Crime News: ಬೆಡ್‌ರೂಂ ಕಿಟಕಿ ಹಾಕದೆ ರತಿಕೇಳಿ, ಪಕ್ಕದ ಮನೆ ಮಹಿಳೆಗೆ ಕಿರಿಕ್!‌ ಬೆಂಗಳೂರಿನಲ್ಲಿ ವಿಚಿತ್ರ ದೂರು - Vistara News

ಕ್ರೈಂ

Crime News: ಬೆಡ್‌ರೂಂ ಕಿಟಕಿ ಹಾಕದೆ ರತಿಕೇಳಿ, ಪಕ್ಕದ ಮನೆ ಮಹಿಳೆಗೆ ಕಿರಿಕ್!‌ ಬೆಂಗಳೂರಿನಲ್ಲಿ ವಿಚಿತ್ರ ದೂರು

Crime News: ಕಿಟಕಿ ಬಾಗಿಲು ತೆರೆದಿಟ್ಟು ಲೈಂಗಿಕ ಕ್ರಿಯೆ ನಡೆಸುವ ದಂಪತಿಯ ವರ್ತನೆ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದೆ.

VISTARANEWS.COM


on

unusual sex crime news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜಧಾನಿ ನಗರದಲ್ಲಿ ವಿಚಿತ್ರ ದೂರೊಂದು (Bangalore Crime News) ಪೊಲೀಸರಲ್ಲಿ ದಾಖಲಾಗಿದೆ. ದೂರಿಗೆ ಕಾರಣವಾಗಿರುವುದು ಪಕ್ಕದ ಮನೆ ದಂಪತಿಯ ಖುಲ್ಲಂಖುಲ್ಲಾ ಸರಸ ಸಲ್ಲಾಪ ವಿಚಾರ.

ಗಿರಿನಗರ ಪೊಲೀಸ್ ಠಾಣೆಗೆ ಈ ವಿಚಿತ್ರ ಕೇಸ್ ಬಂದಿದೆ. 44 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಗಿರಿನಗರ ವ್ಯಾಪ್ತಿಯ ಅವಲಹಳ್ಳಿ ಏರಿಯಾದಲ್ಲಿ ಮಹಿಳೆ ವಾಸವಿರುವ ಬಾಡಿಗೆಮನೆಯ ಪಕ್ಕದ ಮನೆಯಲ್ಲಿ ಈ ವಿಚಿತ್ರ ದಂಪತಿ ವಾಸವಿದ್ದಾರೆ. ಮಹಿಳೆ ಇರುವ ಮನೆ ಬಾಗಿಲಿಗೆ ಎದುರಾಗಿಯೇ ಪಕ್ಕದ ಮನೆ ಬೆಡ್ ರೂಂ ಇದೆ.

ದೂರು ಏನೆಂದರೆ, ಪಕ್ಕದ ಮನೆ ದಂಪತಿ ಲೈಂಗಿಕ ಕ್ರಿಯೆ ಮಾಡುವಾಗ ಕಿಟಕಿ ಬಾಗಿಲು ತೆರೆದಿಟ್ಟುಕೊಂಡೇ ನಡೆಸುತ್ತಾರೆ; ಜೊತೆಗೆ ವಿಕೃತ ವರ್ತನೆ ಮಾಡುತ್ತಾರಂತೆ. ವಿಕೃತ ಸದ್ದುಗಳು ಹಾಗೂ ಹಾವಭಾವಗಳನ್ನು ಪ್ರದರ್ಶಿಸುವ ಇವರ ವರ್ತನೆಯಿಂದ ಮಹಿಳೆ ಕುಟುಂಬಕ್ಕೆ ಕಿರಿಕಿರಿ ಉಂಟಾಗಿದೆ. ʼಕಿಟಕಿ ಬಾಗಿಲು ಹಾಕಿಕೊಳ್ಳಿʼ ಎಂದು ಆಗ್ರಹಿಸಿದರೆ, ʼನಮ್ಮ ಮನೆ, ನಮ್ಮ ಇಷ್ಟʼ ಎಂಬ ಉತ್ತರ ದಂಪತಿಯಿಂದ ಬಂದಿದೆ. ಆಕ್ಷೇಪಿಸಿದಾಗ, ಪಕ್ಕದ ಮನೆ ವ್ಯಕ್ತಿ ಮಹಿಳೆಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾನೆ.

ಆರೋಪಿಗೆ ಮನೆ ಮಾಲೀಕ ಮತ್ತು ಆತನ ಮಗನೂ ಸಾಥ್ ಕೊಟ್ಟಿದ್ದಾರಂತೆ. “ನಿಮಗೆ ಇಷ್ಟವಿಲ್ಲದಿದ್ರೇ ನೀವೇ ಮನೆ ಬಿಟ್ಟುಹೋಗಿ” ಎಂದು ದಬಾಯಿಸಿದ್ದಾರೆ. ಮನೆ ಮಾಲಿಕನೂ ರೌಡಿ ಹುಡುಗರನ್ನು ಕರೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಮನೆ ಮಾಲೀಕ ಚಿಕ್ಕಣ್ಣ, ಆತನ ಪುತ್ರ ಮಂಜುನಾಥ್, ಪಕ್ಕದ ಮನೆ ವ್ಯಕ್ತಿ ವಿರುದ್ಧ ದೂರು ನೀಡಲಾಗಿದೆ. ದೂರು ಸ್ವೀಕರಿಸಿ ಎಫ್‌ಐಆರ್‌ ಮಾಡಿರುವ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. IPC ಸೆಕ್ಷನ್ 504, 506, 509, 34ರಡಿ ಪ್ರಕರಣ ದಾಖಲು ಮಾಡಲಾಗಿದೆ.

ಮೆಟ್ರೋ ಸಿಬ್ಬಂದಿಯಿಂದ ಅಸಭ್ಯ ವರ್ತನೆ

ಬೆಂಗಳೂರು: ನಮ್ಮ ಮೆಟ್ರೋ (Namma Metro) ಸಿಬ್ಬಂದಿಯೊಬ್ಬ ಮಹಿಳೆಯ ಮುಂದೆ ಅಸಭ್ಯವಾದ ವರ್ತನೆ (Indecent behavior) ತೋರಿಸಿದ್ದಾನೆ. ಇದರಿಂದ ಆತಂಕಿತರಾದ ಮಹಿಳೆ, ʼನನಗೆ ಇಲ್ಲಿ ಅಸುರಕ್ಷಿತʼ ಎನಿಸುತ್ತಿದೆ ಎಂದು ಎಕ್ಸ್‌ನಲ್ಲಿ ಸಂದೇಶ ಹಾಕಿದ್ದಾರಲ್ಲದೆ, ಕ್ರಮ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳು ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಜಾಲಹಳ್ಳಿ ಮೆಟ್ರೋ ಫ್ಲಾಟ್‌ಫಾರಂನಲ್ಲಿ ಘಟನೆ ನಡೆದಿದ್ದು, ಮೆಟ್ರೋ ಸಿಬ್ಬಂದಿಯಿಂದ ಈ ಕೃತ್ಯ ನಡೆದಿದೆ ಎಂದು ದೂರಲಾಗಿದೆ. ಎದುರಿನ ಫ್ಲಾಟ್‌ಫಾರಂನಲ್ಲಿದ್ದ ಮಹಿಳೆಯ ಮುಂದೆ ಖಾಸಗಿ ಅಂಗವನ್ನು ಸ್ಪರ್ಶ ಮಾಡಿಕೊಂಡು ದುರ್ವರ್ತನೆ ತೋರಿದ್ದಾನೆ. ಇದನ್ನು ಮಹಿಳೆ ಆಕ್ಷೇಪಿಸಿದರೂ ಆತ ನಿಲ್ಲಿಸಿಲ್ಲ. ಬಳಿಕ ಆಕೆ ಇದನ್ನು ವಿಡಿಯೋ ಮಾಡಿಕೊಳ್ಳಲು ಆರಂಭಿಸಿದಾಗ ಆತ ಅಲ್ಲಿಂದ ಹೋಗಿದ್ದಾನೆ ಎಂದು ಗೊತ್ತಾಗಿದೆ.

ಈ ವಿಚಾರವನ್ನು ಮಹಿಳೆ ಮೆಟ್ರೋ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರಿಂದ ಯಾವುದೇ ಕ್ರಮ ಬರದಿರುವ ಹಿನ್ನೆಲೆಯಲ್ಲಿ, ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ವರನಟನ ಪುತ್ಥಳಿ ಕೆಡವಿದ ಬಿಬಿಎಂಪಿ

ಬೆಂಗಳೂರು: ವರನಟ ಡಾ. ರಾಜ್‌ ಕುಮಾರ್‌ (Dr Raj Kumar) ಅವರ ಪುತ್ಥಳಿಯೊಂದನ್ನು (Raj kumar Bust) ಬಿಬಿಎಂಪಿ (BBMP) ಸಿಬ್ಬಂದಿಗಳು ಕೆಡವಿಹಾಕಿದ್ದು, ಇದು ಸ್ಥಳೀಯರಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಮೊನ್ನೆ ನಟ ಪುನೀತ್ ರಾಜ್‌ಕುಮಾರ್ (Puneet Raj Kumar) ಅವರ ಹುಟ್ಟು ಹಬ್ಬದ (Puneet Raj Kumar Birthday) ಹಿನ್ನೆಲೆಯಲ್ಲಿ ವರನಟನ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ರಾಜ್‌ ಕುಮಾರ್ ಪ್ರತಿಮೆಯನ್ನು ಚಿಕ್ಕಪೇಟೆಯಲ್ಲಿ ಅಭಿಮಾನಿಗಳು ಸ್ಥಾಪಿಸಿದ್ದರು. ಪುತ್ಥಳಿ ಸ್ಥಾಪಿಸಿದ ಒಂದೇ ದಿನದಲ್ಲಿ ಅದನ್ನು ಬಿಬಿಎಂಪಿ ಜೆಸಿಬಿ ತರಿಸಿ ತೆರವು ಮಾಡಿದೆ. ಪುತ್ಥಳಿ ನಿಲ್ಲಿಸಲು ಮಾಡಿಸಲಾಗಿದ್ದ ಸಿಮೆಂಟಿನ ಕಟ್ಟೆಯನ್ನು ಒಡೆದುಹಾಕಲಾಗಿದೆ.

ಪ್ರತಿಮೆ ತೆರವು ವಿರೋಧಿಸಿ ಕನ್ನಡಪರ ಹೋರಾಟಗಾರರಿಂದ ಇಂದು ಚಿಕ್ಕಪೇಟೆಯಲ್ಲಿ ಪ್ರತಿಭಟನೆ ನಡೆಯಲಿದೆ. “ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪುತ್ಥಳಿ ಸ್ಥಾಪಿಸಲಾಗಿತ್ತು. ಇದನ್ನು ತೆರವು ಮಾಡಿರುವುದು ಅನ್ಯಾಯ. ಇದು ಕನ್ನಡಿಗರನ್ನು ಕೆರಳಿಸುವ ಘಟನೆ. ಇದನ್ನು ವಿರೋಧಿಸಿ ಇಂದು ಪ್ರತಿಭಟನೆ ಮಾಡಲಿದ್ದೇವೆ” ಎಂದು ನಮ್ಮ ಕರ್ನಾಟಕ ಸೇನೆಯ ಯುವಘಟಕದ ಅಧ್ಯಕ್ಷರು ತಿಳಿಸಿದ್ದಾರೆ.

“ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಸ್ಥಾಪನೆಗೆ ಅವರು ಅನುಮತಿ ಪಡೆದಿರಲಿಲ್ಲ. ಅನುಮತಿ ಇಲ್ಲದೆ ಇಂಥ ಪುತ್ಥಳಿ, ಪ್ರತಿಮೆ ಸ್ಥಾಪನೆ ಅನುಮತಿಸಲಾಗುವುದಿಲ್ಲ” ಎಂದು ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ರಾಜ್ಯದಲ್ಲಿ ಹೆಚ್ಚಿದ ಹಿಂದೂ ವಿರೋಧಿ ನಡೆ: ಪ್ರಲ್ಹಾದ್‌ ಜೋಶಿ ಆಕ್ರೋಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Car Accident : ಯಮವೇಗದಲ್ಲಿ ಬಂದ ಇನೋವಾ ಕಾರು ಪಲ್ಟಿ, ಯುವತಿ ಸಾವು

Car Accident: ಕಾರು ಹುಣ್ಸೆಮಕ್ಕಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗೆ ಡಿಕ್ಕಿ ಹೊಡೆದಿದೆ. ಬಳಿಕ ಬಳಿಕ ರಸ್ತೆ ಬದಿಯ ಮರಕ್ಕೂ ಢಿಕ್ಕಿ ಹೊಡೆದು ಇನ್ನೋವಾ ಮಾತು ಪಲ್ಟಿಯಾಗಿದೆ. ಕಾರು ಪಲ್ಟಿಯಾದ ತೀವ್ರತೆಗೆ ಕಾರಿನಲ್ಲಿದ್ದ 5 ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

VISTARANEWS.COM


on

Car Accident
Koo

ಉಡುಪಿ: ಅತಿ ವೇಗದಲ್ಲಿ ಸಾಗುತ್ತಿದ್ದ ಇನೋವಾ ಕಾರು ಪಲ್ಟಿಯಾಗಿ ಯುವತಿಯೊಬ್ಬಳು ಮೃತಪಟ್ಟ (Car Accident) ಘಟನೆ ನಡೆದಿದೆ. ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚೆನ್ನಪಟ್ಟಣ ಮೂಲದ ಯುವತಿ ಕೀರ್ತಿ ಎಂಬುವರು ಅಪಘಾತದಲ್ಲಿ ಮೃತಪಟ್ಟವರು.

ಚೆನ್ನಪಟ್ಟಣ ಮೂಲದ ಅವರು ಧರ್ಮಸ್ಥಳಕ್ಕೆ ಬಂದಿದ್ದರು. ಅಲ್ಲಿಂದ ಅವರು ಮುರುಡೇಶ್ವರಕ್ಕೆ ಹೊರಟಿದ್ದರು. ಅತಿ ವೇಗದಲ್ಲಿ ಸಾಗುತ್ತಿದ್ದ ಕಾರು ಹುಣ್ಸೆಮಕ್ಕಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗೆ ಡಿಕ್ಕಿ ಹೊಡೆದಿದೆ. ಬಳಿಕ ಬಳಿಕ ರಸ್ತೆ ಬದಿಯ ಮರಕ್ಕೂ ಢಿಕ್ಕಿ ಹೊಡೆದು ಇನ್ನೋವಾ ಮಾತು ಪಲ್ಟಿಯಾಗಿದೆ. ಕಾರು ಪಲ್ಟಿಯಾದ ತೀವ್ರತೆಗೆ ಕಾರಿನಲ್ಲಿದ್ದ 5 ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Narendra Modi : ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆ; ಸಿಎಂ ವಿಮಾನಕ್ಕೆ ಬೆಳಗಾವಿಯಲ್ಲಿ ಅನುಮತಿ ನಿರಾಕರಣೆ

ಬೆಂಗಳೂರು ನಗರ ವಲಯದಲ್ಲಿ ಅರಣ್ಯಕ್ಕೆ ಬೆಂಕಿ, ಭಾರೀ ಹಾನಿ

ಬೆಂಗಳೂರು: ಮಹಾನಗರದ ಹೊರವಲಯದ ಸುಮನ್ನಹಳ್ಳಿ ಬ್ರಿಡ್ಜ್ ಬಳಿ ಶ್ರೀಗಂಧ ಕಾವಲ್ ನಲ್ಲಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಮೂರು ಎಕರೆ ಅರಣ್ಯ ಪ್ರದೇಶದಲ್ಲಿ ಹೊತ್ತಿ ಮರಗಳು ಹೊತ್ತಿ ಉರಿದಿವೆ. ಒಣ ಕಸಕ್ಕೆ ಬೆಂಕಿ ಹಾಕಿರುವ ಹಿನ್ನಲೆ ಮರಗಳಿಗೆ ಬೆಂಕಿ ತಗುಲಿದೆ ಎಂದು ಶಂಕಿಸಲಾಗಿದೆ. ಬೆಂಗಳೂರು ನಗರದಲ್ಲಿ ಬೇಸಿಗೆ ಪ್ರಭಾವ ಹೆಚ್ಚಾಗಿದೆ. ಹೀಗಾಗಿ ಕಸಕ್ಕೆ ಹಾಕಿದ ಬೆಂಕಿ ಅರಣಕ್ಕೆ ತಾಗಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ರಾತ್ರಿ ವೇಳೆ ಅರಣ್ಯ ಪ್ರದೇಶಕ್ಕೆ ಬೆಂಕಿ ತಾಗಿದೆ. ಎರಡು ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದೆ. ಅರಣ್ಯವು ಬಿಬಿಎಂಪಿ ವ್ಯಾಪ್ತಿಗೆ ಸೇರಿದ್ದು, ಅದರಲ್ಲಿ 1.5 ಎಕರೆ ಜಾಗಕ್ಕೆ ಸಂಪೂರ್ಣ ಬೆಂಕಿ ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ತೆರವುಗೊಳಿಸಿದ ಮರಗಳನ್ನು ಇಲ್ಲಿ ತಂದು ಡಂಪ್ ಮಾಡಲಾಗುತ್ತಿತ್ತು. ಅದೇ ರೀತಿ ಹೊರಗಡೆ ಮಾರಟ ಮಾಡುವ ಕಟ್ಟಿಗೆಗಳನ್ನು ಇಲ್ಲಿ ತಂದು ಹಾಕಿ ಹರಾಜು ಮಾಡಲಾಗ್ತಿತ್ತು. ಹರಾಜು ಆಗದೇ ಉಳಿದಿದ್ದ ಕಟ್ಟಿಗೆಗಳೆಲ್ಲ ಅರಣ್ಯ ವ್ಯಾಪ್ತಿಯಲ್ಲಿ ರಾಶಿ ಬಿದ್ದಿದ್ದವು. ತೀವ್ರ ಬಿಸಿಲಿನ ಕಾರಣ ಸಂಪೂರ್ಣ ಒಣಗಿದ್ದ ಮರದ ತುಂಡುಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಸಾಧ್ಯತೆಯೂ ಇದೆ ಎಂಬುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸತತ 9 ಗಂಟೆಗಳಿಂದ ನಿರಂತರ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Continue Reading

ಬೆಂಗಳೂರು

Swiggy fined: ಐಸ್‌ ಕ್ರೀಂ ಡೆಲಿವರಿ ಮಾಡಲು ವಿಫಲ; ಸ್ವಿಗ್ಗಿಗೆ 5000 ರೂ. ದಂಡ ವಿಧಿಸಿದ ಕೋರ್ಟ್!

Swiggy fined: ಸೇವೆಯಲ್ಲಿ ನ್ಯೂನ್ಯತೆ ಮತ್ತು ಮೋಸದ ವ್ಯಾಪಾರ ಮಾಡಿದ ಕಾರಣ ಗ್ರಾಹಕನಿಗೆ 5000 ರೂ ಪರಿಹಾರ ನೀಡಲು ಸ್ವಿಗ್ಗಿ ಸಂಸ್ಥೆಗೆ ಗ್ರಾಹಕ ನ್ಯಾಯಾಲಯ ಸೂಚಿಸಿದೆ.

VISTARANEWS.COM


on

Swiggy fined
Koo

ಬೆಂಗಳೂರು: ಐಸ್‌ ಕ್ರೀಂ ಡೆಲಿವರಿ ಮಾಡಲು ವಿಫಲವಾದ ಸ್ವಿಗ್ಗಿ ಸಂಸ್ಥೆಗೆ (Swiggy fined), ಗ್ರಾಹಕ ನ್ಯಾಯಾಲಯವು ವ್ಯಾಜ್ಯ ವೆಚ್ಚ ಸೇರಿ 5000 ರೂ. ದಂಡ ವಿಧಿಸಿದೆ. 2023ರಲ್ಲಿ ಗ್ರಾಹಕರೊಬ್ಬರು ಸ್ವಿಗ್ಗಿ ಆ್ಯಪ್‌ ಮೂಲಕ ಐಸ್‌ ಕ್ರೀಂ ಬುಕ್‌ ಮಾಡಿದ್ದರು. ಅದರೆ, ಐಸ್‌ ಕ್ರೀಂ ಡೆಲಿವರಿ ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಗ್ರಾಹಕರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆರ್ಡರ್ ಮಾಡಿದ ಉತ್ಪನ್ನವನ್ನು ದೂರುದಾರರಿಗೆ ತಲುಪಿಸದಿದ್ದರೂ ಹಣ ಮರುಪಾವತಿ ಮಾಡಿರಲಿಲ್ಲ. ಸ್ವಿಗ್ಗಿ ಕಡೆಯಿಂದ ತಪ್ಪು ನಡೆದಿದೆ ಎಂದು ದೂರುದಾರರು ಸಾಬೀತುಪಡಿಸಿದ್ದಾರೆ. ಇದು ಮೋಸದ ವ್ಯಾಪಾರವಾಗಿದ್ದು, ಗ್ರಾಹಕನಿಗೆ ವ್ಯಾಜ್ಯ ಶುಲ್ಕ 2000 ರೂ. ಹಾಗೂ ಪರಿಹಾರ 3000 ರೂ. ನೀಡಬೇಕು ಎಂದು ಸ್ವಿಗ್ಗಿ ಸಂಸ್ಥೆಗೆ ಕೋರ್ಟ್‌ ಸೂಚನೆ ನೀಡಿದೆ.

2023ರ ಜನವರಿಯಲ್ಲಿ ನಗರದಲ್ಲಿ ಗ್ರಾಹಕರೊಬ್ಬರು, ಸ್ವಿಗ್ಗಿ ಆ್ಯಪ್‌ ಮೂಲಕ ಚಾಕೋಲೆಟ್‌ ಐಸ್‌ ಕ್ರೀಂ ಅನ್ನು ಆರ್ಡರ್‌ ಮಾಡಿದ್ದರು. ಆದರೆ, ಐಸ್‌ ಕ್ರೀಂ ಡೆಲಿವರಿ ಆಗದಿದ್ದರೂ, ತಲುಪಿದೆ ಎಂದು ಸಂದೇಶ ಬಂದಿತ್ತು. ಇದರಿಂದ ಗ್ರಾಹಕ, ನ್ಯಾಯಾಲಯದ ಮೊರೆ ಹೋಗಿದ್ದರು.

ಸ್ವಿಗ್ಗಿ ಸಂಸ್ಥೆಯು, ತಾವು ಗ್ರಾಹಕರು ಮತ್ತು ಥರ್ಡ್-ಪಾರ್ಟಿ ರೆಸ್ಟೋರೆಂಟ್‌ ಅಥವಾ ವ್ಯಾಪಾರಿಗಳ ನಡುವಿನ ಮಧ್ಯವರ್ತಿಯಾಗಿದ್ದೇವೆ. ಡೆಲಿವರಿ ಬಾಯ್‌ ತಪ್ಪಿಗೆ ತಮ್ಮನ್ನು ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಮತ್ತು ಆ ಸಮಯದಲ್ಲಿ ಆರ್ಡರ್ ಅನ್ನು ತಲುಪಿಸಲಾಗಿದೆಯೇ ಎಂದು ಪರಿಶೀಲಿಸಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿತ್ತು.

ಇದನ್ನೂ ಓದಿ | MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಅಮೆರಿಕ

ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವಿಜಯಕುಮಾರ್ ಎಂ ಪಾವಲೆ, ವಿ ಅನುರಾಧಾ ಮತ್ತು ರೇಣುಕಾದೇವಿ ದೇಶಪಾಂಡೆ ಅವರನ್ನೊಳಗೊಂಡ ನ್ಯಾಯಪೀಠ, ಹಣ ಮರುಪಾವತಿಗಾಗಿ ಗ್ರಾಹಕ ನೀಡಿದ ಕಾನೂನು ನೋಟಿಸ್‌ಗೆ ಪ್ರತಿಕ್ರಿಯಿಸುವಲ್ಲಿ ಸ್ವಿಗ್ಗಿ ವಿಫಲವಾಗಿದೆ ಎಂದು ಕೋರ್ಟ್‌ ಗಮನಿಸಿದೆ. ಇನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಹೊಣೆಗಾರಿಕೆಯಿಂದ ಮಧ್ಯವರ್ತಿಗಳನ್ನು ರಕ್ಷಿಸಲಾಗಿದೆ ಎಂಬ ಸ್ವಿಗ್ಗಿಯ ವಾದವನ್ನು ತಿರಸ್ಕರಿಸಿರುವ ಕೋರ್ಟ್, ಈ ವಿನಾಯಿತಿ ಕೇವಲ ಮಾಹಿತಿಯ ಪ್ರಸಾರಕ್ಕೆ ಸೀಮಿತವಾಗಿದ್ದು, ಸರಕು ಮತ್ತು ಸೇವೆಗಳ ಮಾರಾಟಕ್ಕೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

ಸೇವೆಯಲ್ಲಿ ನ್ಯೂನ್ಯತೆ ಮತ್ತು ಮೋಸದ ವ್ಯಾಪಾರ ಮಾಡಿದ ಕಾರಣ ಐಸ್‌ ಕ್ರೀಂಗೆ ನೀಡಿದ್ದ 187 ರೂ. ಮಾತ್ರವಲ್ಲದೇ ವ್ಯಾಜ್ಯ ವೆಚ್ಚ ಹಾಗೂ ಪರಿಹಾರ ಸೇರಿ 5000 ರೂ.ಗಳನ್ನು ಗ್ರಾಹಕನಿಗೆ ನೀಡಲು ಸ್ವಿಗ್ಗಿ ಸಂಸ್ಥೆಗೆ ಸೂಚಿಸಲಾಗಿದೆ.

Continue Reading

ಹಾಸನ

Hassan Pen Drive Case: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ​; ಎಸ್​​ಐಟಿ ತನಿಖೆಗೆ ಸಿದ್ದರಾಮಯ್ಯ ಆದೇಶ

Hassan Pen Drive Case: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ ವಿಶೇಷ ತನಿಖಾ ತಂಡ ರಚಿಸುವ ತೀರ್ಮಾನ ಕೈಗೊಂಡಿದೆ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

VISTARANEWS.COM


on

Hasan pen drive case
Koo

ಬೆಂಗಳೂರು: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಪ್ರಕರಣದ ತನಿಖೆಗೆ ಸರ್ಕಾರ ಎಸ್​ಐಟಿ ತಂಡ ರಚಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಲವಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿರುವ ಪೆನ್​ಡ್ರೈವ್ (Hassan pen drive cas) ಒಂದು ಬಹಿರಂಗಗೊಂಡಿದೆ. ಅದರ ಬಗ್ಗೆ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ. ಈ ಕುರಿತು ಸಿಎಂ ಶನಿವಾರ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರದಿಂದ ತೀರ್ಮಾನ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ ವಿಶೇಷ ತನಿಖಾ ತಂಡ ರಚಿಸುವ ತೀರ್ಮಾನ ಕೈಗೊಂಡಿದೆ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಮಧ್ಯೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಚಲನ ಮೂಡಿಸಿದ್ದ ಪೆನ್​ ಡ್ರೈವ್ ಪ್ರಕರಣ

ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಸೇರಿದೆ ಎನ್ನಲಾದ ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಕೆಲವು ದಿನಗಳ ಹಿಂದೆ ಬಹಿರಂಗೊಂಡಿತ್ತು. ಏಕಾಏಕಿ ಈ ಪೆನ್ ಡ್ರೈವ್ ಬಗ್ಗೆ ಚರ್ಚೆ ಆರಂಭವಾಗಿದ್ದು ಈ ಕುರಿತು ಸಾಕಷ್ಟು ಊಹಾಪೋಹಗಳು ಎದ್ದಿವೆ. ವಿಡಿಯೋಗಳನ್ನು ಅತ್ಯಾಧುನಿಕ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ವಿಡಿಯೊ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ಇದನ್ನೂ ಓದಿ: Zameer Ahmed Khan‌: ಸಚಿವ ಜಮೀರ್ ಅಹ್ಮದ್ ರೋಷಾವೇಶದ ಭಾಷಣಕ್ಕೆ ಗಾಜು ಪೀಸ್‌ ಪೀಸ್; ಇಲ್ಲಿದೆ ವಿಡಿಯೊ

ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಕೊನೇ ಹಂತದಲ್ಲಿ ರಾಸಲೀಲೆಯ ವಿಡಿಯೋಗಳು ಬಹಿರಂಗಗೊಂಡಿವೆ. ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದರು. ಇದೀಗ ಸಿಎಂ ತನಿಖೆಗೆ ಆದೇಶ ನೀಡಿದ್ದಾರೆ.

ಮಹಿಳಾ ಆಯೋಗದ ಪತ್ರ ಇಲ್ಲಿದೆ

ಈ ಪೆನ್‌ಡ್ರೈನಲ್ಲಿ ಸಾವಿರಾರು ವಿಡಿಯೋಗಳಿವೆ ಎನ್ನಲಾಗುತ್ತಿದೆ. ಪ್ರಜ್ವಲ್​ ಅವರು ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ಅಲ್ಲದೆ, ಲೈಂಗಿಕ ಕ್ರಿಯೆಯ ವಿಡಿಯೊಗಳನ್ನು ಮಾಡಿಟ್ಟುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೋ ತುಣುಕುಗಳಲ್ಲಿ ಕೆಲವು ಸಂಘಟನೆಗಳಿಗೆ ಸೇರಿದ ಮಹಿಳೆಯರು, ಅಭ್ಯರ್ಥಿಯ ಪಕ್ಷದ ಮುಖಂಡರ ಪತ್ನಿಯರು ಇದ್ದಾರೆ. ಮನೆ ಕೆಲಸದ ಮಹಿಳೆಯರೂ ಇದ್ದಾರೆ ಎಂಬ ಚರ್ಚೆ ಬಿರುಸಿನಿಂದ ನಡೆದಿದೆ.

ಈ ಹಿಂದೆ ಹಾಸನದ ವಕೀಲ ದೇವರಾಜೇಗೌಡ ಎಂಬುವವರು ಅಭ್ಯರ್ಥಿಯ ಹಲವು ಅಶ್ಲೀಲ ವಿಡಿಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೆ ನೀಡಿದ್ದರು. ಆ ವಿಡಿಯೋಗಳನ್ನು ತಾವು ಬಹಿರಂಗಗೊಳಿಸಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Continue Reading

ಕ್ರೈಂ

Medical Negligence: ಆಸ್ಪತ್ರೆ ನಿರ್ಲಕ್ಷ್ಯದಿಂದ ಬಾಲಕ ಸಾವು: 10 ಲಕ್ಷ ರೂ. ಪರಿಹಾರ ಘೋಷಿಸಿದ ಕೋರ್ಟ್​​

Medical Negligence: ಹಾವು ಕಡಿತದಿಂದ ಅಸ್ವಸ್ಥಗೊಂಡಿದ್ದ ಬಾಲಕನಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಬಾಲಕ ಮೃತಪಟ್ಟಿದ್ದು, ಆಸ್ಪತ್ರೆ ವಿರುದ್ಧ ಹೋರಾಡಿದ ತಂದೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ದೆಹಲಿಯ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ.

VISTARANEWS.COM


on

By

Medical Negligence
Koo

ನವದೆಹಲಿ: ಹಾವು ಕಡಿತದಿಂದ (snake bite) 12 ವರ್ಷದ ಬಾಲಕ (boy) ಮೃತಪಟ್ಟ 16 ವರ್ಷಗಳ ಬಳಿಕ ಬಾಲಕನ ತಂದೆಗೆ ದೆಹಲಿಯ (delhi) ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ (Medical Negligence) 10 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಮಹಾರಾಷ್ಟ್ರದ (maharstra) ಮಹಾತ್ಮ ಗಾಂಧಿ ಮಿಷನ್ ಆಸ್ಪತ್ರೆಗೆ (Mahatma Gandhi Mission Hospital) ಆದೇಶ ನೀಡಿದೆ.

ಹಾವು ಕಡಿತದಿಂದ ಅಸ್ವಸ್ಥನಾಗಿದ್ದ ಮಹಾರಾಷ್ಟ್ರದ ಪರಶುರಾಮ್ ಲ್ಯಾಂಡ್ಗೆ ಅವರ ಮಗ ದೇವಾನಂದ್ 2007ರ ಅಕ್ಟೋಬರ್ ನಲ್ಲಿ ಮಹಾತ್ಮ ಗಾಂಧಿ ಮಿಷನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು (NCDRC) ಆಸ್ಪತ್ರೆಯ ನಿರ್ಲಕ್ಷ್ಯವನ್ನು ಪರಿಗಣಿಸಿ ಲ್ಯಾಂಡ್ಗೆ ಅವರಿಗೆ ಪರಿಹಾರವನ್ನು ಏಪ್ರಿಲ್ 24 ರಂದು ಘೋಷಿಸಿದೆ.

ಇದನ್ನೂ ಓದಿ: Assault Case : ಕುಡಿದ ನಶೆಯಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ ಮಿತ್ರ ದ್ರೋಹಿಗಳು ಅರೆಸ್ಟ್‌

ಬಾಲಕನ ತಂದೆ ನೀಡಿರುವ ದೂರಿನ ಪ್ರಕಾರ ಆಸ್ಪತ್ರೆಯ ಡಾಕ್ಟರ್ ಶೀನು ಗುಪ್ತಾ ಅವರು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ದೇವಾನಂದ್ ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು ಎಂದು ಹೇಳಲಾಗಿದೆ.

ಮಗನ ಸ್ಥಿತಿ ಗಂಭೀರವಾದ ಕಾರಣ ಚಿಕಿತ್ಸೆ ಮುಂದುವರೆಸುವಂತೆ ಲ್ಯಾಂಡ್​ಗೆ ಅವರು ವೈದ್ಯರಲ್ಲಿ ಮನವಿ ಮಾಡಿದ ಬಳಿಕ ವೈದ್ಯರು 500 ರೂ. ಮೌಲ್ಯದ ಚುಚ್ಚುಮದ್ದನ್ನು ಸೂಚಿಸಿದ್ದರು. ಅವರು ಪತ್ನಿಯ ಚಿನ್ನಾಭರಣಗಳನ್ನು ಗಿರವಿ ಇಟ್ಟು ಚುಚ್ಚುಮದ್ದು ಸೇರಿದಂತೆ ವೈದ್ಯರು ಸೂಚಿಸಿರುವ ಹಲವಾರು ದುಬಾರಿ ಔಷಧಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆಸ್ಪತ್ರೆಗೆ ಹಿಂದಿರುಗಿ ಕೂಡಲೇ ಮಗನಿಗೆ ಚಿಕಿತ್ಸೆ ನೀಡುವಂತೆ ವಿನಂತಿಸಿದರು. ಆದರೂ ವೈದ್ಯರು ಹೆಚ್ಚಿನ ಹಣವನ್ನು ಠೇವಣಿ ಮಾಡುವವರೆಗೂ ಚಿಕಿತ್ಸೆ ಪ್ರಾರಂಭಿಸಲು ನಿರಾಕರಿಸಿದರು. ಇದರಿಂದ ದೇವಾನಂದ್ ರಾತ್ರಿ 8.30ರ ವೇಳೆಗೆ ನಿಧನನಾಗಿದ್ದಾನೆ.

ದೂರು ದಾಖಲು

ಈ ಕುರಿತು 2017ರಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಲ್ಯಾಂಡ್ಗೆ ದೂರು ದಾಖಲಿಸಿದ್ದರು. ಆದರೆ, ಮೂರು ವರ್ಷಗಳ ಅನಂತರ ಮಹಾರಾಷ್ಟ್ರ ರಾಜ್ಯ ಗ್ರಾಹಕ ನ್ಯಾಯಾಲಯವು ವೈದ್ಯ ಗುಪ್ತಾ ಮತ್ತು ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. ಇದರಿಂದ ಅಸಮಾಧಾನಗೊಂಡ ಆಸ್ಪತ್ರೆಯು ಎನ್‌ಸಿಡಿಆರ್‌ಸಿಗೆ ತೆರಳಿ ರಾಜ್ಯ ಗ್ರಾಹಕ ನ್ಯಾಯಾಲಯದ ಆದೇಶವು “ಕಾನೂನು ಅರ್ಹತೆಗಿಂತ ಹೆಚ್ಚಾಗಿ ಸಹಾನುಭೂತಿಯ ಆಧಾರದ ಮೇಲಿದೆ ಎಂದು ಆರೋಪಿಸಿ ದೂರು ನೀಡಿತ್ತು.

ಮಗನನ್ನು ಆಸ್ಪತ್ರೆಗೆ ಕರೆತರುವಲ್ಲಿ ದೂರುದಾರರು ಸರಿಸುಮಾರು ಅರ್ಧ ಗಂಟೆ ವಿಳಂಬ ಮಾಡಿರುವುದನ್ನು ರಾಜ್ಯ ಆಯೋಗವು ನಿರ್ಲಕ್ಷಿಸಿದೆ ಎಂದು ಆಸ್ಪತ್ರೆಯು ವಾದಿಸಿತು.

ಮಧ್ಯಾಹ್ನ 1.40 ರ ಸುಮಾರಿಗೆ ಬಾಲಕ ಆಸ್ಪತ್ರೆಯಲ್ಲಿದ್ದರೂ ಮಗನಿಗೆ ಚಿಕಿತ್ಸೆ ನೀಡಲಿಲ್ಲ ಎಂಬುದು ಲ್ಯಾಂಡ್ಗೆ ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ಆಸ್ಪತ್ರೆಯು ರೋಗಿಯ ಸ್ಥಿತಿ ಗಂಭೀರವಾಗಿತ್ತು ಎಂದು ಹೇಳಿದೆ.

ಇದಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಪರಿಶೀಲಿಸಿದ ಬಳಿಕ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಲವಾದ ಪುರಾವೆಗಳು ದೊರೆತಿದೆ. ವೈದ್ಯಕೀಯ ಪೇಪರ್‌ಗಳನ್ನು ಪರೀಕ್ಷಿಸಿದಾಗ ವೈದ್ಯರು “ಸಕಾಲಿಕ ಚಿಕಿತ್ಸೆ” ನೀಡಲು ವಿಫಲವಾಗಿರುವುದು ತಿಳಿದು ಬಂದಿದೆ. ಇಷ್ಟು ಮಾತ್ರವಲ್ಲದೆ ಸಂಬಂಧವಿಲ್ಲದ ವ್ಯಕ್ತಿಯನ್ನು ಬಾಲಕನ ಅಜ್ಜ ಎಂದು ಹೇಳಿ ಹೆಚ್ಚಿನ ಅಪಾಯದ ಒಪ್ಪಿಗೆ ನಮೂನೆಗೆ ಸಹಿ ಹಾಕಿಸಲಾಗಿದೆ.

ಅಲ್ಲದೇ ಈ ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲು ಆಸ್ಪತ್ರೆ ವಿಫಲವಾಗಿರುವುದು ಮತ್ತೊಂದು ಲೋಪವಾಗಿದೆ ಎಂದು ನ್ಯಾಯಾಲಯ ತಿಳಿಸಿದ್ದು, ಆಸ್ಪತ್ರೆಗೆ ದಂಡ ವಿಧಿಸಿದೆ.

Continue Reading
Advertisement
ದೇಶ1 min ago

Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಛಾಟಿತ ನಾಯಕ ಅರೆಸ್ಟ್‌

Car Accident
ಪ್ರಮುಖ ಸುದ್ದಿ3 mins ago

Car Accident : ಯಮವೇಗದಲ್ಲಿ ಬಂದ ಇನೋವಾ ಕಾರು ಪಲ್ಟಿ, ಯುವತಿ ಸಾವು

Manvita Kamath Marriage Details Future Husband Arun
ಸ್ಯಾಂಡಲ್ ವುಡ್18 mins ago

Manvita Kamath: ‘ಟಗರು ಪುಟ್ಟಿʼ ಮಾನ್ವಿತಾದ್ದು ಲವ್ ಮ್ಯಾರೇಜ್? ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ!

state JDS secretary R A Chabusab statement In Ripponpet
ಶಿವಮೊಗ್ಗ19 mins ago

Lok Sabha Election 2024: ಅತಿ ಹೆಚ್ಚು ಮತಗಳ ಅಂತರದಿಂದ ಬಿ.ವೈ.ರಾಘವೇಂದ್ರ ಗೆಲುವು: ಆರ್.ಎ. ಚಾಬುಸಾಬ್

Narendra Modi
ಪ್ರಮುಖ ಸುದ್ದಿ21 mins ago

Narendra Modi : ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆ; ಸಿಎಂ ವಿಮಾನಕ್ಕೆ ಬೆಳಗಾವಿಯಲ್ಲಿ ಅನುಮತಿ ನಿರಾಕರಣೆ

Lok Sabha Election 2024
ರಾಜಕೀಯ56 mins ago

Yogi Adityanath:”ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮುಸ್ಲಿಮರಿಗೆ ಬೀಫ್‌ ಸೇವನೆ ಹಕ್ಕು”- ಮತ್ತೆ ಗುಡುಗಿದ ಯೋಗಿ

Drinks for Summer
ಆರೋಗ್ಯ2 hours ago

Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Fire Accident
ಪ್ರಮುಖ ಸುದ್ದಿ2 hours ago

Fire Accident : ಬೆಂಗಳೂರು ನಗರ ವಲಯದಲ್ಲಿ ಅರಣ್ಯಕ್ಕೆ ಬೆಂಕಿ, ಭಾರೀ ಹಾನಿ

karnataka weather forecast
ಮಳೆ3 hours ago

Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

Narendra modi
ದೇಶ3 hours ago

Narendra Modi : ಇಂದು, ನಾಳೆ ರಾಜ್ಯದಲ್ಲಿ ಮೋದಿಯಿಂದ ಅಬ್ಬರದ ಪ್ರಚಾರ; ಬಹಿರಂಗ ಭಾಷಣದ ವಿವರ ಇಲ್ಲಿದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202416 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ21 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ3 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ3 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

ಟ್ರೆಂಡಿಂಗ್‌