Site icon Vistara News

Seer suicide | ಬಸವಲಿಂಗ ಶ್ರೀಗಳ ಮೇಲೆ ದ್ವೇಷ ಸಾಧನೆಗೆ ಮುಂದಾಗಿದ್ದೇಕೆ ನೀಲಾಂಬಿಕೆ?

ಬಂಡೇಮಠ

ರಾಮನಗರ: ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣದಲ್ಲಿ ಇನ್ನಷ್ಟು ರಹಸ್ಯಗಳು ಹೊರಗೆ ಬೀಳುತ್ತಿವೆ. ಬಸವಲಿಂಗ ಶ್ರೀಗಳನ್ನು ನೀಲಾಂಬಿಕೆ ಮತ್ತು ತಂಡ ಟ್ರ್ಯಾಪ್ ಮಾಡಲು ಹಳೆಯ ದ್ವೇಷ ಸಾಧನೆ ಕಾರಣ ಎಂಬುದು ತಿಳಿದುಬಂದಿದೆ.

ಈ ಹಿಂದೆಯೇ ಪರಿಚಯವಿದ್ದ ಬಸವಲಿಂಗ ಶ್ರೀಗಳ ಮೇಲೆ ನೀಲಾಂಬಿಕಾ ದ್ವೇಷ ಸಾಧಿಸಲು ಇಲ್ಲಿದೆ ಅಸಲಿ ಕಾರಣ. ಹಿಂದೊಮ್ಮೆ ಬಸವಲಿಂಗ ಶ್ರೀಗಳ ಜೊತೆ ಮತ್ತೊಂದು ಶ್ರೀಗಳ ವಿರುದ್ಧವಾಗಿ ನೀಲಾಂಬಿಕೆ ಮಾತನಾಡಿದ್ದಳು. ಇದನ್ನ ಬಸವಲಿಂಗ ಶ್ರೀ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಚಾರವನ್ನು ಇತರರ ಜೊತೆ ಬಸವಲಿಂಗ ಸ್ವಾಮೀಜಿ ಹಂಚಿಕೊಂಡಿದ್ದರು.

ಇದನ್ನೂ ಓದಿ | Seer Suicide | ಬಂಡೇಮಠ ಶ್ರೀಗಳ ಆತ್ಮಹತ್ಯೆ ಪ್ರಕರಣದಲ್ಲಿ ಕಣ್ಣೂರು ಸ್ವಾಮೀಜಿ ಜತೆಗೆ ಇಬ್ಬರ ಬಂಧನ

ಇದರಿಂದಾಗಿ ಹಲವು ಮಠಗಳ ಸಂಪರ್ಕ ಹೊಂದಿದ್ದ ನೀಲಾಂಬಿಕೆಯನ್ನು ಕೆಲವು ಮಠಗಳು ದೂರವಿರಿಸಿದ್ದವು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ನೀಲಾಂಬಿಕೆ ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದು, ಮೃತ್ಯುಂಜಯ ಶ್ರೀಗಳ ಸಾಥ್ ಸಿಕ್ಕೊಡನೆ ಬಸವಲಿಂಗ ಶ್ರೀಗೆ ಖೆಡ್ಡಾ ತೋಡಿದ್ದಾಳೆ. ಈ ಮೂಲಕ ತನ್ನ ದ್ವೇಷವನ್ನು ತೀರಿಸಿಕೊಂಡಿದ್ದಾಳೆ.

ಇನ್ನಷ್ಟು ಜನ ವಿಚಾರಣೆ?

ಡೇಮಠ ಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಜನರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಮೂವರ ಬಂಧನ ಬಳಿಕವೂ ತನಿಖೆ ಮುಂದುವರಿದಿದೆ. ಬಸವಲಿಂಗ ಶ್ರೀಗಳ ಇನ್ನಷ್ಟು ವಿಡಿಯೋ ರೆಕಾರ್ಡ್‌ಗಳನ್ನು ನೀಲಾಂಬಿಕೆ ಮತ್ತು ಗ್ಯಾಂಗ್‌ ಸಮುದಾಯದ ಮುಖಂಡರಿಗೆ ಹಂಚಿದ್ದು, ವಿಡಿಯೋ ಇಟ್ಟುಕೊಂಡು ಸ್ವಾಮೀಜಿಗೆ ಕಿರುಕುಳ ನೀಡುತ್ತಿತ್ತು. ಆರೋಪಿತ ಮೂವರು ಬಿಟ್ಟು ಬೇರೆ ಯಾರಾದರೂ ಕಿರುಕುಳ ನೀಡಿದ್ದರೇ, ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದರೇ, ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಕಣ್ಣೂರು ಮಠದ ಸ್ವಾಮಿ, ಸಮುದಾಯದ ಮುಖಂಡರಿಗೆ ಸಿಡಿ ಹಂಚಿದ್ದ ಎಂಬುದು ಗೊತ್ತಾಗಿದೆ. ಇನ್ನಷ್ಟು ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.

ಇದನ್ನೂ ಓದಿ | Seer Suicide | ಬಂಡೇಮಠ ಶ್ರೀಗಳ ಆತ್ಮಹತ್ಯೆ ಪ್ರಕರಣ; ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ

Exit mobile version