Site icon Vistara News

Crime News: ಬೆಡ್‌ರೂಂ ಕಿಟಕಿ ಹಾಕದೆ ರತಿಕೇಳಿ, ಪಕ್ಕದ ಮನೆ ಮಹಿಳೆಗೆ ಕಿರಿಕ್!‌ ಬೆಂಗಳೂರಿನಲ್ಲಿ ವಿಚಿತ್ರ ದೂರು

unusual sex crime news

ಬೆಂಗಳೂರು: ರಾಜಧಾನಿ ನಗರದಲ್ಲಿ ವಿಚಿತ್ರ ದೂರೊಂದು (Bangalore Crime News) ಪೊಲೀಸರಲ್ಲಿ ದಾಖಲಾಗಿದೆ. ದೂರಿಗೆ ಕಾರಣವಾಗಿರುವುದು ಪಕ್ಕದ ಮನೆ ದಂಪತಿಯ ಖುಲ್ಲಂಖುಲ್ಲಾ ಸರಸ ಸಲ್ಲಾಪ ವಿಚಾರ.

ಗಿರಿನಗರ ಪೊಲೀಸ್ ಠಾಣೆಗೆ ಈ ವಿಚಿತ್ರ ಕೇಸ್ ಬಂದಿದೆ. 44 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಗಿರಿನಗರ ವ್ಯಾಪ್ತಿಯ ಅವಲಹಳ್ಳಿ ಏರಿಯಾದಲ್ಲಿ ಮಹಿಳೆ ವಾಸವಿರುವ ಬಾಡಿಗೆಮನೆಯ ಪಕ್ಕದ ಮನೆಯಲ್ಲಿ ಈ ವಿಚಿತ್ರ ದಂಪತಿ ವಾಸವಿದ್ದಾರೆ. ಮಹಿಳೆ ಇರುವ ಮನೆ ಬಾಗಿಲಿಗೆ ಎದುರಾಗಿಯೇ ಪಕ್ಕದ ಮನೆ ಬೆಡ್ ರೂಂ ಇದೆ.

ದೂರು ಏನೆಂದರೆ, ಪಕ್ಕದ ಮನೆ ದಂಪತಿ ಲೈಂಗಿಕ ಕ್ರಿಯೆ ಮಾಡುವಾಗ ಕಿಟಕಿ ಬಾಗಿಲು ತೆರೆದಿಟ್ಟುಕೊಂಡೇ ನಡೆಸುತ್ತಾರೆ; ಜೊತೆಗೆ ವಿಕೃತ ವರ್ತನೆ ಮಾಡುತ್ತಾರಂತೆ. ವಿಕೃತ ಸದ್ದುಗಳು ಹಾಗೂ ಹಾವಭಾವಗಳನ್ನು ಪ್ರದರ್ಶಿಸುವ ಇವರ ವರ್ತನೆಯಿಂದ ಮಹಿಳೆ ಕುಟುಂಬಕ್ಕೆ ಕಿರಿಕಿರಿ ಉಂಟಾಗಿದೆ. ʼಕಿಟಕಿ ಬಾಗಿಲು ಹಾಕಿಕೊಳ್ಳಿʼ ಎಂದು ಆಗ್ರಹಿಸಿದರೆ, ʼನಮ್ಮ ಮನೆ, ನಮ್ಮ ಇಷ್ಟʼ ಎಂಬ ಉತ್ತರ ದಂಪತಿಯಿಂದ ಬಂದಿದೆ. ಆಕ್ಷೇಪಿಸಿದಾಗ, ಪಕ್ಕದ ಮನೆ ವ್ಯಕ್ತಿ ಮಹಿಳೆಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾನೆ.

ಆರೋಪಿಗೆ ಮನೆ ಮಾಲೀಕ ಮತ್ತು ಆತನ ಮಗನೂ ಸಾಥ್ ಕೊಟ್ಟಿದ್ದಾರಂತೆ. “ನಿಮಗೆ ಇಷ್ಟವಿಲ್ಲದಿದ್ರೇ ನೀವೇ ಮನೆ ಬಿಟ್ಟುಹೋಗಿ” ಎಂದು ದಬಾಯಿಸಿದ್ದಾರೆ. ಮನೆ ಮಾಲಿಕನೂ ರೌಡಿ ಹುಡುಗರನ್ನು ಕರೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಮನೆ ಮಾಲೀಕ ಚಿಕ್ಕಣ್ಣ, ಆತನ ಪುತ್ರ ಮಂಜುನಾಥ್, ಪಕ್ಕದ ಮನೆ ವ್ಯಕ್ತಿ ವಿರುದ್ಧ ದೂರು ನೀಡಲಾಗಿದೆ. ದೂರು ಸ್ವೀಕರಿಸಿ ಎಫ್‌ಐಆರ್‌ ಮಾಡಿರುವ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. IPC ಸೆಕ್ಷನ್ 504, 506, 509, 34ರಡಿ ಪ್ರಕರಣ ದಾಖಲು ಮಾಡಲಾಗಿದೆ.

ಮೆಟ್ರೋ ಸಿಬ್ಬಂದಿಯಿಂದ ಅಸಭ್ಯ ವರ್ತನೆ

ಬೆಂಗಳೂರು: ನಮ್ಮ ಮೆಟ್ರೋ (Namma Metro) ಸಿಬ್ಬಂದಿಯೊಬ್ಬ ಮಹಿಳೆಯ ಮುಂದೆ ಅಸಭ್ಯವಾದ ವರ್ತನೆ (Indecent behavior) ತೋರಿಸಿದ್ದಾನೆ. ಇದರಿಂದ ಆತಂಕಿತರಾದ ಮಹಿಳೆ, ʼನನಗೆ ಇಲ್ಲಿ ಅಸುರಕ್ಷಿತʼ ಎನಿಸುತ್ತಿದೆ ಎಂದು ಎಕ್ಸ್‌ನಲ್ಲಿ ಸಂದೇಶ ಹಾಕಿದ್ದಾರಲ್ಲದೆ, ಕ್ರಮ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳು ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಜಾಲಹಳ್ಳಿ ಮೆಟ್ರೋ ಫ್ಲಾಟ್‌ಫಾರಂನಲ್ಲಿ ಘಟನೆ ನಡೆದಿದ್ದು, ಮೆಟ್ರೋ ಸಿಬ್ಬಂದಿಯಿಂದ ಈ ಕೃತ್ಯ ನಡೆದಿದೆ ಎಂದು ದೂರಲಾಗಿದೆ. ಎದುರಿನ ಫ್ಲಾಟ್‌ಫಾರಂನಲ್ಲಿದ್ದ ಮಹಿಳೆಯ ಮುಂದೆ ಖಾಸಗಿ ಅಂಗವನ್ನು ಸ್ಪರ್ಶ ಮಾಡಿಕೊಂಡು ದುರ್ವರ್ತನೆ ತೋರಿದ್ದಾನೆ. ಇದನ್ನು ಮಹಿಳೆ ಆಕ್ಷೇಪಿಸಿದರೂ ಆತ ನಿಲ್ಲಿಸಿಲ್ಲ. ಬಳಿಕ ಆಕೆ ಇದನ್ನು ವಿಡಿಯೋ ಮಾಡಿಕೊಳ್ಳಲು ಆರಂಭಿಸಿದಾಗ ಆತ ಅಲ್ಲಿಂದ ಹೋಗಿದ್ದಾನೆ ಎಂದು ಗೊತ್ತಾಗಿದೆ.

ಈ ವಿಚಾರವನ್ನು ಮಹಿಳೆ ಮೆಟ್ರೋ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರಿಂದ ಯಾವುದೇ ಕ್ರಮ ಬರದಿರುವ ಹಿನ್ನೆಲೆಯಲ್ಲಿ, ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ವರನಟನ ಪುತ್ಥಳಿ ಕೆಡವಿದ ಬಿಬಿಎಂಪಿ

ಬೆಂಗಳೂರು: ವರನಟ ಡಾ. ರಾಜ್‌ ಕುಮಾರ್‌ (Dr Raj Kumar) ಅವರ ಪುತ್ಥಳಿಯೊಂದನ್ನು (Raj kumar Bust) ಬಿಬಿಎಂಪಿ (BBMP) ಸಿಬ್ಬಂದಿಗಳು ಕೆಡವಿಹಾಕಿದ್ದು, ಇದು ಸ್ಥಳೀಯರಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಮೊನ್ನೆ ನಟ ಪುನೀತ್ ರಾಜ್‌ಕುಮಾರ್ (Puneet Raj Kumar) ಅವರ ಹುಟ್ಟು ಹಬ್ಬದ (Puneet Raj Kumar Birthday) ಹಿನ್ನೆಲೆಯಲ್ಲಿ ವರನಟನ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ರಾಜ್‌ ಕುಮಾರ್ ಪ್ರತಿಮೆಯನ್ನು ಚಿಕ್ಕಪೇಟೆಯಲ್ಲಿ ಅಭಿಮಾನಿಗಳು ಸ್ಥಾಪಿಸಿದ್ದರು. ಪುತ್ಥಳಿ ಸ್ಥಾಪಿಸಿದ ಒಂದೇ ದಿನದಲ್ಲಿ ಅದನ್ನು ಬಿಬಿಎಂಪಿ ಜೆಸಿಬಿ ತರಿಸಿ ತೆರವು ಮಾಡಿದೆ. ಪುತ್ಥಳಿ ನಿಲ್ಲಿಸಲು ಮಾಡಿಸಲಾಗಿದ್ದ ಸಿಮೆಂಟಿನ ಕಟ್ಟೆಯನ್ನು ಒಡೆದುಹಾಕಲಾಗಿದೆ.

ಪ್ರತಿಮೆ ತೆರವು ವಿರೋಧಿಸಿ ಕನ್ನಡಪರ ಹೋರಾಟಗಾರರಿಂದ ಇಂದು ಚಿಕ್ಕಪೇಟೆಯಲ್ಲಿ ಪ್ರತಿಭಟನೆ ನಡೆಯಲಿದೆ. “ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪುತ್ಥಳಿ ಸ್ಥಾಪಿಸಲಾಗಿತ್ತು. ಇದನ್ನು ತೆರವು ಮಾಡಿರುವುದು ಅನ್ಯಾಯ. ಇದು ಕನ್ನಡಿಗರನ್ನು ಕೆರಳಿಸುವ ಘಟನೆ. ಇದನ್ನು ವಿರೋಧಿಸಿ ಇಂದು ಪ್ರತಿಭಟನೆ ಮಾಡಲಿದ್ದೇವೆ” ಎಂದು ನಮ್ಮ ಕರ್ನಾಟಕ ಸೇನೆಯ ಯುವಘಟಕದ ಅಧ್ಯಕ್ಷರು ತಿಳಿಸಿದ್ದಾರೆ.

“ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಸ್ಥಾಪನೆಗೆ ಅವರು ಅನುಮತಿ ಪಡೆದಿರಲಿಲ್ಲ. ಅನುಮತಿ ಇಲ್ಲದೆ ಇಂಥ ಪುತ್ಥಳಿ, ಪ್ರತಿಮೆ ಸ್ಥಾಪನೆ ಅನುಮತಿಸಲಾಗುವುದಿಲ್ಲ” ಎಂದು ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ರಾಜ್ಯದಲ್ಲಿ ಹೆಚ್ಚಿದ ಹಿಂದೂ ವಿರೋಧಿ ನಡೆ: ಪ್ರಲ್ಹಾದ್‌ ಜೋಶಿ ಆಕ್ರೋಶ

Exit mobile version