Site icon Vistara News

Accident News: ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು; ಗಾಣಗಾಪುರದಲ್ಲಿ ಭಕ್ತೆ ಜಲಸಮಾಧಿ

hutti gold mine accident news

ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ (Hutti Gold Mine) ಮಣ್ಣು ಕುಸಿದು (Accident news) ಕಾರ್ಮಿಕರೊಬ್ಬರು (Labourer Death) ಸಾವಿಗೀಡಾಗಿದ್ದಾರೆ. ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಪುಣ್ಯಕ್ಷೇತ್ರ ಗಾಣಗಾಪುರದಲ್ಲಿ ಸ್ನಾನಕ್ಕಾಗಿ ನದಿನೀರಿಗಿಳಿದ ಭಕ್ತೆಯೊಬ್ಬರು ಜಲಸಮಾಧಿ (Drowned) ಆಗಿದ್ದಾರೆ.

ಹಟ್ಟಿ ಚಿನ್ನದ ಗಣಿಯಲ್ಲಿ ನಿನ್ನೆ ರಾತ್ರಿ ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸುವಾಗ ಮಣ್ಣು ಕುಸಿದು ಒಬ್ಬರು ಕಾರ್ಮಿಕ ಸಾವಿಗೀಡಾಗಿದ್ದಾರೆ. ಮೃತ ಕಾರ್ಮಿಕರನ್ನು ಮೌನೇಶ್ (48) ಎಂದು ಗುರುತಿಸಲಾಗಿದೆ. ಇನ್ನೂ ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಒಬ್ಬ ಕಾರ್ಮಿಕರ ಕಾಲು ಕತ್ತರಿಸಿಹೋಗಿದೆ.

ಗಾಯಾಳು ಕಾರ್ಮಿಕರನ್ನು ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಇವರೆಲ್ಲ MS ಸಿಂಕಿ ಒಳಗೆ ಅಂದರೆ ಗಣಿಯ ಅತ್ಯಂತ ಕೊನೆಯ ಆಳದ ಲೆವೆಲ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಲಾಸ್ಟ್ ಲೆವೆಲ್‌ನಲ್ಲಿ ಕೆಲಸ‌ ಮಾಡುತ್ತಿದ್ದಾಗ ಮಣ್ಣು ಕುಸಿದಿತ್ತು.

ಪುಣ್ಯಸ್ನಾನ ಮಾಡುವಾಗ ಮಹಿಳೆ ಜಲಸಮಾಧಿ

ಕಲಬುರಗಿ: ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಬಳಿಯ ಭೀಮಾ ನದಿಯಲ್ಲಿ ಸ್ನಾನ ಮಾಡುವ ವೇಳೆ ಕಾಲು ಜಾರಿ ಬಿದ್ದು ಮುಳುಗಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರ ಬಳಿಯಿರುವ ಭೀಮಾ ನದಿಯಲ್ಲಿ ಅನಾಹುತ ಸಂಭವಿಸಿದೆ.

ಶೈಲಿ ಗೋಡೆ (23) ಭೀಮಾ ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಮಹಿಳೆ. ಮಹಾರಾಷ್ಟ್ರದ ದೌಂಡ್ ತಾಲೂಕಿನ ವಂಡ‌ಅಡವಿ ಗ್ರಾಮದವರದಾದ ಇವರು ಕುಟುಂಬ ಸಮೇತ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕೆ ಆಗಮಿಸಿದ್ದರು. ದರ್ಶನಕ್ಕೂ ಮುನ್ನ ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಕುಟುಂಬ ತೆರಳಿತ್ತು. ಈ ವೇಳೆ ಭೀಮಾ ನದಿಯ ಚಕ್ರೇಶ್ವರ ತೀರ್ಥದಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಅವಘಡ ನಡೆದಿದೆ. ಮೃತದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ಮತ್ತು ಪೊಲೀಸರು ಹೊರತೆಗೆದಿದ್ದಾರೆ. ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುರುಘಾ ಮಠದಲ್ಲಿ ಕಳ್ಳತನ; ದರ್ಬಾರ್‌ ಹಾಲ್‌ನಲ್ಲಿದ್ದ 22 ಕೆಜಿ ತೂಕದ ಬೆಳ್ಳಿ ಮೂರ್ತಿ ಎಗರಿಸಿದ ಕಳ್ಳರು

ಚಿತ್ರದುರ್ಗ: ಮುರುಘಾ ಮಠದಲ್ಲಿ ಬೆಳ್ಳಿ ಮೂರ್ತಿಯೊಂದು (Murugha mutt ) ಕಳ್ಳತನವಾಗಿದೆ. ಮುಂಜಾನೆ ಪೂಜೆಗೆಂದು ಹೋದಾಗ ಮೂರ್ತಿ ಕಳವು (Theft Case) ಆಗಿರುವುದು ಬೆಳಕಿಗೆ ಬಂದಿದೆ ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ಜೂನ್‌ 26ರಂದೇ ಮಠದಲ್ಲಿ ಸಿಸಿಟಿವಿ ಆಫ್ ಆಗಿದೆ. ಈ ವೇಳೆ ದರ್ಬಾರ್ ಹಾಲ್‌ನಲ್ಲಿದ್ದ 22 ಕೆಜಿ ತೂಕದ ಬೆಳ್ಳಿ‌ಮೂರ್ತಿ ಕಳ್ಳತನವಾಗಿದೆ. ಕಳ್ಳರು ಸಿಸಿಟಿವಿ ಆಫ್ ಮಾಡಿ ಕಳ್ಳತನ‌ ಮಾಡಿರಬಹುದು. ಈ ಕುರಿತು ಮೊದಲು ಮಠದ ಆಂತರಿಕ ಸಭೆ ಕರೆದು ವಿಚಾರಣೆ ಮಾಡಿದ್ದೇವೆ. ಆದರೆ ಕಳ್ಳತನ ಮಾಡಿದ್ದು ಯಾರು ಏನು ಎಂಬುದು ತಿಳಿದುಬಂದಿಲ್ಲ.

ಕಾರ್ಯಕ್ರಮದ ಒತ್ತಡದಿಂದಾಗಿ ಕಳ್ಳತನವಾಗಿರುವುದು ಅರಿವಿಗೆ ಬಂದಿರಲಲ್ಲ. ಮಠದ ಯುವಕರು ಗಮನಿಸಿ ಮಾಹಿತಿ ನೀಡಿದ್ದಾರೆ. ಈ ಹಿಂದೆ ಸ್ವಾಮೀಜಿಗೆ ಸವಿನೆನಪಿಗಾಗಿ ಸಮಾರಂಭವೊಂದರಲ್ಲಿ ಬೆಳ್ಳಿ ಮೂರ್ತಿಯನ್ನು ನೀಡಲಾಗಿತ್ತು. ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೇವೆ ಎಂದು ಬಸವಕುಮಾರ ಸ್ವಾಮೀಜಿ ಮಾಹಿತಿ ನೀಡಿದರು. ಬಸವಕುಮಾರ ಸ್ವಾಮೀಜಿ ಜತೆಗೆ ಮಠದ ಆಡಳಿತ ಮಂಡಳಿ ಸದಸ್ಯರು ಸೇರಿ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ತೆರಳಿ ದೂರು ದಾಖಲಿಸಲಿದ್ದಾರೆ.

ಇದನ್ನೂ ಓದಿ: Divya Vasantha: ಗೌರ್ಮೆಂಟ್ ಸ್ಕೂಲ್‌ನಲ್ಲಿ ಓದಿ, ಸೇಲ್ಸ್ ಗರ್ಲ್‌ ಆಗಿದ್ದ ದಿವ್ಯಾ ವಸಂತ ಬಳಿ ಇದೆ ಈ ದುಬಾರಿ ಕಾರು!

Exit mobile version