ಬೆಂಗಳೂರು: ನಕಲಿ ಭೂ ದಾಖಲೆ ಸೃಷ್ಟಿಸಿಕೊಂಡು ನಿವೇಶನಗಳನ್ನು ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರದ ಎಚ್ಎಂಟಿ ಬಡಾವಣೆಯಲ್ಲಿ ನಕಲಿ ದಾಖಲಾತಿಯನ್ನು ಸೃಷ್ಟಿಸಿ ವಂಚನೆ ಮಾಡುತ್ತಿದ್ದ ಇವರ ವಿರುದ್ಧ ತನಿಖೆ ಮುಂದುವರಿದಿದೆ.
ಡಿ. ಸುವರ್ಣಮ್ಮ ಎಂಬವರ ಹೆಸರಿನಲ್ಲಿ ಇದ್ದ ಸ್ವತ್ತಿನ ಸಂಬಂಧ ನಕಲಿ ಭೂ ದಾಖಲೆ ಸೃಷ್ಟಿಸಲಾಗಿತ್ತು. ನಂತರ ಆ ಜಾಗವನ್ನು ಮಾರಾಟ ಮಾಡಲಾಗಿತ್ತು ಎಂದು ಸುವರ್ಣಮ್ಮ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಫೈಜ್ ಸುಲ್ತಾನ, ಕಬೀರ್ ಅಲಿ, ಜಯಮ್ಮ, ಜಗದೀಶ್ ಹಾಗೂ ಪೂಜ ಎಂಬ ಆರೋಪಿಗಳು ನಕಲಿ ಹೆಸರುಗಳಲ್ಲಿ ದಾಖಲಾತಿಗಳನ್ನು ಸೃಷ್ಟಿಸಿದ್ದರು. ಡಿ. ಸುವರ್ಣಮ್ಮ ಅವರ ಹೆಸರಿನಲ್ಲಿದ್ದ ಜಾಗವನ್ನು ನಕಲಿ ಭೂ ದಾಖಲೆ ಮೂಲಕ ಮಾರಾಟ ಮಾಡಿ ₹65 ಲಕ್ಷ ವಂಚನೆ ಮಾಡಿದ್ದರು.
ಪ್ರಮುಖ ಆರೋಪಿಗಳಾದ ಫೈಜ್ ಸುಲ್ತಾನ ಮತ್ತು ಕಬೀರ್ ಅಲಿ ಸಂಜಯ್, ಬಾಬು ಎಂಬುವರನ್ನು ಇದೇ ರೀತಿಯಾಗಿ ನಕಲಿ ಭೂ ದಾಖಲೆ ಸೃಷ್ಟಿಸಿ ವಂಚಿಸಿದ್ದರು ಎಂಭ ವಿಚಾರವೂ ತನಿಖೆ ವೇಳೆ ತಿಳೀದುಬಂದಿದೆ. ಎರಡೂ ಪ್ರಕರಣವನ್ನು ಆಧರಿಸಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Explainer: ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವೇಲನ್ ಜೈಲಿನಿಂದ ಬಿಡುಗಡೆ ಆಗಿದ್ದು ಯಾಕೆ?