Site icon Vistara News

Super Vasuki | ಭಾರತದ ಈ ಸರಕು ಸಾಗಣೆ ರೈಲಿನ ಉದ್ದವೇ 3.5 ಕಿಲೊ ಮೀಟರ್!

super wasuki

ನವ ದೆಹಲಿ: ಭಾರತೀಯ ರೈಲ್ವೆ ಇಲಾಖೆ ಆಗಸ್ಟ್‌ ೧೫ರಂದು ಪ್ರಯೋಗಾರ್ಥ ಒಂದು ವಿಶೇಷ ಸರಕು ಸಾಗಣೆ ರೈಲನ್ನು ಓಡಿಸಿತ್ತು. ಸೂಪರ್‌ ವಾಸುಕಿ (Super Vasuki ) ಎಂಬ ಹೆಸರಿನ ಈ ಸರಕು ಸಾಗಣೆ ರೈಲಿನ ಉದ್ದವೇ ಬರೊಬ್ಬರಿ ೩.೫ ಕಿಲೊ ಮೀಟರ್‌ ಆಗಿದೆ. 27,೦೦೦ ಟನ್‌ ಕಲ್ಲಿದ್ದಲನ್ನು ತುಂಬಿಕೊಂಡು ಈ ಸೂಪರ್‌ ವಾಸುಕಿ ವೇಗವಾಗಿ ಸಂಚರಿಸಿತ್ತು. ಛತ್ತೀಸ್‌ಗಢದ ಭಿಲಾಯ್‌ನಿಂದ ಕೋರ್ಬಾ ನಡುವೆ ಇದು ಓಡಿತ್ತು. ಒಂದು ರೈಲ್ವೆ ನಿಲ್ದಾಣವನ್ನು ಹಾದು ಹೋಗಲು ೪ ನಿಮಿಷ ತೆಗೆದುಕೊಳ್ಳುತ್ತದೆ.

ಭಾರತೀಯ ರೈಲ್ವೆಯ ಇತಿಹಾಸದಲ್ಲಿಯೇ ಒಂದೇ ರೈಲಿನಲ್ಲಿ ಇಷ್ಟೊಂದು ಇಂಧನ ಸಾಗಣೆ ಇದುವರೆಗೆ ನಡೆದಿರಲಿಲ್ಲ. ಆಗ್ನೇಯ ಕೇಂದ್ರೀಯ ರೈಲ್ವೆ ಓಡಿಸುವ ಈ ಸೂಪರ್‌ ವಾಸುಕಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅದರ ವಿವರ ಇಂತಿದೆ. ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚು ಇರುವ ಸಂದರ್ಭ ವಿದ್ಯುತ್‌ ಘಟಕಗಳಿಗೆ ಕಲ್ಲಿದ್ದಲನ್ನು ಸಕಾಲಕ್ಕೆ ಪೂರೈಸಲು ಅನುಕೂಲಕರವೆನಿಸಲಿದೆ.

ಸೂಪರ್‌ ವಾಸುಕಿ ಸರಕು ಸಾಗಣೆ ರೈಲಿನ ವಿಶೇಷತೆ

೧. ಸರಕು ಸಾಗಣೆ ರೈಲಿನ ಉದ್ದ ೩.೫ ಕಿ.ಮೀ.

೨. ರೈಲಿನ ಎಂಜಿನ್‌ ೬. ಬೋಗಿಗಳ ಸಂಖ್ಯೆ ೨೯೫. ಒಟ್ಟು ತೂಕ ೨೬,೯೬೨ ಟನ್

೩. ಐದು ಸರಕು ಸಾಗಣೆಯ ಬೋಗಿಗಳನ್ನು ಬಳಸಿಕೊಳ್ಳಲಾಗಿದೆ.

೪. ಸೂಪರ್‌ ವಾಸುಕಿ ಮೂಲಕ ಸಾಗಿಸುವ ಕಲ್ಲಿದ್ದಲು ೩,೦೦೦ ಮೆಗಾವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಘಟಕಕ್ಕೆ ಇಡೀ ಒಂದು ದಿನ ನಡೆಸಲು ಸಾಕು. ಈಗಿನ ಕಲ್ಲಿದ್ದಲು ಸಾಗಣೆ ರೈಲ್ವೆ ಬೋಗಿಗಳು ಒಂದು ಸಲಕ್ಕೆ ೯,೦೦೦ ಟನ್‌ ಕಲ್ಲಿದ್ದಲು ಸಾಗಿಸುವ ಸಾಮರ್ಥ್ಯ ಹೊಂದಿವೆ. ಇದರ ಸುಮಾರು ಮೂರು ಪಟ್ಟು ಕಲ್ಲಿದ್ದಲನ್ನು ಸೂಪರ್‌ ವಾಸುಕಿ ಸಾಗಿಸಬಲ್ಲುದು.

೫. ಸೂಪರ್‌ ವಾಸುಕಿ ೨೬೭ ಕಿ.ಮೀ ದೂರವನ್ನು ೧೧.೨೦ ಗಂಟೆಯಲ್ಲಿ ಕ್ರಮಿಸಬಲ್ಲುದು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಟ್ವೀಟ್‌ ಮಾಡಿರುವ ಸೂಪರ್‌ ವಾಸುಕಿ ವಿಡಿಯೊ ಲಿಂಕ್‌ ಇಲ್ಲಿದೆ.

Exit mobile version