ನವದೆಹಲಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ (Delhi Crime) ಕುರಿತು ಪೊಲೀಸರು ಉನ್ನತ ತನಿಖೆ ನಡೆಸುತ್ತಿದ್ದು, ಬಗೆದಷ್ಟೂ ಮಾಹಿತಿ ಲಭ್ಯವಾಗುತ್ತಿದೆ. ತನಿಖೆಯ ಭಾಗವಾಗಿಯೇ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಪೊಲೀಸರು ಕೃತ್ಯ ಎಸಗಿದ ಸ್ಥಳಗಳಿಗೆ ಕರೆದೊಯ್ದಿದ್ದು, ಇದುವರೆಗೆ ಶ್ರದ್ಧಾ ದೇಹದ 10 ಭಾಗಗಳು ಪತ್ತೆಯಾಗಿವೆ.
ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾಳ ಹತ್ಯೆಗೈದು, ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿದ ಹಿನ್ನೆಲೆಯಲ್ಲಿ ಹಲವೆಡೆ ಪೊಲೀಸರು ಅಫ್ತಾಬ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಹಾಗೆಯೇ, ಪ್ರಕರಣದ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ (Forensic) ಅಧಿಕಾರಿಗಳು ಕೂಡ ಉನ್ನತ ತನಿಖೆ ನಡೆಸುತ್ತಿದ್ದಾರೆ.
ಹತ್ಯೆ ಮಾಡಿರುವುದು ಯಾರಿಗೂ ಗೊತ್ತಾಗಬಾರದು ಎಂದು ಶ್ರದ್ಧಾ ದೇಹದ ಭಾಗಗಳನ್ನು ಸುಮಾರು 18 ಕಡೆ ಎಸೆದಿದ್ದಾನೆ. ಹಾಗಾಗಿ, ಪೊಲೀಸರು ಅಫ್ತಾಬ್‌ನನ್ನು ಮಂಗಳವಾರ ಹಲವೆಡೆ ಕರೆದುಕೊಂಡು ಹೋಗಿದ್ದಾರೆ. ಮೂರು ತಾಸು ನಡೆದ ಕಾರ್ಯಾಚರಣೆಯಲ್ಲಿ 10 ಭಾಗಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಲಿವ್ ಇನ್‌ನಲ್ಲಿದ್ದ ಶ್ರದ್ಧಾ, ಮದುವೆಯಾಗು ಎಂದು ಹೇಳಿದ್ದಕ್ಕೇ ಅಫ್ತಾಬ್ ಮೇ ತಿಂಗಳಲ್ಲಿಯೇ ಆಕೆಯನ್ನು ಭೀಕರವಾಗಿ ಹತ್ಯೆಗೈದಿದ್ದಾನೆ. ದೇಹವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದು, ದುರ್ನಾತ ತಡೆಯಲು ಅಗರಬತ್ತಿ ಹಚ್ಚುತ್ತಿದ್ದ ಎಂಬುದು ಸೇರಿ ವಿವಿಧ ಮಾಹಿತಿ ಲಭ್ಯವಾಗಿದೆ. ಇನ್ನು, ಶ್ರದ್ಧಾ ಮಾತ್ರವಲ್ಲ ಬೇರೆ ಯುವತಿಯರ ಜತೆಗೂ ಅಫ್ತಾಬ್ ನಂಟು ಹೊಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ | Delhi Crime | ಮತ್ತೊಬ್ಬಳ ಜತೆಗೆ ಚಾಟಿಂಗ್, ಸಿಟ್ಟಿಗೆದ್ದ ಶ್ರದ್ಧಾ-ಅಫ್ತಾಬ್ ನಡುವೆ ಫೈಟಿಂಗ್