Delhi Crime | ದೆಹಲಿ ಹಲವೆಡೆ ಶ್ರದ್ಧಾ ದೇಹದ 10 ಭಾಗ ಪತ್ತೆ, ಕೃತ್ಯದ ಸ್ಥಳಕ್ಕೆ ಅಫ್ತಾಬ್‌ನನ್ನು ಕರೆದೊಯ್ದ ಪೊಲೀಸರು - Vistara News

ಕ್ರೈಂ

Delhi Crime | ದೆಹಲಿ ಹಲವೆಡೆ ಶ್ರದ್ಧಾ ದೇಹದ 10 ಭಾಗ ಪತ್ತೆ, ಕೃತ್ಯದ ಸ್ಥಳಕ್ಕೆ ಅಫ್ತಾಬ್‌ನನ್ನು ಕರೆದೊಯ್ದ ಪೊಲೀಸರು

ದೆಹಲಿಯಲ್ಲಿ 26 ವರ್ಷದ ಶ್ರದ್ಧಾ ವಾಲ್ಕರ್‌ (Shraddha Walker) ಕೊಲೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಈಗ ವಿಧಿವಿಜ್ಞಾನ ತಂಡದ ಅಧಿಕಾರಿಗಳು ತನಿಖೆಗೆ ಇಳಿದಿದ್ದಾರೆ.

VISTARANEWS.COM


on

Shraddha Walker
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಶ್ರದ್ಧಾ ವಾಲ್ಕರ್‌ ಹತ್ಯೆ ಪ್ರಕರಣದ (Delhi Crime) ಕುರಿತು ಪೊಲೀಸರು ಉನ್ನತ ತನಿಖೆ ನಡೆಸುತ್ತಿದ್ದು, ಬಗೆದಷ್ಟೂ ಮಾಹಿತಿ ಲಭ್ಯವಾಗುತ್ತಿದೆ. ತನಿಖೆಯ ಭಾಗವಾಗಿಯೇ ಹತ್ಯೆ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾನನ್ನು ಪೊಲೀಸರು ಕೃತ್ಯ ಎಸಗಿದ ಸ್ಥಳಗಳಿಗೆ ಕರೆದೊಯ್ದಿದ್ದು, ಇದುವರೆಗೆ ಶ್ರದ್ಧಾ ದೇಹದ 10 ಭಾಗಗಳು ಪತ್ತೆಯಾಗಿವೆ.

ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾಳ ಹತ್ಯೆಗೈದು, ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿದ ಹಿನ್ನೆಲೆಯಲ್ಲಿ ಹಲವೆಡೆ ಪೊಲೀಸರು ಅಫ್ತಾಬ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಹಾಗೆಯೇ, ಪ್ರಕರಣದ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ (Forensic) ಅಧಿಕಾರಿಗಳು ಕೂಡ ಉನ್ನತ ತನಿಖೆ ನಡೆಸುತ್ತಿದ್ದಾರೆ.

ಹತ್ಯೆ ಮಾಡಿರುವುದು ಯಾರಿಗೂ ಗೊತ್ತಾಗಬಾರದು ಎಂದು ಶ್ರದ್ಧಾ ದೇಹದ ಭಾಗಗಳನ್ನು ಸುಮಾರು 18 ಕಡೆ ಎಸೆದಿದ್ದಾನೆ. ಹಾಗಾಗಿ, ಪೊಲೀಸರು ಅಫ್ತಾಬ್‌ನನ್ನು ಮಂಗಳವಾರ ಹಲವೆಡೆ ಕರೆದುಕೊಂಡು ಹೋಗಿದ್ದಾರೆ. ಮೂರು ತಾಸು ನಡೆದ ಕಾರ್ಯಾಚರಣೆಯಲ್ಲಿ 10 ಭಾಗಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಲಿವ್‌ ಇನ್‌ನಲ್ಲಿದ್ದ ಶ್ರದ್ಧಾ, ಮದುವೆಯಾಗು ಎಂದು ಹೇಳಿದ್ದಕ್ಕೇ ಅಫ್ತಾಬ್‌ ಮೇ ತಿಂಗಳಲ್ಲಿಯೇ ಆಕೆಯನ್ನು ಭೀಕರವಾಗಿ ಹತ್ಯೆಗೈದಿದ್ದಾನೆ. ದೇಹವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದು, ದುರ್ನಾತ ತಡೆಯಲು ಅಗರಬತ್ತಿ ಹಚ್ಚುತ್ತಿದ್ದ ಎಂಬುದು ಸೇರಿ ವಿವಿಧ ಮಾಹಿತಿ ಲಭ್ಯವಾಗಿದೆ. ಇನ್ನು, ಶ್ರದ್ಧಾ ಮಾತ್ರವಲ್ಲ ಬೇರೆ ಯುವತಿಯರ ಜತೆಗೂ ಅಫ್ತಾಬ್‌ ನಂಟು ಹೊಂದಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ | Delhi Crime | ಮತ್ತೊಬ್ಬಳ ಜತೆಗೆ ಚಾಟಿಂಗ್, ಸಿಟ್ಟಿಗೆದ್ದ ಶ್ರದ್ಧಾ-ಅಫ್ತಾಬ್ ನಡುವೆ ಫೈಟಿಂಗ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

MLA Muniratna: ಮುನಿರತ್ನ ಹನಿಟ್ರ್ಯಾಪ್ ಕೇಸ್‌ಗೆ ಟ್ವಿಸ್ಟ್; ತನಿಖೆಯಲ್ಲಿ ಬಯಲಾಯ್ತು ಪ್ರಭಾವಿ ನಾಯಕರ ಹೆಸರು

MLA Muniratna: ಮುನಿರತ್ನ ಹನಿಟ್ರ್ಯಾಪ್ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ತನಿಖೆಯಲ್ಲಿ ಪ್ರಭಾವಿ ನಾಯಕರ ಹೆಸರುಗಳು ಬಯಲಾಗಿವೆ.

VISTARANEWS.COM


on

By

Munirathnas honeytrap case gets a twist Names of influential leaders revealed in probe
Koo

ಬೆಂಗಳೂರು: ಶಾಸಕ ಮುನಿರತ್ನ (MLA Muniratna) ಹನಿ ಟ್ರ್ಯಾಪ್ ಕೇಸ್ ದಿನೆದಿನೇ ತಿರುವು ಪಡೆದುಕೊಳ್ಳುತ್ತಾ ಹೋಗುತ್ತಿದೆ. ಮುನಿರತ್ನ ಸದ್ಯ ಎಸ್ಐಟಿ ಕಸ್ಟಡಿಯಲ್ಲಿದ್ದರೆ, ಅತ್ತ ವಿಚಾರಣೆ ವಿಭಿನ್ನ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಸಂತ್ರಸ್ತೆಯ ಹೇಳಿಕೆ ದಾಖಲಿಸಿರುವ ಅಧಿಕಾರಿಗಳು ಆ ಹೇಳಿಕೆ ಮೇರೆಗೆ ಹಲವು ಗಣ್ಯರಿಗೆ ನೋಟಿಸ್ ನೀಡಲಿದ್ದಾರೆ. ಹಾಗಾದರೆ ಈ ಪ್ರಕರಣದಲ್ಲಿ ಮುನಿರತ್ನ ಜತೆ ಕೈಜೋಡಿಸಿದ ಆ ರಾಜಕಾರಣಿಗಳು ಯಾರು?

ಎಸ್ಐಟಿ ಅಧಿಕಾರಿಗಳಿಂದ ಹನಿಟ್ರ್ಯಾಪ್ ಕೇಸ್ ತನಿಖೆ ಚುರುಕುಗೊಂಡಿದೆ. ಪ್ರಕರಣ ಸಂಬಂಧ ಶಾಸಕ ಮುನಿರತ್ನ ವಿಚಾರಣೆ ಅನುಭವಿಸುತ್ತಿದ್ದರೆ, ಅತ್ತ ಸಂತ್ರಸ್ತೆ ವಿಚಾರಣೆಯಲ್ಲಿ ಕುತೂಹಲಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದು, ಪ್ರಕರಣದಲ್ಲಿ ಮುನಿರತ್ನ ಜತೆಗೆ ಇನ್ನು ಹಲವರು ಭಾಗಿಯಾಗಿದ್ದರು. ಅದರಲ್ಲಿ ಹಲವು ಅಧಿಕಾರಿಗಳು, ಮಾಜಿ ಕಾರ್ಪೋರೇಟರ್‌ಗಳು, ರಾಜಕಾರಣಿಗಳು ಈ ಹನಿ ಟ್ರ್ಯಾಪ್‌ನಲ್ಲಿ ಶಾಮಿಲಾಗಿದ್ದಾರೆ ಎಂದಿದ್ದಾಳೆ. ಸದ್ಯ ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಆ ಪ್ರಬಲ ವ್ಯಕ್ತಿಗಳಿಗೆ ನೋಟಿಸ್ ನೀಡಲಿದ್ದಾರೆ.

ಇನ್ನು ಮುನಿರತ್ನ ಸಂಬಂಧ ಹೇಳಿಕೆ ದಾಖಲಿಸುವಾಗ ಖುದ್ದು ಸಂತ್ರಸ್ಥ ಮಹಿಳೆಯಿಂದಲೇ ಹೆಸರು ಉಲ್ಲೇಖ ಆಗಿದೆ. ಈ ಟ್ರ್ಯಾಪ್‌ನಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎಂದು ಪ್ರಭಾವಿಗಳ ಹೆಸರನ್ನು ಹೇಳಿದ್ದಾರೆ. ಸದ್ಯ ಈ ಬಗ್ಗೆ ಎಸ್ಐಟಿ ಕೆಲ ಮಾಜಿ ಕಾರ್ಪೋರೇಟರ್‌ಗಳಿಗೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗಲು ಸೂಚನೆ ನೀಡುವ ಸಾಧ್ಯತೆ ಇದೆ. ಕಾರ್ಪೋರೇಟರ್‌ ಜತೆಗೆ ಅಧಿಕಾರಿಗಳಲ್ಲದೆ ಪ್ರಭಾವಿ ರಾಜಕಾರಣಿಗಳು ಸಹ ಈ ಕೇಸ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಮಹಿಳೆ ವಿಚಾರಣೆಯಲ್ಲಿ ಹೇಳಿದ್ದು, ಈ ಬಗ್ಗೆ ಎಸ್ಐಟಿ ಆ ರಾಜಕಾರಣಿಗಳಿಗೆ ನೋಟಿಸ್ ನೀಡುವ ಮುನ್ನ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ.

ಇದೆಲ್ಲ ಒಂದು ಕಡೆಯಾದರೆ ಅತ್ಯಾಚಾರ ಕೇಸ್‌ನ ತನಿಖೆ ಜತೆಗೆ ಹನಿಟ್ರ್ಯಾಪ್ ಕೇಸ್‌ನ ಮೂಲಕ್ಕೆ ಕೈ ಹಾಕಿರುವ ಎಸ್ಐಟಿ ಅಧಿಕಾರಿಗಳು ಮುನಿರತ್ನರ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಸಂತ್ರಸ್ತೆ ಹೇಳಿಕೆ‌ ಸಂಚಲನಕ್ಕೆ ಕಾರಣವಾಗಿದ್ದು, ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಯುತ್ತಿದೆ.

Continue Reading

ಬೆಂಗಳೂರು ಗ್ರಾಮಾಂತರ

Murder Case : ಬನ್ನೇರುಘಟ್ಟದಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆ

VISTARANEWS.COM


on

By

Murder case
ಸಾಂದರ್ಭಿಕ ಚಿತ್ರ
Koo

ಆನೇಕಲ್: ಮಗನಿಂದಲೇ ತಂದೆಯ ಬರ್ಬರ ಹತ್ಯೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಅಪ್ಪ-ಮಗನ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮನೆಯಲ್ಲಿದ್ದ ಚಾಕುವಿನಿಂದ ಇರಿದು ತಂದೆಯನ್ನು ಪಾಪಿ ಮಗ ಕೊಲೆ ಮಾಡಿದ್ದಾನೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಘಟನೆ ನಡೆದಿದೆ.

ವೇಲಾಯುದನ್ (76) ಕೊಲೆಯಾದವರು. ವಿನೋದ್ ಕುಮಾರ್ ಕೊಲೆ ಆರೋಪಿ ಆಗಿದ್ದಾನೆ. ಮೂಲತಃ ಕೇರಳ ಮೂಲದ ಏರಿಮಲೆ ಮೂಲದವರು. ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತಂದೆಗೆ ಇರಿದಿದ್ದಾನೆ. ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿ ವೇಲಾಯುದನ್ ಮೃತಪಟ್ಟಿದ್ದಾರೆ.

Father brutally murdered by son in Bannerghatta
Father brutally murdered by son in Bannerghatta

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು, ಮೃತದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಆರೋಪಿ ವಿನೋದ್‌ನನ್ನು ಬನ್ನೇರುಘಟ್ಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Continue Reading

ಬೆಂಗಳೂರು

Actor Darshan : ನಟ ದರ್ಶನ್‌ಗೆ ಬಿಟ್ಟು ಬಿಡದೆ ಕಾಡುತ್ತಿದೆ ಬೆನ್ನು ನೋವು; ನಾಳೆ ಆರು ಮಂದಿಯ ಬೇಲ್‌ ಭವಿಷ್ಯ

Actor Darshan : ನಟ ದರ್ಶನ್‌ಗೆ ಬಿಟ್ಟು ಬಿಡದೆ ಬೆನ್ನು ನೋವು ಕಾಡುತ್ತಿದೆ. ಮತ್ತೊಂದು ಕಡೆ ನಾಳೆ ಸೋಮವಾರ ಆರು ಮಂದಿಯ ಬೇಲ್‌ ಭವಿಷ್ಯ ನಿರ್ಧಾರವಾಗಲಿದೆ.

VISTARANEWS.COM


on

By

Actor Darshan suffers from back pain
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy case) ಬಳ್ಳಾರಿ ಜೈಲಲ್ಲಿರೋ ನಟ ದರ್ಶನ್‌ಗೆ (Actor Darshan) ಬಿಟ್ಟು ಬಿಡದೆ ಬೆನ್ನು ನೋವು ಕಾಡುತ್ತಿದೆ ಎನ್ನಲಾಗಿದೆ. ಬೆನ್ನು ನೋವಿಗಾಗಿ ಬಿಮ್ಸ್ ಆಸ್ಪತ್ರೆ ವೈದ್ಯರಿಂದ ತಪಾಸಣೆ ನಡೆದಿದ್ದು, ಚಿಕಿತ್ಸೆಗೆ ಸೂಚನೆ ನೀಡಲಾಗಿದೆ. ಹೀಗಿದ್ದರೂ ಚಿಕಿತ್ಸೆಗೆ ಒಪ್ಪದೆ ನಟ ದರ್ಶನ್ ನೋವಿನಲ್ಲೇ ಇದ್ದಾನೆ. ಎಮ್‌ಆರ್‌ಐ ಸ್ಕ್ಯಾನ್‌, ಸಿಟಿ ಸ್ಕ್ಯಾನೂ ಯಾವುದು ಬೇಡ ,ನಾನೂ ಎಲ್ಲೂ ಹೋಗಲ್ಲ ಅಂತಿದ್ದರಂತೆ. ವೈದ್ಯರು ನಟ ದರ್ಶನ್‌ಗೆ ಆಪರೇಷನ್ ಮಾಡುವ ಅಗತ್ಯವಿದೆ ಎಂದಿದ್ದಾರೆ. ಆದರೂ ಒಪ್ಪದೆ ಚಿಕಿತ್ಸೆಗೆ ನಿರಾಕರಿಸುತ್ತಿದ್ದರಂತೆ.

ಇಷ್ಟು ಬೆನ್ನು ನೋವಿಗೆ ಯಾತನೆ ಅನುಭವಿಸಿದ್ದರೂ ಚಿಕಿತ್ಸೆ ಬೇಡ ಅಂತಿರೋದ್ಯಾಕೆ ಎಂದು ಜೈಲಾಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಳ್ಳಾರಿ ಜೈಲಾಧಿಕಾರಿಗಳು ತಂದಿದ್ದಾರೆ. ಮುಂದಿನ ಬಾರಿ ಕುಟುಂಬಸ್ಥರು ಬಂದಾಗ ಚಿಕಿತ್ಸೆ ಬಗ್ಗೆ ಗಮನಕ್ಕೆ ತರಲು ಸೂಚನೆ ನೀಡಲಾಗಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಸಮಸ್ಯೆ ಬರದೆ ಎಚ್ಚರ ವಹಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನಾಳೆ ನಿರ್ಧಾರವಾಗಲಿದೆ ಆರು ಮಂದಿಯ ಭವಿಷ್ಯ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಆರು ಮಂದಿಯ ಜಾಮೀನು ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ. ಅ.14ರಂದು ಸಿಸಿಹೆಚ್ 57 ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ಮೂಡಿದೆ. ನಟ ದರ್ಶನ್‌ ಜಾಮೀನು ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

A2 ನಟ ದರ್ಶನ್, A1 ಪವಿತ್ರಾಗೌಡ, A8 ರವಿಶಂಕರ್, A11 ನಾಗರಾಜ್ ಹಾಗೂ A12 ಲಕ್ಷ್ಮಣ್, A13 ದೀಪಕ್ ಜಾಮೀನು ಭವಿಷ್ಯ ನಿರ್ಧರವಾಗಲಿದೆ. ಈಗಾಗಲೇ ಎಸ್‌ಪಿಪಿ ದೀಪಕ್ ಮತ್ತು ರವಿಶಂಕರ್‌ಗೆ ಜಾಮೀನು ನೀಡಬಹುದು ಎಂದಿದ್ದಾರೆ. ಆದರೆ ದರ್ಶನ್ ಸೇರಿ ನಾಲ್ವರ ಜಾಮೀನಿಗೆ ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೊಲೆಯಲ್ಲಿ ಭಾಗಿಯಾದ ಸಾಕ್ಷ್ಯಗಳ ಬಗ್ಗೆ ಸಂಪೂರ್ಣ ಉಲ್ಲೇಖಿಸಲಾಗಿದೆ. ದರ್ಶನ್ ಪರವಾಗಿ ವಕಾಲತ್ತು ವಹಿಸಿರುವ ಹಿರಿಯ ವಕೀಲ‌ ಸಿವಿ ನಾಗೇಶ್‌ರಿಂದ ಸಾಕ್ಷ್ಯಗಳೇ ಇಲ್ಲವೆಂಬಂತೆ ವಾದಿಸಿದ್ದಾರೆ. ಪವಿತ್ರಾಗೌಡ ಪರವಾಗಿ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು. ಇತ್ತ ಕೋರ್ಟ್ ತೀರ್ಪು, ಅತ್ತ ಜೈಲಲ್ಲಿ ಆರೋಪಿಗಳಿಗೆ ಟೆನ್ಷನ್‌ ಶುರುವಾಗಿದೆ.

Continue Reading

ಬೆಂಗಳೂರು

Actor Darshan : ಬೆಂಗಳೂರು ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಮೊರೆ ಹೋಗಲು ನಟ ದರ್ಶನ್ ತಯಾರಿ!

Actor Darshan : ನಟ ದರ್ಶನ್‌ ‌ಜಾಮೀನು ಆದೇಶ ಕೋರ್ಟ್‌ನಲ್ಲಿರುವಾಗಲೇ ಬಳ್ಳಾರಿಯಿಂದ ಬೆಂಗಳೂರು ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

VISTARANEWS.COM


on

By

Actor Darshan is all set to move the court seeking transfer to Ballari to Bengaluru jail
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನವಾಗಿ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್, ಅದೊಂದು ಕಾರಣ ಇಟ್ಟುಕೊಂಡು ಬಳ್ಳಾರಿ ಜೈಲಿನಿಂದ ವಾಪಸ್‌ ಬೆಂಗಳೂರು ಜೈಲಿಗೆ ಕಳಿಸಿಕೊಡುವಂತೆ ಕೋರ್ಟ್ ಮೊರೆ ಹೋಗಲು ತಯಾರಿ ಮಾಡಿಕೊಂಡಿದ್ದಾರೆ (Actor Darshan) ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ ಈ ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆದರೆ ಜೈಲಿನೊಳಗೆ ರಾಜಾತಿಥ್ಯ ಪಡೆದು ಬಳಿಕ ದರ್ಶನ್‌ನನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ರವಾನಿಸಲಾಗಿತ್ತು. ಈಗ ಬೆಂಗಳೂರು ಜೈಲಿಗೆ ಶಿಫ್ಟ್ ಆಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದೆಲ್ಲವೂ ಸೋಮವಾರ ಜಾಮೀನು ಆದೇಶವನ್ನು ನೋಡಿಕೊಂಡು ಬಳ್ಳಾರಿಯಿಂದ ಬೆಂಗಳೂರಿನ ಪರಪ್ಪನ‌ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿ ಕೋರ್ಟ್ ಮೊರೆ ಹೋಗಲು ದರ್ಶನ್ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿರುವುದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಪ್ರದೋಷ್‌ನನ್ನು ಬೆಳಗಾವಿ ಜೈಲಿನಿಂದ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಆದೇಶ ಮಾಡಿದೆ. ಅದೇ ರೀತಿ ದರ್ಶನ್ ಕೂಡ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್ ಆಗಲು ಕೋರ್ಟ್ ಮೊರೆ ಹೋಗಿ ಆದೇಶ ಪಡೆದುಕೊಳ್ಳಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ನರ ವೈದ್ಯರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ಕಾರಣವನ್ನೂ ನ್ಯಾಯಾಲಯದ ಮುಂದೆ ಇಟ್ಟು ಬೆಂಗಳೂರಿಗೆ ಶಿಫ್ಟ್ ಆಗಲು ದರ್ಶನ್ ಮನವಿ ಮಾಡುವ ಸಾಧ್ಯತೆಯಿದೆ.

ದರ್ಶನ್‌ಗೆ ಸೋಮವಾರ ಜಾಮೀನು ಸಿಗುತ್ತಾ?

ಇನ್ನು ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಪಟ್ಟಂತೆ ವಾದ- ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯ ಅಕ್ಟೋಬರ್ 14 ಅಂದರೆ ಸೋಮವಾರಕ್ಕೆ ಆದೇಶವನ್ನು ಕಾಯ್ದಿರಿಸಿದೆ. ಸೋಮವಾರ ಬರುವ ಜಾಮೀನು ಆದೇಶ ತಿರಸ್ಕೃತವಾದರೆ ಬೆನ್ನು ನೋವಿನ ಕಾರಣ ಇಟ್ಟುಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿಕೊಡುವಂತೆ ಕೋರ್ಟ್ ಮೊರೆ ಹೋಗಲು ತಯಾರಿಯನ್ನು ದರ್ಶನ್ ಪರ ವಕೀಲರು ಮಾಡಿಕೊಳ್ಳುತ್ತಿದ್ದಾರೆ.

Continue Reading
Advertisement
Munirathnas honeytrap case gets a twist Names of influential leaders revealed in probe
ಬೆಂಗಳೂರು51 ನಿಮಿಷಗಳು ago

MLA Muniratna: ಮುನಿರತ್ನ ಹನಿಟ್ರ್ಯಾಪ್ ಕೇಸ್‌ಗೆ ಟ್ವಿಸ್ಟ್; ತನಿಖೆಯಲ್ಲಿ ಬಯಲಾಯ್ತು ಪ್ರಭಾವಿ ನಾಯಕರ ಹೆಸರು

Murder case
ಬೆಂಗಳೂರು ಗ್ರಾಮಾಂತರ1 ಗಂಟೆ ago

Murder Case : ಬನ್ನೇರುಘಟ್ಟದಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆ

Actor Darshan suffers from back pain
ಬೆಂಗಳೂರು2 ಗಂಟೆಗಳು ago

Actor Darshan : ನಟ ದರ್ಶನ್‌ಗೆ ಬಿಟ್ಟು ಬಿಡದೆ ಕಾಡುತ್ತಿದೆ ಬೆನ್ನು ನೋವು; ನಾಳೆ ಆರು ಮಂದಿಯ ಬೇಲ್‌ ಭವಿಷ್ಯ

Spider detection A new species of spider found on the banks of Jayamangali river
ತುಮಕೂರು2 ಗಂಟೆಗಳು ago

Spider detection : ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆ

Dina Bhavishya
ಭವಿಷ್ಯ9 ಗಂಟೆಗಳು ago

Dina Bhavishya : ಈ ದಿನ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ

BSA motorcycles
ಆಟೋಮೊಬೈಲ್21 ಗಂಟೆಗಳು ago

BSA motorcycles : ‌ಬೆಂಗಳೂರಿಗೆ ಲಗ್ಗೆ ಇಟ್ಟ ಬಿಎಸ್ಎ ಗೋಲ್ಡ್‌ ಸ್ಟಾರ್

bwssb
ಬೆಂಗಳೂರು22 ಗಂಟೆಗಳು ago

BWSSB : ಬೆಂಗಳೂರಿಗರ ಬಹು ದಿನಗಳ ಕನಸು- ನನಸು; ಅಕ್ಟೋಬರ್ 16ರಂದು ಕಾವೇರಿ ಐದನೇ ಹಂತ ಲೋಕಾರ್ಪಣೆ

Actor Darshan is all set to move the court seeking transfer to Ballari to Bengaluru jail
ಬೆಂಗಳೂರು22 ಗಂಟೆಗಳು ago

Actor Darshan : ಬೆಂಗಳೂರು ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಮೊರೆ ಹೋಗಲು ನಟ ದರ್ಶನ್ ತಯಾರಿ!

karnataka Rain
ಮಳೆ24 ಗಂಟೆಗಳು ago

Karnataka Rain : ಅಬ್ಬರಿಸುತ್ತಿರುವ ಮಳೆಗೆ ಕಂಗಲಾದ ರೈತರು; ಜಮೀನುಗಳಿಗೆ ನೀರು ನುಗ್ಗಿ ಅವಾಂತರ

high tech prostitution racket in the name of event management Husband and wife arrested
ಬೆಂಗಳೂರು1 ದಿನ ago

Prostitution Case : ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಗಂಡ-ಹೆಂಡತಿ ಅರೆಸ್ಟ್‌

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ವಾರ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌