ಬೆಂಗಳೂರು: ಬೆಂಗಳೂರಿನಲ್ಲಿ ಸ್ಯಾಂಟಲಮ್ ಹೆಬಿಟೆಟ್ ಎಂಬ ಕಂಪನಿಯು ಶ್ರೀಗಂಧದ ಗಿಡ ಮರಗಳನ್ನು ತೋರಿಸಿ, ಗ್ರಾಹಕರಿಗೆ ಲಕ್ಷಾಂತರ ರೂ. ವಂಚಿಸಿದ ಪ್ರಕರಣ (Crime ) ಬೆಳಕಿಗೆ ಬಂದಿದೆ.
ಈ ಕಂಪನಿಯ ನಿರ್ದೇಶಕರಾದ ತಾರಿಕ್ ರೆಹಾನ್ ಮತ್ತು ಅಲ್ಬೀನ್ ಫಾತಿಮಾ ಎಂಬುವರ ವಿರುದ್ಧ ಪೊಲೀಸರ್ ಎಫ್‌ಐಆರ್ ದಾಖಲಿಸಿದ್ದಾರೆ.
ವಂಚನೆ ನಡೆದದ್ದು ಹೇಗೆ?
ಸ್ಯಾಂಟಲಮ್ ಹೆಬಿಟೆಟ್ ಕಂಪನಿಯು, ಕದ್ರಿ ಎಂಬಲ್ಲಿ ರೈತರಿಂದ ಜಮೀನನ್ನು ಪಡೆದು, ಗ್ರಾಹಕರಿಗೆ ತೋರಿಸಿತ್ತು. ಆ ಜಮೀನುಗಳಲ್ಲಿ ರೈತರು ಶ್ರೀಗಂಧದ ಗಿಡಗಳನ್ನು ಬೆಳೆಸಿದ್ದರು. ಇದನ್ನು ಬಂಡವಾಳ ಮಾಡಿಕೊಂಡಿದ್ದ ತಾರಿಕ್ ಮತ್ತು ಫಾತಿಮಾ, ಈ ಜಮೀನಿನಲ್ಲಿ ಶ್ರೀಗಂಧ ಮತ್ತು ಹಣ್ಣಿನ ಮರಗಳನ್ನು ಬೆಳೆಯಲಾಗುವುದು ಎಂದು ಹೇಳಿ ವಂಚಿಸಿದ್ದರು.
ಈಗ ಶ್ರೀಗಂಧ ಬೆಳೆಯುತ್ತಿರುವುದರಿಂದ 15 ವರ್ಷಗಳ ಬಳಿಕ 1 ಎಕರೆ ಜಮೀನಿಗೆ 4 ಕೋಟಿ ರೂ. ಬೆಲೆ ದೊರೆಯಲಿದೆ ಎಂದು ಗ್ರಾಹಕರಿಗೆ ಭರವಸೆ ನೀಡಿದ್ದರು. ಗ್ರಾಹಕರಿಗೆ ಜಮೀನನ್ನು ಸೈಟ್ ಹಾಗೂ ಎಕರೆ ಲೆಕ್ಕದಲ್ಲಿ ವಿಕ್ರಯಿಸಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆದರೆ ಒಪ್ಪಂದದ ಬಳಿಕ ಕಂಪನಿಯು ಶ್ರೀಗಂಧ ಬೆಳೆ ನಿರ್ವಹಣೆ ಮಾಡದೆ ವಂಚಿಸಿತ್ತು. ಕಂಪನಿಯ ಮತ್ತೊಬ್ಬ ನಿರ್ದೇಶಕರಿಂದ ಸಾಲ ಪಡೆದು ಪರಾರಿಯಾಗಿದ್ದರು.ಗ್ರಾಹಕರು ಪೋನ್ ಮಾಡಿದರೆ ಪ್ರತಿಕ್ರಿಯಿಸುತ್ತಿರಲಿಲ್ಲ. ಸದ್ಯ ವಂಚನೆ ಕುರಿತು ಸ್ಯಾಂಟಲಮ್ ಹೆಬಿಟೆಡ್ ಕಂಪನಿ ಡೈರೆಕ್ಟರ್ ಶ್ರೀನಿವಾಸ್ ಎಂಬುವರಿಂದ ದೂರು ದಾಖಲಾಗಿದೆ.