Site icon Vistara News

Fake identity | ಮೊಬೈಲ್‌ ಸಿಮ್‌ ಕಾರ್ಡ್‌ಗೆ ನಕಲಿ ದಾಖಲೆ ಕೊಟ್ಟರೆ 1 ವರ್ಷ ಜೈಲು ಅಥವಾ 50,000 ರೂ. ದಂಡ

mobie simcard

ನವ ದೆಹಲಿ: ದೂರಸಂಪರ್ಕ ಇಲಾಖೆ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಕರಡು ದೂರಸಂಪರ್ಕ ವಿಧೇಯಕದ ಪ್ರಕಾರ, ಮೊಬೈಲ್‌ ಸಿಮ್‌ ಕಾರ್ಡ್‌ ಪಡೆಯಲು ನಕಲಿ ದಾಖಲೆಗಳನ್ನು (Fake identity) ಸಲ್ಲಿಸಿ ಸಿಕ್ಕಿ ಬಿದ್ದರೆ, ಒಂದು ವರ್ಷ ಜೈಲು ಶಿಕ್ಷೆ ಅಥವಾ 50,000 ರೂ. ದಂಡವನ್ನು ಕೊಡಬೇಕಾಗುತ್ತದೆ.

ದೂರ ಸಂಪರ್ಕ ಇಲಾಖೆ (Department of Telecommunications) ದೇಶದಲ್ಲಿ ಆನ್‌ಲೈನ್‌ ಹಣಕಾಸು ವಂಚನೆಗಳನ್ನು ತಡೆಗಟ್ಟಲು ಹಾಗೂ ಬಳಕೆದಾರರ ಹಿತರಕ್ಷಣೆಗೆ ಉದ್ದೇಶಿತ ವಿಧೇಯಕದಲ್ಲಿ ಹಲವು ಪ್ರಸ್ತಾಪಗಳನ್ನು ಸೇರಿಸಿದೆ. ಸೈಬರ್‌ ಕ್ರಿಮಿನಲ್‌ಗಳು ಸಾಮಾನ್ಯವಾಗಿ ನಕಲಿ ದಾಖಲೆಗಳನ್ನು ಕೊಟ್ಟು ಮೊಬೈಲ್‌ ಸಿಮ್‌ ಕಾರ್ಡ್‌ಗಳನ್ನು ಪಡೆಯುತ್ತಾರೆ. ತಮ್ಮ ನಿಜವಾದ ಗುರುತನ್ನು ಮರೆಮಾಚುತ್ತಾರೆ. ಕೇವಲ ಮೊಬೈಲ್‌ ಸಿಮ್‌ ಕಾರ್ಡ್‌ ಮಾತ್ರವಲ್ಲದೆ, ಒಟಿಟಿ ಕಮ್ಯುನಿಕೇಶನ್‌ ಪ್ಲಾಟ್‌ ಫಾರ್ಮ್‌ಗಳಲ್ಲೂ ನಕಲಿ ದಾಖಲಾತಿಗಳನ್ನು ನೀಡಿದರೆ ಜೈಲು ಶಿಕ್ಷೆ ಅಥವಾ 50,000 ರೂ. ದಂಡ ಕಟ್ಟಬೇಕಾಗುತ್ತದೆ.

ವಿಧೇಯಕದ ಪ್ರಕಾರ ಪ್ರತಿಯೊಬ್ಬ ಟೆಲಿಕಾಂ ಬಳಕೆದಾರನಿಗೂ ಯಾರು ಕರೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಬೇಕು. ಇದರಿಂದ ಸೈಬರ್‌ ಅಪರಾಧಗಳನ್ನು ತಡೆಯಲು ಅನುಕೂಲವಾಗಲಿದೆ. ಕರಡು ವಿಧೇಯಕದ ಸೆಕ್ಷನ್‌ 4ರ ಸಬ್-ಸೆಕ್ಷನ್‌ 7ರ ಅಡಿಯಲ್ಲಿ ಟೆಲಿಕಾಂ ಬಳಕೆದಾರರು ತಮ್ಮ ಗುರುತನ್ನು ತಿಳಿಸಬೇಕು. ತಪ್ಪು ಗುರುತನ್ನು ನೀಡುವುದು ಶಿಕ್ಷಾರ್ಹ ಅಪರಾಧ.

ಸರ್ಕಾರ ಆನ್‌ಲೈನ್‌ ಹಣಕಾಸು ವಂಚನೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳೂ ತಮ್ಮ ಗ್ರಾಹಕರ ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.

Exit mobile version