New financial rules What is the new change from mutual fund to LPG rate Here are the detailsNew financial rules : ಮ್ಯೂಚುವಲ್‌ ಫಂಡ್‌ನಿಂದ ಎಲ್ಪಿಜಿ ದರದ ತನಕ ಹೊಸ ಬದಲಾವಣೆ ಏನು? ಇಲ್ಲಿದೆ ಡಿಟೇಲ್ಸ್

ಪ್ರಮುಖ ಸುದ್ದಿ

New financial rules : ಮ್ಯೂಚುವಲ್‌ ಫಂಡ್‌ನಿಂದ ಎಲ್ಪಿಜಿ ದರದ ತನಕ ಹೊಸ ಬದಲಾವಣೆ ಏನು? ಇಲ್ಲಿದೆ ಡಿಟೇಲ್ಸ್

New financial rules ಮ್ಯೂಚುವಲ್‌ ಫಂಡ್‌ನಿಂದ ವಾಣಿಜ್ಯ ಎಲ್ಪಿಜಿ ದರದ ತನಕ ಹಲವು ಬದಲಾವಣೆಗಳು ಮೇ 1ರಿಂದ ಅನ್ವಯವಾಗಲಿದೆ. ವಿವರ ಇಲ್ಲಿದೆ.

VISTARANEWS.COM


on

cash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮೇ 1ರಿಂದ ಮ್ಯೂಚುವಲ್‌ ಫಂಡ್‌ನಿಂದ ಎಟಿಎಂ ವರ್ಗಾವಣೆಗಳು, ಎಲ್ಪಿಜಿ ದರದ ತನಕ ಹಲವಾರು ವಿಷಯಗಳಿಗೆ ಸಂಬಂಧಿಸಿ ಹಲವಾರು ಹೊಸ ಬದಲಾವಣೆಗಳು ಜಾರಿಯಾಗುತ್ತಿವೆ. (Changes from today) ವಿವರಗಳು ಇಲ್ಲಿವೆ.

ಜಿಎಸ್‌ಟಿ ನಿಯಮಗಳಲ್ಲಿ ಬದಲಾವಣೆ: ಜಿಎಸ್‌ಟಿ ಕುರಿತ ಹೊಸ ನಿಯಮಗಳು 2023ರ ಮೇ 1ರಿಂದ ಜಾರಿಯಾಗಲಿದೆ. ( New GST Rules) ನೂತನ ನಿಯಮಗಳ ಪ್ರಕಾರ 100 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ಇರುವ ಜಿಎಸ್‌ಟಿ ಪಾವತಿದಾರರು ತಮ್ಮ ಎಲೆಕ್ಟ್ರಾನಿಕ್‌ ಇನ್‌ವಾಯ್ಸ್‌ ಅನ್ನು ಇನ್‌ವಾಯ್ಸ್‌ ರಿಜಿಸ್ಟ್ರೇಶನ್‌ ಪೋರ್ಟಲ್‌ನಲ್ಲಿ (Invoice Registration Portal) 7 ದಿನಗಳೊಳಗೆ ಮಾಡಬಹುದು. ಸಕಾಲಕ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸವ ಸಲುವಾಗಿ 7 ದಿನಗಳಿಂತ ಹಳೆಯ ಇನ್‌ ವಾಯ್ಸ್‌ಗಳನ್ನು ರಿಪೋರ್ಟ್‌ ಮಾಡುವಂತಿಲ್ಲ ಎಂದು ಜಿಎಸ್‌ಟಿ ನೆಟ್‌ ವರ್ಕ್‌ (GSTN) ತಿಳಿಸಿದೆ.

gst

ಹೊಸ ಜಿಎಸ್‌ಟಿ ನಿಯಮ ಏನೆನ್ನುತ್ತದೆ?

  • ಜಿಎಸ್‌ಟಿ ನೆಟ್‌ ವರ್ಕ್‌ ತೆರಿಗೆದಾರರಿಗೆ ನೀಡಿರುವ ಸಲಹೆಯಲ್ಲಿ ಸರ್ಕಾರ ಹಳೆಯ ಇನ್‌ ವಾಯ್ಸ್‌ಗಳನ್ನು ಇ-ಇನ್‌ ವಾಯ್ಸ್‌ ಐಆರ್‌ಪಿ ಪೋರ್ಟಲ್‌ನಲ್ಲಿ ರಿಪೋರ್ಟ್‌ ಮಾಡಲು ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಿದೆ. ವಾರ್ಷಿಕ 100 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಇರುವವರಿಗೆ ಇದು ಅನ್ವಯವಾಗುತ್ತದೆ.
  • ಈ ಮಿತಿಯು ಇನ್‌ ವಾಯ್ಸ್‌ಗೆ (Invoice) ಅನ್ವಯಿಸುತ್ತದೆ. ಉದಾಹರಣೆಗೆ ಒಂದು ಇನ್‌ ವಾಯ್ಸ್‌ ಏಪ್ರಿಲ್‌ 1, 2023ರ ದಿನಾಂಕ ಹೊಂದಿದ್ದರೆ ಏಪ್ರಿಲ್‌ 8, 2023ರ ಬಳಿಕ ರಿಪೋರ್ಟ್‌ ಮಾಡಲು ಸಾಧ್ಯವಾಗುವುದಿಲ್ಲ.
  • ಇ-ಇನ್‌ ವಾಯ್ಸ್‌ ವ್ಯವಸ್ಥೆಯಲ್ಲಿ 7 ದಿನಗಳಿಂತ ಹಳೆಯ ಇನ್‌ ವಾಯ್ಸ್‌ ಅನ್ನು ಕೈಬಿಡಲಾಗುವುದು.
  • ಹೀಗಾಗಿ ತೆರಿಗೆದಾರರು 7 ದಿನಗಳ ಅವಧಿಯೊಳಗೆ ರಿಪೋರ್ಟ್‌ ಮಾಡುವುದು ನಿರ್ಣಾಯಕವಾಗಿರುತ್ತದೆ ಎಂದು ಜಿಎಸ್‌ಟಿಎನ್‌ ತಿಳಿಸಿದೆ.
  • ಜಿಎಸ್‌ಟಿ ಕಾನೂನು ಪ್ರಕಾರ ಇನ್‌ ವಾಯ್ಸ್‌ ಐಆರ್‌ಪಿಯಲ್ಲಿ ಅಪ್‌ ಲೋಡ್‌ ಆಗದಿದ್ದರೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ITC) ಸಿಗುವುದಿಲ್ಲ.

ಹೊಸ ನಿಯಮದ ಲಾಭವೇನು?

ದೊಡ್ಡ ಕಂಪನಿಗಳು ಹಳೆಯ ದಿನಾಂಕಗಳನ್ನು ನಮೂದಿಸಿ ಇ-ಇನ್‌ ವಾಯ್ಸ್‌ಗಳನ್ನು ಕಳಿಸುವ ಪರಿಪಾಠ ತಪ್ಪಲಿದೆ. ಆಯಾ ಕಾಲದ ಇ-ಇನ್‌ವಾಯ್ಸ್‌ ಸಕಾಲಕ್ಕೆ ಸಲ್ಲಿಕೆಯಾಗಲಿದೆ.

ಈಗ ವಾರ್ಷಿಕ 10 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಇರುವವರು ಎಲೆಕ್ಟ್ರಾನಿಕ್‌ ಇನ್‌ ವಾಯ್ಸ್‌ ಅನ್ನು ಎಲ್ಲ ಬಿ2ಬಿ ಟ್ರಾನ್ಸಕ್ಷನ್‌ಗಳಿಗೆ (B2B transactions) ಎಲೆಕ್ಟ್ರಾನಿಕ್‌ ಇನ್‌ ವಾಯ್ಸ್‌ ಸಲ್ಲಿಸಬೇಕಾಗುತ್ತದೆ. 2020ರ ಅಕ್ಟೋಬರ್‌ 1ರಿಂದ 500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಇರುವ ಕಂಪನಿಗಳಿಗೆ ಬಿ2ಬಿ ಟ್ರಾನ್ಸಕ್ಷನ್‌ಗಳಲ್ಲಿ ಇ-ಇನ್‌ ವಾಯ್ಸ್‌ ಕಡ್ಡಾಯವಾಗಿತ್ತು. ಬಳಿಕ ಈ ನಿಯಮವನ್ನು 100 ಕೋಟಿ ರೂ. ವಹಿವಾಟು ಹೊಂದಿದವರಿಗೂ 2021ರ ಜನವರಿ 1ರಿಂದ ವಿಸ್ತರಿಸಲಾಯಿತು. 2021ರ ಏಪ್ರಿಲ್‌ನಿಂದ 50 ಕೋಟಿ ರೂ. ವಹಿವಾಟಿಗೆ, 2022 ಏಪ್ರಿಲ್‌ 1ರಿಂದ 20 ಕೋಟಿ ರೂ. ವಹಿವಾಟಿಗೆ ಹಾಗೂ ಬಳಿಕ 10 ಕೋಟಿ ರೂ. ವಹಿವಾಟಿಗೆ ವಿಸ್ತರಿಸಲಾಯಿತು.

ವಾಣಿಜ್ಯ ಉದ್ದೇಶದ ಎಲ್ಪಿಜಿ ಸಿಲಿಂಡರ್‌ ದರ ಇಳಿಕೆ

LPG Price Cut 171.50 rupees decrease in commercial LPG cylinder price

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್‌ ಸಿಲಿಂಡರ್‌ ದರದಲ್ಲಿ ಗಣನೀಯ ದರ ಇಳಿಕೆಯನ್ನು ಪ್ರಕಟಿಸಿವೆ. 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ( Commercial LPG cylinder) ಸೋಮವಾರದಿಂದ (ಮೇ 1) ಇಳಿಕೆಯಾಗಿದೆ. (LPG Price Cut) ಇದರಿಂದಾಗಿ ದಿಲ್ಲಿಯಲ್ಲಿ 19 ಕೆ.ಜಿ ಕಮರ್ಶಿಯಲ್‌ ಎಲ್ಪಿಜಿ ದರ ಈಗ 1856.50 ರೂ.ಗೆ ತಗ್ಗಿದೆ. ಮನೆಗಳಲ್ಲಿ ಬಳಕೆ ಮಾಡುವ ಅಡುಗೆ ಅನಿಲ ದರದಲ್ಲಿ ಬದಲಾವಣೆ ಆಗಿಲ್ಲ.

2023ರ ಏಪ್ರಿಲ್‌ 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 91.50 ರೂ. ಕಡಿತ ಮಾಡಿದ್ದವು. ಆಗ ದಿಲ್ಲಿಯಲ್ಲಿ 19 ಕೆಜಿ ಕಮರ್ಷಿಯಲ್‌ ಸಿಲಿಂಡರ್‌ ದರ 2,028 ರೂ. ಇತ್ತು. ಕಳೆದ ಮಾರ್ಚ್‌ 1ರಂದು ತೈಲ ಮಾರುಕಟ್ಟೆ ಕಂಪನಿಗಳು ಕಮರ್ಶಿಯಲ್‌ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 350.50 ರೂ. ಏರಿಕೆ ಮಾಡಿತ್ತು. ಡೊಮೆಸ್ಟಿಕ್‌ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 50 ರೂ. ಏರಿಸಲಾಗಿತ್ತು.

2022ರ ಸೆಪ್ಟೆಂಬರ್‌ 1ರಂದು ಕಮರ್ಶಿಯಲ್‌ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 91.50 ರೂ.ಗಳನ್ನು ಏರಿಸಲಾಗಿತ್ತು. 2022ರ ಆಗಸ್ಟ್‌ 1ರಂದು 36 ರೂ. ಕಡಿತ ಮಾಡಲಾಗಿತ್ತು. ಕೋಲ್ಕೊತಾದಲ್ಲಿ 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ಈಗ 1960.50 ರೂ.ಗೆ ಇಳಿದಿದೆ. ಅಲ್ಲಿ ಈ ಹಿಂದೆ 2132 ರೂ. ಇತ್ತು. ಮುಂಬಯಿನಲ್ಲಿ 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ಈಗ 1808 ರೂ.ಗೆ ಇಳಿದಿದೆ. ಈ ಹಿಂದೆ 1980 ರೂ. ಇತ್ತು. ಚೆನ್ನೈನಲ್ಲಿ ಈಗ 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ 2021 ರೂ.ಗೆ ಇಳಿದಿದೆ. ಈ ಹಿಂದೆ 2192 ರೂ. ಇತ್ತು.

19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ಇಳಿಕೆಯಿಂದ ಹೋಟೆಲ್‌, ರೆಸ್ಟೊರೆಂಟ್‌, ಉದ್ದಿಮೆಗಳಿಗೆ ಅನುಕೂಲವಾಗಲಿದೆ. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಹಾದಿ ಸುಗಮವಾಗಲಿದೆ. ಹಣದುಬ್ಬರ ನಿಯಂತ್ರಿಸಲು ಕೂಡ ಸಹಕಾರಿಯಾಗುವ ನಿರೀಕ್ಷೆ ಇದೆ.

ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ಬದಲಾವಣೆ ಏನು?

New financial rules  What is the new change from mutual fund to LPG rate Here are the details

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಇ-ವ್ಯಾಲೆಟ್‌ ಮೂಲಕ ಮ್ಯೂಚುವಲ್‌ ಫಂಡ್‌ ಹೂಡಿಕೆ ಮಾಡುತ್ತಿದ್ದರೆ ಕೆವೈಸಿಯನ್ನು ಹೊಂದಿರಬೇಕು. ಇಲ್ಲದಿದ್ದರೆ ಮೇ 1ರ ಬಳಿಕ ಇ-ವ್ಯಾಲೆಟ್‌ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಲು ಸಾಧ್ಯವಾಗುವುದಿಲ್ಲ.

ಎಟಿಎಂ ಶುಲ್ಕ ಬದಲಾವಣೆ:

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಗ್ರಾಹಕರು ಮೇ 1ರ ಬಳಿಕ ತಮ್ಮ ಬ್ಯಾಂಕ್‌ ಖಾತೆಯಲ್ಲಿ ಸೂಕ್ತ ಬ್ಯಾಲೆನ್ಸ್‌ ಇಲ್ಲದೆ ಎಟಿಎಂನಲ್ಲಿ ಹೆಚ್ಚು ನಗದು ವಿತ್‌ ಡ್ರಾವಲ್ಸ್‌ ಮಾಡಲು ಯತ್ನಿಸಿದರೆ, 10 ರೂ. ಹಾಗೂ ಜಿಎಸ್‌ಟಿ ನೀಡಬೇಕಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಭವಿಷ್ಯ

Dina Bhavishya : ಈ ದಿನ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಶುಕ್ಲ ಪಕ್ಷದ ದಶಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಕುಂಭ ರಾಶಿಯಿಂದ ಭಾನುವಾರ ಮಧ್ಯಾಹ್ನ 03:55 ಕ್ಕೆ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ಕನ್ಯಾ, ಧನಸ್ಸು, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಕುಂಭ ರಾಶಿಯವರು ಆಭರಣದ ಹೂಡಿಕೆ ವ್ಯವಹಾರಗಳಲ್ಲಿ ಲಾಭ.ಸಮೃದ್ಧಿ ತುಂಬಿದ ದಿನವಿರಲಿದೆ.ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ಮೀನ ರಾಶಿಯವರಿಗೆ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಅನಿರಿಕ್ಷಿತ ಲಾಭ ಸಿಗಲಿದೆ.ಸಮಸ್ಯೆಗಳ ಕುರಿತು ಚಿಂತೆ ಮಾಡುವುದು ಬೇಡ.ಆರೋಗ್ಯ ಪರಿಪೂರ್ಣ ಇರಲಿದೆ.ಆರ್ಥಿಕವಾಗಿ ಸದೃಢ ವಾತಾವರಣ ಇರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (13-10-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಶುಕ್ಲ ಪಕ್ಷ.
ತಿಥಿ: ದಶಮಿ 2:21 ವಾರ: ಭಾನುವಾರ
ನಕ್ಷತ್ರ: ಧನಿಷ್ಠಾ 26:50 ಯೋಗ: ಶೂಲ 21:24
ಕರಣ: ಗರಜ 09:08 ಅಮೃತಕಾಲ: ಸಂಜೆ 05:09 ರಿಂದ 06:39
ದಿನದ ವಿಶೇಷ: ಶೃಂಗೇರಿ ಶಾರದಾಂಬ ರಥ, ಚನ್ನಪಟ್ಟಣ ಕುಡಿಕೆ ಬೇವೂರು ರಥ

ಸೂರ್ಯೋದಯ : 06:10   ಸೂರ್ಯಾಸ್ತ : 06:02

ರಾಹುಕಾಲ: ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ
3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಇಂದು ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್ಥಿಕವಾಗಿ ಸದೃಢ ಇರಲಿದೆ. ಆರೋಗ್ಯ ಪರಿಪೂರ್ಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ದಿನದಲ್ಲಿ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷ ಮತ್ತು ಆನಂದ ತೆರೆದಿಡುತ್ತದೆ. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಬಗ್ಗೆ ಅನುಭವಿ ಜನರೊಂದಿಗೆ ಮಾತನಾಡಬೇಕು. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಸಭಲತೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಲು ಬಯಸುತ್ತಿದ್ದರೆ ಆರ್ಥಿಕ ಬಿಕ್ಕಟ್ಟು ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ಇಂದು ನೀವು ಇತರರ ಅಗತ್ಯಗಳಿಗೆ ಗಮನ ನೀಡಬೇಕಾದರೂ ಮಕ್ಕಳೊಂದಿಗೆ ಅತೀ ಉದಾರತೆ ತೋರಿಸುವುದು ತೊಂದರೆಗೆ ಕಾರಣವಾಗುತ್ತದೆ. ಆರೋಗ್ಯ ಪರಿಪೂರ್ಣವಾಗಿ ಇದ್ದರು.ದೈಹಿಕ ಶ್ರಮ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದುವ ಸಾಧ್ಯತೆ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಮಕ್ಕಳಿಂದ ಅನಿರೀಕ್ಷಿತ ಸುದ್ದಿ ಸಂತೋಷದ ಕ್ಷಣಗಳನ್ನು ತರುತ್ತದೆ.ಆರೋಗ್ಯ ಪರಿಪೂರ್ಣವಾಗಿರಲಿದೆ.ಕೌಟುಂಬಿಕವಾಗಿ ಶುಭವಾಗಲಿ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಅತಿಥಿಗಳ ಆಗಮನ. ಸಕರಾತ್ಮಕ ಆಲೋಚನೆಗಳು ನಿಮ್ಮ ಉತ್ಸಾಹ ಇಮ್ಮಡಿಗೊಳಿಸಿಲದೆ. ಆರೋಗ್ಯ ಪರಿಪೂರ್ಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ನಕಾರಾತ್ಮಕ ಆಲೋಚನೆಗಳು ತಲೆದೊರಲಿವೆ. ಆದಷ್ಟು ಯೋಗ ಧ್ಯಾನದ ಮೂಲಕ ನೆಮ್ಮದಿ ತಂದುಕೊಳ್ಳುವುದು ಉತ್ತಮ. ಸ್ನೇಹಿತರೊಂದಿಗೆ ಕಾಲಕಳೆಯುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ಇಂದು ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ನಿಮ್ಮ ಭವಿಷ್ಯವನ್ನು ಯೋಜಿಸಲು ಸೂಕ್ತ ದಿನ.ಆರೋಗ್ಯದ ಕುರಿತು ಕಾಳಜಿ ವಹಿಸಿ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ನಿಮ್ಮ ಆರೋಗ್ಯ ಇಂದು ಪರಿಪೂರ್ಣವಾಗಿಲ್ಲದಿದ್ದರಿಂದ ನೀವು ನಿಮ್ಮ ಕೆಲಸದ ಮೇಲೆ ಗಮನ ಕೊಡುವುದು ಕಷ್ಟವಾಗಬಹುದು. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು. ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಸ್ನೇಹಿತರೊಂದಿಗೆ ವಿರಾಮ ಭೋಜನ. ಇದು ಒತ್ತಡದಿಂದ ಕೂಡಿದ್ದರೂ ಹೆಚ್ಚು ಲಾಭದಾಯಕವಾಗಿರುತ್ತದೆ. ಆರೋಗ್ಯದ ಕುರಿತು ಕಾಳಜಿ ಇರಲಿ.ಆರ್ಥಿಕವಾಗಿ ಇಂದು ನಿಮಗೆ ಖರ್ಚಿನ ದಿನ. ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಆಭರಣದ ಹೂಡಿಕೆ ವ್ಯವಹಾರಗಳಲ್ಲಿ ಲಾಭ.ಸಮೃದ್ಧಿ ತುಂಬಿದ ದಿನವಿರಲಿದೆ.ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಮೀನ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಅನಿರಿಕ್ಷಿತ ಲಾಭ ಸಿಗಲಿದೆ.ಸಮಸ್ಯೆಗಳ ಕುರಿತು ಚಿಂತೆ ಮಾಡುವುದು ಬೇಡ.ಆರೋಗ್ಯ ಪರಿಪೂರ್ಣ ಇರಲಿದೆ.ಆರ್ಥಿಕವಾಗಿ ಸದೃಢ ವಾತಾವರಣ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಬೆಂಗಳೂರು

BWSSB : ಬೆಂಗಳೂರಿಗರ ಬಹು ದಿನಗಳ ಕನಸು- ನನಸು; ಅಕ್ಟೋಬರ್ 16ರಂದು ಕಾವೇರಿ ಐದನೇ ಹಂತ ಲೋಕಾರ್ಪಣೆ

BWSSB : ಬೆಂಗಳೂರಿಗರ ಬಹು ದಿನಗಳ ಕನಸು- ನನಸಾಗಲಿದೆ. ಅಕ್ಟೋಬರ್ 16ರಂದು ಕಾವೇರಿ ಐದನೇ ಹಂತ ಲೋಕಾರ್ಪಣೆಗೊಳ್ಳಲಿದೆ.

VISTARANEWS.COM


on

By

bwssb
Koo

ಬೆಂಗಳೂರು: ಬೆಂಗಳೂರು ನಗರ ವಿಶಾಲವಾಗಿ ಬೆಳೆಯುತ್ತಿದ್ದು, ನೀರಿನ ಅವಶ್ಯಕತೆ ಸಹ ಗಮನಾರ್ಹ ಮಟ್ಟದಲ್ಲಿ ಹೆಚ್ಚಾಗಿದೆ. ಸದ್ಯ ನೀರಿನ ಪೂರೈಕೆ ಹೊಣೆ ಹೊತ್ತಿರುವ ಬಿಡಬ್ಲ್ಯೂಎಸ್‌ಎಸ್‌ಬಿ( BWSSB) ನಾನಾ ಯೋಜನೆಗಳ ಮೂಲಕ ಕೆಲಸ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಮತ್ತೊಂದು ಯೋಜನೆ ನೀಡುವ ಮೂಲಕ ಬೆಂಗಳೂರು ಮಂದಿಗೆ ಒಂದೊಳ್ಳೆ ಸಿಹಿ ಸುದ್ದಿ ನೀಡಿದೆ.

BWSSB
BWSSB

ಬೆಂಗಳೂರಿನ ಕೆಲವು ಭಾಗಗಳ ಜನತೆ ಕಾವೇರಿ ನೀರಿಗಾಗಿ ಕಾಯುತ್ತಾ ಕೂರುವಂತಾಗಿತ್ತು. ಹಲವಾರು ಸರ್ಕಾರಗಳು ಬದಲಾದರೂ ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗಿತ್ತು. ಅದಕ್ಕೀಗ ಬ್ರೇಕ್ ಬೀಳಲಿದ್ದು, ಉದ್ಘಾಟನೆ ಭಾಗ್ಯ ಹತ್ತಿರ ಬಂದಿದೆ. ಬಹು ನಿರೀಕ್ಷಿತ ಕಾವೇರಿ ಐದನೇ ಹಂತದ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 16 ರಂದು ಉದ್ಘಾಟನೆ ಮಾಡಲಿದ್ದಾರೆ.

BWSSB
BWSSB

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ (ಟಿ. ಕೆ. ಹಳ್ಳಿ ) ಯಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆವರಣದಲ್ಲಿ ಅಕ್ಟೋಬರ್ 16 ರ ಬುಧವಾರ ಬೆಳಗ್ಗೆ 10.30 ಗಂಟೆಗೆ ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

BWSSB
BWSSB

775 ಎಂ. ಎಲ್. ಡಿ ಹೆಚ್ಚುವರಿ ನೀರು ಪೂರೈಕೆ, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಸರಬರಾಜು, ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ವಲಯದ ಮನೆ ಮನೆಗೂ ಕಾವೇರಿ ನೀರು ಪೂರೈಕೆಯಾಗಲಿದೆ. ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ 50 ಲಕ್ಷ ಫಲಾನುಭವಿಗಳಿಗೆ ಉಪಯೋಗವಾಗಲಿದೆ.

BWSSB
BWSSB

ಕಾವೇರಿ 5ನೇ ಹಂತದ ಯೋಜನೆಯಿಂದಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಬೆಂಗಳೂರಿನಲ್ಲಿ 4 ಲಕ್ಷ ನೀರಿನ ಸಂಪರ್ಕ ಗುರಿಯನ್ನು ಇಟ್ಟುಕೊಂಡಿದೆ. ಈ ಯೋಜನೆಗೆ 4336 ಕೋಟಿ ರೂ. ವೆಚ್ಚ ಮಾಡಲಾಗಿದೆ. ಒಟ್ಟಾರೆ ನಗರದ ನಿವಾಸಿಗಳ ಬಹು ದಿನಗಳ ಬೇಡಿಕೆ ಕೊನೆಗೂ ಸಾಕಾರ ಆಗುತ್ತಿದ್ದು, ಕಾವೇರಿ ಕೃಪೆ ಸಿಗಲಿದೆ.

Continue Reading

ಬೆಂಗಳೂರು

Actor Darshan : ಬೆಂಗಳೂರು ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಮೊರೆ ಹೋಗಲು ನಟ ದರ್ಶನ್ ತಯಾರಿ!

Actor Darshan : ನಟ ದರ್ಶನ್‌ ‌ಜಾಮೀನು ಆದೇಶ ಕೋರ್ಟ್‌ನಲ್ಲಿರುವಾಗಲೇ ಬಳ್ಳಾರಿಯಿಂದ ಬೆಂಗಳೂರು ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

VISTARANEWS.COM


on

By

Actor Darshan is all set to move the court seeking transfer to Ballari to Bengaluru jail
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನವಾಗಿ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್, ಅದೊಂದು ಕಾರಣ ಇಟ್ಟುಕೊಂಡು ಬಳ್ಳಾರಿ ಜೈಲಿನಿಂದ ವಾಪಸ್‌ ಬೆಂಗಳೂರು ಜೈಲಿಗೆ ಕಳಿಸಿಕೊಡುವಂತೆ ಕೋರ್ಟ್ ಮೊರೆ ಹೋಗಲು ತಯಾರಿ ಮಾಡಿಕೊಂಡಿದ್ದಾರೆ (Actor Darshan) ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ ಈ ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆದರೆ ಜೈಲಿನೊಳಗೆ ರಾಜಾತಿಥ್ಯ ಪಡೆದು ಬಳಿಕ ದರ್ಶನ್‌ನನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ರವಾನಿಸಲಾಗಿತ್ತು. ಈಗ ಬೆಂಗಳೂರು ಜೈಲಿಗೆ ಶಿಫ್ಟ್ ಆಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದೆಲ್ಲವೂ ಸೋಮವಾರ ಜಾಮೀನು ಆದೇಶವನ್ನು ನೋಡಿಕೊಂಡು ಬಳ್ಳಾರಿಯಿಂದ ಬೆಂಗಳೂರಿನ ಪರಪ್ಪನ‌ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿ ಕೋರ್ಟ್ ಮೊರೆ ಹೋಗಲು ದರ್ಶನ್ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿರುವುದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಪ್ರದೋಷ್‌ನನ್ನು ಬೆಳಗಾವಿ ಜೈಲಿನಿಂದ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಆದೇಶ ಮಾಡಿದೆ. ಅದೇ ರೀತಿ ದರ್ಶನ್ ಕೂಡ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್ ಆಗಲು ಕೋರ್ಟ್ ಮೊರೆ ಹೋಗಿ ಆದೇಶ ಪಡೆದುಕೊಳ್ಳಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ನರ ವೈದ್ಯರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ಕಾರಣವನ್ನೂ ನ್ಯಾಯಾಲಯದ ಮುಂದೆ ಇಟ್ಟು ಬೆಂಗಳೂರಿಗೆ ಶಿಫ್ಟ್ ಆಗಲು ದರ್ಶನ್ ಮನವಿ ಮಾಡುವ ಸಾಧ್ಯತೆಯಿದೆ.

ದರ್ಶನ್‌ಗೆ ಸೋಮವಾರ ಜಾಮೀನು ಸಿಗುತ್ತಾ?

ಇನ್ನು ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಪಟ್ಟಂತೆ ವಾದ- ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯ ಅಕ್ಟೋಬರ್ 14 ಅಂದರೆ ಸೋಮವಾರಕ್ಕೆ ಆದೇಶವನ್ನು ಕಾಯ್ದಿರಿಸಿದೆ. ಸೋಮವಾರ ಬರುವ ಜಾಮೀನು ಆದೇಶ ತಿರಸ್ಕೃತವಾದರೆ ಬೆನ್ನು ನೋವಿನ ಕಾರಣ ಇಟ್ಟುಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿಕೊಡುವಂತೆ ಕೋರ್ಟ್ ಮೊರೆ ಹೋಗಲು ತಯಾರಿಯನ್ನು ದರ್ಶನ್ ಪರ ವಕೀಲರು ಮಾಡಿಕೊಳ್ಳುತ್ತಿದ್ದಾರೆ.

Continue Reading

ಮಳೆ

Karnataka Rain : ಅಬ್ಬರಿಸುತ್ತಿರುವ ಮಳೆಗೆ ಕಂಗಲಾದ ರೈತರು; ಜಮೀನುಗಳಿಗೆ ನೀರು ನುಗ್ಗಿ ಅವಾಂತರ

Karnataka Rain : ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ರೈತರು ಕಂಗಲಾಗಿದ್ದಾರೆ. ಜಮೀನುಗಳು ಜಲಾವೃತಗೊಂಡಿದ್ದು, ಬೆಳೆ ಕೊಳೆತು ಹೋಗುವ ಆತಂಕದಲ್ಲಿದ್ದಾರೆ.

VISTARANEWS.COM


on

By

karnataka Rain
Koo

ಹಾವೇರಿ: ಹಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವರುಣನ (Karnataka Rain ) ಆರ್ಭಟಕ್ಕೆ ರಸ್ತೆಗಳು ಜಲಾವೃತಗೊಂಡಿದೆ. ನಗರದ ಪಿಬಿ ರಸ್ತೆ, ಹಾನಗಲ್ ರಸ್ತೆಯಲ್ಲಿ ನೀರು ತುಂಬಿ ಹರಿದಿದೆ. ಕೆರೆಯಂತಾದ ರಸ್ತೆಗಳಲ್ಲಿ ವಾಹನ‌ ಸವಾರರು ಪರದಾಡಿದರು. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ‌ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು ಅವಾಂತರವೇ ಸೃಷ್ಟಿಯಾಗಿದೆ.

ಹಾವೇರಿ ತಾಲೂಕಿನ ಕನಕಾಪುರ ಬಳಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಒಡೆದು ಬೆಳೆಹಾನಿಯಾಗಿದೆ. ಜಮೀನುಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಬ್ಯಾಡಗಿ ಪಟ್ಟಣದ ಜನಾತಾ ಪ್ಲಾಟ್‌ನ ಮನೆಗಳಿಗೆ ನೀರು ನುಗ್ಗಿದೆ. ಹಾವೇರಿ ಬ್ಯಾಡಗಿ ರಸ್ತೆ ತಡೆದು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಪ್ರತಿಭಟಿಸಿದರು. ಮಳೆ ನೀರು ಹೋಗಲು ಸರಿಯಾದ ಕಾಲುವೆ ಇಲ್ಲದ ಪರಿಣಾಮ ಮಳೆ ನೀರು ಮನೆಗಳಿಗೆ ನುಗ್ಗಿದೆ ಎಂದು ಆಕ್ರೋಶಿಸಿದರು.

ವಿಜಯನಗರದಲ್ಲೂ ಧಾರಾಕಾರ ಮಳೆ

ವಿಜಯನಗರ ಜಿಲ್ಲೆಯಲ್ಲಿ ನಿನ್ನೆ ತಡೆರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ, ಮನೆಗಳಿಗೆ ನೀರು ನುಗ್ಗಿದೆ. ಕೂಡ್ಲಿಗಿ ತಾಲೂಕಿನ ಕೊಟ್ಟೂರು ರಸ್ತೆಯಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ನೀರು ನುಗ್ಗಿದ್ದರಿಂದ ರಾತ್ರಿಯಿಡಿ ನಿವಾಸಿಗಳು ಜಾಗರಣೆ ಇರಬೇಕಾಯಿತು. ಮೊಣಕಾಲುದ್ದ ಮಳೆ ನೀರು ನಿಂತು ಮನೆಯಲ್ಲಿದ್ದ ಸಾಮಗ್ರಿಗಳು ನೀರಲ್ಲೇ ಮುಳುಗಡೆಯಾಗಿದ್ದವು. ಮಳೆ ನೀರು ನುಗ್ಗಿದ ಮನೆಗಳಿಗೆ ತೆರಳಿ ಜನರ ಸಮಸ್ಯೆಯನ್ನು ಪುರಸಭೆ ಅಧ್ಯಕ್ಷ ಕಾವಲಿ ಶಿವಪ್ಪ ಆಲಿಸಿದರು.

ತಡರಾತ್ರಿ ಸುರಿದ ಮಳೆಗೆ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ಮಳೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದೆ. ಬೆಳೆದು ನಿಂತಿದ್ದ ಈರುಳ್ಳಿ ಬೆಳೆಗೆ ಮಳೆ ನೀರು ನುಗ್ಗಿದ್ದರಿಂದ ಕೊಳೆಯುವ ಆತಂಕ ಇದೆ. ವಿಜಯನಗರದ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಎಸ್.ಎಂ ಮಂಜಯ್ಯ ಎಂಬವವರು ಬೆಳೆಗೆ ನುಗ್ಗಿದ ನೀರನ್ನು ಹರಿಮಾಡಿ ಬಿಟ್ಟು ಈರುಳ್ಳಿ ರಕ್ಷಣೆಗೆ ಮುಂದಾದರು. ಕೈಗೆ ಬಂದ ತುತ್ತು ಬಾಯಿಗೆ ಬರುತ್ತೋ..? ಇಲ್ವೋ..? ಆತಂಕದಲ್ಲಿದ್ದಾರೆ. ಬೆಳೆ ನಾಶ ಆದರೆ ಸೂಕ್ತ ಪರಿಹಾರ ಕೊಡಬೇಕು ಅಂತ ಈರುಳ್ಳಿ ಬೆಳೆಗಾರರಿಂದ ಆಗ್ರಹಿಸಿದ್ದಾರೆ.

ಹಡಗಲಿ ತಾಲೂಕಿನಲ್ಲೂ ಭಾರೀ ಮಳೆ ಸುರಿದಿದ್ದು, ಈರುಳ್ಳಿ ಹೊಲಕ್ಕೆ ನೀರು ನುಗ್ಗಿತ್ತು. ಅಪಾರ ಪ್ರಮಾಣ ಈರುಳ್ಳಿ ಬೆಳೆ ನಾಶವಾಗಿದೆ. ಹಡಗಲಿ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. 3.5 ಎಕರೆ ಹೊಲದಲ್ಲಿ ಈರುಳ್ಳಿ ಕಿತ್ತು ಒಣಗಿಸಲು ಹಾಕಲಾಗಿತ್ತು. ಆದರೆ ನಿನ್ನೆ ರಾತ್ರಿ ಭಾರೀ ಮಳೆಯಿಂದಾಗಿ ನೀರಲ್ಲೇ ಈರುಳ್ಳಿ ಬೆಳೆ ತೇಲಾಡಿದೆ. ಎಕರೆಗೆ ಹತ್ತಾರು ಸಾವಿರ ಖರ್ಚು ಮಾಡಲಾಗಿತ್ತು. ಮಾರ್ಕೆಟ್‌ನಲ್ಲಿ ಈರುಳ್ಳಿ ಬೆಳೆಗೆ ಬೆಲೆ ಇರುವುದರಿಂದ ಆಶಾ ಭವಾನೆಯಲ್ಲಿದ್ದರು. ಆದರೆ ಏಕಾಏಕಿ ನಿನ್ನೆ ಮಳೆ ಸುರಿದಿದ್ದು, ಈರುಳ್ಳಿ ಕೊಳೆತುಹೋಗುವ ಆತಂಕದಲ್ಲಿ ಅನ್ನದಾತ ಇದ್ದಾರೆ.

ದಾವಣಗೆರೆಯಲ್ಲಿ ನಿರಂತರ ಮಳೆಗೆ ಗೋಡೆ ಕುಸಿತ

ನಿರಂತರವಾಗಿ ಸುರಿದ ಮಳೆಗೆ ದೊಡ್ಡಬೊಮ್ಮನಹಳ್ಳಿ ಕೋಟೆ ಗೋಡೆ ಕುಸಿದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಘಟನೆ ನಡೆದಿದೆ. ಪಾಳೇಗಾರರ ಕಾಲದಲ್ಲಿ ನಿರ್ಮಾಣವಾಗಿದ್ದ ಕೋಟೆ ಗೋಡೆಯು ನಿರಂತರ ಮಳೆಯಿಂದ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ಸತತ ಮಳೆಯಿಂದ ಜಗಳೂರು ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿದೆ. ಮಳೆ‌ ಜತೆ 57 ಕೆರೆ ಯೋಜನೆ ನೀರು ಕೂಡ ಸೇರಿ ಕೋಡಿ‌ ಬೀಳುತ್ತಿವೆ. ಕೋಡಿ ಬಿದ್ದ ತಾಲೂಕಿನ ಎರಡನೇ ಅತಿ ದೊಡ್ಡ ಕೆರೆ ಗಡಿಮಾಕುಂಟೆ‌ ಕೆರೆಯ ಕೋಡಿ ಬೀಳುವ ದೃಶ್ಯವನ್ನು ನೋಡಲು ಗ್ರಾಮಸ್ಥರು ನೆರೆದಿದ್ದರು. ಕೋಡಿ ಬೀಳುತ್ತಿದ್ದಂತೆ ಕೇಕೆ‌‌ ಶಿಳ್ಳೇ‌ಹಾಕಿ ಸಂತೋಷ ವ್ಯಕ್ತಪಡಿಸಿದರು.

ಕೊಪ್ಪಳದಲ್ಲಿ ಮಳೆಗೆ ನೆಲಕಚ್ಚಿದ ಮೆಕ್ಕೆಜೋಳ

ಕೊಪ್ಪಳ ತಾಲೂಕಿನ ತಿಗರಿ ಗ್ರಾಮದಲ್ಲಿ ತಡರಾತ್ರಿ ಸುರಿದ ಮಳೆಗೆ ಮೆಕ್ಕೆಜೋಳ ಬೆಳೆ ನೆಲ‌ಕಚ್ಚಿದೆ. ಮಳೆಯ ಆರ್ಭಟಕ್ಕೆ ಮೆಕ್ಕಜೋಳ ಬೆಳೆ ಹಾನಿಯಾಗಿದೆ. ತಿಗರಿ ಗ್ರಾಮದ‌‌ ಕೊಟ್ರಪ್ಪ ಅಂಗಡಿ ಎಂಬ ರೈತನ ಬೆಳೆ ಹಾನಿಯಾಗಿದೆ. ಎರಡು ಎಕರೆ‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಬೆಳೆದಿದ್ದರು. ಆದರೆ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆ ನೆಲಕಚ್ಚಿದ್ದು, ಪರಿಹಾರ ನೀಡುವಂತೆ ರೈತ ಕೊಟ್ರಪ್ಪ ಆಗ್ರಹಿಸಿದರು.

ಭದ್ರಾವತಿಯಲ್ಲಿ ಮಳೆ ಅಬ್ಬರ

ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿದೆ. ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಚರಂಡಿಗಳು ತುಂಬಿ ಹರಿಯುತ್ತಿವೆ. ಚರಂಡಿ ತುಂಬಿದ ಪರಿಣಾಮ ರಸ್ತೆ ಮೇಲೆ ನೀರು ಹರಿಯುತ್ತಿದೆ. ಭದ್ರಾವತಿ ನಗರದ ಜನ್ನಾಪುರದ ಕಿತ್ತೂರು ರಾಣಿ ಚೆನ್ನಮ್ಮ ಬ್ಲಾಕ್‌ನ ಮನೆಯೊಂದರ ಕಾಂಪೌಂಡ್‌ ಗೋಡೆ ಕುಸಿದಿದೆ. ಮನೆಗಳಿಗೆ ನುಗ್ಗಿರುವ ನೀರನ್ನು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.

ಧಾರವಾಡದಲ್ಲಿ ಪ್ರವಾಹಕ್ಕೆ ಸಿಲುಕಿದ ವ್ಯಕ್ತಿ

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಕಾಲವಾಡ ಗ್ರಾಮದ ಹೊರಹೊಲಯದಲ್ಲಿ ಬೆಣ್ಣೆ ಹಳ್ಳದ ಪ್ರವಾಹಕ್ಕೆ ವ್ಯಕ್ತಿಯೊಬ್ಬರು ಸಿಲುಕಿದ ಘಟನೆ ನಡೆದಿದೆ. ಲಕ್ಷ್ಮಣ ಬಾರಕೇರ ಹಳ್ಳದಲ್ಲಿ ಸಿಲುಕಿರುವವರು. ಕಳೆದ ಎರಡು ದಿನಗಳಿಂದ ಲಕ್ಷ್ಮಣ ಹೊಲದಲ್ಲಿಯೇ ಇದ್ದರು. ನಿನ್ನೆ ಏಕಾಏಕಿ ಬೆಣ್ಣೆ ಹಳ್ಳದ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸುತ್ತಲೂ ನೀರು ಆವರಿಸಿದೆ. ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಹೊರತರಲಾಯಿತು. ಸ್ಥಳಕ್ಕೆ ನವಲಗುಂದ ಶಾಸಕ ಕೋನರೆಡ್ಡಿ ಭೇಟಿ ನೀಡಿದರು.

ಮಡಿಕೇರಿಯಲ್ಲಿ ಮಳೆಯ ಸಿಂಚನ

ಶನಿವಾರ ಬೆಳಗ್ಗಿನಿಂದಲೇ ತುಂತುರು ಮಳೆ ಆರಂಭವಾಗಿದ್ದು, ದಸರಾ ಶೋಭಾಯಾತ್ರೆ ಸಿದ್ಧತೆಗೆ ವರುಣ ಅಡ್ಡಿಯಾಗಿದ್ದಾನೆ. ಮಳೆಯ‌ ನಡುವೆ ಶೋಭಾಯಾತ್ರೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದೆ. ಸಂಜೆ ವೇಳೆಗೆ ಮಳೆ ಬಿಡುವು ನೀಡುವ ಸಾಧ್ಯತೆ ಇದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಮಳೆಯಿಂದ ಜನತೆಗೆ ಕಿರಿಕಿರಿ‌ ಅನುಭವಿಸಿದ್ದಾರೆ.

Continue Reading
Advertisement
Dina Bhavishya
ಭವಿಷ್ಯ2 ಗಂಟೆಗಳು ago

Dina Bhavishya : ಈ ದಿನ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ

BSA motorcycles
ಆಟೋಮೊಬೈಲ್15 ಗಂಟೆಗಳು ago

BSA motorcycles : ‌ಬೆಂಗಳೂರಿಗೆ ಲಗ್ಗೆ ಇಟ್ಟ ಬಿಎಸ್ಎ ಗೋಲ್ಡ್‌ ಸ್ಟಾರ್

bwssb
ಬೆಂಗಳೂರು16 ಗಂಟೆಗಳು ago

BWSSB : ಬೆಂಗಳೂರಿಗರ ಬಹು ದಿನಗಳ ಕನಸು- ನನಸು; ಅಕ್ಟೋಬರ್ 16ರಂದು ಕಾವೇರಿ ಐದನೇ ಹಂತ ಲೋಕಾರ್ಪಣೆ

Actor Darshan is all set to move the court seeking transfer to Ballari to Bengaluru jail
ಬೆಂಗಳೂರು16 ಗಂಟೆಗಳು ago

Actor Darshan : ಬೆಂಗಳೂರು ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಮೊರೆ ಹೋಗಲು ನಟ ದರ್ಶನ್ ತಯಾರಿ!

karnataka Rain
ಮಳೆ17 ಗಂಟೆಗಳು ago

Karnataka Rain : ಅಬ್ಬರಿಸುತ್ತಿರುವ ಮಳೆಗೆ ಕಂಗಲಾದ ರೈತರು; ಜಮೀನುಗಳಿಗೆ ನೀರು ನುಗ್ಗಿ ಅವಾಂತರ

high tech prostitution racket in the name of event management Husband and wife arrested
ಬೆಂಗಳೂರು18 ಗಂಟೆಗಳು ago

Prostitution Case : ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಗಂಡ-ಹೆಂಡತಿ ಅರೆಸ್ಟ್‌

Udupi News
ಉಡುಪಿ19 ಗಂಟೆಗಳು ago

Udupi News : ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿಯರನ್ನು ಬಂಧಿಸಿದ ಪೊಲೀಸರು

Mysore dasara
ಮೈಸೂರು20 ಗಂಟೆಗಳು ago

Mysore Dasara : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ಸಡಗರ; 5ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು

mysore dasara
ಕರ್ನಾಟಕ20 ಗಂಟೆಗಳು ago

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ; ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ

moderate rains and at isolated to scattered heavy to very heavy rains associated with thunderstorm
ಮಳೆ1 ದಿನ ago

Karnataka Weather : ಮಲೆನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಬೆಂಗಳೂರಿಗೂ ಅಲರ್ಟ್‌

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ವಾರ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌