Site icon Vistara News

Murder Case: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭಾವನ ಕೊಲೆ ಕೇಸ್;‌ ತಮಿಳುನಾಡಲ್ಲಿ ಇಬ್ಬರ ಬಂಧನ

CP Yogeshwar brother in law mahadevaiah

ರಾಮನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ (CP Yogeshwar) ಭಾವ ಮಹದೇವಯ್ಯ (Mahadevaiah) ಅವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ (Murder case) ಇಬ್ಬರು ಆರೋಪಿಗಳನ್ನು ಚಾಮರಾಜನಗರ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಓರ್ವ ಮಹಿಳೆ ಸೇರಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಮತ್ತಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಸದ್ಯ ಚಾಮರಾಜನಗರ ಪೊಲೀಸರ ವಶದಲ್ಲಿ ಆರೋಪಿಗಳು ಇದ್ದು, ವಿಚಾರಣೆ ನಡೆಯುತ್ತಿದೆ.

ಯಾರು ಈ ಮುರುಗನ್?

ತಮಿಳುನಾಡು ಮೂಲಕ ಮುರುಗನ್ ಹಲವು ವರ್ಷಗಳಿಂದ ಮಹದೇವಯ್ಯ ಅವರ ಪಕ್ಕದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಮಹದೇವಯ್ಯ ಬಳಿ ಹಣ ಇರುವುದನ್ನು ಗಮನಿಸಿದ್ದ ಮುರುಗನ್, ಹಣಕ್ಕಾಗಿಯೇ ಹತ್ಯೆ ಮಾಡುವ ಸ್ಕೆಚ್‌ ಹಾಕಿದ್ದ. ಈ ಸಂಬಂಧ ಮಹದೇವಯ್ಯ ಅವರನ್ನು ಕೊಲೆ ಮಾಡಲು ಮುಹೂರ್ತ ಫಿಕ್ಸ್‌ ಮಾಡಿದ್ದ.

ತನ್ನ ಕುಟುಂಬಸ್ಥರ ಜತೆ ಸೇರಿ ಮಹದೇವಯ್ಯ ಅವರನ್ನು ಹತ್ಯೆ ಮಾಡಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಹಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಮುರುಗನ್ ಮತ್ತು ತಂಡ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಇಬ್ಬರನ್ನು ಬಂಧನ ಮಾಡಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಿಯಲ್‌ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯ

ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಸಹೋದರಿ ಪುಷ್ಪಾ ಅವರ ಪತಿ ಮಹದೇವಯ್ಯ ರಿಯಲ್‌ ಎಸ್ಟೇಟ್ ಉದ್ಯಮಿಯಾಗಿದ್ದರು. ಅವರು ಡಿಸೆಂಬರ್‌ 1ರ ಶುಕ್ರವಾರ ರಾತ್ರಿ ತೋಟದ ಮನೆಯಲ್ಲಿ (Channapatna News) ಇದ್ದವರು ನಾಪತ್ತೆಯಾಗಿದ್ದರು. ಅವರು ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಲ್ಲಿ ವಾಸವಾಗಿದ್ದರು. ಮಹದೇಶ್ವರ ಬೆಟ್ಟದಲ್ಲಿ ಟವರ್ ಲೊಕೇಶನ್ ಟ್ರೇಸ್ ಆಗಿತ್ತು, ಮನೆಯಲ್ಲಿ ಬೀರು ಓಪನ್ ಆಗಿ, ಬೆಡ್ ರೂಮ್‌ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿತ್ತು.

ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೆಳಗ್ಗೆಯಿಂದ ಮಹದೇವಯ್ಯ ಫೋನ್ ಸ್ವಿಚ್ ಆಫ್ ಆಗಿದ್ದು, ಕಾರು ಕೂಡಾ ನಾಪತ್ತೆಯಾಗಿದೆ. ಹೀಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು

ಕಂದಾಯ ಇಲಾಖೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ಅವರು ಮಾಡುತ್ತಿದ್ದರು. ಎಲ್ಲ ಫೈಲ್‌ಗಳನ್ನು ಇಲ್ಲಿಯೇ ಇದ್ದು ರೆಡಿ ಮಾಡುತ್ತಿದ್ದರು. ಹಣಕಾಸು, ಚಿನ್ನಾಭರಣ ಯಾವುದೂ ಕಳುವಾಗಿಲ್ಲ. ಇಲ್ಲಿನ ವಾತಾವರಣ ನೋಡಿದರೆ ಬಲವಂತವಾಗಿ ಕರೆದುಕೊಂಡು ಹೋದ ಹಾಗೆ ಇದೆ ಎಂದು ಮಾಜಿ ಸಚಿವ ಯೋಗೇಶ್ವರ್ ಸಹೋದರ ರಾಜೇಶ್ ಶಂಕಿಸಿದ್ದರು.

ಹಣಕ್ಕಾಗಿ ಕೊಲೆ

ಈಗ ಇಬ್ಬರು ಆರೋಪಿಗಳು ಬಂಧಿತರಾಗಿದ್ದು, ಹಣಕ್ಕಾಗಿ ಕೊಲೆ ಮಾಡಿರುವ ಬಗ್ಗೆ ವಿಚಾರ ಗೊತ್ತಾಗಿದೆ. ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ. ಈ ಸಂಬಂಧ ಹಂತಕರ ಜಾಡು ಹಿಡಿದು ಹೊಗಿದ್ದ ಚಾಮರಾಜನಗರ ಜಿಲ್ಲಾ ಪೊಲೀಸರು ತಮಿಳುನಾಡಿಗೆ ಹೋಗಿ ಬಂಧಿಸಿದ್ದಾರೆ. ಆರೋಪಿಗಳ ಚಲನವಲನ, ಸಿಸಿಟಿವಿಯಲ್ಲಿ ಪತ್ತೆಯಾಗಿದ್ದ ದೃಶ್ಯಗಳ ಆಧಾರದಲ್ಲಿ ಆರೋಪಿಗಳ ಬೆನ್ನು ಬಿದ್ದಿದ್ದ ಪೊಲಿಸರು, ಕೊನೆಗೂ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Caste Census: ಜಾತಿ ಗಣತಿ ವರದಿ ಸ್ವೀಕಾರ ಬೇಡ; ಸಿಎಂ ಎದುರು ಸಹಿ ಸಂಗ್ರಹಿಸಿ ತೊಡೆ ತಟ್ಟಿದ ಶಾಮನೂರು!

ಇನ್ನು ಘಟನೆ ದಿನ ಏನು ನಡೆಯಿತು? ಕೊಲೆ ಮಾಡುವ ಉದ್ದೇಶದಿಂದ ಹೋಗಲಾಗಿತ್ತೇ? ಅಥವಾ ದುಡ್ಡನ್ನು ಮಾತ್ರ ದೋಚಿಕೊಂಡು ಬರುವ ಉದ್ದೇಶ ಇತ್ತೇ? ಆಗ ಇದನ್ನು ಮಹದೇವಯ್ಯ ನೋಡಿದ್ದರಿಂದ ಕೊಲೆ ಮಾಡಿದರೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರವನ್ನು ಕಂಡುಕೊಳ್ಳಬೇಕಿದೆ.

Exit mobile version