Site icon Vistara News

Small savings schemes : ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆ ಸಂಭವ

cash

ನವ ದೆಹಲಿ: ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು (Small savings schemes) ಏರಿಸುವ ಸಾಧ್ಯತೆ ಇದೆ. 2023ರ ಏಪ್ರಿಲ್-ಜೂನ್‌ ಅವಧಿಯ ಬಡ್ಡಿ ದರಗಳು ಪರಿಷ್ಕರಣೆಯಾಗುವ ನಿರೀಕ್ಷೆ ಇದೆ. ಕಳೆದ 6 ತಿಂಗಳುಗಳಲ್ಲಿ ಇವುಗಳ ಬಡ್ಡಿ ದರದಲ್ಲಿ 0.30%ರಿಂದ 1.40% ತನಕ ಏರಿಕೆಯಾಗಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರವು ಸರಕಾರಿ ಸಾಲಪತ್ರಗಳಲ್ಲಿ ಸಿಗುವ ಆದಾಯದ ಆಧಾರದಲ್ಲಿ ನಿಗದಿಪಡಿಸುತ್ತದೆ. ಐದು ವರ್ಷ ಅವಧಿಯ ಸರ್ಕಾರಿ ಬಾಂಡ್‌ಗಳ ಆದಾಯ 0.30% ಏರಿಕೆಯಾಗಿದ್ದು, 10 ವರ್ಷ ಅವಧಿಯ ಬಾಂಡ್‌ ಆದಾಯ 0.20% ಏರಿಕೆಯಾಗಿದೆ.

ಸಣ್ಣ ಉಳಿತಾಯ ಯೋಜನೆಜನವರಿ-ಮಾರ್ಚ್ ಅವಧಿಗೆ ಬಡ್ಡಿ ದರ
‌ಉಳಿತಾಯ ಠೇವಣಿ4.0%
1 ವರ್ಷದ ಟೈಮ್‌ ಡಿಪಾಸಿಟ್6.6%
‌2 ವರ್ಷದ ಟೈಮ್‌ ಡಿಪಾಸಿಟ್6.8%
‌3 ವರ್ಷದ ಟೈಮ್‌ ಡಿಪಾಸಿಟ್6.9%
‌5 ವರ್ಷದ ಟೈಮ್‌ ಡಿಪಾಸಿಟ್7.0%
‌5 ವರ್ಷದ ರಿಕರಿಂಗ್‌ ಡಿಪಾಸಿಟ್7.0%
ಹಿರಿಯ ನಾಗರಿಕರ ಉಳಿತಾಯ ಯೋಜನೆ8.0%
ಮಾಸಿಕ ಆದಾಯ ಖಾತೆ7.1%
ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್7.0%
ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಯೋಜನೆ7.1%
ಕಿಸಾನ್‌ ವಿಕಾಸ್‌ ಪತ್ರ7.2%
ಸುಕನ್ಯಾ ಸಮೃದ್ಧಿ ಖಾತೆ ಯೋಜನೆ7.6%

ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಸರ್ಕಾರಿ ಬಾಂಡ್‌ಗಳ ಆದಾಯ ಇಳಿಕೆಯಾಗಿತ್ತು. ಇದರ ಪರಿಣಾಮ ಸಣ್ಣ ಉಳಿತಾಯ ಯೋಜನೆಗಖ ಬಡ್ಡಿ ದರ ಕುಸಿದಿತ್ತು. ಆದರೆ ಆರ್‌ಬಿಐ ರೆಪೊ ದರ ಏರಿಕೆಯ ಬಳಿಕ ಬ್ಯಾಂಕ್‌ಗಳು ಠೇವಣಿ ಬಡ್ಡಿ ದರಗಳನ್ನು ಏರಿಸಿವೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕೂಡ ಏರಿಕೆಯಾಗುವ ನಿರೀಕ್ಷೆ ಉಂಟಾಗಿದೆ.

Exit mobile version