Site icon Vistara News

PPF Investment : ಪಿಪಿಎಫ್‌ ಸೇರಿ ಸಣ್ಣ ಉಳಿತಾಯ ಹೂಡಿಕೆಗಳ ನಿಯಮ ಸಡಿಲ, ಪ್ಯಾನ್‌ ಬದಲಿಗೆ ಆಧಾರ್‌ ಬಳಕೆ ಶೀಘ್ರ

small savings

ನವ ದೆಹಲಿ: ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳಲ್ಲಿನ (PPF Investment ) ಹೂಡಿಕೆ ಕುರಿತ ಕೆವೈಸಿ (KYC) ನಿಯಮಾವಳಿಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಪ್ಯಾನ್‌ ಬದಲಿಗೆ ಆಧಾರ್‌ ಕಾರ್ಡ್‌ ಅನ್ನು ದಾಖಲೆಯಾಗಿಟ್ಟುಕೊಂಡು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಹೆಚ್ಚುವ ನಿರೀಕ್ಷೆ ಇದೆ. (small savings schemes)

ಕೆವೈಸಿ ನಿಯಮ ಸಡಿಲಗೊಳಿಸುವ ಭಾಗವಾಗಿ ಮೂರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮೊದಲನೆಯದಾಗಿ ಪ್ಯಾನ್‌ ಕಾರ್ಡ್‌ ಬದಲು ಆಧಾರ್‌ ಬಳಸಿಯೂ ಹೂಡಿಕೆಯನ್ನು ಮಾಡಬಹುದು. ಏಕೆಂದರೆ ಭಾರತದಲ್ಲಿ ಪ್ಯಾನ್‌ ಕಾರ್ಡ್‌ ಬಳಕೆದಾರರಿಗಿಂತ ಹೆಚ್ಚು ಆಧಾರ್‌ ಕಾರ್ಡ್‌ದಾರರು ಇದ್ದಾರೆ. ಈ ನೀತಿ ಸಡಿಲಗೊಳಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಠೇವಣಿಗಳು ಲಭಿಸುವ ಸಾಧ್ಯತೆ ಇದೆ.

ಎರಡನೆಯದಾಗಿ ಯಾವುದೇ ವಿವಾದ ಇಲ್ಲದೆ ಮೃತಪಟ್ಟಿರುವ ಠೇವಣಿದಾರರ ಹಣವನ್ನು ಅವರ ಉತ್ತರಾಧಿಕಾರಿಗಳಿಗೆ ಸರಾಗವಾಗಿ ಹಸ್ತಾಂತರಿಸಲು ಪ್ರಕ್ರಿಯೆ ಸುಗಮವಾಗಲಿದೆ. ಮೂರನೆಯದಾಗಿ ನಾಮಿನೇಶನ್‌ ಪ್ರಕ್ರಿಯೆ ಸರಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೂಡಿಕೆಯ ಕೆವೈಸಿ ನಿಯಮಗಳನ್ನು ಸಡಿಲಗೊಳಿಸುವುದರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗೆ (National small savings fund) ಹೂಡಿಕೆಯ ಹರಿವು ಹೆಚ್ಚಲಿದೆ. ಸಾರ್ವಜನಿಕ ಭವಿಷ್ಯನಿಧಿ, ಸುಕನ್ಯಾಸಮೃದ್ಧಿ, ಎನ್‌ಎಸ್‌ಸಿ ಇತ್ಯಾದಿಗಳು ಸಣ್ಣ ಉಳಿತಾಯ ಯೋಜನೆಗಳಾಗಿವೆ.

Exit mobile version