲ್ಲಿದೆ.

ನಮ್ಮ ಅನಿವಾರ್ಯತೆಯನ್ನು ದುರುಪಯೋಗಿಸಿಕೊಂಡು ಅಂತಹ ಕಂಪೆನಿಗಳು ದುಡ್ಡು ದೋಚುತ್ತವೆ. ಹೆಚ್ಚಿನ ಮುಂಗಡ ಶುಲ್ಕಗಳು, ಅವಾಸ್ತವಿಕ ಬಡ್ಡಿದರಗಳು ಮತ್ತು ಷರತ್ತುಗಳ ಹೆಸರಿನಲ್ಲಿ ಹಗಲು ದರೋಡೆಗೆ ಇಳಿಯುತ್ತವೆ. ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಪ್ಲಾಟ್‌ಫಾರ್ಮ್‌ ಫೋನ್‌ ಪೇ ಇಂತಹ ಸಾಲಗಳಿಂದ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದೆ.

ಸಾಲದ ಹೆಸರಿನಲ್ಲಿ ಮೋಸ

ಲೋನ್‌ ಸ್ಕ್ಯಾಮ್‌ ಎಂದು ಕರೆಯಲಾಗುವ ಈ ವಂಚನೆಯ ಜಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ನೋಡೋಣ: ನೀವು ಬಯಸಿದ ಸಾಲವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪಡೆಯಬಹುದು ಎಂಬ ವಂಚಕರು ಸುಳ್ಳು ಭರವಸೆ ನೀಡುತ್ತಾರೆ. ಉದಾಹರಣೆಗೆ ನೀವು ಬ್ಯಾಂಕ್‌ನಿಂದ ಸಾಲ ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ (CIBIL Score) ಹೊಂದಿಲ್ಲದಿದ್ದರೆ ಅಥವಾ ಬಹಳ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಹಣದ ಅಗತ್ಯವಿದ್ದರೆ ಆ ಸಂದರ್ಭವನ್ನು ವಂಚಕರು ಬಳಸಿಕೊಳ್ಳುತ್ತಾರೆ. ಕೆಲವೇ ನಿಮಿಷಗಳಲ್ಲಿ ಸಾಲ ನೀಡುತ್ತೇವೆ ಎಂದು ನಂಬಿಸುತ್ತಾರೆ.

ಈ ಮೋಸದ ಜಾಲ ಮುಖ್ಯವಾಗಿ ಎರಡು ರೀತಿಯಲ್ಲಿ ನಡೆಯುತದೆ. ವಂಚಕರು ಭದ್ರತೆಯಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಮುಂಗಡವಾಗಿ ಕೇಳುತ್ತಾರೆ. ಅದನ್ನು ಎಂದಿಗೂ ಹಿಂದಿರುಗಿಸಲಾಗುವುದಿಲ್ಲ. ಜತೆಗೆ ಪ್ರೊಸೆಸಿಂಗ್‌ ಶುಲ್ಕ, ವಿಳಂಬ ಶುಲ್ಕ, ಬಡ್ಡಿ ಮತ್ತಿತರ ಹೆಸರಿನಲ್ಲಿ ದೊಡ್ಡ ಮೊತ್ತವನ್ನು ಪಡೆಯುತ್ತಾರೆ. ಭಾರೀ ಮೊತ್ತದ ನಷ್ಟವಾಗುತ್ತದೆ.

ಹೇಗೆ ಸಂಪರ್ಕಿಸುತ್ತಾರೆ?

ವಂಚಕರು ನಿಮ್ಮನ್ನು ಎಸ್ಎಂಎಸ್, ಇಮೇಲ್ ಅಥವಾ ಫೋನ್ ಮೂಲಕ ಸಂಪರ್ಕಿಸುತ್ತಾರೆ. ನಿಮ್ಮ ವಿವರಗಳನ್ನು ಭರ್ತಿ ಮಾಡಲು ಮತ್ತು ತ್ವರಿತ ಲೋನ್ ಅನುಮೋದನೆ ಪಡೆಯಲು ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಲು ಪದೇ ಪದೆ ಒತ್ತಾಯಿಸುತ್ತಾರೆ. ಒಂದು ವೇಳೆ ನೀವು ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿದ್ದೀರಿ ಅಂತಿಟ್ಟುಕೊಳ್ಳೋಣ. ನಿಮ್ಮ ಸಂಪೂರ್ಣ ಸಂಪರ್ಕ ಪಟ್ಟಿ, ಫೋಟೊ ಮತ್ತು ವೀಡಿಯೊಗಳಿಗೆ ಅಕ್ಸೆಸ್‌ ಕೇಳುತ್ತದೆ. ಇನ್ನು ನೀವು ಆಧಾರ್, ಪ್ಯಾನ್, ವಿಳಾಸ ಮತ್ತು ನಿಮಗೆ ಅಗತ್ಯವಿರುವ ಮೊತ್ತದಂತಹ ಮೂಲ ವಿವರಗಳನ್ನು ಭರ್ತಿ ಮಾಡಿದ ಕೂಡಲೇ ನಿಮ್ಮ ಖಾತೆಗೆ ನಗದು ಕ್ರೆಡಿಟ್ ಆಗುತ್ತದೆ.

ಮೊದಲೇ ಹೇಳಿದಂತೆ ಈ ಸಾಲಗಳನ್ನು ಸಂಕೀರ್ಣ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿರುತ್ತವೆ. ಅದನ್ನು ಮೊದಲೇ ತಿಳಿಸಲಾಗುವುದಿಲ್ಲ. ಕಡಿಮೆ ಬಡ್ಡಿದರದ ಭರವಸೆಯೊಂದಿಗೆ ಮೋಸಗೊಳಿಸುತ್ತಾರೆ. ನಂತರ ಕಡಿಮೆ ಬಡ್ಡಿದರವು ಸೀಮಿತ ಅವಧಿಗೆ ಮಾತ್ರ ಎಂದು ವರಾತ ಬದಲಾಯಿಸುತ್ತಾರೆ. ಅದರ ನಂತರ ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುತ್ತದೆ. ಗಮನಿಸಿ ಇದನ್ನು ಮೊದಲೇ ಉಲ್ಲೇಖಿಸುವುದಿಲ್ಲ.

ಇದನ್ನೂ ಓದಿ: Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

ಹೊಡೆತದ ಮೇಲೆ ಹೊಡೆತ

ಹೆಚ್ಚಿನ ಬಡ್ಡಿದರಗಳ ಜತೆಗೆ ಸಾಲಗಳನ್ನು ಮರುಪಾವತಿಸದಿರುವುದಕ್ಕೆ ಪ್ರತಿದಿನ ಭಾರೀ ದಂಡವನ್ನು ವಿಧಿಸುತ್ತವೆ. ಅದಕ್ಕೆ ಹೆಚ್ಚಿನ ಪ್ರೊಸೆಸಿಂಗ್‌ ಶುಲ್ಕ ಸೇರಿದಂತೆ ಇತರ ದಂಡಗಳನ್ನು ಸೇರಿಸುತ್ತಾರೆ. ಮಾತ್ರವಲ್ಲ ಈ ಅಪ್ಲಿಕೇಷನ್‌ಗಳು ನಿಮ್ಮ ಫೋನ್‌ನ ಎಲ್ಲ ಮಾಹಿತಿಗಳನ್ನು ಕದ್ದು ಬ್ಲ್ಯಾಕ್‌ ಮೇಲ್‌ ಮಾಡುವ ಸಾಧ್ಯತೆಯೂ ಇದೆ. ಸಾಲ ವಸೂಲಾತಿ ಏಜೆಂಟರು ನಿರಂತರ ಕಿರುಕುಳ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದೇ ಕಾರಣದಿಂದ ಇತ್ತೀಚೆಗೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.

ನೀವೇನು ಮಾಡಬೇಕು?

  • ಫೋನ್, ಇಮೇಲ್ ಅಥವಾ ಇತರ ವಿಧಾನಗಳ ಮೂಲಕ ನಿಮ್ಮ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಸಾಲ ನೀಡುವ ಕಂಪೆನಿಯ ಪೂರ್ವಾಪರ ತಿಳಿದುಕೊಳ್ಳಿ
  • ಯಾವುದೇ ಒಟಿಪಿ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಫೋನ್ ಪೇ, ಪೇಟಿಎಂ ಅಥವಾ ಗೂಗಲ್ ಪೇಯಂತಹ ಪ್ಲಾಟ್ ಫಾರ್ಮ್‌ಗಳು ಅಂತಹ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಎಂದಿಗೂ ಕೇಳುವುದಿಲ್ಲ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

Money Guide: ವರ್ಷದ ಕೊನೆಗೆ ಬಂದು ನಿಂತಿದ್ದೇವೆ. ಡಿಸೆಂಬರ್‌ 31ರೊಳಗೆ ಕೆಲವೊಂದು ಕರ್ತವ್ಯಗಳನ್ನು ಮಾಡಿ ಮುಗಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಆ ಕುರಿತಾದ ವಿವರ ಇಲ್ಲಿದೆ.

VISTARANEWS.COM


on

december
Koo

ಬೆಂಗಳೂರು: ವರ್ಷಾಂತ್ಯದ ಡಿಸೆಂಬರ್‌ ಮಾಸಕ್ಕೆ ಕಾಲಿಟ್ಟಿದ್ದೇವೆ. ಕೇಂದ್ರ ಸರ್ಕಾರ ಸೂಚಿಸಿದ ಒಂದಷ್ಟು ಕೆಲಸಗಳನ್ನು ಈ ತಿಂಗಳಾಂತ್ಯಕ್ಕೆ ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ದಂಡ ಬೀಳಲಿದೆ. ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಹಿಡಿದು ಬ್ಯಾಂಕ್‌ ಲಾಕರ್‌ ಒಪ್ಪಂದ ನವೀಕರಣದವರೆಗೆ ಹಲವು ವಿಚಾರಗಳಿಗೆ ಕೇಂದ್ರ ಡಿಸೆಂಬರ್‌ 31ರ ವರೆಗೆ ಗಡುವು ನೀಡಿದೆ. ಅವಧಿ ಮೀರಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಜತೆಗೆ ಬಳಿಕ ಅದಕ್ಕಾಗಿ ಓಡಾಡುವ ಸಂಧಿಗ್ಥತೆಯೂ ಎದುರಾಗಬಹುದು. ಹೀಗಾಗಿ ಯಾವೆಲ್ಲ ಕರ್ತವ್ಯಗಳನ್ನು ಶೀಘ್ರ ಮುಗಿಸಬೇಕು ಎನ್ನುವುದನ್ನು ಮನಿಗೈಡ್‌ (Money Guide) ವಿವರಿಸಲಿದೆ.

ಆಧಾರ್‌ ಕಾರ್ಡ್‌ ನವೀಕರಣ

ಪ್ರಸ್ತುತ ಆಧಾರ್‌ ಕಾರ್ಡ್‌ ಪ್ರಮುಖ ದಾಖಲೆಯಾಗಿ ಬದಲಾಗಿದೆ. ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆಯುವುದರಿಂದ ಹಿಡಿದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರೆಗೆ ಆಧಾರ್‌ ಕಾರ್ಡ್‌ ಬೇಕೇ ಬೇಕು. ಈ ಹಿಂದೆ ಸರ್ಕಾರ ಆಧಾರ್‌ ಕಾರ್ಡ್‌ ಮಾಡಿಸಿ 10 ವರ್ಷ ಪೂರೈಸಿದವರು ನವೀಕರಣ ಮಾಡಿಸಬೇಕು ಎಂದು ಸೂಚಿಸಿತ್ತು. ಯೂನಿಕ್‌ ಐಡೆಂಟಿಫಿಕೇಷನ್‌ ಅಥಾರಟಿ ಆಫ್‌ ಇಂಡಿಯಾ (Unique Identification Authority of India-UIDAI) ಉಚಿತವಾಗಿ ಆಧಾರ್‌ ಕಾರ್ಡ್‌ ನವೀಕರಿಸುವ ದಿನಾಂಕವನ್ನು 2023ರ ಡಿಸೆಂಬರ್‌ 31ರ ವರೆಗೂ ವಿಸ್ತರಿಸಿದೆ. ಈ ಅವಧಿಯಲ್ಲಿ ವಿಳಾಸ, ಫೋನ್ ಸಂಖ್ಯೆ, ಇಮೇಲ್ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು ಎಂದು ಸೂಚಿಸಿತ್ತು. 2023ರ ಡಿಸೆಂಬರ್ 31ರ ನಂತರ ನೀವು ನವೀಕರಣಕ್ಕಾಗಿ ಶುಲ್ಕ ಪಾವತಿಸಬೇಕಾಗುತ್ತದೆ.

ಬ್ಯಾಂಕ್‌ ಲಾಕರ್‌ ಒಪ್ಪಂದದ ನವೀಕರಣ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಿಕೊಳ್ಳಲು ಬ್ಯಾಂಕ್‌ಗಳಿಗೆ (Bank locker agreement) ನೀಡಿದ್ದ ಗಡುವನ್ನು 2023ರ ಡಿಸೆಂಬರ್‌ 31ರ ತನಕ ವಿಸ್ತರಿಸಿತ್ತು. ಆರ್‌ಬಿಐ ಈ ಹಿಂದೆ 2021ರ ಆಗಸ್ಟ್‌ 18ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, 2023ರ ಜನವರಿ 1ರೊಳಗೆ ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಬಳಿಕ ಡಿಸೆಂಬರ್‌ 31ರ ತನಕ ನವೀಕರಿಸಿಕೊಳ್ಳಲು ಕಾಲಾವಕಾಶ ವಿಸ್ತರಿಸಿತ್ತು. ಹೊಸ ಲಾಕರ್ ಒಪ್ಪಂದಗಳು ಕೆಲವು ಪ್ರಮುಖ ಬದಲಾವಣೆಗಳನ್ನು ಹೊಂದಿದೆ. ಉದಾಹರಣೆಗೆ ಲಾಕರ್‌ ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ಬ್ಯಾಂಕ್‌ಗಳು ಪಾವತಿಸಬೇಕಾದ ಪರಿಹಾರದ ಮೊತ್ತ ಹೆಚ್ಚಳ ಇತ್ಯಾದಿ.

ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಸಲ್ಲಿಕೆ

ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (SEBI) ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಅರ್ಜಿಗಳನ್ನು ಸಲ್ಲಿಸುವ ಗಡುವನ್ನು ಡಿಸೆಂಬರ್ 31, 2023ರ ವರೆಗೆ ವಿಸ್ತರಿಸಿದೆ. ನಾಮನಿರ್ದೇಶನ ಅರ್ಜಿಯು ಮರಣದ ನಂತರ ಡಿಮ್ಯಾಟ್ ಸೆಕ್ಯುರಿಟಿಗಳನ್ನು ಯಾರು ಪಡೆಯಬೇಕು ಎಂಬುದನ್ನು ನಿರ್ಧರಿಸಲು ನೆರವಾಗುತ್ತದೆ.

ಇದನ್ನೂ ಓದಿ: Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?

ವಿಶೇಷ ಸ್ಥಿರ ಠೇವಣಿ(ಫಿಕ್ಸ್‌ಡ್‌ ಡೆಪಾಸಿಟ್‌)ಗಳಲ್ಲಿ ಹೂಡಿಕೆ

ಕೆಲವು ಬ್ಯಾಂಕ್‌ಗಳು 2023ರ ಡಿಸೆಂಬರ್‌ವರೆಗೆ ಹೆಚ್ಚಿನ ಬಡ್ಡಿದರಗಳೊಂದಿಗೆ ವಿಶೇಷ ಸ್ಥಿರ ಠೇವಣಿಗಳನ್ನು ನೀಡುತ್ತಿವೆ. ಅದಾಗ್ಯೂ ಈ ಠೇವಣಿಗಳಲ್ಲಿ ಹೂಡಿಕೆ ಮಾಡಲು ಗಡುವು ಇದೆ. ಉದಾಹರಣೆಗೆ ಇಂಡಿಯನ್ ಬ್ಯಾಂಕ್‌ನ ʼಇಂಡ್ ಸೂಪರ್ 400ʼ ಮತ್ತು ʼಇಂಡ್ ಸುಪ್ರೀಂ 300 ಡೇಸ್ʼ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31, 2023. ಜತೆಗೆ ಎಸ್‌ಬಿಐಯ ಅಮೃತ್ ಕಲಾಶ್ ಯೋಜನೆ ಕೂಡ ಡಿಸೆಂಬರ್ ಕೊನೆಯ ದಿನಕ್ಕೆ ಕೊನೆಯಾಗಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಎಸ್‌ಬಿಐ ಪರಿಚಯಿಸಿದ್ದ ಅಮೃತ್‌ ಕಲಾಶ್‌ ಯೋಜನೆ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಬಳಿಕ ದಿನಾಂಕವನ್ನು ಬ್ಯಾಂಕ್‌ ವಿಸ್ತರಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ನಿಷ್ಕ್ರಿಯ ಪೋಸ್ಟ್‌ ಆಫೀಸ್‌ ಸೇವಿಂಗ್‌ ಅಕೌಂಟ್‌ ಹೀಗೆ ಸಕ್ರಿಯಗೊಳಿಸಿ…

Money Guide: ನಿಮ್ಮ ಪೋಸ್ಟ್‌ ಆಫೀಸ್‌ ಸೇವಿಂಗ್‌ ಅಕೌಂಟ್‌ ನಿಷ್ಕ್ರೀಯವಾಗಿದ್ದರೆ ಚಿಂತೆ ಬಿಡಿ. ಅದನ್ನು ಸುಲಭವಾಗಿ ಸಕ್ರೀಯಗೊಳಿಸುವ ವಿಧಾನದ ವಿವರ ಇಲ್ಲಿದೆ.

VISTARANEWS.COM


on

post office new
Koo

ಬೆಂಗಳೂರು: ಮೊದಲೆಲ್ಲ ಅಂಚೆ ಕಚೇರಿ ಎಂದರೆ ಥಟ್ಟನೆ ನೆನಪಿಗೆ ಬರುತ್ತಿದ್ದುದು ಪತ್ರ ವ್ಯವಹಾರ. ಆದರೀಗ ಅಂಚೆ ಕಚೇರಿಗಳು ಬ್ಯಾಂಕ್‌ಗಳಾಗಿಯೂ ಮಾರ್ಪಾಡಾಗಿವೆ. ಉಳಿತಾಯ ಎಂದಾಗ ಈಗ ಬ್ಯಾಂಕ್‌ ಜತೆಗೆ ಅಂಚೆ ಕಚೇರಿಯೂ ನೆನಪಿಗೆ ಬರುತ್ತದೆ. ಯಾಕೆಂದರೆ ಪೋಸ್ಟ್‌ ಆಫೀಸ್‌ ಬ್ಯಾಂಕ್‌ಗಳಲ್ಲಿ (Post Office Schemes) ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ (Interest) ಸಿಗುವುದರಿಂದ ಹೆಚ್ಚಿನ ಜನರು ಪೋಸ್ಟ್‌ ಆಫೀಸ್‌ ಉಳಿತಾಯ ಯೋಜನೆಗಳ (Saving Schemes) ಮೂಲಕ ಲಾಭ ಗಳಿಸುತ್ತಿದ್ದಾರೆ. ಇಂದಿನ ಮನಿಗೈಡ್‌ (Money Guide)ನಲ್ಲಿ ಪೋಸ್ಟ್‌ ಆಫೀಸ್‌ನ ನಿಷ್ಕ್ರಿಯ ಖಾತೆಯನ್ನು ಹೇಗೆ ಪುನಃ ಸಕ್ರೀಯಗೊಳಿಸುವುದು ಎನ್ನುವುದನ್ನು ನೋಡೋಣ.

ಯಾವಾಗ ನಿಷ್ಕ್ರಿಯವಾಗುತ್ತದೆ?

ನಿರ್ದಿಷ್ಟ ಅವಧಿಯವರೆಗೆ ಖಾತೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿದ್ದಾಗ ಅಂಚೆ ಕಚೇರಿಯಲ್ಲಿ ಖಾತೆಯನ್ನು ನಿಷ್ಕ್ರೀಯವೆಂದು ಪರಿಗಣಿಸಲಾಗುತ್ತದೆ. ಅಂದರೆ ಸತತ ಮೂರು ಹಣಕಾಸು ವರ್ಷಗಳ ಅವಧಿಯಲ್ಲಿ ಖಾತೆಯಲ್ಲಿ ಯಾವುದೇ ಠೇವಣಿ ಹೂಡಿಕೆ ಅಥವಾ ವಿತ್‌ಡ್ರಾ ನಡೆಯದಿದ್ದರೆ ಆ ಖಾತೆಯನ್ನು ಸುಪ್ತ (ನಿಷ್ಕ್ರಿಯ) ಎಂದು ಕರೆಯಲಾಗುತ್ತದೆ.

ಪುನಃ ಸಕ್ರಿಯಗೊಳಿಸಲು ಸಾಧ್ಯವೇ?

ಖಂಡಿತ ಸಾಧ್ಯವಿದೆ. ಕೆಲವೊಂದು ಡಾಕ್ಯುಮೆಂಟ್‌ ಸಲ್ಲಿಸುವ ಮೂಲಕ ಖಾತೆಯನ್ನು ಮತ್ತೆ ಚಾಲ್ತಿಗೆ ತರಬಹುದು. ಹೊಸ ಕೆವೈಸಿ ದಾಖಲೆಗಳು ಮತ್ತು ಪಾಸ್‌ಬುಕ್‌ನೊಂದಿಗೆ ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ನಿಮ್ಮ ಪೋಸ್ಟ್‌ ಆಫೀಸ್‌ನ ಖಾತೆ ಮತ್ತೆ ಕಾರ್ಯ ನಿರ್ವಹಿಸಲಿದೆ.

ಖಾತೆ ತೆರೆಯುವುದು ಸುಲಭ

ಪೋಸ್ಟ್‌ ಆಫೀಸ್‌ನ ಖಾತೆಯ ಮುಖ್ಯ ಅನುಕೂಲವೆಂದರೆ ಇಲ್ಲಿ ಅಕೌಂಟ್‌ ತೆರೆಯುವುದು ಬಹಳ ಸುಲಭ.  ಅಗತ್ಯ ದಾಖಲೆ ನೀಡಿ, ಕೇವಲ 500 ರೂ. ಡೆಪಾಸಿಟ್‌ ಮಾಡಿದರೆ ಉಳಿತಾಯ ಖಾತೆ ತೆರೆಯಲಾಗುತ್ತದೆ. ಇನ್ನು ಚೆಕ್‌ಬುಕ್‌, ಎಟಿಎಂ ಕಾರ್ಡ್‌, ಇ-ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳೂ ಇವೆ. ವರ್ಷಕ್ಕೆ ಶೇ. 4ರಷ್ಟು ಬಡ್ಡಿಯೂ ಸಿಗುತ್ತದೆ.

ಯಾರೆಲ್ಲ ತೆರೆಯಬಹುದು?

  • ವಯಸ್ಕರು (18 ವರ್ಷ ಪ್ರಾಯ ಪೂರ್ತಿಯಾದವರು)
  • ಅಪ್ರಾಪ್ತ ವಯಸ್ಕರ ಪರವಾಗಿ ಪೋಷಕರು
  • ಮಾನಸಿಕ ಅಸ್ವಸ್ಥರ ಪರವಾಗಿ ಪಾಲಕರು

ಠೇವಣಿ ಮತ್ತು ವಿತ್‌ಡ್ರಾ ವಿವರ

  • ಕನಿಷ್ಠ ಹೂಡಿಕೆ ಮೊತ್ತ 500 ರೂ.
  • ಕನಿಷ್ಠ ವಿತ್‌ಡ್ರಾ ಮೊತ್ತ 50 ರೂ.
  • ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ
  • ಕನಿಷ್ಠ ಬ್ಯಾಲೆನ್ಸ್ 500 ರೂ. ಇರಲೇ ಬೇಕು.
  • ಖಾತೆಯ ಬ್ಯಾಲೆನ್ಸ್ ಶೂನ್ಯವಾದರೆ ಖಾತೆ ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.

ಇದನ್ನೂ ಓದಿ: Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?

ಬಡ್ಡಿದರ

  • ತಿಂಗಳ 10ನೇ ತಾರೀಕಿನಿಂದ ತಿಂಗಳ ಅಂತ್ಯದವರೆಗೆ ಕನಿಷ್ಠ ಬ್ಯಾಲೆನ್ಸ್ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.
  • 10ನೇ ತಾರೀಕಿನಿಂದ ಕೊನೆಯ ದಿನದ ನಡುವಿನ ಬ್ಯಾಲೆನ್ಸ್ 500 ರೂ.ಗಿಂತ ಕಡಿಮೆಯಿದ್ದರೆ ಯಾವುದೇ ಬಡ್ಡಿ ಲಭಿಸುವುದಿಲ್ಲ
  • ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಹಣಕಾಸು ಸಚಿವಾಲಯ ಸೂಚಿಸಿದ ಬಡ್ಡಿದರವನ್ನು ಖಾತೆಗೆ ಜಮಾ ಮಾಡಲಾಗುತ್ತದೆ
  • ಖಾತೆಯನ್ನು ಮುಚ್ಚುವ ಸಮಯದಲ್ಲಿ, ಖಾತೆಯನ್ನು ಮುಚ್ಚಿದ ಹಿಂದಿನ ತಿಂಗಳವರೆಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ.

ಆರ್‌ಡಿ ಖಾತೆ

ಪೋಸ್ಟ್‌ ಆಫೀಸ್‌ನಲ್ಲಿ ಆರ್‌ಡಿ (Recurring Deposit) ಖಾತೆ ತೆಗೆಯುವುದು ಉಳಿತಾಯ ಖಾತೆ ತೆರೆದಷ್ಟೇ ಸುಲಭ. ಪೋಸ್ಟ್‌ ಆಫೀಸ್‌ನಲ್ಲಿ ಉಳಿತಾಯ ಖಾತೆ ಹೊಂದಿದವರು ಆರ್‌ಡಿ ಮಾಡಬಹುದಾಗಿದೆ. ಐದು ವರ್ಷದ ಅವಧಿಗೆ ಮಾಸಿಕ ಇಂತಿಷ್ಟು ಹಣ ಕಟ್ಟುತ್ತ ಹೋದರೆ ಐದು ವರ್ಷಕ್ಕೆ ಶೇ. 6.2ರಷ್ಟು ಬಡ್ಡಿಯ ಲಾಭ ದೊರೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading
Advertisement
Attendance Araga Jnanendra UT Khader Araga jnanendra
ಕರ್ನಾಟಕ7 mins ago

Belagavi Winter Session : ನಾವೂ ಟೈಮಿಗೆ ಸರಿಯಾಗಿ ಬಂದಿದ್ದೀವಿ; ಸ್ಪೀಕರ್‌ ಜತೆ ಶಾಸಕರ ಜಗಳ!

Madhu Bangarappa in Belagavi Winter Session
ಕರ್ನಾಟಕ24 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ29 mins ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ30 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ31 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ48 mins ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ48 mins ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ57 mins ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Wedding Fashion
ಫ್ಯಾಷನ್1 hour ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್1 hour ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ24 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ1 hour ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ7 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ14 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌