Site icon Vistara News

New financial rules : ಮ್ಯೂಚುವಲ್‌ ಫಂಡ್‌ನಿಂದ ಎಲ್ಪಿಜಿ ದರದ ತನಕ ಹೊಸ ಬದಲಾವಣೆ ಏನು? ಇಲ್ಲಿದೆ ಡಿಟೇಲ್ಸ್

cash

ಬೆಂಗಳೂರು: ಮೇ 1ರಿಂದ ಮ್ಯೂಚುವಲ್‌ ಫಂಡ್‌ನಿಂದ ಎಟಿಎಂ ವರ್ಗಾವಣೆಗಳು, ಎಲ್ಪಿಜಿ ದರದ ತನಕ ಹಲವಾರು ವಿಷಯಗಳಿಗೆ ಸಂಬಂಧಿಸಿ ಹಲವಾರು ಹೊಸ ಬದಲಾವಣೆಗಳು ಜಾರಿಯಾಗುತ್ತಿವೆ. (Changes from today) ವಿವರಗಳು ಇಲ್ಲಿವೆ.

ಜಿಎಸ್‌ಟಿ ನಿಯಮಗಳಲ್ಲಿ ಬದಲಾವಣೆ: ಜಿಎಸ್‌ಟಿ ಕುರಿತ ಹೊಸ ನಿಯಮಗಳು 2023ರ ಮೇ 1ರಿಂದ ಜಾರಿಯಾಗಲಿದೆ. ( New GST Rules) ನೂತನ ನಿಯಮಗಳ ಪ್ರಕಾರ 100 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ಇರುವ ಜಿಎಸ್‌ಟಿ ಪಾವತಿದಾರರು ತಮ್ಮ ಎಲೆಕ್ಟ್ರಾನಿಕ್‌ ಇನ್‌ವಾಯ್ಸ್‌ ಅನ್ನು ಇನ್‌ವಾಯ್ಸ್‌ ರಿಜಿಸ್ಟ್ರೇಶನ್‌ ಪೋರ್ಟಲ್‌ನಲ್ಲಿ (Invoice Registration Portal) 7 ದಿನಗಳೊಳಗೆ ಮಾಡಬಹುದು. ಸಕಾಲಕ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸವ ಸಲುವಾಗಿ 7 ದಿನಗಳಿಂತ ಹಳೆಯ ಇನ್‌ ವಾಯ್ಸ್‌ಗಳನ್ನು ರಿಪೋರ್ಟ್‌ ಮಾಡುವಂತಿಲ್ಲ ಎಂದು ಜಿಎಸ್‌ಟಿ ನೆಟ್‌ ವರ್ಕ್‌ (GSTN) ತಿಳಿಸಿದೆ.

ಹೊಸ ಜಿಎಸ್‌ಟಿ ನಿಯಮ ಏನೆನ್ನುತ್ತದೆ?

ಹೊಸ ನಿಯಮದ ಲಾಭವೇನು?

ದೊಡ್ಡ ಕಂಪನಿಗಳು ಹಳೆಯ ದಿನಾಂಕಗಳನ್ನು ನಮೂದಿಸಿ ಇ-ಇನ್‌ ವಾಯ್ಸ್‌ಗಳನ್ನು ಕಳಿಸುವ ಪರಿಪಾಠ ತಪ್ಪಲಿದೆ. ಆಯಾ ಕಾಲದ ಇ-ಇನ್‌ವಾಯ್ಸ್‌ ಸಕಾಲಕ್ಕೆ ಸಲ್ಲಿಕೆಯಾಗಲಿದೆ.

ಈಗ ವಾರ್ಷಿಕ 10 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಇರುವವರು ಎಲೆಕ್ಟ್ರಾನಿಕ್‌ ಇನ್‌ ವಾಯ್ಸ್‌ ಅನ್ನು ಎಲ್ಲ ಬಿ2ಬಿ ಟ್ರಾನ್ಸಕ್ಷನ್‌ಗಳಿಗೆ (B2B transactions) ಎಲೆಕ್ಟ್ರಾನಿಕ್‌ ಇನ್‌ ವಾಯ್ಸ್‌ ಸಲ್ಲಿಸಬೇಕಾಗುತ್ತದೆ. 2020ರ ಅಕ್ಟೋಬರ್‌ 1ರಿಂದ 500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಇರುವ ಕಂಪನಿಗಳಿಗೆ ಬಿ2ಬಿ ಟ್ರಾನ್ಸಕ್ಷನ್‌ಗಳಲ್ಲಿ ಇ-ಇನ್‌ ವಾಯ್ಸ್‌ ಕಡ್ಡಾಯವಾಗಿತ್ತು. ಬಳಿಕ ಈ ನಿಯಮವನ್ನು 100 ಕೋಟಿ ರೂ. ವಹಿವಾಟು ಹೊಂದಿದವರಿಗೂ 2021ರ ಜನವರಿ 1ರಿಂದ ವಿಸ್ತರಿಸಲಾಯಿತು. 2021ರ ಏಪ್ರಿಲ್‌ನಿಂದ 50 ಕೋಟಿ ರೂ. ವಹಿವಾಟಿಗೆ, 2022 ಏಪ್ರಿಲ್‌ 1ರಿಂದ 20 ಕೋಟಿ ರೂ. ವಹಿವಾಟಿಗೆ ಹಾಗೂ ಬಳಿಕ 10 ಕೋಟಿ ರೂ. ವಹಿವಾಟಿಗೆ ವಿಸ್ತರಿಸಲಾಯಿತು.

ವಾಣಿಜ್ಯ ಉದ್ದೇಶದ ಎಲ್ಪಿಜಿ ಸಿಲಿಂಡರ್‌ ದರ ಇಳಿಕೆ

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್‌ ಸಿಲಿಂಡರ್‌ ದರದಲ್ಲಿ ಗಣನೀಯ ದರ ಇಳಿಕೆಯನ್ನು ಪ್ರಕಟಿಸಿವೆ. 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ( Commercial LPG cylinder) ಸೋಮವಾರದಿಂದ (ಮೇ 1) ಇಳಿಕೆಯಾಗಿದೆ. (LPG Price Cut) ಇದರಿಂದಾಗಿ ದಿಲ್ಲಿಯಲ್ಲಿ 19 ಕೆ.ಜಿ ಕಮರ್ಶಿಯಲ್‌ ಎಲ್ಪಿಜಿ ದರ ಈಗ 1856.50 ರೂ.ಗೆ ತಗ್ಗಿದೆ. ಮನೆಗಳಲ್ಲಿ ಬಳಕೆ ಮಾಡುವ ಅಡುಗೆ ಅನಿಲ ದರದಲ್ಲಿ ಬದಲಾವಣೆ ಆಗಿಲ್ಲ.

2023ರ ಏಪ್ರಿಲ್‌ 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 91.50 ರೂ. ಕಡಿತ ಮಾಡಿದ್ದವು. ಆಗ ದಿಲ್ಲಿಯಲ್ಲಿ 19 ಕೆಜಿ ಕಮರ್ಷಿಯಲ್‌ ಸಿಲಿಂಡರ್‌ ದರ 2,028 ರೂ. ಇತ್ತು. ಕಳೆದ ಮಾರ್ಚ್‌ 1ರಂದು ತೈಲ ಮಾರುಕಟ್ಟೆ ಕಂಪನಿಗಳು ಕಮರ್ಶಿಯಲ್‌ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 350.50 ರೂ. ಏರಿಕೆ ಮಾಡಿತ್ತು. ಡೊಮೆಸ್ಟಿಕ್‌ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 50 ರೂ. ಏರಿಸಲಾಗಿತ್ತು.

2022ರ ಸೆಪ್ಟೆಂಬರ್‌ 1ರಂದು ಕಮರ್ಶಿಯಲ್‌ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 91.50 ರೂ.ಗಳನ್ನು ಏರಿಸಲಾಗಿತ್ತು. 2022ರ ಆಗಸ್ಟ್‌ 1ರಂದು 36 ರೂ. ಕಡಿತ ಮಾಡಲಾಗಿತ್ತು. ಕೋಲ್ಕೊತಾದಲ್ಲಿ 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ಈಗ 1960.50 ರೂ.ಗೆ ಇಳಿದಿದೆ. ಅಲ್ಲಿ ಈ ಹಿಂದೆ 2132 ರೂ. ಇತ್ತು. ಮುಂಬಯಿನಲ್ಲಿ 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ಈಗ 1808 ರೂ.ಗೆ ಇಳಿದಿದೆ. ಈ ಹಿಂದೆ 1980 ರೂ. ಇತ್ತು. ಚೆನ್ನೈನಲ್ಲಿ ಈಗ 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ 2021 ರೂ.ಗೆ ಇಳಿದಿದೆ. ಈ ಹಿಂದೆ 2192 ರೂ. ಇತ್ತು.

19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ಇಳಿಕೆಯಿಂದ ಹೋಟೆಲ್‌, ರೆಸ್ಟೊರೆಂಟ್‌, ಉದ್ದಿಮೆಗಳಿಗೆ ಅನುಕೂಲವಾಗಲಿದೆ. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಹಾದಿ ಸುಗಮವಾಗಲಿದೆ. ಹಣದುಬ್ಬರ ನಿಯಂತ್ರಿಸಲು ಕೂಡ ಸಹಕಾರಿಯಾಗುವ ನಿರೀಕ್ಷೆ ಇದೆ.

ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ಬದಲಾವಣೆ ಏನು?

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಇ-ವ್ಯಾಲೆಟ್‌ ಮೂಲಕ ಮ್ಯೂಚುವಲ್‌ ಫಂಡ್‌ ಹೂಡಿಕೆ ಮಾಡುತ್ತಿದ್ದರೆ ಕೆವೈಸಿಯನ್ನು ಹೊಂದಿರಬೇಕು. ಇಲ್ಲದಿದ್ದರೆ ಮೇ 1ರ ಬಳಿಕ ಇ-ವ್ಯಾಲೆಟ್‌ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಲು ಸಾಧ್ಯವಾಗುವುದಿಲ್ಲ.

ಎಟಿಎಂ ಶುಲ್ಕ ಬದಲಾವಣೆ:

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಗ್ರಾಹಕರು ಮೇ 1ರ ಬಳಿಕ ತಮ್ಮ ಬ್ಯಾಂಕ್‌ ಖಾತೆಯಲ್ಲಿ ಸೂಕ್ತ ಬ್ಯಾಲೆನ್ಸ್‌ ಇಲ್ಲದೆ ಎಟಿಎಂನಲ್ಲಿ ಹೆಚ್ಚು ನಗದು ವಿತ್‌ ಡ್ರಾವಲ್ಸ್‌ ಮಾಡಲು ಯತ್ನಿಸಿದರೆ, 10 ರೂ. ಹಾಗೂ ಜಿಎಸ್‌ಟಿ ನೀಡಬೇಕಾಗುತ್ತದೆ.

Exit mobile version