Site icon Vistara News

NRI Money : ಅನಿವಾಸಿ ಭಾರತೀಯರ ಹಣ ಭಾರತದ ಆರ್ಥಿಕತೆಯನ್ನು ಹೇಗೆ ಬಲಪಡಿಸುತ್ತಿದೆ ಗೊತ್ತೇ

Rupee

ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು (Non-Resident Indians) 2022ರಲ್ಲಿ ತವರಿಗೆ ಕಳಿಸಿರುವ ಹಣ (remittance) ಎಷ್ಟು ಗೊತ್ತೇ? 107.5 ಶತಕೋಟಿ ಡಾಲರ್.‌ ( 8.81 ಲಕ್ಷ ಕೋಟಿ ರೂ.) ಇದು ಸಾರ್ವಕಾಲಿಕ ದಾಖಲೆ. ( NRI Money) ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರೇ ಈ ವಿಷಯ ತಿಳಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಅನಿವಾಸಿ ಭಾರತೀಯರು ಭಾರತದ ಸಾಫ್ಟ್‌ ಪವರ್. ಭಾರತದ ವರ್ಚಸ್ಸು ಜಾಗತಿಕ ಮಟ್ಟದಲ್ಲಿ ವೃದ್ಧಿಸುವಲ್ಲಿಯೂ ಇವರ ಪಾತ್ರ ಇದೆ.

ಅನಿವಾಸಿ ಭಾರತೀಯರು ವಿದೇಶಗಳಲ್ಲಿದ್ದು ದುಡಿದು ಸಂಪಾದಿಸಿದ ಹಣವನ್ನು ಭಾರತದಲ್ಲಿನ ಕುಟುಂಬಸ್ತರಿಗೆ ಕಳಿಸುತ್ತಾರೆ. ಇದು ವಿದೇಶಿ ವಿನಿಮಯ ಸಂಗ್ರಹ ( ವೃದ್ಧಿಗೂ ಸಹಕಾರಿ. ಭಾರತದ ಆರ್ಥಿಕ ಸ್ಥಿರತೆಗೆ ಪೂರಕ. ವಿಶ್ವಬ್ಯಾಂಕ್‌ನ ನಿರೀಕ್ಷೆಯನ್ನೂ ಮೀರಿ ಅನಿವಾಸಿ ಭಾರತೀಯರ ಹಣ ತವರಿಗೆ ಹರಿದು ಬಂದಿದೆ. ಭಾರತದ ವಿದೇಶಿ ವಿನಿಮಯ ಸಂಗ್ರಹವು (foreign exchange reserves) 600 ಶತಕೋಟಿ ಡಾಲರ್‌ (49 ಲಕ್ಷ ಕೋಟಿ ರೂ.) ಗಡಿ ದಾಟಲು ಪುಷ್ಟಿ ನೀಡಿದೆ. 2021ರ ಜೂನ್‌ನಲ್ಲಿ ಮೊದಲ ಸಲ 600 ಶತಕೋಟಿ ಡಾಲರ್‌ ಮೀರಿತ್ತು. 2021ರ ಸೆಪ್ಟೆಂಬರ್‌ನಲ್ಲಿ 642 ಶತಕೋಟಿ ಡಾಲರ್‌ ಗಡಿ ದಾಟಿತ್ತು. ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಮತ್ತೆ ಕುಸಿದಿತ್ತು. ವಿದೇಶಿ ವಿನಿಮಯ ಸಂಗ್ರಹವು ಆಮದು ವೆಚ್ಚ ಭರಿಸಲು ಸಹಾಯಕ. ರೂಪಾಯಿಯ ಸ್ಥಿರತೆ ಕಾಯ್ದುಕೊಳ್ಳಲೂ ಪೂರಕ.

ಜಿಡಿಪಿಯಲ್ಲಿ 3% ಎನ್ನಾರೈ ಹಣ:

ಭಾರತದ ಜಿಡಿಪಿಯಲ್ಲಿ 3% ಪಾಲನ್ನು (GDP) ಅನಿವಾಸಿ ಭಾರತೀಯರು ಕಳಿಸುವ ಹಣ ಹೊಂದಿದೆ. ಬಾಹ್ಯ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಲು ಇದು ಸಹಾಯಕ. ವಿತ್ತೀಯ ಕೊರತೆ ಹೆಚ್ಚಳವಾದಾಗ ಎನ್ನಾರೈ ಹಣ ನೆರವಿಗೆ ಬರುತ್ತದೆ. ಸೇವಾ ಕ್ಷೇತ್ರದ ರಫ್ತಿನ ಬಳಿಕ ಎರಡನೇ ಅತಿ ದೊಡ್ಡ ವಿದೇಶಿ ಹಣದ ಮೂಲ ಯಾವುದೆಂದರೆ ಎನ್ನಾರೈಗಳು ರವಾನಿಸುವ ಹಣ.

ಎನ್ನಾರೈಗಳಿಂದ ಹಣ ಪಾವತಿ ಹೆಚ್ಚಳವಾಗುವ ಸಾಧ್ಯತೆಗೆ ಕಾರಣವೇನು?

#image_title

ವಿಶ್ವಬ್ಯಾಂಕ್‌ ವರದಿಯ ಪ್ರಕಾರ, ಭಾರತವು 2021ರಲ್ಲಿ 89.4 ಶತಕೋಟಿ ಡಾಲರ್‌ (7.33 ಲಕ್ಷ ಕೋಟಿ ರೂ.) ಹಣವನ್ನು ಅನಿವಾಸಿ ಭಾರತೀಯರಿಂದ ಸ್ವೀಕರಿಸಿತ್ತು. ಈ ವಿಚಾರದಲ್ಲಿ ಜಗತ್ತಿನಲ್ಲೇ ಭಾರತ ಮೊದಲ ಸ್ಥಾನದಲ್ಲಿತ್ತು. 2022ರಲ್ಲಿ 100 ಶತಕೋಟಿ ಡಾಲರ್‌ ಬರಬಹುದು ಎಂದಿತ್ತು. ಆದರೆ 107.5 ಶತಕೋಟಿ ಡಾಲರ್‌ ಹರಿದು ಬಂದಿದೆ. ಎನ್ನಾರೈಗಳಿಂದ ಲಭಿಸುತ್ತಿರುವ ಹಣದ ಆಯಾಮದಲ್ಲಿ ಭಾರಿ ಬದಲಾವಣೆಯೊಂದು ನಡೆಯುತ್ತಿದೆ. ಇದರ ಪರಿಣಾಮ ಭವಿಷ್ಯದಲ್ಲಿ ಹರಿವು ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುತ್ತಾರೆ ತಜ್ಞರು.

ಅಮೆರಿಕದಿಂದ ಹೆಚ್ಚು ಹಣದ ಹರಿವು:

ಕಳೆದ 2020-21ರಲ್ಲಿ ಎನ್ನಾರೈಗಳ ಹಣದ ಹರಿವಿನಲ್ಲಿ 23% ಪಾಲು ಅಮೆರಿಕದಿಂದ ಬರುತ್ತಿದ್ದು, ಯುಎಇಯನ್ನು ಹಿಂದಿಕ್ಕಿದೆ. ಈ ಹಿಂದೆ ಕಡಿಮೆ ಕೌಶಲದ, ಅನೌಪಚಾರಿಕ ವಲಯದ ಉದ್ಯೋಗಗಳು ಭಾರತೀಯರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಹೆಚ್ಚು ಸಿಗುತ್ತಿತ್ತು. ಆದರೆ ಈಗ ಅಮೆರಿಕ, ಬ್ರಿಟನ್‌, ಸಿಂಗಾಪುರ, ಜಪಾನ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಹೆಚ್ಚಿನ ಕೌಶಲ ಬೇಕಾಗುವ ಹಾಗೂ ಹೆಚ್ಚು ವೇತನದ ಉದ್ಯೋಗಾವಕಾಶಗಳು ಏನ್ನಾರೈಗಳಿಗೆ ಸಿಗುತ್ತಿದೆ. ಅಮೆರಿಕನ್ನರಿಗಿಂತ ಹೆಚ್ಚು ಆದಾಯವನ್ನು ಅಲ್ಲಿ ಸುಶಿಕ್ಷಿತ, ವೃತ್ತಿಪರ ಭಾರತೀಯರು ಗಳಿಸುತ್ತಿದ್ದಾರೆ. 2016-2021ರ ಅವಧಿಯಲ್ಲಿ ಅಮೆರಿಕ, ಬ್ರಿಟನ್‌, ಸಿಂಗಾಪುರದಿಂದ ಭಾರತಕ್ಕೆ ಹಣ ರವಾನೆಯಲ್ಲಿ 26%ರಿಂದ 36%ಕ್ಕೆ ಏರಿಕೆಯಾಗಿದೆ. ಸೌದಿ ಅರೇಬಿಯಾ, ಯುಎಇ, ಕುವೈತ್‌, ಒಮಾನ್‌, ಕತಾರ್‌ನಿಂದ 54%ರಿಂದ 28%ಕ್ಕೆ ಇಳಿಕೆಯಾಗಿದೆ.

ಅಮೆರಿಕದಲ್ಲಿರುವ ಭಾರತೀಯರು ಕೌಶಲ ಹೊಂದಿರುವವರು. ಉನ್ನತ ಶಿಕ್ಷಣ ಪಡೆದವರು. ಹೀಗಾಗಿ ಅವರಿಂದ ಭಾರತಕ್ಕೆ ಲಭಿಸುವ ಹಣದ ಮೊತ್ತವೂ ಹೆಚ್ಚಲಿದೆ ಎನ್ನುತ್ತಾರೆ ತಜ್ಞರು.

ಯುಪಿಐ ತಂತ್ರಜ್ಞಾನ:

#image_title

ಆಧುನಿಕ ಹಣಕಾಸು ತಂತ್ರಜ್ಞಾನ ಅಪ್ಲಿಕೇಶನ್‌ಗಳು (fintech tools) ಜನಪ್ರಿಯವಾಗುತಿವೆ. ಯುಪಿಎ ಪರಿಣಾಮ ಸ್ವಿಫ್ಟ್‌ (SWIFT) ಇತ್ಯಾದಿ ಸಾಂಪ್ರದಾಯಿಕ ವಿಧಾನಗಳಿಗಿಂತ ಅಗ್ಗ ಮತ್ತು ಸುಲಭವಾಗುತ್ತಿದೆ. ಇತ್ತೀಚೆಗೆ ಸಿಂಗಾಪುರದ PayNow ಮತ್ತು ಯುಪಿಐ ಲಿಂಕೇಜ್‌ ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ. ಇದು ಭಾರತಕ್ಕೆ ಎನ್ನಾರೈಗಳ ಹಣ ರವಾನೆಯನ್ನು ಹೆಚ್ಚಿಸಬಹುದು.

Exit mobile version