Murugha Seer: ಪೋಕ್ಸೊ ಕೇಸ್‌; ಮುರುಘಾ ಶ್ರೀಗಳ ವಿಚಾರಣೆ ಜೂನ್‌ 3ಕ್ಕೆ ಮುಂದೂಡಿಕೆ - Vistara News

ಚಿತ್ರದುರ್ಗ

Murugha Seer: ಪೋಕ್ಸೊ ಕೇಸ್‌; ಮುರುಘಾ ಶ್ರೀಗಳ ವಿಚಾರಣೆ ಜೂನ್‌ 3ಕ್ಕೆ ಮುಂದೂಡಿಕೆ

Murugha Seer: ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ಜೂನ್‌ 3ಕ್ಕೆ ಮುಂದೂಡಿದೆ.

VISTARANEWS.COM


on

Murugha Seer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದ (POCSO case) ವಿಚಾರಣೆಯನ್ನು ಜೂನ್‌ 3ಕ್ಕೆ ಮುಂದೂಡಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶದಂತೆ ಪೊಕ್ಸೋ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಕೈಗೆತ್ತಿಕೊಂಡಿದ್ದು, ಸಾಕ್ಷಿ ವಿಚಾರಣೆಗೆ ಆರೋಪಿ ಪರ ವಕೀಲ ಕೆ.ಬಿ.ಕೆ.ಸ್ವಾಮಿ ಎರಡು ದಿನಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿದೆ.

ಸಾಕ್ಷಿ ವಿಚಾರಣೆಗೆ ಸರ್ಕಾರಿ ಅಭಿಯೋಜಕ ಜಗದೀಶ್ ಅವಕಾಶ ಕೇಳಿದಾಗ, ಆರೋಪಿ ಪರ ವಕೀಲ ಕೆ.ಬಿ.ಕೆ.ಸ್ವಾಮಿ ಎರಡು ದಿನಗಳ ಕಾಲಾವಕಾಶ ಕೇಳಿದರು. ಹೀಗಾಗಿ ಉಭಯ ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಜಿ.ಸಿ ಹಡಪದ ಅವರು ಸಾಕ್ಷಿ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿದ್ದಾರೆ.

ಪೋಕ್ಸೊ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಶ್ರೀಗಳನ್ನು, ಶುಕ್ರವಾರ ನಗರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ಏ.29ರಂದು ಮುರುಘಾ ಶರಣರು ನ್ಯಾಯಾಲಯಕ್ಕೆ ಶರಣಾಗಿದ್ದರು. ಮುರುಘಾ ಶ್ರೀಗಳಿಗೆ (Murugha Seer) ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ಏ.23ರಂದು ರದ್ದು ಮಾಡಿ, ಶರಣಾಗತಿಯಾಗುವಂತೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಚಿತ್ರದುರ್ಗ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಶರಣಾಗಿದ್ದರು. ಅವರಿಗೆ ಮೇ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ಎಸ್.ಎನ್.ಕಲ್ಕಣಿ ಆದೇಶ ನೀಡಿದ್ದರು.

ಪೋಕ್ಸೋ ಕೇಸ್ ವಿಚಾರಣೆ ಮುಗಿದು ತೀರ್ಪು ಬರುವವರೆಗೂ ಮುರುಘಾ ಶ್ರೀಗಳನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿ, ಒಂದು ವಾರದೊಳಗೆ ಶರಣಾಗತಿ ಆಗುವಂತೆ ಶ್ರೀಗಳಿಗೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದರು. ಮೇ 27ರಂದು ನ್ಯಾಯಾಂಗ ಬಂಧನ ಮುಗಿದ ಹಿನ್ನೆಲೆಯಲ್ಲಿ ಶ್ರೀಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ಪ್ರಕರಣದ ಅಧಿಕೃತ ಚಾರ್ಜ್ ಶೀಟ್ ಲಭ್ಯವಿಲ್ಲದ ಕಾರಣ ಇಂದಿಗೆ (ಮೇ 31) ವಿಚಾರಣೆ ಮುಂದೂಡಲಾಗಿತ್ತು.

2022 ಆಗಸ್ಟ್‌ 31 ರಂದು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್‌ 1ರಂದು ಶ್ರೀಗಳ ಬಂಧನವಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದ, ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಿದ್ದರಿಂದ ಶ್ರೀಗಳು ಮತ್ತೆ ಜೈಲು ಸೇರುವಂತಾಗಿತ್ತು.

ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸಲು ಚಿತ್ರದುರ್ಗದ ಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಈಗಾಗಲೇ ಸೂಚನೆ ನೀಡಿದ್ದು, ಸಾಕ್ಷಿಗಳ ವಿಚಾರಣೆ ಮುಗಿಯುವ ತನಕ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು.

ಇದನ್ನೂ ಓದಿ | Self Harming: ಕಂಟ್ರಾಕ್ಟರ್‌ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ, ಮತ್ತೊಂದು ಸರ್ಕಾರಿ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಯಲಿಗೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Renuka Swamy Murder : ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗಲು ಯಾರ‍್ಯಾರ ಕೈ-ಕಾಲು ಹಿಡಿದ್ರು ಡೆವಿಲ್‌ ಗ್ಯಾಂಗ್?

Renuka Swamy Murder : ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗು ಬೇಕಾದಷ್ಟು ಹಣವನ್ನು ಕೊಡುತ್ತೇವೆ ಎಂದು ಕಾರು ಚಾಲಕ ರವಿಗೆ ಡೆವಿಲ್‌ ಗ್ಯಾಂಗ್‌ ಆಮಿಷವೊಡ್ಡಿತ್ತು. ಆದರೆ ಇದರಿಂದ ಹೆದರಿದ ರವಿ ವಾಪಸ್‌ ಚಿತ್ರದುರ್ಗಕ್ಕೆ ಮರಳಿದ್ದ ಎನ್ನಲಾಗಿದೆ.

VISTARANEWS.COM


on

By

Renuka swamy Murder
Koo

ಬೆಂಗಳೂರು: ರೇಣುಕಾಸ್ವಾಮಿ ಬರ್ಬರ ಹತ್ಯೆ (Renuka Swamy Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗಲು ಡೆವಿಲ್‌ ಗ್ಯಾಂಗ್‌ ಹಲವರಿಗೆ ಆಮಿಷ ತೋರಿಸಿದ್ದರು ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಬಳಿಕ ವಿನಯ್, ಲಕ್ಷ್ಮಣ್, ನಾಗರಾಜ್ ಸೇರಿ ಇಟಿಯಾಸ್ ಕಾರು ಚಾಲಕ ರವಿ ಅಲಿಯಾಸ್ ರವಿಶಂಕರ್‌ಗೆ ಆಮಿಷವೊಡ್ಡಿದ್ದರಂತೆ.

ನೀನು ಪೊಲೀಸರ ಎದುರು ಸರೆಂಡರ್ ಆಗು ಬೇಕಾದಷ್ಟು ಹಣವನ್ನು ಕೊಡುತ್ತೇವೆ ಎಂದಿದ್ದರಂತೆ. ಈ ವೇಳೆ ಹೆದರಿಕೊಂಡ ರವಿ ತಾನು ಬಂದಿದ್ದ ಇಟಿಯಾಸ್ ಕಾರಿನಲ್ಲೆ ಜಗದೀಶ್ ಅಲಿಯಾಸ್ ಜಗ್ಗ ಮತ್ತು ಅನುಕುಮಾರ್ ಜತೆಗೆ ಚಿತ್ರದುರ್ಗಕ್ಕೆ ತೆರಳಿದ್ದ. ಆದರೆ ಹೀಗೆ ಚಿತ್ರದುರ್ಗಕ್ಕೆ ತೆರಳುವಾಗ ದಾರಿ ಮಧ್ಯೆ ಜಗ್ಗ ಮತ್ತು ಅನು ಮೃತ ರೇಣುಕಾಸ್ವಾಮಿ ಧರಿಸಿದ್ದ ಚಿನ್ನಾಭರಣ ತಂದಿರುವುದು ಪತ್ತೆಯಾಗಿದೆ.

ಮರುದಿನ ಮಾಧ್ಯಮಗಳಲ್ಲಿ ಕೊಲೆ ಕೇಸ್‌ನಲ್ಲಿ ಆರೋಪಿಗಳು ಬಂಧನವಾಗಿರುವ ವಿಚಾರವನ್ನು ರವಿ ನೋಡಿದ್ದ. ಬಳಿಕ ನೇರವಾಗಿ ಚಿತ್ರದುರ್ಗ ಡಿವೈಎಸ್‌ಪಿ ಕಛೇರಿಗೆ ಆಗಮಿಸಿದ ಆರೋಪಿ ರವಿ ಅಲಿಯಾಸ್ ರವಿಶಂಕರ್ ಪೊಲೀಸರಿಗೆ ಶರಣಾಗಿದ್ದ.

ಇದನ್ನೂ ಓದಿ: Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪವಿತ್ರಾ ಗೌಡ ಮಾಜಿ ಪತಿಯಿಂದ ಕೇಸ್!

ದರ್ಶನ್ ಪರ ಇನ್ನೂ ಯಾಕೆ ಬೇಲ್‌‌ಗೆ ಅರ್ಜಿ ಸಲ್ಲಿಕೆ ಮಾಡಿಲ್ಲ? ವಕೀಲರು ಹೇಳೋದು ಏನು?

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ (Renuka Swamy Murder) ಪ್ರಕರಣದಲ್ಲಿ ಇಂದು ಮತ್ತೆ ನ್ಯಾಯಾಲಯದ ಮುಂದೆ ನಟ ದರ್ಶನ್‌ (Actor Darshan) ಸೇರಿ ಎಲ್ಲ ಬಂಧಿತ 17 ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ನ್ಯಾಯಾಲಯ (Court) ಆರೋಪಿಯನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ (Police custody) ನೀಡಲಿದೆಯೇ ಅಥವಾ ನ್ಯಾಯಾಂಗ ಬಂಧನ (Judicial custody) ವಿಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಿದೆಯೇ ಎಂದು ತಿಳಿದುಬರಲಿದೆ. ನಟ ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ, ಅನಿಲ್ ಬಾಬು ಆರೋಪಿಗಳ ಭೇಟಿಗೆ ಪೊಲೀಸ್‌ ಠಾಣೆಗೆ ಬಂದಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಹೀಗೆ.

ʻʻಇವತ್ತು ಆರೋಪಿಗಳನ್ನು ಐದು ಗಂಟೆಗಳ ಒಳಗಡೆ ಪ್ರೊಡ್ಯೂಸ್ ಮಾಡಬೇಕು. ಬಹುತೇಕ ತನಿಖೆ ಮುಗಿದಿರಬಹುದು. ಬೇಲ್ ಸಂಬಂಧ ನಾವು ಚರ್ಚೆ ಮಾಡಿದ್ದೇವೆ. ದರ್ಶನ್‌ ಜತೆ ಮಾತಾಡಿದ್ದೇವೆ. ಅವರ ಆರೋಗ್ಯ ಚೆನ್ನಾಗಿದೆ‌. ಜಾಮೀನು ಅರ್ಜಿ ಹಾಕೋದಕ್ಕೆ ಇನ್ನೂ ಸಮಯ ಇದೆ. ಇನ್ನೂ ಕೆಲವು ದಿನ ಸಮಯ ಹಿಡಿಯುತ್ತೆ. ಒಂದು ವಾರ ಬೇಕಾಗಬಹುದು. ನಾವು ಚರ್ಚೆ ಮಾಡಿ ನಂತರ ಮೂವ್ ಮಾಡುತ್ತೇವೆʼʼಎಂದು ಅನಿಲ್ ಬಾಬು ಹೇಳಿಕೆ ನೀಡಿದರು

ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ ಮಾತನಾಡಿ ʻʻಕಸ್ಟಡಿಗೆ ಕೇಳೋದು ತನಿಖಾಧಿಕಾರಿಗಳ ನಿರ್ಧಾರ. ಆದರೆ ಬಹುತೇಕ ತನಿಖೆ ಮುಗಿದಿರಬಹುದು. ನಿನ್ನೆ ಆರೋಪಿಗಳಿಗೆ ಡಿಎನ್ಎ ಟೆಸ್ಟ್ ಮಾಡಿದ್ದಾಗಿದೆ. ಪರೀಕ್ಷೆಗೆ ಕೋರ್ಟ್ ಅನುಮತಿ ಬೇಕು, ಸ್ಯಾಂಪಲ್ ಪಡೆಯಲು ಬೇಕಾಗುತ್ತದೆ. ಆದರೆ ಪೊಲೀಸರು ತಗೊಂಡಿದ್ದಾರಾ ಇಲ್ವೊ ಗೊತ್ತಿಲ್ಲ. ಡಿಎನ್ಎ ಟೆಸ್ಟ್ ಮಾಡಿದ್ರಾ ಇಲ್ವೊ ಅನ್ನೋದು ನಮಗೆ ಗೊತ್ತಿಲ್ಲ. ಅದೇಲ್ಲಾ ಚಾರ್ಜ್‌ಶೀಟ್‌ನಲ್ಲಿ ಇರುತ್ತದೆ. ಅಲ್ಲಿ ನಮಗೆ ಗೊತ್ತಾಗುತ್ತೆʼʼಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಭಾರಿ ಮಳೆ ಜತೆಗೆ ಬೀಸಲಿದೆ ಬಿರುಗಾಳಿ; ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Weather Forecast : ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯೊಂದಿಗೆ (Heavy rain alert) ಬಿರುಗಾಳಿ ಬೀಸಲಿದ್ದು, ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ (Fisher Warning) ನೀಡಲಾಗಿದೆ. ಜತೆಗೆ ಮಲೆನಾಡು, ಒಳನಾಡಿನಲ್ಲೂ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು : ರಾಜ್ಯಾದ್ಯಂತ ಬುಧವಾರದಂದು ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಹಗುರದಿಂದ ಕೂಡಿರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಉತ್ತರ ಒಳನಾಡಿನ ಹಲವೆಡೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಇತ್ತ ಮಲೆನಾಡಿನ ಜಿಲ್ಲೆಯಾದ್ಯಂತ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲೂ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

9 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

ಗುಡುಗು, ಸಿಡಿಲು ಜತೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಗಾಳಿ ವೇಗವು 30-40 ಕಿ.ಮೀ ಇರಲಿದೆ. ಹೀಗಾಗಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಮುಖ್ಯವಾಗಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಸೇರಿ ಒಳನಾಡಿನ ಚಿತ್ರದುರ್ಗ, ಮಂಡ್ಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಡಲಿಗೆ ಮೀನುಗಾರರ ದಿಗ್ಬಂಧನ

ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿ ಇರಲಿದ್ದು, ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಜೂನ್‌ 21ರವರೆಗೆ ಮೀನುಗಾರರು ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದೆ. ಜತೆಗೆ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಗುಡುಗು, ಸಿಡಿಲಿನ ಮಳೆಗೆ ಮನೆಯ ಗೋಡೆ ಕುಸಿತ; ನಾಳೆಗೂ ಇದೆ ಅಲರ್ಟ್‌

Karnataka Weather Forecast : ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ (Rain News) ಮನೆಯ ಗೋಡೆ ಕುಸಿದಿದ್ದು, ಕುಟುಂಬಸ್ಥರು ಪವಾಡ ಸದೃಶ್ಯದಂತೆ ಪಾರಾಗಿದ್ದಾರೆ. ರಾಜ್ಯದ ಹಲವೆಡೆ ಮಳೆಯಾಗಿರುವ ವರದಿ ಆಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು/ದೊಡ್ಡಬಳ್ಳಾಪುರ: ಸಿಡಿಲು ಬಡಿದು ಮನೆಯ ಗೋಡೆ ಕುಸಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುಕ್ಕಡಿಘಟ್ಟ ಗ್ರಾಮದಲ್ಲಿ (Karnataka Weather Forecast) ನಡೆದಿದೆ. ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಜಡಿ (Rain News) ಮಳೆಯಾಗಿದೆ.

ಈ ವೇಳೆ ಸಿಡಿಲು ಬಡಿದ ಪರಿಣಾಮ ಗೋಡೆ ಕುಸಿತವಾಗಿದೆ. ಗಂಗರಾಜ್ ಎಂಬುವವರಿಗೆ ಸೇರಿದ ಮನೆ ಹಾನಿಯಾಗಿದೆ. ಮನೆಯ ಕುಟುಂಬಸ್ಥರು ಬೇರೆ ಕೋಣೆಯಲ್ಲಿದ್ದ ಕಾರಣ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಗೋಡೆ ಕುಸಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಜಖಂಗೊಂಡಿವೆ. ದೊಡ್ಡಬಳ್ಳಾಪುರ ಗ್ರಾಮಾಂತರ ‌ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

ಚಿಕ್ಕಮಗಳೂರಲ್ಲಿ ಅಬ್ಬರ ಮಳೆ

ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಭಾರಿ ಮಳೆಯಾಗಿದ್ದು, 8 ಸೆಂ.ಮೀ ದಾಖಲಾಗಿದೆ. ಧರ್ಮಸ್ಥಳದಲ್ಲಿ 6 ಸೆಂ.ಮೀ, ಕಾರ್ಕಳ , ಕಕ್ಕೇರಿ, ಯಗಟಿಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಹೊಸದುರ್ಗ, ಹಾರಂಗಿ, ರಾಯಲ್ಪಾಡು, ಚನ್ನಗಿರಿ, ಕೋಲಾರ, ಎಂಎಂ ಹಿಲ್ಸ್‌ನಲ್ಲಿ 4 ಸೆಂ.ಮೀ ಮಳೆಯಾಗಿದೆ.

ಇನ್ನೂ ಮಣಿ, ಶಿರಾಲಿ, ಬೆಳ್ತಂಗಡಿ, ಕೊಣನೂರಿನಲ್ಲಿ ತಲಾ 3 ಸೆಂ.ಮೀ ಹಾಗೂ ಹೊನ್ನಾವರ, ಪುತ್ತೂರು, ಮಂಗಳೂರು, ತುಮಕೂರು, ಭಾಗಮಂಡಲ, ವಿರಾಜಪೇಟೆ, ಕುಶಾಲನಗರದಲ್ಲಿ ತಲಾ 2 ಸೆಂ.ಮೀನಷ್ಟು ಮಳೆಯಾಗಿದೆ. ಮಂಕಿ, ಪಣಂಬೂರು , ಮೂಲ್ಕಿ, ಉಪ್ಪಿನಂಗಡಿ, ಕುಮಟಾ, ಮಧುಗಿರಿ, ಪರಶುರಾಂಪುರ, ತೊಂಡೇಭಾವಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಕರಾವಳಿ ಭಾಗಕ್ಕೆ ಮಳೆ ಅಲರ್ಟ್‌

ಜೂನ್‌ 19ರಂದು ಕರಾವಳಿ ಭಾಗಕ್ಕೆ ಮಳೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಲ್ಲಿ ಕೆಲವೊಮ್ಮೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಗರಿಷ್ಠ 30 ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Renuka Swamy Murder: ರೇಣುಕಾ ಸ್ವಾಮಿ ಮನೆಗೆ ಗೃಹ ಸಚಿವ ಪರಮೇಶ್ವರ್‌, ಪ್ರತಿಪಕ್ಷ ನಾಯಕ ವಿಜಯೇಂದ್ರ ಭೇಟಿ

Renuka Swamy Murder: ಗೃಹ ಸಚಿವ ಡಾ.ಜಿ ಪರಮೇಶ್ವರ (Home minister G Parameshwara), ಪ್ರತಿಪಕ್ಷ ನಾಯಕ ಬಿ.ವೈ ವಿಜಯೇಂದ್ರ (BY vijayendra), ಸಂಸದ ಗೋವಿಂದ ಕಾರಜೋಳ ಮುಂತಾದವರು ಭೇಟಿ ನೀಡಿದ್ದು, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

VISTARANEWS.COM


on

renuka swamy murder case by vijayendra g parameshwara
Koo

ಚಿತ್ರದುರ್ಗ: ಬೆಂಗಳೂರಿನಲ್ಲಿ ನಟ ದರ್ಶನ್‌ (Actor Darshan) ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ (Renuka swamy Murder case) ಮನೆಗೆ ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ (Home minister G Parameshwara), ಪ್ರತಿಪಕ್ಷ ನಾಯಕ ಬಿ.ವೈ ವಿಜಯೇಂದ್ರ (BY vijayendra), ಸಂಸದ ಗೋವಿಂದ ಕಾರಜೋಳ ಮುಂತಾದವರು ಭೇಟಿ ನೀಡಿದ್ದು, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ವಿಜಯೇಂದ್ರ ಅವರು ಮೃತನ ಕುಟುಂಬಕ್ಕೆ 2 ಲಕ್ಷ ರೂ.ಗಳ ಧನಸಹಾಯ ನೀಡಿದ್ದಾರೆ.

ರೇಣುಕಾಸ್ವಾಮಿ‌ ಮನೆಗೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಹತ್ಯೆ ಪ್ರಕರಣ ಕುರಿತು ಮತ್ತಷ್ಟು ಮಾಹಿತಿ ಪಡೆದು, ಸೂಕ್ತ ತನಿಖೆ ಮಾಡಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೇಣುಕಾಸ್ವಾಮಿ ತಂದೆ, ತಾಯಿ ಮಗನ ಭೀಕರ ಹತ್ಯೆ ಕುರಿತು ಕಣ್ಣೀರಿಟ್ಟು ನ್ಯಾಯಕ್ಕಾಗಿ ಮನವಿ ಮಾಡಿದರು. ರೇಣುಕಸ್ವಾಮಿ ಪತ್ನಿಗೆ ಉದ್ಯೋಗ ನೀಡುವಂತೆ, ಸೂಕ್ತ ತನಿಖೆ ಮಾಡಿಸುವಂತೆ ಒತ್ತಾಯಿಸಿದರು. ಗೃಹ ಸಚಿವ ಜಿ.ಪರಮೇಶ್ವರ್‌ಗೆ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಸ್ಥಳೀಯ ಶಾಸಕರು ಸಾಥ್‌ ನೀಡಿದರು.

“ಕುಟುಂಬದವರಿಗೆ ಸಾಂತ್ವನ ಹೇಳಬೇಕು ಅಂತ ಬಂದಿದ್ದೇನೆ. ಇದು ಬಹಳ ನೋವು ಉಂಟು ಮಾಡಿದೆ. ಸರ್ಕಾರ ಯಾವುದೇ ಮುಲಾಜು ಇಲ್ಲದೇ ತನಿಖೆ ಮಾಡ್ತಿದೆ. ಈಗಾಗಲೇ ಸುಮಾರು 17 ಜನ ಆರೆಸ್ಟ್ ಆಗಿದ್ದಾರೆ. ರೇಣುಕಾ ಪತ್ನಿ ಗರ್ಭಿಣಿ ಆಗಿದ್ದಾರೆ. ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಉದ್ಯೋಗ ಕೊಡಿಸಬೇಕು ಎಂಬ ಬೇಡಿಕೆ ಇದೆ. ಸಿಎಂ ಜೊತೆ ಚರ್ಚೆ ಮಾಡ್ತೀನಿ ಅಂತ ಹೇಳಿದ್ದೇನೆ. ಯಾವುದೇ ರೀತಿ ತಪ್ಪು ಆಗದ ಹಾಗೆ ತನಿಖೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ಯಾರೂ ರಾಜಕೀಯ ಮಾಡಬಾರದು. ನಮ್ಮ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಚೆನ್ನಾಗಿ ಕೆಲಸ ಮಾಡಿದ್ದಾರೆ” ಎಂದು ಪರಮೇಶ್ವರ ಈ ಸಂದರ್ಭದಲ್ಲಿ ನುಡಿದರು.

ಸರ್ಕಾರ ಧನಸಹಾಯ ನೀಡಲಿ: ವಿಜಯೇಂದ್ರ

“ರೇಣುಕಾ ಸ್ವಾಮಿ ಹತ್ಯೆ ಅಮಾನವೀಯ ಕೃತ್ಯ. ನಾಗರಿಕ ಸಮಾಜದ ಇದನ್ನು ಬೆಂಬಲಿಸಲು ಸಾಧ್ಯ ಇಲ್ಲ. ಪ್ರತಿಯೊಬ್ಬರೂ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸಬೇಕು. ಅವರ ಕುಟುಂಬ ನೋಡಿ ದುಃಖ ಆಗುತ್ತಿದೆ. ಆ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಆಗಬೇಕು. ರೇಣುಕಾ ಸ್ವಾಮಿ ಪತ್ನಿ 4 ತಿಂಗಳ ಗರ್ಭಿಣಿ. ಅವರಿಗೆ ಸರ್ಕಾರಿ ಉದ್ಯೋಗ ಜೊತೆಗೆ ಪರಿಹಾರ ಕೊಡಬೇಕು. ಯಾರೇ ಇದ್ದರೂ ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು. ಯಾವ ಒತ್ತಡಕ್ಕೂ ಮಣಿಯದೆ ತಪ್ಪಿತಸ್ತರಿಗೆ, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು. ಪ್ರಕರಣದ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ಆಗುತ್ತಿದ್ದು, ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು” ಎಂದು ಮೃತನ ಮನೆಗೆ ಭೇಟಿ ನೀಡಿದ ಬಳಿಕ ಬಿ.ವೈ ವಿಜಯೇಂದ್ರ ನುಡಿದರು.

“ನಾನು ಇಲ್ಲಿ ರಾಜಕೀಯ ಬೆರೆಸಲು ಹೋಗುವುದಿಲ್ಲ. ಸಿಎಂ ಕೂಡಲೇ ಪರಿಹಾರ ಕೊಡುವ ನಿರ್ಧಾರ ಮಾಡಬೇಕು. ಪಕ್ಷದ ವತಿಯಿಂದ 2 ಲಕ್ಷ ರೂ. ಚೆಕ್ ಕೊಟ್ಟಿದ್ದೇವೆ. ಪರಿಹಾರ ಜೊತೆ ಜೊತೆಗೆ ಸರ್ಕಾರದ ಉದ್ಯೋಗವೂ ಬೇಕಿದೆ” ಎಂದು ಅವರು ನುಡಿದರು. ಅವರ ಜೊತೆಗೆ ಸಂಸದ ಗೋವಿಂದ ಕಾರಜೋಳ ಕೂಡ ಇದ್ದರು.

ಇದನ್ನೂ ಓದಿ: Renuka Swamy Murder: ಸಿಸಿಟಿವಿ ದಾಖಲೆ ಸಂಪೂರ್ಣ ನಾಶ ಮಾಡಿದ ಪಾತಕಿಗಳು! ಆ ಭಯಾನಕ ಶೆಡ್‌ನಲ್ಲಿದೆ ಇನ್ನಷ್ಟು ರಹಸ್ಯ!

Continue Reading
Advertisement
Protest by BJP in Yallapur against petrol and diesel price hike
ಉತ್ತರ ಕನ್ನಡ4 mins ago

Uttara Kannada News: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಯಲ್ಲಾಪುರದಲ್ಲಿ ಬಿಜೆಪಿಯಿಂದ ಪ್ರತಿಭಟನೆ

Renuka swamy Murder case
ಬೆಂಗಳೂರು14 mins ago

Renuka Swamy Murder : ನಟ ದರ್ಶನ್ ಹಲ್ಲೆ ಮಾಡುವುದನ್ನು ವಿಡಿಯೊ ಮಾಡಿದ್ದ ಮೂವರು ಅರೆಸ್ಟ್‌; ಸಿಕ್ಕೇ ಬಿಡ್ತಾ ದೊಡ್ಡ ಸಾಕ್ಷಿ!

International Yoga Day 2024
ಫ್ಯಾಷನ್24 mins ago

International Yoga Day 2024: ಯೋಗಾಭ್ಯಾಸಕ್ಕೆ ಪುರುಷರ ಉಡುಗೆಗಳು ಹೀಗಿರಬೇಕು

Amithab Bacchan
Latest38 mins ago

Amithab Bacchan :14ನೇ ವರ್ಷಕ್ಕೆ ಕಾಲಿಟ್ಟ ʼರಾವಣ್ʼ ಚಿತ್ರ; ಮಗನನ್ನು ಹೊಗಳಿ ಸೊಸೆಯನ್ನು ನಿರ್ಲಕ್ಷಿಸಿದ ಅಮಿತಾಭ್!

BCCI
ಕ್ರೀಡೆ39 mins ago

BCCI: ಟೀಮ್​ ಇಂಡಿಯಾದ ತವರಿನ ಕ್ರಿಕೆಟ್​ ಸರಣಿಯ ವೇಳಾಪಟ್ಟಿ ಪ್ರಕಟ

Amitabh Bachchan touched Aswini Dutt feet
ಬಾಲಿವುಡ್42 mins ago

Amitabh Bachchan: ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದ ಅಮಿತಾಭ್‌; ʻಬಿಗ್‌ ಬಿʼ ಕೊಂಡಾಡಿದ ರಾಮ್ ಗೋಪಾಲ್ ವರ್ಮಾ!

Citroen C3 Aircross
ಪ್ರಮುಖ ಸುದ್ದಿ47 mins ago

Citroen C3 Aircross : ಧೋನಿ ಹೆಸರಿನಲ್ಲಿ ಬಿಡುಗಡೆಯಾಗಿದೆ ಈ ಕಾರು, ಕೇವಲ 100 ಕಾರಷ್ಟೇ ಉತ್ಪಾದನೆ

Mysuru News
ಮೈಸೂರು49 mins ago

Mysuru News : ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ

Yuva spoorthi samvaada programme on June 22 in Shivamogga
ಕರ್ನಾಟಕ55 mins ago

Shivamogga News: ಶಿವಮೊಗ್ಗದಲ್ಲಿ ಜೂ.22ರಂದು ಯುವ ಸ್ಫೂರ್ತಿ ಸಂವಾದ ಕಾರ್ಯಕ್ರಮ

IIT Bombay
Latest1 hour ago

IIT Bombay: ಹಿಂದೂ ದೇವರ ಅವಹೇಳನಕಾರಿ ನಾಟಕ; ಐಐಟಿ ವಿದ್ಯಾರ್ಥಿಗಳಿಗೆ ದಂಡ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ6 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌