ಬ್ಯಾಂಕಾಕ್: ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನ ಆಗ್ನೇಯ ಭಾಗದಲ್ಲಿರುವ ಚೋನ್‌ಬುರಿ ಪ್ರಾಂತ್ಯದ ನೈಟ್‌ಕ್ಲಬ್‌ನಲ್ಲಿ ಶುಕ್ರವಾರ ಅಗ್ನಿ ದುರಂತ ಸಂಭವಿಸಿ 13 ಜನರು ಬೆಂಕಿ ಆಹುತಿಯಾಗಿದ್ದಾರೆ. ಮತ್ತು 35 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೌಂಟೇನ್ ಬಿ ನೈಟ್‌ಕ್ಲಬ್‌ನಲ್ಲಿ ಬೆಳಗಿನ ಜಾವ 1:00 ಗಂಟೆಗೆ ಬೆಂಕಿ ಪ್ರಾರಂಭವಾಗಿದೆ. ಸಾಕಷ್ಟು ಆಸ್ತಿ ಪಾಸ್ತಿ ಹಾನಿಯಾಗಿದೆ. ಇಲ್ಲಿಯವರೆಗೆ ಮೃತರಾದದವರು ಹಾಗೂ ಗಾಯಗೊಂಡವರು ಥಾಯ್ಲೆಂಡ್‌ನ ಪ್ರಜೆಗಳು ಎಂದು ಪೊಲೀಸ್ ಕರ್ನಲ್ ವುಟ್ಟಿಪಾಂಗ್ ಸೋಮ್‌ಜೈ ತಿಳಿಸಿದ್ದಾರೆ.
ಸದ್ಯ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಪೋಟೊಗಳಲ್ಲಿ ಜನರು ತಮ್ಮ ಸುರಕ್ಷತೆಗಾಗಿ ಓಡಿಹೋಗುತ್ತಿರುವುದು ಹಾಗೂ ಕಿರುಚುವುದು ಕಾಣಬಹುದು. ಕೆಲವರು ತಮ್ಮ ದೇಹಕ್ಕೆ ತಗುಲಿದ ಬೆಂಕಿಯಲ್ಲಿ ಮುಳುಗಿ ಓಡುತ್ತಿರುವುದನ್ನು ಸಹ ನೋಡಬಹುದು. ಇಂತಹ ಘಟನೆಗಳು ನಿಜಕ್ಕೂ ಎಲ್ಲರನ್ನು ಭಯಪಡಿಸುತ್ತವೆ.
ಇದನ್ನೂ ಓದಿ: ಚಲಿಸುವ ರೈಲಿಗೆ ಸಿಲುಕಿ ಕಾಲೇಜು ವಿದ್ಯಾರ್ಥಿನಿ ಸಾವು, ಆಕ್ರೋಶಿತರಿಂದ ಹೆದ್ದಾರಿ ತಡೆ, ಟಯರ್‌ಗೆ ಬೆಂಕಿ