ಬೆಂಗಳೂರು: ಖ್ಯಾತ ನಿರ್ಮಾಪಕನ ಮಗನ ದುರ್ವರ್ತನೆ, ಗೂಂಡಾಗಿರಿ ಮುಂದುವರಿದಿದೆ. ಹಿಂದೊಮ್ಮೆ ದೂರು ದಾಖಲಾಗಿದ್ದರೂ ಬುದ್ಧಿ ಬಂದಿಲ್ಲ. ಮತ್ತೆ ಕಿರಿಕ್ ಮಾಡಿಕೊಂಡಿರುವ ಈತ, ದಂಪತಿಯೊಬ್ಬರಿಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾನೆ.
ನಿರ್ಮಾಪಕ ಸೌಂದರ್ಯ ಜಗದೀಶ್ ಹಾಗೂ ರೇಖಾ ಜಗದೀಶ್ ಪುತ್ರ ಸ್ನೇಹಿತ್ ಅಲಿಯಾಸ್ ಅಪ್ಪು ಅಲಿಯಾಸ್ ಪಪ್ಪು ಎಂಬಾತನೇ ಈ ಪ್ರಕರಣದ ವಿಲನ್. ಈತ ಹಾಗೂ ಸಹಚರರು ಸೇರಿ ದಂಪತಿಯೊಬ್ಬರಿಗೆ ಆವಾಜ್ ಹಾಕಿದ್ದಾರೆ. ತನ್ನ ಜಾಗುವಾರ್ ಕಾರಿನಲ್ಲಿ ಅತಿವೇಗದಿಂದ ಬಂದು ದಂಪತಿಗಳು ಓಡಿಸುತ್ತಿದ್ದ ಕಾರು ಅಡ್ಡಗಟ್ಟಿ, ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ದಂಪತಿ ಅನ್ನಪೂರ್ಣ ಹಾಗೂ ರಜತ್ ಗೌಡ ಪ್ರಶ್ನಿಸಿದಾಗ ಹೊರಗೆಳೆದು ಹಲ್ಲೆ ನಡೆಸಿದ್ದಾನೆ.
ಜಗಳ ಬೆಳೆಸುವುದು ಬೇಡವೆಂದು ದಂಪತಿ ಸುಮ್ಮನಾಗಿ ಕಾರು ಚಲಾಯಿಸಿಕೊಂಡು ಹೋದಾಗ, ಡಿಕ್ಕಿ ಹೊಡೆಯುವಂತೆ ಹಿಂಬಾಲಿಸಿಕೊಂಡು ಬಂದು ದಂಪತಿಯ ಮನೆಯ ಬಳಿಯೂ ಅಡ್ಡಗಟ್ಟಿ ಮತ್ತೊಮ್ಮೆ ದಂಪತಿಯನ್ನು ಹೊರಗೆ ಎಳೆದು, ನಿಂದಿಸಿದ್ದಾನೆ. ಅನ್ನಪೂರ್ಣ ಅವರ ಭುಜ ಕುತ್ತಿಗೆ ಕೈಗಳ ಮೇಲೆ ಸ್ನೇಹಿತ್ ಹಾಗೂ ಗೆಳೆಯರು ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಆಕ್ಷೇಪಿಸಿದಾಗ, ರೇಪ್ ಮಾಡ್ತಿನಿ, ಬಟ್ಟೆ ಬಿಚ್ಚಿ ಹೊಡೀತೀನಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ | ಪತಿಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಮಹಿಳೆ ಮನನೊಂದು ಆತ್ಮಹತ್ಯೆ
ಈ ಸ್ನೇಹಿತ್ ತನ್ನ ದುರ್ವರ್ತನೆಗೇ ಕುಖ್ಯಾತಿ ಪಡೆದಿದ್ದಾನೆ. ಶ್ರೀಮಂತಿಕೆ ಅಮಲಿನಿಂದ ವರ್ತಿಸುವ ಈತನ ಮೇಲೆ ಹಿಂದೆ ಹಲವು ದೂರುಗಳು ದಾಖಲಾಗಿವೆ. ಈತ ಶ್ರೀಮಂತ ತಂದೆ ನಿರ್ಮಿಸಿರುವ ಎರಡು ಮೂರು ಚಿತ್ರಗಳಲ್ಲಿ ನಟಿಸಿದ್ದು, ಚಿತ್ರಗಳೆಲ್ಲಾ ತೋಪಾಗಿವೆ. ಮಗ ಎಷ್ಟೇ ತಪ್ಪು ಮಾಡಿ ಪೊಲೀಸರು ಎಚ್ಚರಿಕೆ ನೀಡಿದ್ದರೂ ಕ್ಯಾರೆ ಅನ್ನದ ಅಪ್ಪ ಸೌಂದರ್ಯ ಜಗದೀಶ್, ದುಬಾರಿ ಕಾರುಗಳನ್ನು ತೆಗೆಸಿಕೊಟ್ಟು ಮಗನ ದುರಹಂಕಾರವನ್ನು ಪೋಷಿಸುತ್ತಿದ್ದಾರೆ ಎಂದು ಮಗನಿಂದ ಕಿರುಕುಳಕ್ಕೆ ಒಳಗಾದವರು ದೂರಿದ್ದಾರೆ. ಈ ಹಿಂದೆ ಈತನ ಮೇಲೆ ದಾಖಲಾದ ದುರ್ವರ್ತನೆಯ ದೂರು ಖ್ಯಾತ ನಿರ್ಮಾಪಕರ ಮಧ್ಯಸ್ಥಿಕೆಯಲ್ಲಿ ರಾಜಿಯಲ್ಲಿ ಮುಗಿದಿತ್ತು. ಅಸಭ್ಯ ವರ್ತನೆ, ಹಲ್ಲೆ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ.
ದೂರು ದಾಖಲಾಗುತ್ತಿರುವಂತೆ ಸ್ನೇಹಿತ್ ತನ್ನ ಸ್ನೇಹಿತರಿಂದ ದಂಪತಿಯ ಮೇಲೆ ಕೌಂಟರ್ ಕಂಪ್ಲೇಂಟ್ ದಾಖಲಿಸಿದ್ದಾನೆ. ಸ್ನೇಹಿತ್ ಗ್ಯಾಂಗ್‌ನ ರಕ್ಷಿತ್ ಎಂಬಾತ ದೂರು ನೀಡಿದ್ದು, ರಜತ್ ಗೌಡ ಹಾಗು ಶಮಂತ್ ಗೌಡ ಎಂಬವರ ಮೇಲೆ ಜಾತಿನಿಂದನೆ ದೂರು ದಾಖಲಿಸಿದ್ದಾನೆ.
ಇದನ್ನೂ ಓದಿ | ನೀರು ಚೆಲ್ಲಿದ್ದರಿಂದ ಬಾಲಕನ ಮೇಲೆ ಶಿಕ್ಷಕಿ ಹಲ್ಲೆ, ತಲೆಗೆ ತೀವ್ರ ಗಾಯ